ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಅಫ್ಘಾನಿಸ್ತಾನದಲ್ಲಿರುವ ಕೊನೆಯ ಸಿಖ್ ಈತನೇ! ವಿಶೇಷ ಸಂದರ್ಶನದಲ್ಲಿ ಈತ ಹೇಳಿದ್ದೇನು?

Last Sikh in Afghanistan: ಭಿನ್ನ - ವಿಭಿನ್ನ ವಿಡಿಯೋಗಳನ್ನು ಮಾಡುವ ಮೂಲಕ ಸೋಷಿಯಲ್ ಮೀಡಿಯಾದ ಅಪಾರ ಅಭಿಮಾನಿಗಳನ್ನು ಹೊಂದಿರುವ ಪುಲ್ಕಿತ್ ಚೌಧರಿ ಇದೀಗ ಮತ್ತೇ ಸುದ್ದಿಯಲ್ಲಿದ್ದು, ಅಫ್ಘಾನಿಸ್ತಾನದ ಕೊನೆಯ ಸಿಖ್ ವ್ಯಕ್ತಿಯನ್ನು ಸಂದರ್ಶನ ಮಾಡಿದ್ದಾರೆ. ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇವರಿಬ್ಬರ ಭೇಟಿಯ ವಿಡೋಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಬದುಕಿನಲ್ಲಿ ಎಲ್ಲವನ್ನು ಕಳೆದುಕೊಂಡರೂ ನಂಬಿಕೆ ಮತ್ತು ಧೈರ್ಯದಿಂದ ಜೀವಿಸುತ್ತಿರುವ ವ್ಯಕ್ತಿಯ ಕಥೆಯನ್ನು ಜನರ ಮುಂದಿಟ್ಟಿದ್ದಾರೆ.

ಹರ್ಜೀತ್ ಸಿಂಗ್

ಅಫ್ಘಾನಿಸ್ತಾನ: ಅಫ್ಘಾನಿಸ್ತಾನ(Afghanistan)ದ ಘಜ್ನಿ(Ghazni) ಪ್ರಾಂತ್ಯದಲ್ಲಿ ವಾಸಿಸುವ ಹರ್ಜೀತ್ ಸಿಂಗ್(Harjeet Singh)ರನ್ನು ಭಾರತೀಯ ವ್ಲಾಗರ್(vlogger) ಪುಲ್ಕಿತ್ ಚೌಧರಿ(Pulkit Chaudhary ) ಭೇಟಿಯಾಗಿದ್ದು, ಅವರನ್ನು “ಅಫ್ಘಾನಿಸ್ತಾನದ ಕೊನೆಯ ಸಿಖ್” ಎಂದು ವರ್ಣಿಸಿದ್ದಾರೆ. ಇವರಿಬ್ಬರ ಭೇಟಿಯ ವಿಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡರೂ ನಂಬಿಕೆ ಮತ್ತು ಧೈರ್ಯದಿಂದ ಜೀವಿಸುತ್ತಿರುವ ವ್ಯಕ್ತಿಯ ಕಥೆಯನ್ನು ಜನರ ಮುಂದಿಟ್ಟಿದ್ದಾರೆ.

ಒಂದು ಸಮಯದಲ್ಲಿ ಸಾವಿರಾರು ಸಿಖ್ಖ(Sikh)ರು ವಾಸಿಸುತ್ತಿದ್ದ ಅಫ್ಘಾನಿಸ್ತಾನದಲ್ಲಿ, ಕಾಲ ಕ್ರಮೇಣ ನಡೆದ ಯುದ್ಧ, ವಲಸೆ ಮತ್ತು ಹಿಂಸಾಚಾರದಿಂದ ಅನೇಕ ಕುಟುಂಬಗಳು ದೇಶ ತೊರೆದವು. ಈ ಭೇಟಿಯ ಮೂಲಕ ಪುಲ್ಕಿತ್ ಅಲ್ಲಿ ಇನ್ನೂ ಉಳಿದುಕೊಂಡಿರುವ ಒಬ್ಬ ಸಿಖ್ ವ್ಯಕ್ತಿಯ ಜೀವನಾನುಭವವನ್ನು ಇತಿಹಾಸದ ಪುಟಗಳಲ್ಲಿ ಸೇರಿಸಲು ಪ್ರಯತ್ನಿಸಿದ್ದಾರೆ.

'ಜಗತ್ತಿಗೆ ನನ್ನ ಕಥೆ ತಿಳಿಯಲಿ'

ಪುಲ್ಕಿತ್ ಅವರು “Alone but Unbroken – The Last Sikh in Afghanistan” ಎಂದು ಶೀರ್ಷಿಕೆಯಡಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಹರ್ಜೀತ್‌ರನ್ನು ಭೇಟಿಯಾಗಿ ಚಿತ್ರೀಕರಣಕ್ಕೆ ಅನುಮತಿ ಕೇಳಿದಾಗ, ಮೊದಲು ಅವರು ಭಯಗೊಂಡು ನಿರಾಕರಿಸುತ್ತಾರೆ. ಬಳಿಕ, ಪುಲ್ಕಿತ್ ತಾನೊಬ್ಬ ಭಾರತೀಯ ಎಂದು ದಾಖಲೆಗಳನ್ನು ತೋರಿಸಿದಾಗ ಹರ್ಜೀತ್ ಮುಗುಳ್ನಗುತ್ತಾ, "ನೀವು ವಿಡಿಯೋ ಮಾಡಿ. ಜಗತ್ತಿಗೆ ನನ್ನ ಕಥೆ ತಿಳಿಯಲಿ,” ಎಂದರ



