''ಯುದ್ಧ ಮುಗಿದಿಲ್ಲʼʼ: ಕದನ ವಿರಾಮ ಒಪ್ಪಂದದ ಬೆನ್ನಲ್ಲೇ ಇರಾನ್‌ನಿಂದ ಅಚ್ಚರಿಯ ಹೇಳಿಕೆ
Mojtaba Khamenei: ಇರಾನ್‌ನನ್ನು ಸರ್ವನಾಶ ಮಾಡುವುದಾಗಿ ಅಬ್ಬರಿಸಿದ್ದ ಅಮೆರಿಕ ಕೊನೆಯ ಕ್ಷಣದಲ್ಲಿ ಕದನ ವಿರಾಮ ಘೋಷಿಸಿಬಿಟ್ಟಿದೆ. ಇರಾನ್ ಕೂಡ ಈ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದು, 2 ವಾರಗಳ ಕಾಲ ಇದು ಜಾರಿಯಲ್ಲಿರಲಿದೆ. ಈ ಮಧ್ಯೆ ಇರಾನ್ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ, ''ಯುದ್ಧ ಮುಗಿದಿಲ್ಲʼʼ ಎನ್ನುವ ಹೇಳಿಕೆ ನೀಡುವ ಮೂಲಕ ಶತ್ರು ರಾಷ್ಟ್ರಗಳಿಗೆ ಎಚ್ಚರಿಕೆ ಸಂದೇಶ ಸಾರಿದ್ದಾರೆ.
ಮೊಜ್ತಾಬಾ ಖಮೇನಿ (ಸಂಗ್ರಹ ಚಿತ್ರ) -
ಟೆಹರಾನ್, ಏ. 8: ಕೊನೆಗೋ ಜಗತ್ತು ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಇರಾನ್‌ನನ್ನು ಸರ್ವನಾಶ ಮಾಡುವುದಾಗಿ ಅಬ್ಬರಿಸಿದ್ದ ಅಮೆರಿಕ ಕೊನೆಯ ಕ್ಷಣದಲ್ಲಿ ಕದನ ವಿರಾಮ ಘೋಷಿಸಿಬಿಟ್ಟಿದೆ. ಇರಾನ್ ಕೂಡ ಈ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದು, 2 ವಾರಗಳ ಕಾಲ ಇದು ಜಾರಿಯಲ್ಲಿರಲಿದೆ. ಜತೆಗೆ ಹೊರ್ಮುಜ್ ಜಲಸಂಧಿ ಕೂಡ ಮುಕ್ತವಾಗಲಿದೆ. ಮಂಗಳವಾರವಷ್ಟೇ ಇಡೀ ಇರಾನ್‌ನ ನಾಗರಿಕತೆಯನ್ನು ನಾಶ ಮಾಡುವುದಾಗಿ ಬೆದರಿಕೆ ಹಾಕಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಣ್ವಸ್ತ್ರ ಬಳಕೆಯ ಆತಂಕ ಮೂಡಿಸಿದ್ದರು. ಇದೀಗ ಈ ಆತಂಕವೆಲ್ಲ ಮಾಯವಾಗಿದ್ದು, ಗಗನಮುಖಿಯಾಗಿದ್ದ ತೈಲ ಬೆಲೆ ಇಳಿಕೆಯಾಗತೊಡಗಿದೆ. ಈ ಮಧ್ಯೆ ಇರಾನ್ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ (Mojtaba Khamenei), ''ಯುದ್ಧ ಮುಗಿದಿಲ್ಲʼʼ ಎನ್ನುವ ಹೇಳಿಕೆ ನೀಡುವ ಮೂಲಕ ಶತ್ರು ರಾಷ್ಟ್ರಗಳಿಗೆ ಎಚ್ಚರಿಕೆ ಸಂದೇಶ ಸಾರಿದ್ದಾರೆ.
ಕದನ ವಿರಾಮ ಜಾರಿಗೆ ಬಂದಿದೆ ಎಂದರೆ ಯುದ್ಧ ಇಲ್ಲಿಗೇ ಮುಗಿದಿದೆ ಎಂದರ್ಥವಲ್ಲ. ಅಮೆರಿಕ-ಇಸ್ರೇಲ್ ಮತ್ತೆ ದಾಳಿ ನಡೆಸಿದರೆ ಶಕ್ತವಾಗಿ ಪ್ರತಿಕ್ರಿಯಿಸುವುದಾಗಿ ಅವರು ತಿಳಿಸಿದರು. ಕದನವಿರಾಮ ಒಪ್ಪಂದ ಘೋಷಣೆಯಾದ ಕೂಡಲೇ ಎಲ್ಲ ರೀತಿಯ ಮಿಲಿಟರಿ ಚಟುವಟಿಕೆ ನಿಲ್ಲಿಸಲು ಸೂಚಿಸಿದ ಖಮೇನಿ ಇದೇ ವೇಳೆ ಯುದ್ಧ ಮುಗಿದಿಲ್ಲ ಎಂದು ತಿಳಿಸಿದರು.
ಇರಾನ್‌ನ ಪೋಸ್ಟ್:
Full Statement of the Supreme National Security Council :
— True Promise - الوعد الصادق ✪🇮🇷 (@IRTruePromise) April 7, 2026
[PART-1]
Good news to the dear nation of Iran! Nearly all the objectives of the war have been achieved.
The noble people of Iran should know that, thanks to the sacrifices of their children and their historic presence on…
[Part-2]
— True Promise - الوعد الصادق ✪🇮🇷 (@IRTruePromise) April 7, 2026
These negotiations will begin in Islamabad, Pakistan on Friday, April 10th [21 Farvardin], with complete distrust of the American side.
Iran will allocate two weeks for these negotiations. This period can be extended with the agreement of both parties.
During this… https://t.co/8m46DjwnWF
ಇರಾನ್ ಹೇಳಿದ್ದೇನು?
ಸರ್ಕಾರಿ ಸ್ವಾಮ್ಯದ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಬ್ರಾಡ್‌ಕಾಸ್ಟಿಂಗ್ (ಐಆರ್‌ಐಬಿ) ಹೇಳಿಕೆ ಪ್ರಕಟಿಸಿದ್ದು, "ಇದು ಯುದ್ಧದ ಅಂತ್ಯವಲ್ಲ. ಎಲ್ಲ ಮಿಲಿಟರಿ ಶಾಖೆಗಳು ಸುಪ್ರೀಂ ನಾಯಕನ ಆದೇಶವನ್ನು ಪಾಲಿಸಬೇಕು ಮತ್ತು ಗುಂಡಿನ ದಾಳಿಯನ್ನು ನಿಲ್ಲಿಸಬೇಕುʼʼ ಎಂದು ಹೇಳಿದೆ. ಕದನ ವಿರಾಮವು ಯುದ್ಧದ ಅಂತ್ಯವನ್ನು ಸೂಚಿಸುವುದಿಲ್ಲ ಮತ್ತು ಅಮೆರಿಕ ಅಥವಾ ಇಸ್ರೇಲ್ - ಯಾವುದೇ ರೀತಿಯಲ್ಲಿ ಪ್ರಚೋದನಕಾರಿಯಾಗಿ ವರ್ತಿಸಿದರೆ ಸುಮ್ಮನಿರುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಶತ್ರುಗಳ ಕಡೆಯಿಂದ ಸಣ್ಣ ತಪ್ಪುಗಳಾದರೂ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದಿದೆ.
ಪಾಕಿಸ್ತಾನ ಮಧ್ಯಸ್ಥಿಕೆ, ಅಮೆರಿಕ-ಇರಾನ್ ಮಧ್ಯೆ 2 ವಾರಗಳ ಕದನ ವಿರಾಮ ಘೋಷಣೆ
10 ಬೇಡಿಕೆಗೆ ಒಪ್ಪಿದ ಅಮೆರಿಕ
ಕದನ ವಿರಾಮ ಒಪ್ಪಂದ ಘೋಷಣೆಗೂ ಮುನ್ನ ಇರಾನ್ ಮುಂದಿಟ್ಟ 10 ಬೇಡಿಕೆಗಳಿಗೆ ಅಮೆರಿಕ ಒಪ್ಪಿದೆ ಎನ್ನಲಾಗಿದೆ. ಇರಾನ್‌ನ ಸಶಸ್ತ್ರ ಪಡೆಗಳ ಸಮನ್ವಯದಿಂದ ಹೊರ್ಮುಜ್ ಜಲಸಂಧಿಯ ನಿಯಂತ್ರಣ, ಎಲ್ಲ ಘಟಕಗಳ ವಿರುದ್ಧದ ದಾಳಿ ಕೊನೆಗೊಳಿಸುವುದು, ಎಲ್ಲ ನೆಲೆಗಳಿಂದ ಅಮೆರಿಕದ ಯುದ್ಧ ಪಡೆಗಳನ್ನು ಹಿಂತೆಗೆದುಕೊಳ್ಳುವುದು, ಇರಾನ್‌ನ ಪ್ರಾಬಲ್ಯವನ್ನು ಖಾತರಿಪಡಿಸುವ ಹೊರ್ಮುಜ್ ಜಲಸಂಧಿಯಲ್ಲಿ ಸುರಕ್ಷಿತ ಸಾರಿಗೆ ಪ್ರೋಟೋಕಾಲ್ ಸ್ಥಾಪಿಸುವುದು, ಇರಾನ್‌ಗಾದ ಹಾನಿಯ ಸಂಪೂರ್ಣ ಪಾವತಿ, ಆರ್ಥಿಕ ನಿರ್ಬಂಧ ತೆಗೆದು ಹಾಕುವುದು, ವಿದೇಶಗಳಲ್ಲಿ ಇರಾನ್‌ನ ಎಲ್ಲ ಆಸ್ತಿಗಳನ್ನು ಮುಕ್ತಗೊಳಿಸುವುದು ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದಲ್ಲಿ ಈ ಎಲ್ಲ ಅಂಶಗಳ ಅನುಮೋದನೆ ಪಡೆಯುವುದು-ಈ ಬೇಡಿಕೆಗಳನ್ನು ಇರಾನ್ ಮುಂದಿಟ್ಟಿದೆ. ಸದ್ಯ ಈ ಷರತ್ತುಗಳಿಗೆ ಅಮೆರಿಕ ಸಕಾರಾತ್ಮಕವಾಗಿ ಸ್ಪಂದಿಸಿದೆ.
"ಮುಂದಿನ 12 ಗಂಟೆಗಳ ಕಾಲ ರೈಲು ಪ್ರಯಾಣದಿಂದ ದೂರವಿರಿ"; ಇರಾನ್ ನಾಗರಿಕರಿಗೆ ಇಸ್ರೇಲ್ ಸೂಚನೆ
ಪಾಕಿಸ್ತಾನದಲ್ಲಿ ಮಾತುಕತೆ
ಏಪ್ರಿಲ್ 10ರಂದು ಪಾಕಿಸ್ತಾನದ ರಾಜಧಾನಿಯಲ್ಲಿ ಈ ಕದನ ವಿರಾಮ ಒಪ್ಪಂದದ ಬಗ್ಗೆ ಎರಡೂ ಕಡೆಯವರೊಂದಿಗೆ ಮಾತುಕತೆ ನಡೆಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಸದ್ಯ 40 ದಿನಗಳ ಸಂಘರ್ಷ ಕೊನೆಯಾಗಿದ್ದು, ಮುಂದಿನ ಬೆಳವಣಿಗೆಯನ್ನು ಜಗತ್ತು ಕುತೂಹಲದಿಂದ ಎದುರು ನೋಡುತ್ತಿದೆ.
ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.