ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇರಾನ್ ಯುದ್ಧ ಎಫೆಕ್ಟ್; ಯುರೋಪ್‌ನಲ್ಲಿ ವಿಮಾನ ಹಾರಾಟ ಶೀಘ್ರದಲ್ಲೇ ಸ್ಥಗಿತ ?

ಯುಎಸ್, ಇಸ್ರೇಲ್ ಸೇನಾ ಪಡೆಯು ಇರಾನ್ ಮೇಲೆ ದಾಳಿ ಪ್ರಾರಂಭಿಸಿದ ಬಳಿಕ ಒಂದೆಡೆ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಗುತ್ತಿದ್ದರೆ ಇನ್ನೊಂದೆಡೆ ವಿವಿಧೆಡೆ ಇಂಧನದ ಬಿಕ್ಕಟ್ಟು ಕೂಡ ತೀವ್ರಗೊಳ್ಳುತ್ತಿದೆ. ಇದೀಗ ಯುರೋಪ್‌ನಲ್ಲಿ ಬೇಸಗೆ ಅಡಿಯಿಡುತ್ತಿದೆ. ಇದು ಪ್ರವಾಸೋದ್ಯಮದ ಕಾಲ. ಆದರೆ ಇದೀಗ ಇಂಧನ ಬಿಕ್ಕಟ್ಟು ಪ್ರವಾಸೋದ್ಯಮದಕ್ಕೂ ತಟ್ಟಿದೆ. ಯುದ್ಧ ಮುಂದುವರಿದರೆ ಇನ್ನು ಆರು ವಾರಗಳ ಬಳಿಕ ಯುರೋಪ್‌ನಲ್ಲಿ ವಿಮಾನ ಹಾರಾಟಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಸಂಕಷ್ಟದಲ್ಲಿ ಯುರೋಪ್ ಪ್ರವಾಸೋದ್ಯಮ

ಸಂಗ್ರಹ ಚಿತ್ರ -

ನ್ಯೂಯಾರ್ಕ್: ಕೆಲವು ವಾರಗಳ ಕಾಲ ಇರಾನ್ ಯುದ್ಧ (Iran war) ಮುಂದುವರಿದರೆ ಯುರೋಪ್ (Europe) ದೇಶಗಳಲ್ಲಿ ವಿಮಾನ ಹಾರಾಟ(aviation crisis) ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಇದಕ್ಕೆ ಮುಖ್ಯ ಕಾರಣ ಇಂಧನದ ಕೊರತೆ (Oil crisis). ಕಳೆದ ಫೆಬ್ರವರಿ ತಿಂಗಳಾಂತ್ಯದಲ್ಲಿ ಯುಎಸ್, ಇಸ್ರೇಲ್ ಸೇನಾ ಪಡೆಯು ಇರಾನ್ ಮೇಲೆ ದಾಳಿ ಪ್ರಾರಂಭಿಸಿದ ಇದಕ್ಕೆ ಪ್ರತಿಯಾಗಿ ಇರಾನ್ ಹೊರ್ಮುಜ್ ಜಲ ಮಾರ್ಗದಲ್ಲಿ (Strait of Hormuz) ಸರಕು ಹಡಗುಗಳ ಸಾಗಾಟಕ್ಕೆ ತಡೆಯನ್ನು ಒಡ್ಡಿತ್ತು. ಇದರಿಂದ ಒಂದೆಡೆ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಗುತ್ತಿದ್ದರೆ ಇನ್ನೊಂದೆಡೆ ಇಂಧನದ ಕೊರತೆ ಕೂಡ ಕಾಣಿಸಿಕೊಳ್ಳಲು ಪ್ರಾರಂಭವಾಗಿದೆ.

ಯುರೋಪ್ ದೇಶಗಳು ಬೇಸಗೆಯ ಸ್ವಾಗತಕ್ಕೆ ಸಿದ್ಧತೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಗರಿಗೆದರುತ್ತಿದೆ. ಆದರೆ ಇದೇ ವೇಳೆ ಇಂಧನದ ಕೊರತೆ ಕಾಡಲಾರಂಭಿಸಿದ್ದು ಇದು ಪ್ರವಾಸೋದ್ಯಮದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಇರಾನ್ ಸಂಘರ್ಷದ ಪರಿಣಾಮ ಅಂತಾರಾಷ್ಟ್ರೀಯ ಇಂಧನ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಫಾತಿಹ್ ಬಿರೋಲ್, ಯುರೋಪ್‌ನಲ್ಲಿ ಕೇವಲ ಆರು ವಾರಗಳ ಜೆಟ್ ಇಂಧನ ಮಾತ್ರ ಉಳಿದಿದೆ. ಇದರಿಂದ ಬೇಸಗೆಯಲ್ಲಿ ಯುರೋಪಿನಲ್ಲಿ ವಾಯುಯಾನ ಸಂಕಷ್ಟ ಎದುರಿಸಬೇಕಾಗಬಹುದು ಎಂದು ತಿಳಿಸಿದ್ದಾರೆ.

