ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lawrence Bishnoi Gang: ಯುಎಸ್- ಕೆನಡಾ ಗಡಿ ಬಳಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಮತ್ತೊರ್ವ ಸದಸ್ಯನ ಅರೆಸ್ಟ್‌

Bishnoi gang member arrested: ಭಾರತದಿಂದ ಪರಾರಿಯಾಗಿದ್ದ ಭಯೋತ್ಪಾದಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯ ಜಗ್ದೀಪ್ ಸಿಂಗ್ ಅಲಿಯಾಸ್ ಜಗ್ಗಾನನ್ನು ರಾಜಸ್ಥಾನದ ಗ್ಯಾಂಗ್ ಸ್ಟರ್ ವಿರೋಧಿ ಕಾರ್ಯಪಡೆ ಮತ್ತು ಯುಎಸ್ ವಲಸೆ ಮತ್ತು ಕಸ್ಟಮ್ಸ್ ಜಾರಿ ಸಂಸ್ಥೆ ಜಂಟಿ ಕಾರ್ಯಾಚರಣೆ ನಡೆಸಿ ಯುಎಸ್- ಕೆನಡಾ ಗಡಿ ಬಳಿ ಸೋಮವಾರ ಬಂಧಿಸಿದೆ.

ನವದೆಹಲಿ: ಕೆನಾಡಾದಿಂದ (Canada) ಇತ್ತೀಚೆಗೆ ಭಯೋತ್ಪಾದಕ ಗುಂಪು (Terrorist group) ಎಂದು ಗುರುತಿಸಲ್ಪಟ್ಟಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ (Lawrence Bishnoi Gang) ಸದಸ್ಯ ಜಗ್ದೀಪ್ ಸಿಂಗ್ ಅಲಿಯಾಸ್ ಜಗ್ಗಾನನ್ನು (Jagdeep Singh alias Jagga) ಸೋಮವಾರ ಯುಎಸ್- ಕೆನಡಾ ಗಡಿ ಬಳಿ ರಾಜಸ್ಥಾನದ ಗ್ಯಾಂಗ್ ಸ್ಟರ್ ವಿರೋಧಿ ಕಾರ್ಯಪಡೆ (Rajasthan anti-gangster task force) ಮತ್ತು ಯುಎಸ್ ವಲಸೆ ಮತ್ತು ಕಸ್ಟಮ್ಸ್ ಜಾರಿ ಸಂಸ್ಥೆ ( US Immigration and Customs Enforcement) ಬಂಧಿಸಿದೆ. ಹಲವು ವರ್ಷಗಳ ಹಿಂದೆ ಜಗ್ದೀಪ್ ಸಿಂಗ್ ಅಲಿಯಾಸ್ ಜಗ್ಗಾ ಭಾರತದಿಂದ ಪರಾರಿಯಾಗಿದ್ದನು.

ಅಂತಾರರಾಷ್ಟ್ರೀಯ ಕಾನೂನು ಜಾರಿ ಸಂಸ್ಥೆಗಳ ಸಹಯೋಗದೊಂದಿಗೆ ರಾಜಸ್ಥಾನದ ಗ್ಯಾಂಗ್ ಸ್ಟರ್ ವಿರೋಧಿ ಕಾರ್ಯಪಡೆ ಮತ್ತು ಯುಎಸ್ ವಲಸೆ ಮತ್ತು ಕಸ್ಟಮ್ಸ್ ಜಾರಿ ಸಂಸ್ಥೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಸೋಮವಾರ ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ಪ್ರಮುಖ ಸದಸ್ಯನಾಗಿರುವ ಜಗದೀಪ್ ಸಿಂಗ್ ನನ್ನು ಯುಎಸ್ ಮತ್ತು ಕೆನಡಾ ಗಡಿಯ ಬಳಿ ಯಬಂಧಿಸಿದೆ.

ಭಾರತದಿಂದ ಪರಾರಿಯಾಗಿದ್ದ ಜಗ್ಗಾ ವಿದೇಶದಿಂದ ಗ್ಯಾಂಗ್ ಅನ್ನು ನಿರ್ವಹಿಸುತ್ತಿದ್ದನು. ಈ ಗ್ಯಾಂಗ್ ನ ಮತ್ತೋರ್ವ ಸದಸ್ಯನಾಗಿರುವ ರೋಹಿತ್ ಗೋದಾರ ಅವರ ನೇತೃತ್ವದಲ್ಲಿ ಪ್ರಮುಖ ಕಾರ್ಯಕರ್ತ ಜಗ್ಗಾನನ್ನು ಯುಎಸ್ ವಲಸೆ ಮತ್ತು ಕಸ್ಟಮ್ಸ್ ಜಾರಿ (ICE) ಅಧಿಕಾರಿಗಳು ಬಂಧಿಸಿದರು.

