ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಮೆರಿಕಾಗೆ ಹೆದರಿ ಬಚ್ಚಿಟ್ಟುಕೊಂಡ ಇರಾನ್ ಸುಪ್ರೀಂ ನಾಯಕ ಖಮೇನಿ !

ಈ ಹಿಂದೆ ಅಮೆರಿಕವು ಇರಾನ್ ಮೇಲೆ ದಾಳಿ ನಡೆಸಿ ದೊಡ್ಡ ತಪ್ಪು ಮಾಡಿದೆ, ಮುಂದಿನ ದಿನಗಳಲ್ಲಿ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಇರಾನ್ ಸುಪ್ರೀಂ ನಾಯಕ ಆಯತೊಲ್ಲಾ ಖಮೇನಿ ಹೇಳಿದ್ದರು. ಶತ್ರುಗಳ ಧೈರ್ಯಶಾಲಿ ಪ್ರಚೋದನೆಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಪ್ರತಿಜ್ಞೆ ಮಾಡಿದರು. ಆದರೆ ಈಗ ಅಮೆರಿಕ ದಾಳಿ ನಡೆಸಬಹುದು ಎಂದು ಇರಾನ್ ಹಿರಿಯ ಸೇನಾ ಹಾಗೂ ಭದ್ರತಾ ಅಧಿಕಾರಿಗಳು ಎಚ್ಚರಿಕೆ ನೀಡಿದ ಬಳಿಕ, ದೇಶದ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಅಡಗಿ ಕೂತಿದ್ದಾರೆ.

ಖಮೇನಿ

ನವದೆಹಲಿ: ಅಮೆರಿಕ(America) ದಾಳಿ ನಡೆಸಬಹುದು ಎಂದು ಇರಾನ್(Iran) ಹಿರಿಯ ಸೇನಾ ಹಾಗೂ ಭದ್ರತಾ ಅಧಿಕಾರಿಗಳು ಎಚ್ಚರಿಕೆ ನೀಡಿದ ಬಳಿಕ, ದೇಶದ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ(Ayatollah Ali Khamenei) ತೆಹ್ರಾನ್‌(Tehran)ನಲ್ಲಿರುವ ಸುರಕ್ಷಿತ ಭೂಗತ ಸ್ಥಳಕ್ಕೆ ರವಾನೆಯಾಗಿದ್ದಾರೆ ಎಂದು ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ಇರಾನ್ ಇಂಟರ್‌ನ್ಯಾಷನಲ್(Iran International) ವರದಿ ಮಾಡಿದೆ.

ಇದು ಯುದ್ಧಕಾಲೀನ ಪರಿಸ್ಥಿತಿಯಲ್ಲಿ ಗರಿಷ್ಠ ರಕ್ಷಣೆಯನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾದ, ಪರಸ್ಪರ ಸಂಪರ್ಕಿತ ಸುರಂಗಗಳನ್ನು ಹೊಂದಿರುವ ಅತ್ಯಂತ ಸುರಕ್ಷಿತ ಸ್ಥಳವಾಗಿದೆ ಎಂದು ಹೇಳಲಾಗಿದೆ.

ವರದಿಗಳ ಪ್ರಕಾರ, ಸುಪ್ರೀಂ ಲೀಡರ್ ಅವರ ಮೂರನೇ ಪುತ್ರ ಮಸೂದ್ ಖಮೇನಿ ತಮ್ಮ ತಂದೆಯ ಕಚೇರಿಯ ದೈನಂದಿನ ನಿರ್ವಹಣೆಯನ್ನು ವಹಿಸಿಕೊಂಡಿದ್ದು, ಇರಾನ್‌ನ ಕಾರ್ಯನಿರ್ವಹಣಾ ವಿಭಾಗಗಳೊಂದಿಗೆ ಸಂವಹನ ನಡೆಸುವ ಪ್ರಮುಖ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಟ್ರಂಪ್ ಅವರ ‘ಭಾರಿ ಪಡೆ’ ಎಚ್ಚರಿಕೆ

ತೆಹ್ರಾನ್ ಮತ್ತು ವಾಷಿಂಗ್ಟನ್ ನಡುವಿನ ಉದ್ವಿಗ್ನತೆ ತೀವ್ರಗೊಳ್ಳುತ್ತಿರುವ ನಡುವೆಯೇ, "ಅಮೆರಿಕದ ನೌಕಾಪಡೆ ಮಧ್ಯಪೂರ್ವದತ್ತ ಸಾಗುತ್ತಿದೆ," ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಏರ್ ಫೋರ್ಸ್ ವನ್ ವಿಮಾನದಲ್ಲಿ ಮಾತನಾಡಿದ ಟ್ರಂಪ್, ಇರಾನ್ ವಿರುದ್ಧ ಕ್ರಮ ಕೈಗೊಳ್ಳುವ ನಿರ್ಧಾರವಾದರೆ ಯುದ್ಧ ಮಾಡಲೆಂದು ಆ ಪ್ರದೇಶದತ್ತ ಯುದ್ಧನೌಕೆಗಳನ್ನು ನಿಯೋಜಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಹೆಸರು ಹೇಳಲು ಬಯಸದ ಅಮೆರಿಕ

ನೌಕಾಪಡೆಯ ಅಧಿಕಾರಿಯೊಬ್ಬರು ಮಾತನಾಡಿ, ಯುಎಸ್‌ಎಸ್ ಅಬ್ರಹಾಂ ಲಿಂಕನ್ ವಿಮಾನವಹಕ ಯುದ್ಧನೌಕೆ ಹಾಗೂ ಹಲವು ಮಾರ್ಗದರ್ಶಿತ ಕ್ಷಿಪಣಿ ನಾಶಪಡಿಸುವ ನೌಕೆಗಳು ಪ್ರಸ್ತುತ ಹಿಂದೂ ಮಹಾಸಾಗರದಲ್ಲಿದ್ದು, ಮುಂದಿನ ದಿನಗಳಲ್ಲಿ ಮಧ್ಯಪೂರ್ವಕ್ಕೆ ಆಗಮಿಸಲಿವೆ ಎಂದು ದೃಢಪಡಿಸಿದ್ದಾರೆ. ಇದರ ಜೊತೆಗೆ, ಅಮೆರಿಕ ಮತ್ತು ಇಸ್ರೇಲಿ ವಾಯುನೆಲೆಗಳನ್ನು ರಕ್ಷಿಸುವ ಉದ್ದೇಶದಿಂದ ಹೆಚ್ಚುವರಿ ವಾಯು ರಕ್ಷಣಾ ವ್ಯವಸ್ಥೆಗಳನ್ನೂ ಸ್ಥಳಾಂತರಿಸಲಾಗುತ್ತಿದೆ. ದೋಹಾ ಮನವಿಯ ಮೇರೆಗೆ ಕತಾರ್‌ಗೆ ತನ್ನ ರಾಫ್ ಯೂರೋಫೈಟರ್ ಟೈಫೂನ್ ಯುದ್ಧವಿಮಾನಗಳನ್ನು ಕಳುಹಿಸುವುದಾಗಿ ಯುಕೆ ತಿಳಿಸಿದೆ.

Israel-Iran Conflict: ಇರಾನ್‌-ಇಸ್ರೇಲ್‌ ಸಂಘರ್ಷಕ್ಕೆ ಬ್ರೇಕ್‌; ಕದನ ವಿರಾಮ ಘೋಷಣೆ

ಟ್ರಂಪ್‌ಗೆ ಇರಾನ್ ಉತ್ತರ

ಅಮೆರೆಕ ನಡೆಗೆ ಪ್ರತಿಕ್ರಿಯಿಸಿದ ಇರಾನ್‌ನ ರೆವಲ್ಯೂಷನರಿ ಗಾರ್ಡ್ ಕಮಾಂಡರ್ ಜನರಲ್ ಮೊಹಮ್ಮದ್ ಪಕ್ಪೂರ್, ಇರಾನ್ ಪಡೆಗಳೂ ಸಹ “ಹಿಂದೆಂದಿಗಿಂತ ಹೆಚ್ಚು ಸಿದ್ಧದ್ದು, ಬೆರಳು ಟ್ರಿಗರ್ ಮೇಲೆಯೇ ಇದೆ” ಎಂದು ಎಚ್ಚರಿಕೆ ನೀಡಿದ್ದಾರೆ. ರಾಯಿಟರ್ಸ್‌ ಜೊತೆ ಮಾತನಾಡಿದ ಇರಾನ್‌ನ ಹಿರಿಯ ಅಧಿಕಾರಿಯೊಬ್ಬರು, "ಅಮೆರಿಕದ ಯಾವುದೇ ದಾಳಿಯನ್ನು “ಪೂರ್ಣ ಪ್ರಮಾಣದ ಯುದ್ಧ”ವೆಂದು ಪರಿಗಣಿಸಲಾಗುತ್ತದೆ ಮತ್ತು ಇರಾನ್ “ಅತ್ಯಂತ ಕಠಿಣ ರೀತಿಯಲ್ಲಿ” ಪ್ರತಿಕ್ರಿಯಿಸುತ್ತದೆ ಎಂದು ಹೇಳಿದ್ದಾರೆ.

ಇರಾನ್‌ನಲ್ಲಿ ಮುಂದುವರಿದ ಅಶಾಂತಿ

ಆರ್ಥಿಕ ಸಂಕಷ್ಟ ಮತ್ತು ಕರೆನ್ಸಿ ಮೌಲ್ಯದಲ್ಲಿ ತೀವ್ರ ಕುಸಿತದಿಂದ ಇರಾನ್‌ನಲ್ಲಿ ಆಗುತ್ತಿರುವ ಪ್ರತಿಭಟನೆಗಳಿಂದ ವಾರಗಳಿಂದ ನಡೆಯುತ್ತಿರುವ ಅಶಾಂತಿಯ ನಡುವೆಯೇ ಈ ಸೇನೆಗಳ ಮುಖಾಮುಖಿಯಾಗುತ್ತಿದ್ದು, ಮತ್ತಷ್ಟು ಆತಂಕ ಮೂಡಿಸಿದೆ.

ವರದಿಗಳ ಪ್ರಕಾರ, ಇರಾನ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಈಗಾಗಲೇ ಕನಿಷ್ಠ 5,002 ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ 4,716 ಪ್ರತಿಭಟನಾಕಾರರು, 43 ಮಕ್ಕಳು ಹಾಗೂ ಪ್ರತಿಭಟನೆಗೆ ನೇರವಾಗಿ ಸಂಬಂಧಿಸದ 40 ನಾಗರಿಕರು ಸೇರಿದ್ದಾರೆ. ಅಲ್ಲದೇ ಕನಿಷ್ಠ 26,541 ಮಂದಿಯನ್ನು ಬಂಧಿಸಲಾಗಿದೆ. ಆದರೆ, ಇರಾನ್ ಅಧಿಕಾರಿಗಳು ಈ ಅಂಕಿಅಂಶಗಳನ್ನು ಇನ್ನೂ ದೃಢಪಡಿಸಿಲ್ಲ.

ಭಾರತಕ್ಕೆ ಇರಾನ್ ರಾಯಭಾರಿ ಧನ್ಯವಾದ

ಈ ಉದ್ವಿಗ್ನತೆಯ ನಡುವೆಯೇ, ಇರಾನ್‌ನ ಮಾನವ ಹಕ್ಕುಗಳ ದಾಖಲೆ ಕುರಿತ ಹೆಚ್ಚುವರಿ ಪರಿಶೀಲನೆಗೆ ಆಗ್ರಹಿಸಿದ ಯುಎನ್ ಮಾನವ ಹಕ್ಕುಗಳ ಮಂಡಳಿ ನಿರ್ಣಯಕ್ಕೆ ವಿರುದ್ಧವಾಗಿ ಮತಹಾಕಿದ್ದಕ್ಕೆ ಭಾರತದಲ್ಲಿನ ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ ಅವರು, ಭಾರತಕ್ಕೆ ಧನ್ಯವಾದ ತಿಳಿಸಿದ್ದಾರೆ.