ಢಾಕಾ : ಬಾಂಗ್ಲಾದೇಶದ (Bangladesh) ರಾಜಧಾನಿ ಢಾಕಾದಲ್ಲಿರುವ ಅಮರ್ ಎಕುಶೆ ಪುಸ್ತಕ ಮೇಳದಲ್ಲಿ ಭಾರೀ ಪ್ರತಿಭಟನೆ ಹಾಗೂ ಹಿಂಸಾಚಾರ ನಡೆದಿದೆ. ಗಡಿಪಾರುಗೊಂಡ ಲೇಖಕಿ ತಸ್ಲಿಮಾ ನಸ್ರೀನ್ (Taslima Nasreen) ಅವರ ಪುಸ್ತಕವನ್ನು ಮಾರಾಟಕ್ಕಿಟ್ಟಿದ್ದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳ ಗುಂಪೊಂದು ಪ್ರತಿಭಟನೆ ನಡೆಸಿ ಪುಸ್ತಕ ಮಳಿಗೆಯನ್ನು ಧ್ವಂಸಗೊಳಿಸಿದೆ ಎಂದು ತಿಳಿದು ಬಂದಿದೆ. ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳ ಪ್ರಕಾರ ಪ್ರತಿಭಟನಾಕಾರರ ಗುಂಪೊಂದು ಸಬ್ಯಸಾಚಿ ಪ್ರಕಾಶಕ್ಕೆ ಬಂದು ತಸ್ಲೀಮಾ ನಸ್ರೀನ್ ಅವರ ಪುಸ್ತಕವನ್ನು ಅಂಗಡಿಯಲ್ಲಿ ಏಕೆ ಇರಿಸಲಾಗಿದೆ ಎಂದು ಕೂಗಲು ಪ್ರಾರಂಭಿಸಿತು. ನಂತರ ಪ್ರಕಾಶಕ ಶತಾಬ್ದಿ ಭವ ಅವರ ಮೇಲೆ ಜನರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ನಡೆಯುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ತಸ್ಲೀಮಾ ನಸ್ರೀನ್ ಬಾಂಗ್ಲಾದೇಶದ ಗಡಿಪಾರು ಮಾಡಲಾದ ಲೇಖಕಿಯಾಗಿದ್ದು, ಪ್ರಸ್ತುತ ಭಾರತದಲ್ಲಿ ವಾಸಿಸುತ್ತಿದ್ದಾರೆ. ಅವರು ಉಗ್ರಗಾಮಿಗಳ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಈ ಬಗ್ಗೆ ಪ್ರತ್ರಿಯಿಸಿರುವ ಲೇಖಕಿ ಸರ್ಕಾರವು ದೇಶದ ಉಗ್ರಗಾಮಿಗಳನ್ನು ಬೆಂಬಲಿಸುತ್ತಿದೆ ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು ಜಿಹಾದಿ ಚಟುವಟಿಕೆಗಳು ದೇಶಾದ್ಯಂತ ಹರಡುತ್ತಿವೆ. ಇಂದು, ಬಾಂಗ್ಲಾದೇಶದ ಪುಸ್ತಕ ಮೇಳದಲ್ಲಿ ಜಿಹಾದಿ ಧಾರ್ಮಿಕ ಉಗ್ರಗಾಮಿಗಳು ಪ್ರಕಾಶಕ ಸಬ್ಯಸಾಚಿಯ ಸ್ಟಾಲ್ ಮೇಲೆ ದಾಳಿ ಮಾಡಿದ್ದಾರೆ. ಸ್ತಕ ಮೇಳದ ಅಧಿಕಾರಿಗಳು ಮತ್ತು ಸ್ಥಳೀಯ ಠಾಣೆಯ ಪೊಲೀಸರು ನನ್ನ ಪುಸ್ತಕವನ್ನು ತೆಗೆದುಹಾಕಲು ಆದೇಶಿಸಿದರು. ಅದನ್ನು ತೆಗೆದುಹಾಕಿದ ನಂತರವೂ, ಉಗ್ರಗಾಮಿಗಳು ದಾಳಿ ಮಾಡಿ, ಸ್ಟಾಲ್ ಅನ್ನು ಧ್ವಂಸ ಮಾಡಿ, ಅದನ್ನು ಮುಚ್ಚಿದರು. ಸರ್ಕಾರ ಈ ಉಗ್ರಗಾಮಿಗಳನ್ನು ಬೆಂಬಲಿಸುತ್ತಿದೆ ಮತ್ತು ಜಿಹಾದಿ ಚಟುವಟಿಕೆಗಳು ದೇಶಾದ್ಯಂತ ಹರಡುತ್ತಿವೆ ಎಂದು ಅವರು ಹೇಳಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ, ಪುಸ್ತಕ ಮೇಳದಲ್ಲಿ ನಡೆದ ಗಲಾಟೆಯ ಬಗ್ಗೆ ಮಾಹಿತಿ ಪಡೆದ ನಂತರ ಹೆಚ್ಚುವರಿ ಪೊಲೀಸರನ್ನು ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. "ನಾವು ಎರಡೂ ಕಡೆಯವರನ್ನು ಪೊಲೀಸ್ ಠಾಣೆಗೆ ಕರೆತಂದಿದ್ದೇವೆ. ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Bangladesh Violence: ಬಾಂಗ್ಲಾದೇಶದಲ್ಲಿ ಮತ್ತೊಂದು ಇಸ್ಕಾನ್ ದೇವಾಲಯಕ್ಕೆ ಬೆಂಕಿ, ಮೂರ್ತಿ ಭಗ್ನ
ಬಾಂಗ್ಲಾದೇಶದ ರಚನೆಯ ಸ್ಮರಣಾರ್ಥ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರರನ್ನು ಸ್ಮರಿಸಲು ಬಾಂಗ್ಲಾ ಅಕಾಡೆಮಿಯು ಪುಸ್ತಕ ಮೇಳವನ್ನು ಆಯೋಜಿಸುತ್ತದೆ. ಇದನ್ನು ವಾರ್ಷಿಕವಾಗಿ ಫೆಬ್ರವರಿ ತಿಂಗಳಲ್ಲಿ ಆಯೋಜಿಸಲಾಗುತ್ತದೆ. ಇದು ದಕ್ಷಿಣ ಏಷ್ಯಾದ ಅತಿದೊಡ್ಡ ಪುಸ್ತಕ ಮೇಳಗಳಲ್ಲಿ ಒಂದಾಗಿದೆ.