ಮುಂದಿನ ಜನರೇಶನ್ ಇಂಟ್ರಾಓಕ್ಯುಲರ್ ಲೆನ್ಸ್ ಅನ್ನು ಪರಿಚಯಿಸಿದ ಜಾನ್ಸನ್ ಮತ್ತು ಜಾನ್ಸನ್

ಇರಾನ್ ಯುದ್ಧದ ಪರಿಣಾಮ ಇದೀಗ ಯುರೋಪ್ ವಾಯುಯಾನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಜೆಟ್ ಇಂಧನ ಕೊರತೆ ಕಾಡಲಾರಂಭಿಸಿದೆ. ಶೀಘ್ರದಲ್ಲೇ ಯುಎಸ್, ಇಸ್ರೇಲ್ ಮತ್ತು ಇರಾನ್ ಯುದ್ಧವು ಕೊನೆಗೊಳ್ಳದಿದ್ದರೆ ಮತ್ತು ಹೊರ್ಮುಜ್ ಜಲ ಮಾರ್ಗದಲ್ಲಿ ಟ್ಯಾಂಕರ್‌ಗಳು ಸಾಗಾಟ ಸರಾಗವಾಗಿ ನಡೆಯದೇ ಇದ್ದರೆ ಯುರೋಪ್ ರಾಷ್ಟ್ರಗಳು ಶೀಘ್ರದಲ್ಲೇ ವಿಮಾನಗಳನ್ನು ನಿರ್ವಹಿಸಲು ಇಂಧನದ ಕೊರತೆಯನ್ನು ಎದುರಿಸಬೇಕಾಗಬಹುದು. ಬೇಸಗೆ ಪ್ರವಾಸದ ಕಾಲಕ್ಕೆ ಸಿದ್ಧತೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಯುರೋಪ್ ಕೇವಲ ಆರು ವಾರಗಳವರೆಗೆ ಬಳಸಬಹುದಾದಷ್ಟು ಜೆಟ್ ಇಂಧನವನ್ನು ಹೊಂದಿದೆ ಎಂದು ಅವರು ಎಚ್ಚರಿಸಿದ್ದಾರೆ.

ಈ ಕುರಿತು ಯುಎಸ್ ಮೂಲದ ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್ ಜೊತೆ ಗುರುವಾರ ಮಾತನಾಡಿದ ಅವರು, ಹೊರ್ಮುಜ್ ಜಲಸಂಧಿಯ ದಿಗ್ಬಂಧನವು ನಾವು ಇದುವರೆಗೆ ಎದುರಿಸಿದ ಅತಿದೊಡ್ಡ ಇಂಧನ ಬಿಕ್ಕಟ್ಟಿಗೆ ಕಾರಣವಾಗುತ್ತದೆ. ಇದರಿಂದ ಯುರೋಪಿಯನ್ ವಿಮಾನಯಾನ ಸಂಸ್ಥೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ.ಇದು ಬೇಸಗೆಯ ಪ್ರವಾಸಕ್ಕೆ ಅಡ್ಡಿಯಾಗಲಿದೆ ಎಂದು ಹೇಳಿದರು.

ಮಾಧ್ಯಮಗಳ ವರದಿಯ ಪ್ರಕಾರ ಯುರೋಪ್ ಜೆಟ್ ಗಳು ಇಂಧನ ಆಮದಿನ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇದಕ್ಕಾಗಿ ಶೇ. 75ರಷ್ಟು ಇಂಧನವನ್ನು ಮಧ್ಯಪ್ರಾಚ್ಯ ಭಾಗದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಯುರೋಪಿಯನ್ ವಿಮಾನಯಾನ ಸಂಸ್ಥೆ ರಯಾನ್ಏರ್ ಮೇ ತಿಂಗಳ ನಿರ್ವಹಿಸಬಹುದಾದಷ್ಟು ಇಂಧನವನ್ನು ಹೊಂದಿದೆ. ಇಂಧನ ತುಂಬಿದ ಹಡಗುಗಳು ಶೀಘ್ರದಲ್ಲೇ ಹೊರ್ಮುಜ್ ಜಲಸಂಧಿಯ ಮೂಲಕ ಬಾರದೇ ಇದ್ದರೆ ಇಂಧನ ಕೊರತೆ ಉಂಟಾಗಬಹುದು ಎಂದು ಏರ್‌ಲೈನ್ಸ್ ತಿಳಿಸಿದೆ.

