ಹಮಾಸ್‌ನ ಮೋಸ್ಟ್ ವಾಂಟೆಡ್ ಟನಲ್ ಪತ್ತೆ ಹಚ್ಚಿದ ಇಸ್ರೇಲ್ ಸೇನೆ
ಗಾಜಾ ಪಟ್ಟಿಯಲ್ಲಿರುವ ಹಮಾಸ್ ನ ಪ್ರಮುಖ ಸುರಂಗವೊಂದನ್ನು ಇಸ್ರೇಲ್ ಪತ್ತೆ ಹಚ್ಚಿದೆ. ಇದು ಸರಿಸುಮಾರು 7 ಕಿ.ಮೀ. ಉದ್ದ, 25 ಮೀಟರ್ ಆಳವಿದ್ದು, ಇದರಲ್ಲಿ ಒಟ್ಟು 80 ಕೊಠಡಿಗಳಿವೆ. 2014ರಲ್ಲಿ ನಡೆದಿದ್ದ ಇಸ್ರೇಲ್- ಹಮಾಸ್ ಯುದ್ಧಕ್ಕೆ ಇದರಿಂದಲೇ ಹೊಂಚು ದಾಳಿ ನಡೆಸಲಾಗಿತ್ತು. ಈ ವೇಳೆ ಹಮಾಸ್ ಬಂಧಿಸಿದ್ದ ಲೆಫ್ಟಿನೆಂಟ್ ಗೋಲ್ಡಿನ್ ಅವರ ಅವಶೇಷಗಳು ಕೂಡ ಇದರಲ್ಲಿ ಪತ್ತೆಯಾಗಿದೆ.
ಲೆಫ್ಟಿನೆಂಟ್ ಹದರ್ ಗೋಲ್ಡಿನ್ (ಸಂಗ್ರಹ ಚಿತ್ರ) -
ಗಾಜಾ: ಹಮಾಸ್ (Hamas) ಕಮಾಂಡರ್‌ಗಳು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು, ದಾಳಿಗಳ ಯೋಜನೆ ಮಾಡಲು, ಬಂಧಿತರನ್ನು ಇಡಲು ಬಳಸುತ್ತಿದ್ದ ಅತೀ ದೊಡ್ಡ ಪ್ರಮಾಣದ ಸುರಂಗವೊಂದನ್ನು (Hamas Tunnel) ಇಸ್ರೇಲ್ ( Israel Defense Forces) ಪತ್ತೆ ಹಚ್ಚಿದೆ. ಗಾಜಾ (Gaza) ಪಟ್ಟಿಯಲ್ಲಿರುವ ಸರಿಸುಮಾರು 7 ಕಿ.ಮೀ. ಉದ್ದ, 25 ಮೀಟರ್ ಆಳವಿರುವ ಈ ಸುರಂಗದಲ್ಲಿ ಒಟ್ಟು 80 ಕೊಠಡಿಗಳಿವೆ. 2014ರ ಇಸ್ರೇಲ್- ಹಮಾಸ್ ಯುದ್ಧಕ್ಕೆ ಈ ಸುರಂಗದಿಂದಲೇ ಹೊಂಚು ದಾಳಿ ನಡೆಸಲಾಗಿತ್ತು. ಈ ವೇಳೆ ಹಮಾಸ್ ಬಂಧಿಸಿದ್ದ ಲೆಫ್ಟಿನೆಂಟ್ ಹದರ್ ಗೋಲ್ಡಿನ್ (Lieutenant Hadar Goldin) ಅವರ ಅವಶೇಷ ಕೂಡ ಇದರಲ್ಲಿ ಪತ್ತೆಯಾಗಿದೆ.
ಗಾಜಾ ಪಟ್ಟಿಯಲ್ಲಿರುವ ಪ್ರಮುಖ ಹಮಾಸ್ ಸುರಂಗವನ್ನು ನವೆಂಬರ್ ತಿಂಗಳ ಆರಂಭದಲ್ಲಿ ಪತ್ತೆ ಹಚ್ಚಿದ ಇಸ್ರೇಲ್ ರಕ್ಷಣಾ ಪಡೆಗಳು (IDF) ಇದರಲ್ಲಿ ಲೆಫ್ಟಿನೆಂಟ್ ಗೋಲ್ಡಿನ್ ಅವರ ಮೃತ ದೇಹವನ್ನು ಕೂಡ ಪತ್ತೆ ಹಚ್ಚಿದೆ.
ಇದನ್ನೂ ಓದಿ: Chanakya Niti: ಜೀವನದಲ್ಲಿ ಸೋತವರಿಗೆ ಸಂಜೀವಿನಿ ಚಾಣಕ್ಯ ನೀತಿಯ ಈ ಪಂಚ ಸೂತ್ರಗಳು
ಇಸ್ರೇಲ್ ರಕ್ಷಣಾ ಪಡೆಗಳು ಗಾಜಾ ಪಟ್ಟಿಯಲ್ಲಿರುವ ಪ್ರಮುಖ ಹಮಾಸ್ ಸುರಂಗವನ್ನು ಪತ್ತೆ ಹಚ್ಚಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ಇದರಲ್ಲಿ ಹಮಾಸ್ ನ ಭಯೋತ್ಪಾದಕ ಗುಂಪು ಲೆಫ್ಟಿನೆಂಟ್ ಹದರ್ ಗೋಲ್ಡಿನ್ ಅವರನ್ನು ಬಂಧಿಸಿಟ್ಟಿತ್ತು. 2014 ರ ಇಸ್ರೇಲ್-ಹಮಾಸ್ ಯುದ್ಧದ ಸಮಯದಲ್ಲಿ ಗಾಜಾದಲ್ಲಿ ಹೊಂಚುದಾಳಿ ನಡೆಸಿ ಲೆಫ್ಟಿನೆಂಟ್ ಗೋಲ್ಡಿನ್ ಅವರನ್ನು ಬಂಧಿಸಲಾಗಿದ್ದು, ಬಳಿಕ ಅವರು ಸಾವನ್ನಪ್ಪಿದ್ದರು.
⭕️ EXPOSED: A 7+ kilometer Hamas tunnel route that held Lt. Hadar Goldin.
— Israel Defense Forces (@IDF) November 20, 2025
IDF troops uncovered one of Gaza’s largest and most complex underground routes, over 7 km long, ~25 meters deep, with ~80 hideouts, where abducted IDF officer Lt. Hadar Goldin was held.
The tunnel runs… pic.twitter.com/GTId75CvYw
ಗೋಲ್ಡಿನ್ ಅವರ ದೇಹವನ್ನು ಇರಿಸಲಾಗಿದ್ದ ಸುರಂಗದ ವಿಡಿಯೊವನ್ನು ಹಂಚಿಕೊಂಡಿರುವ ಇಸ್ರೇಲ್ ರಕ್ಷಣಾ ಪಡೆಗಳು, ಸುರಂಗವು ಜನನಿಬಿಡ ರಫಾ ಸಮೀಪದ ಪ್ಯಾಲೆಸ್ಟಿನಿಯನ್ ನಿರಾಶ್ರಿತರಿಗಾಗಿ ಯುನೈಟೆಡ್ ನೇಷನ್ಸ್ ಏಜೆನ್ಸಿ ನಡೆಸುತ್ತಿರುವ ಕಟ್ಟಡ, ಮಸೀದಿಗಳು, ಚಿಕಿತ್ಸಾಲಯಗಳು ಮತ್ತು ಕಿಂಡರ್‌ಗಾರ್ಟನ್‌ಗಳ ಮೂಲಕ ಹಾದುಹೋಗುತ್ತದೆ ಎಂದು ಇಸ್ರೇಲ್ ರಕ್ಷಣಾ ಪಡೆ ತಿಳಿಸಿದೆ.
ಇದೇ ಸುರಂಗದಲ್ಲಿ ಹಮಾಸ್ ಕಮಾಂಡರ್‌ಗಳು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಡುತ್ತಿದ್ದರು, ದಾಳಿಗಳನ್ನು ನಡೆಸಲು ಯೋಜನೆ ಹಾಕಿಕೊಳ್ಳುತ್ತಿದ್ದರು, ಬಂಧಿತರನ್ನು ಇರಿಸಲುಕೊಠಡಿಗಳನ್ನು ಬಳಸಿಕೊಳ್ಳುತ್ತಿದ್ದರು ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿದೆ.
ಈ ಸುರಂಗವು ಏಳು ಕಿಲೋಮೀಟರ್‌ಗಳಿಗಿಂತ ಹೆಚ್ಚು ಉದ್ದ, 25 ಮೀಟರ್ ಆಳವನ್ನು ಹೊಂದಿದೆ. ಇದರಲ್ಲಿ ಒಟ್ಟು 80 ಕೊಠಡಿಗಳಿವೆ. ಸುರಂಗದಲ್ಲಿ ಯಹಲೋಮ್ ಯುದ್ಧ ಎಂಜಿನಿಯರಿಂಗ್ ಘಟಕ ಮತ್ತು ಶಾಯೆಟೆಟ್ 13 ನೌಕಾ ಕಮಾಂಡೋ ಘಟಕವು ಇದೆ ಎಂದು ಇಸ್ರೇಲ್ ತಿಳಿಸಿದೆ.
ಕಳೆದ ಮೇ ತಿಂಗಳಲ್ಲಿ ಕೊಲಲ್ಪಟ್ಟ ಹಮಾಸ್ ನಾಯಕ ಮೊಹಮ್ಮದ್ ಸಿನ್ವಾರ್, ಮುಹಮ್ಮದ್ ಶಬಾನಾ ಸೇರಿದಂತೆ ಹಿರಿಯ ಹಮಾಸ್ ಕಮಾಂಡರ್‌ಗಳು ಕೂಡ ಇದರಲ್ಲಿದ್ದ ಕೊಠಡಿಗಳನ್ನು ಬಳಸುತ್ತಿದ್ದರು ಎಂದು ಇಸ್ರೇಲ್ ಸೇನೆ ಮಿಲಿಟರಿ ಹೇಳಿದೆ.
ಹಮಾಸ್ ಸದಸ್ಯ ಬಂಧನ
ಇಸ್ರೇಲ್ ರಕ್ಷಣಾ ಪಡೆ ಮಾಡಿರುವ ಮತ್ತೊಂದು ಪೋಸ್ಟ್ ನಲ್ಲಿ ಲೆಫ್ಟಿನೆಂಟ್ ಹದರ್ ಗೋಲ್ಡಿನ್ ಅವರ ಕೊಲೆಯಲ್ಲಿ ಭಾಗಿಯಾಗಿದ್ದ ಹಮಾಸ್ ಭಯೋತ್ಪಾದಕ ಮರ್ವಾನ್ ಅಲ್-ಹ್ಯಾಮ್ಸ್‌ನನ್ನು ಬಂಧಿಸಿರುವುದಾಗಿ ತಿಳಿಸಿದೆ.
ರಫಾದಲ್ಲಿನ ವೈಟ್-ಕ್ರೌನ್ಡ್ ಸುರಂಗದಲ್ಲಿ ಲೆಫ್ಟಿನೆಂಟ್ ಗೋಲ್ಡಿನ್ ಅವರ ಸಮಾಧಿ ಸ್ಥಳ ಇರುವ ಬಗ್ಗೆ ಅಲ್-ಹ್ಯಾಮ್ಸ್‌ಗೆ ತಿಳಿದಿರುವ ಶಂಕೆಯೂ ಇತ್ತು ಎಂದು ಐಡಿಎಫ್ ತಿಳಿಸಿದೆ.
ಕಳೆದ ಜುಲೈ ನಲ್ಲಿ ಲೆಫ್ಟಿನೆಂಟ್ ಹದರ್ ಗೋಲ್ಡಿನ್ ಅವರನ್ನು ಜೀವಂತವಾಗಿ ಮರಳಿ ಪಡೆಯಲು ಇಸ್ರೇಲ್ ಸಾಕಷ್ಟು ರಹಸ್ಯ ಕಾರ್ಯಾಚರಣೆಗಳನ್ನು ನಡೆಸಿತ್ತು ಎಂದು ಇಸ್ರೇಲ್ ಹೇಳಿದೆ.
ಇದನ್ನೂ ಓದಿ: ವಿದ್ಯಾರ್ಥಿ ಆತ್ಮಹತ್ಯೆ ಕೇಸ್; ಮುಖ್ಯೋಪಾಧ್ಯಾಯ ಸೇರಿ ಮೂವರು ಶಿಕ್ಷಕರು ಅಮಾನತು
2023ರ ಅಕ್ಟೋಬರ್ ನಲ್ಲಿ ಮತ್ತೆ ಪ್ರಾರಂಭವಾದ ಇಸ್ರೇಲ್ ಹಮಾಸ್ ಯುದ್ಧದಲ್ಲಿ ಹಮಾಸ್ ನೇತೃತ್ವದ ಉಗ್ರಗಾಮಿಗಳು 1,200 ಜನರನ್ನು ಕೊಂದು ಹಾಕಿದ್ದು, 251 ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿತ್ತು. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ಇಸ್ರೇಲ್ ದಾಳಿ ನಡೆಸಿ 69,000ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರನ್ನು ಕೊಂದು ಹಾಕಿತ್ತು.