‘ನನ್ನ ಜನ್ಮ ಇಲ್ಲಿಯೇ ಆಗಿದೆ’

ಪುಲ್ಕಿತ್ ಅವರು ಹರ್ಜೀತ್‌ರನ್ನು ಎಷ್ಟು ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿದ್ದೀರಾ ಎಂದು ಕೇಳಿದಾಗ, “ನನ್ನ ಜನ್ಮ ಇಲ್ಲಿಯೇ ಆಗಿದೆ. ನಾವು ಸುಲ್ತಾನ್ ಮೆಹಮೂದ್ ಕಾಲದಿಂದ ಇಲ್ಲಿದ್ದೇವೆ," ಎಂದರು. ಇಡೀ ಅಫ್ಘಾನಿಸ್ತಾನದಲ್ಲಿ ಈಗ ಕೇವಲ ಇಬ್ಬರು ಸಿಖ್ಖರು ಮಾತ್ರ ಉಳಿದಿದ್ದಾರೆ. ಮತ್ತೊಬ್ಬರು ತಾತ್ಕಾಲಿಕವಾಗಿ ಭಾರತದಲ್ಲಿದ್ದಾರೆ. 2016–2018ರ ಮಧ್ಯೆ ಸಿಖ್ ಜನಸಂಖ್ಯೆ ಕುಸಿಯಲು ಪ್ರಾರಂಭವಾಯಿತು. ಈಗಲೂ ಕೆಲವು ಸಿಖ್ ಉದ್ಯಮಿಗಳು ಭಾರತದಿಂದಲೇ ತಮ್ಮ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಹರ್ಜೀತ್‌ ಹೇಳಿದರು. ಅಲ್ಲದೇ 'ತಾಲಿಬಾನ್‌ನಿಂದ ಯಾವುದೇ ತೊಂದರೆ ಎದುರಿಸುತ್ತಿಲ್ಲ” ಎಂತಲೂ ಅವರು ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿಯನ್ನು ಓದಿ: Viral Video: ರೋಗಿಯ ತಂದೆಗೆ ಕಪಾಳಮೋಕ್ಷ ಮಾಡಿ ಮಗುವಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ಮಹಿಳಾ ವೈದ್ಯೆ; ವಿಡಿಯೊ ವೈರಲ್, ನೆಟ್ಟಿಗರು ಆಕ್ರೋಶ

“ನಂಬಿಕೆ, ಧೈರ್ಯ ಮತ್ತು ಏಕಾಂಗಿ ಬದುಕಿನ ಕಥೆ” - ಪುಲ್ಕಿತ್

“ಈ ಭಾವನಾತ್ಮಕ ಮತ್ತು ಕಣ್ಣು ತೆರೆಸುವ ಡಾಕ್ಯುಮೆಂಟರಿಯಲ್ಲಿ ನಾನು ಅಫ್ಘಾನಿಸ್ತಾನದ ಕೊನೆಯ ಸಿಖ್ ವ್ಯಕ್ತಿಯನ್ನು ಭೇಟಿಯಾದೆ. ಒಮ್ಮೆ ಸಾವಿರಾರು ಸಿಖ್‌ಗಳ ಮನೆ ಆಗಿದ್ದ ಈ ದೇಶದಲ್ಲಿ, ಯುದ್ಧ, ಹಿಂಸೆ ಮತ್ತು ವಲಸೆಯಿಂದ ಸಮುದಾಯ ಬಹುತೇಕ ಅಳಿಸಿಹೋಗಿದೆ. ಆದರೆ ಒಬ್ಬ ವ್ಯಕ್ತಿ ಮಾತ್ರ ಧೈರ್ಯದಿಂದ ಅಲ್ಲಿಯೇ ಉಳಿಯು ನಿರ್ಧಾರ ಮಾಡಿದ್ದಾನೆ. ಅವರ ಕಥೆ ಧರ್ಮವಷ್ಟೇ ಅಲ್ಲ, ಅದು ನಂಬಿಕೆ, ಧೈರ್ಯ ಮತ್ತು ಆಶೆಯದ ಪ್ರತೀಕ,” ಎಂದು ಪುಲ್ಕಿತ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ:

ಅಫ್ಘಾನ್ ಸಿಖ್ ಹಾಗೂ ಹಿಂದೂ ಸಮುದಾಯದವರಿಗೆ ತಾಲಿಬಾನ್ ಭರವಸೆ

ಅಲ್ಪಸಂಖ್ಯಾತರ ಆಸ್ತಿ ಹಕ್ಕುಗಳನ್ನು ಪುನಃ ಸ್ಥಾಪನೆ, ಗುರುದ್ವಾರಗಳ ರಕ್ಷಣೆ ಹಾಗೂ ನಿರ್ವಹಣೆಗೆ ಬೆಂಬಲ ನೀಡುವುದಾಗಿ ತಾಲಿಬಾನ್ ವಿದೇಶಾಂಗ ಸಚಿವ ಮಾವ್ಲವಿ ಅಮೀರ್ ಖಾನ್ ಮುತ್ತಾಕಿ ಭರವಸೆ ನೀಡಿದ್ದಾರೆ. ಪುಲ್ಕಿತ್ ಚೌಧರಿ ಅವರ “The Last Sikh in Afghanistan” ವಿಡಿಯೋವು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ.