ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

"ಮುಂದಿನ 12 ಗಂಟೆಗಳ ಕಾಲ ರೈಲು ಪ್ರಯಾಣದಿಂದ ದೂರವಿರಿ"; ಇರಾನ್‌ ನಾಗರಿಕರಿಗೆ ಇಸ್ರೇಲ್‌ ಸೂಚನೆ

ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಯುದ್ಧ ಆರನೇ ವಾರಕ್ಕೆ ಕಾಲಿಟ್ಟಿದೆ. ಡೊನಾಲ್ಡ್‌ ಟ್ರಂಪ್‌ ಬೆದರಿಕೆ ಬಳಿಕ ಇದೀಗ ಇಸ್ರೇಲ್‌ ಇರಾನ್‌ಗೆ ಮತ್ತೆ ಬೆದರಿಕೆ ಹಾಕಿದೆ. ಅಷ್ಟೇ ಅಲ್ಲದೇ ಇರಾನ್‌ ನಾಗರಿಕರಿಗೆ ಕೆಲ ಸೂಚನೆಯನ್ನು ನೀಡಿದೆ. ದೇಶಾದ್ಯಂತ ರೈಲುಗಳನ್ನು ಬಳಸುವುದರಿಂದ ಅಥವಾ ರೈಲಿನಲ್ಲಿ ಪ್ರಯಾಣಿಸುವುದರಿಂದ ದೂರವಿರಲು ನಾವು ನಿಮ್ಮನ್ನು ಕೇಳಿಕೊಳ್ಳುತ್ತೇವೆ ಎಂದು ಇರಾನ್‌ ತಿಳಿಸಿದೆ.

ಇರಾನ್‌ ನಾಗರಿಕರಿಗೆ ಇಸ್ರೇಲ್‌ ನೀಡಿದ ಸೂಚನೆಯೇನು?

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Apr 7, 2026 12:51 PM

ಟೆಹರಾನ್‌: ಇಸ್ರೇಲ್‌ ಹಾಗೂ ಇರಾನ್‌ (Israel Iran War) ನಡುವಿನ ಯುದ್ಧ ಆರನೇ ವಾರಕ್ಕೆ ಕಾಲಿಟ್ಟಿದೆ. ಡೊನಾಲ್ಡ್‌ ಟ್ರಂಪ್‌ ಬೆದರಿಕೆ ಬಳಿಕ ಇದೀಗ ಇಸ್ರೇಲ್‌ ಇರಾನ್‌ಗೆ ಮತ್ತೆ ಬೆದರಿಕೆ ಹಾಕಿದೆ. ಅಷ್ಟೇ ಅಲ್ಲದೇ ಇರಾನ್‌ ನಾಗರಿಕರಿಗೆ ಕೆಲ ಸೂಚನೆಯನ್ನು ನೀಡಿದೆ. ಇಸ್ರೇಲಿ ಸೇನೆಯು ಇರಾನ್‌ನಲ್ಲಿರುವ ಜನರಿಗೆ ತುರ್ತು ಸಲಹೆಯನ್ನು ನೀಡಿದ್ದು, ಮುಂದಿನ 12 ಗಂಟೆಗಳ ಕಾಲ ರೈಲುಗಳು ಮತ್ತು ರೈಲು ಮಾರ್ಗಗಳಿಂದ ದೂರವಿರಲು ಕೇಳಿಕೊಂಡಿದೆ.

ನಿಮ್ಮ ಸುರಕ್ಷತೆಗಾಗಿ, ಇರಾನ್ ಸಮಯ ರಾತ್ರಿ 9 ಗಂಟೆಯವರೆಗೆ ದೇಶಾದ್ಯಂತ ರೈಲುಗಳನ್ನು ಬಳಸುವುದರಿಂದ ಅಥವಾ ರೈಲಿನಲ್ಲಿ ಪ್ರಯಾಣಿಸುವುದರಿಂದ ದೂರವಿರಲು ನಾವು ನಿಮ್ಮನ್ನು ಕೇಳಿಕೊಳ್ಳುತ್ತೇವೆ" ಎಂದು ಸೇನೆಯು ತನ್ನ ಪರ್ಷಿಯನ್ ಭಾಷೆಯ ಖಾತೆಯಲ್ಲಿ ಬರೆಯಲಾಗಿದೆ. ಈ ಎಚ್ಚರಿಕೆಯ ಕುರಿತು ಇರಾನ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮಂಗಳವಾರ ಮುಂಜಾನೆ ಅಮೆರಿಕ-ಇಸ್ರೇಲ್ ನಡೆಸಿದ ದಾಳಿಗಳು ಟೆಹ್ರಾನ್‌ನಲ್ಲಿರುವ ಸಿನಗಾಗ್ ಅನ್ನು ನಾಶಪಡಿಸಿವೆ ಎಂದು ಇರಾನಿನ ಮಾಧ್ಯಮಗಳು ವರದಿ ಮಾಡಿವೆ.

ಒಂದೇ ರಾತ್ರಿಯಲ್ಲಿ ನಾಶ ಮಾಡುತ್ತೇವೆ!

ಒಪ್ಪಂದ ಮಾಡಿಕೊಳ್ಳಲು ವಿಫಲವಾದರೆ ಅಥವಾ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ವಿಫಲವಾದರೆ, ಇರಾನಿನ ವಿದ್ಯುತ್ ಸ್ಥಾವರಗಳು, ಸೇತುವೆಗಳು ಮತ್ತು ಇತರ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದಾಗಿ ಟ್ರಂಪ್ ಎಚ್ಚರಿಸಿದ್ದರು. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಸರ್ಕಾರವು ಹಾರ್ಮುಜ್ ಕೊಲ್ಲಿಯನ್ನು ಮುಂದಿನ ಮಂಗಳವಾರದೊಳಗೆ ಮರು ತೆರೆಯದಿದ್ದರೆ ಇರಾನ್‌ನ ನಿರ್ಣಾಯಕ ಮೂಲಸೌಕರ್ಯಗಳ ಮೇಲೆ ಭಾರೀ ದಾಳಿ ನಡೆಸುವುದಾಗಿ ಮತ್ತೆ ಎಚ್ಚರಿಕೆ ನೀಡಿದ್ದಾರೆ.

ʼʼಭಾರತ ಬ್ರೋಕರ್‌ ಕೆಲಸ ಮಾಡುವುದಿಲ್ಲʼʼ: ಇರಾನ್‌-ಅಮೆರಿಕ ಮಧ್ಯೆ ಪಾಕಿಸ್ತಾನದ ಮಧ್ಯಸ್ಥಿಕೆ ಬಗ್ಗೆ ಎಸ್. ಜೈಶಂಕರ್ ಹೇಳಿದ್ದೇನು?

ಟ್ರಂಪ್‌ ಎಚ್ಚರಿಕೆ ಬೆನ್ನಲ್ಲೇ ಸೋಮವಾರ ತಡರಾತ್ರಿ ಇರಾನ್‌ನ ಪ್ರಮುಖ ನಗರಗಳ ಮೇಲೆ ಇಸ್ರೇಲ್‌ ಡ್ರೋನ್‌ ದಾಳಿ ನಡೆಸಿದೆ. ಇರಾನ್‌ನ ಭಯೋತ್ಪಾದನಾ ಚಟುವಟಿಕೆಗಳ ಸೌಲಭ್ಯಗಳ ಮೇಲೆ ದಾಳಿ ನಡೆದಿದ್ದು, ಹಲವೆಡೆ ಭಾರೀ ಸ್ಫೋಟಗಳು ಸಂಭವಿಸಿವೆ. ರಾಜಧಾನಿ ಟೆಹ್ರಾನ್‌ ನ ಕೆಲವು ಭಾಗಗಳು ಮತ್ತು ಹತ್ತಿರದ ಕರಾಜ್‌ ನಗರ ಸೇರಿದಂತೆ ಹಲವೆಡೆ ಸ್ಫೋಟಗಳು ಸಂಭವಿಸಿದೆ ಎಂದು ಇಸ್ರೇಲ್‌ ಸೇನೆ ತನ್ನ ಅಧಿಕೃತ ಟೆಲಿಗ್ರಾಮ್‌ ಚಾನೆಲ್‌ನಲ್ಲಿ ಹೇಳಿಕೊಂಡಿದೆ.