ಇದನ್ನೂ ಓದಿ: Harassment: ಬ್ರೆಜಿಲ್‌ ಮಾಡೆಲ್‌ಗೆ ಲೈಂಗಿಕ ಕಿರುಕುಳ, ಡೆಲಿವರಿ ಏಜೆಂಟ್‌ ಬಂಧನ

ತನಿಖಾ ಸಂಸ್ಥೆಗಳ ಮಾಹಿತಿ ಪ್ರಕಾರ, ಜಗದೀಪ್ ಸಿಂಗ್ ಅಲಿಯಾಸ್ ಜಗ್ಗಾ ಮೂರು ವರ್ಷಗಳ ಹಿಂದೆ ಭಾರತದಿಂದ ದುಬೈಗೆ ಪರಾರಿಯಾಗಿದ್ದನು. ಅಲ್ಲಿಂದ ಬಳಿಕ ಆತ ಅಕ್ರಮವಾಗಿ ಅಮೆರಿಕಕ್ಕೆ ತೆರಳಿದ್ದನು. ಅಮೆರಿಕದಲ್ಲಿ ಆತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯ ರೋಹಿತ್ ಗೋದಾರನಿಗಾಗಿ ಕೆಲಸ ಮಾಡುತ್ತಿದ್ದು, ಗ್ಯಾಂಗ್ ನ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದನು.

ರಾಜಸ್ಥಾನ ಮತ್ತು ಪಂಜಾಬ್ ನಲ್ಲಿ ನಡೆದಿರುವ ವಿವಿಧ ಗಂಭೀರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಜಗ್ಗಾನಿಗಾಗಿ ಕಳೆದ ಮೂರು ವರ್ಷಗಳಿಂದ ಹುಡುಕಲಾಗುತ್ತಿತ್ತು. ವಿವಿಧ ಅಪರಾಧಗಳಿಗಾಗಿ ರಾಜಸ್ಥಾನದ ನ್ಯಾಯಾಲಯದಿಂದ ಬಂಧನ ವಾರಂಟ್ ಜಾರಿಯಾಗಿದ್ದು, ಸುಮಾರು 12ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿರುವ ಅಪರಾಧಿಯಾಗಿದ್ದಾನೆ.

ಇದನ್ನೂ ಓದಿ: Acid Attack: ಆಸಿಡ್‌ ದಾಳಿ ಕೇಸ್‌ಗೆ ಭಾರೀ ಟ್ವಿಸ್ಟ್‌; ಅಪ್ಪನನ್ನು ರಕ್ಷಿಸಲು ನವರಂಗಿ ನಾಟಕವಾಡಿದ್ಲಾ ಮಗಳು?

ಜೋಧ್‌ಪುರದಲ್ಲಿ ನಡೆದಿದ್ದ ವಾಸುದೇವ್ ಇಸ್ರಾನಿ ಕೊಲೆ ಪ್ರಕರಣದಲ್ಲಿ ಜಗ್ಗಾ ಆರೋಪಿಯಾಗಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿ ಲಾರೆನ್ಸ್ ಬಿಷ್ಣೋಯ್ ಮತ್ತು ಆತನ ಸಹೋದರ ಅನ್ಮೋಲ್ ಬಿಷ್ಣೋಯ್ ನನ್ನು ಬಂಧಿಸಲಾಗಿದೆ. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಜಗ್ಗಾ ಬಳಿಕ ದುಬೈಗೆ ತೆರಳಿ ಗ್ಯಾಂಗ್ಗಾಗಿ ಹಣಕಾಸು, ಶಸ್ತ್ರಾಸ್ತ್ರ ಪೂರೈಕೆ ಮತ್ತು ಬೆದರಿಕೆ ಸಂದೇಶ ರವಾನಿಸುವ ಕೆಲಸ ಮಾಡುತ್ತಿದ್ದನು ಎನ್ನಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author