ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ayatollah Khamenei: ಇಸ್ರೇಲ್ ದಾಳಿಯ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಇರಾನ್ ನಾಯಕ ಅಯತೊಲ್ಲಾ ಖಮೇನಿ

ಇಸ್ರೇಲ್ ಮತ್ತು ಇರಾನ್ ನಡುವೆ ಸಂಘರ್ಷ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಜುಲೈ 5ರ ಶನಿವಾರ ಸಾರ್ವಜನಿಕವಾಗಿ ಕಾಣಿಸಿಕೊಂಡ 86 ವರ್ಷದ ನಾಯಕ ಖಮೇನಿ ಯುದ್ಧದ ಆತಂಕದ ನಡುವೆ ದೇಶದ ಜನರಲ್ಲಿ ಉತ್ಸಾಹ ತುಂಬಲು ಮತ್ತೆ ಮರಳಿದ್ದಾರೆ ಎನ್ನಲಾಗುತ್ತಿದೆ.

ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಇರಾನ್ ನಾಯಕ

ಇರಾನ್: ಇಸ್ರೇಲ್ (Israel attack) ಜೊತೆಗಿನ ಯುದ್ಧ ಆರಂಭವಾದ ಬಳಿಕ ಮೊದಲ ಬಾರಿಗೆ ಇರಾನ್ ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ( Iran’s Supreme Leader Ayatollah Ali Khamenei) ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡರು. ಮೊಹರಂನ (Muharram) ಹತ್ತನೇ ದಿನವಾದ ಆಶುರಾದ (Ashura) ಹಿಂದಿನ ದಿನವಾದ ಜುಲೈ 5 ರ ಶನಿವಾರದಂದು ಟೆಹ್ರಾನ್‌ನಲ್ಲಿರುವ ( Tehran) ಇಮಾಮ್ ಖಮೇನಿ ಮಸೀದಿಯಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ ಅವರು ಮಸೀದಿ ಬರುತ್ತಿರುವವರನ್ನು ಸ್ವಾಗತಿಸುತ್ತಿರುವ ದೃಶ್ಯಗಳನ್ನು ಮಾಧ್ಯಮಗಳು ಸೆರೆಹಿಡಿದಿವೆ. ಕಪ್ಪು ಬಟ್ಟೆ ಧರಿಸಿ ವೇದಿಕೆ ಏರಿದ ಖಮೇನಿಯನ್ನು ನೋಡಿ ಜನಸಮೂಹವು ಕೈಗಳನ್ನು ಎತ್ತಿ "ನಮ್ಮ ನಾಯಕನಿಗೆ ನಮ್ಮ ರಕ್ತ!" ಎಂಬ ಘೋಷಣೆಗಳನ್ನು ಕೂಗಿದರು.

ಇಸ್ರೇಲ್ ಮತ್ತು ಇರಾನ್ ನಡುವೆ ಸಂಘರ್ಷ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಜುಲೈ 5ರ ಶನಿವಾರ ಸಾರ್ವಜನಿಕವಾಗಿ ಕಾಣಿಸಿಕೊಂಡ 86 ವರ್ಷದ ನಾಯಕ ಖಮೇನಿ ಯುದ್ಧದ ಆತಂಕದ ನಡುವೆ ದೇಶದ ಜನರಲ್ಲಿ ಉತ್ಸಾಹ ತುಂಬಲು ಮತ್ತೆ ಮರಳಿದ್ದಾರೆ ಎನ್ನಲಾಗುತ್ತಿದೆ.

ಅವರ ಅನುಪಸ್ಥಿತಿಯಿಂದ ಹೆಚ್ಚುತ್ತಿದ್ದ ಪ್ರಾದೇಶಿಕ ಉದ್ವಿಗ್ನತೆ ಇದರಿಂದ ಕಡಿಮೆಯಾಗುವ ನಿರೀಕ್ಷೆ ಇದೆ. ಶಿಯಾ ಹಬ್ಬವಾದ ಅಶುರಾ ಮುನ್ನಾದಿನದಂದು ನಡೆದ ಸಮಾರಂಭದಲ್ಲಿ ಟೆಹ್ರಾನ್‌ನ ಇಮಾಮ್ ಖಮೇನಿ ಮಸೀದಿಯಲ್ಲಿ ಅವರು ಭಕ್ತರನ್ನು ಶನಿವಾರ ಸ್ವಾಗತಿಸಿದರು.



ಗುಪ್ತವಾಗಿದ್ದ ಖಮೇನಿ ?

ಇರಾನ್ ನ ನಾಯಕನಾಗಿ 1989ರಿಂದ ಅಧಿಕಾರದಲ್ಲಿರುವ ಖಮೇನಿ ದೇಶದ ಎಲ್ಲ ನಿರ್ಣಯಗಳಲ್ಲೂ ಪ್ರಮುಖ ಪಾತ್ರ ವಹಿಸುತ್ತಾರೆ. ಇವರು ದೇಶದ ಪ್ರತಿಯೊಂದು ವಿಷಯದಲ್ಲೂ ನಿರ್ಣಯ ಕೈಗೊಳ್ಳುವ ಅಂತಿಮ ಅಧಿಕಾರವನ್ನು ಹೊಂದಿದ್ದಾರೆ. ಇರಾನ್ ಮತ್ತು ಇಸ್ರೇಲ್ ಯುದ್ಧ ಆರಂಭವಾದ ಬಳಿಕ ಇವರು ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಜೂನ್ 13 ರಂದು ಇಸ್ರೇಲ್ ಅನಿರೀಕ್ಷಿತ ವಾಯುದಾಳಿ ನಡೆಸಿದರೂ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿಲ್ಲ. ಇಸ್ರೇಲ್ ದಾಳಿ ನಡೆಸುವ ಎರಡು ದಿನಗಳ ಮೊದಲು ಸಂಸತ್ ಸದಸ್ಯರೊಂದಿಗೆ ಅವರು ಸಭೆ ನಡೆಸಿದ್ದರು.

ಇದನ್ನೂ ಓದಿ: CM Siddaramaih: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಎಐಐಸಿಯಲ್ಲಿ ಮಹತ್ವದ ಹುದ್ದೆ; ಜುಲೈ 15 ರಂದು ಬೆಂಗಳೂರಿನಲ್ಲಿ ಮೊದಲ ಸಭೆ

ಕಳೆದ ವಾರ ಅವರ ವಿಡಿಯೊ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ ಅವರು, ಟೆಹ್ರಾನ್ ಕತಾರ್‌ನಲ್ಲಿರುವ ಯುಎಸ್ ವಾಯುನೆಲೆಯ ಮೇಲೆ ದಾಳಿ ಮಾಡುವ ಮೂಲಕ ಅಮೆರಿಕದ ಮುಖಕ್ಕೆ ಹೊಡೆದಿದೆ ಎಂದು ಹೇಳಿದ್ದು, ಮುಂದೆ ಹೆಚ್ಚಿನ ದಾಳಿ ನಡೆಸುವ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದರು.

ಇದೀಗ ಅವರು ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅದೂ ಮೊಹರಂ ಮತ್ತು ಅಶುರಾ ಮುನ್ನಾದಿನದಂದು. ಇಸ್ಲಾಮಿಕ್ ತಿಂಗಳಾದ ಮೊಹರಂನ 10 ನೇ ದಿನವಾದ ಜುಲೈ 6 ರ ಭಾನುವಾರ ಅಶುರಾವನ್ನು ಆಚರಿಸಲಾಗುತ್ತದೆ. ಇದು ಶಿಯಾ ಇಸ್ಲಾಂನಲ್ಲಿ ಪೂಜ್ಯನೀಯ ವ್ಯಕ್ತಿಯಾದ ಇಮಾಮ್ ಹುಸೇನ್ ಅವರು ಹುತಾತ್ಮರಾದ ದಿನವಾಗಿದೆ.