ಇಂಧನ ಬಿಕ್ಕಟ್ಟು ನಿಭಾಯಿಸಲು ಕ್ರಮ

ಹೊರ್ಮುಜ್ ಜಲ ಮಾರ್ಗದ ಮೂಲಕ ಯುರೋಪ್ ರಾಷ್ಟ್ರಗಳಿಗೆ ಜೆಟ್ ಇಂಧನವನ್ನು ಸಾಗಿಸಲಾಗುತ್ತದೆ. ಹೊರ್ಮುಜ್ ಜಲ ಮಾರ್ಗದಲ್ಲಿ ದಿಗ್ಬಂಧನ ಮುಂದುವರಿದರೆ ಮುಂದಿನ ದಿನಗಳಲ್ಲಿ ಬಿಕ್ಕಟ್ಟನ್ನು ನಿರ್ವಹಿಸಲು ಸಂಸ್ಕರಣಾಗಾರ ಉತ್ಪಾದನೆಯನ್ನು ಗರಿಷ್ಠಗೊಳಿಸಲು ಯುರೋಪಿಯನ್ ಒಕ್ಕೂಟವು ಯೋಜನೆಗಳನ್ನು ರೂಪಿಸುತ್ತಿದೆ ಎನ್ನಲಾಗಿದೆ.

ಇದಕ್ಕಾಗಿ ಮುಂದಿನ ತಿಂಗಳಿನಿಂದ ಯುರೋಪಿಯನ್ ಆಯೋಗವು ತೈಲ ಉತ್ಪನ್ನಗಳ ಸಂಸ್ಕರಣಾ ಸಾಮರ್ಥ್ಯವನ್ನು ಮತ್ತು ಅಸ್ತಿತ್ವದಲ್ಲಿರುವ ಸಂಸ್ಕರಣಾ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಇಯು ಕೆಲಸ ಮಾಡುತ್ತಿದೆ. ಏಪ್ರಿಲ್ 22 ರಂದು ಈ ಕುರಿತು ಕರಡು ಯೋಜನೆಗಳನ್ನು ಪ್ರಕಟಿಸಲಾಗುವುದು ಎನ್ನಲಾಗಿದೆ.

ಕದನ ವಿರಾಮ ಅಂತ್ಯಗೊಳ್ಳುತ್ತಿದ್ದಂತೆ ಮಧ್ಯಪ್ರಾಚ್ಯದಲ್ಲಿ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ನಿಯೋಜಿಸಲು ಮುಂದಾದ ಅಮೆರಿಕ

ಪ್ರವಾಸೋದ್ಯಮದ ಮೇಲೆ ಪರಿಣಾಮ

ಯುರೋಪ್‌ನಲ್ಲಿ ವಿಮಾನಯಾನ ಸಂಸ್ಥೆಗಳಿಗೆ ಬೇಸಿಗೆಯು ಗರಿಷ್ಠ ಮತ್ತು ಅತ್ಯಂತ ಲಾಭದಾಯಕ ಋತುವಾಗಿದೆ. ಈ ಸಂದರ್ಭದಲ್ಲಿ ಜೆಟ್ ಇಂಧನದ ಬೇಡಿಕೆಯು ಹೆಚ್ಚಾಗಿರುತ್ತದೆ. ಸದ್ಯ ಮಧ್ಯಪ್ರಾಚ್ಯ ಭಾಗಗಳಿಂದ ಇಂಧನ ಆಮದು ಸಾಧ್ಯವಾಗದೇ ಇರುವುದು ಸವಾಲಾಗಿ ಪರಿಣಮಿಸಿದೆ.

ಆಫ್ರಿಕಾ ಮತ್ತು ಯುಎಸ್ ನಿಂದ ಇಷ್ಟೊಂದು ಪ್ರಮಾಣದ ಇಂಧನ ಪೂರೈಕೆ ಸಾಧ್ಯವಿಲ್ಲ. ವಿಮಾನ ನಿಲ್ದಾಣಗಳಿಗೆ ಸರಬರಾಜು ಮಾಡುವ ಇಂಧನ ನಿರ್ವಹಣಾ ಒಕ್ಕೂಟವು ದೀರ್ಘಕಾಲೀನ ದಾಸ್ತಾನುಗಳನ್ನು ಇಟ್ಟುಕೊಳ್ಳುವುದಿಲ್ಲ. ಹೀಗಾಗಿ ಈ ತೊಂದರೆ ಎದುರಾಗಬಹುದು. ಈಗಾಗಲೇ ಅನೇಕ ಯುರೋಪಿಯನ್ ಸಂಸ್ಕರಣಾಗಾರರು ಜೆಟ್ ಇಂಧನ ಉತ್ಪಾದನೆಗೆ ಗರಿಷ್ಠ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ.