ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Acid Attack: ಆಸಿಡ್‌ ದಾಳಿ ಕೇಸ್‌ಗೆ ಭಾರೀ ಟ್ವಿಸ್ಟ್‌; ಅಪ್ಪನನ್ನು ರಕ್ಷಿಸಲು ನವರಂಗಿ ನಾಟಕವಾಡಿದ್ಲಾ ಮಗಳು?

ವಿದ್ಯಾರ್ಥಿಯ ಮೇಲೆ ಆಸಿಡ್‌ ಎರೆಚಿದ್ದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಒಂದು ಸಿಕ್ಕಿದೆ. ಪರಿಚಯಸ್ಥ ಯುವಕನೊಬ್ಬ ತನ್ನನ್ನು ಹಿಂಬಾಲಿಸುತ್ತಿದ್ದ. ಹಲವು ಬಾರಿ ಆತನಿಗೆ ವಾರ್ನಿಂಗ್‌ ಮಾಡಲಾಗಿತ್ತು. ಆತ ತನ್ನಿಬ್ಬರ ಸ್ನೇಹಿತರಿಬ್ಬರನ್ನು ಕರೆದುಕೊಂಡು ಬಂದು ತನ್ನ ಮೇಲೆ ಆಸಿಡ್‌ ದಾಳಿ ನಡೆಸಿದ್ದಾನೆ ಎಂದು ವಿದ್ಯಾರ್ಥಿನಿ ದೂರು ನೀಡಿದ್ದಳು.

ಆಸಿಡ್‌ ದಾಳಿ ಕೇಸ್‌; ಯುವತಿಯ ತಂದೆ ಮೇಲೆ ಬಿತ್ತು ಕೇಸ್‌

-

Vishakha Bhat Vishakha Bhat Oct 28, 2025 9:45 AM

ನವದೆಹಲಿ: ವಿದ್ಯಾರ್ಥಿಯ ಮೇಲೆ ಆಸಿಡ್‌ ಎರೆಚಿದ್ದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ (Acid Attack) ಒಂದು ಸಿಕ್ಕಿದೆ. ಪರಿಚಯಸ್ಥ ಯುವಕನೊಬ್ಬ ತನ್ನನ್ನು ಹಿಂಬಾಲಿಸುತ್ತಿದ್ದ. ಹಲವು ಬಾರಿ ಆತನಿಗೆ ವಾರ್ನಿಂಗ್‌ ಮಾಡಲಾಗಿತ್ತು. ಆತ ತನ್ನಿಬ್ಬರ ಸ್ನೇಹಿತರಿಬ್ಬರನ್ನು ಕರೆದುಕೊಂಡು ಬಂದು ತನ್ನ ಮೇಲೆ ಆಸಿಡ್‌ ದಾಳಿ ನಡೆಸಿದ್ದಾನೆ ಎಂದು ವಿದ್ಯಾರ್ಥಿನಿ ದೂರು ನೀಡಿದ್ದಳು. ದೂರಿನ ಆಧಾರದ ಮೇಲೆ ಪ್ರಕರಣ ದಾಖಿಸಿಕೊಂಡಿದ್ದ ಪೊಲೀಸರು ತನಿಖೆ ಪ್ರಾರಂಭಿಸಿದ್ದರು. ಆರಂಭದಲ್ಲಿ ನೈಜವೆಂದು ಕಂಡರೂ ತನಿಖೆ ಸಮಯದಲ್ಲಿ ಬಹು ದೊಡ್ಡ ಸತ್ಯವೊಂದು ಬೆಳಕಿಗೆ ಬಂದಿದೆ.

ತನ್ನನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ವ್ಯಕ್ತಿಯು ತನಗೆ ಪರಿಚಯವಿದ್ದು ತನ್ನನ್ನು ಇತ್ತೀಚೆಗೆ ಹಿಂಬಾಲಿಸುತ್ತಿದ್ದ. ಅ. 26ರಂದು ತನ್ನ ಸ್ನೇಹಿತರೊಡನೆ ತನ್ನ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ. ಆಗ ತಾನು ಕೈಗಳನ್ನು ಅಡ್ಡ ಹಿಡಿದು ನನ್ನ ಮುಖವನ್ನು ರಕ್ಷಿಸಿಕೊಂಡೆ ಎಂದು ಹೇಳಿದ್ದಳು. ವೈದ್ಯರ ಪರೀಕ್ಷೆಯ ವೇಳೆಗೆ ಆಕೆ ಹೇಳುತ್ತಿರುವುದು ಸುಳ್ಳು ಎಂದು ತಿಳಿದು ಬಂದಿದೆ. ಕೈ ಮೇಲೆ ಬಿದ್ದದ್ದು ಆಸಿಡ್‌ ಅಲ್ಲ ಬದಲಾಗಿ ಟಾಯ್ಲೆಟ್‌ ಕ್ಲೀನರ್‌ ಎಂದು ತಿಳಿದು ಬಂದಿದೆ.

ಪೊಲೀಸರು ಘಟನೆ ನಡೆದ ಸ್ಥಳದ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಆಪಾದನೆ ಮಾಡಿದ ವ್ಯಕ್ತಿಯು ಆ ಸ್ಥಳಕ್ಕೆ ಬಂದಿಲ್ಲದಿರುವುದು ತಿಳಿದುಬಂದಿದೆ. ಯುವತಿಯ ತಂದೆಯು ಆ್ಯಸಿಡ್ ದಾಳಿ ನಡೆಸಿದ್ದಾನೆ ಎಂದು ಹೇಳಲಾದ ವ್ಯಕ್ತಿಯ ಹೆಂಡತಿಯ ಮೇಲೆ ಕಣ್ಣು ಹಾಕಿದ್ದ. ಆಕೆಯನ್ನು ಒಲಿಸಿಕೊಳ್ಳಲು ಆಕೆಗೆ ಕಾಟ ಕೊಡುತ್ತಿದ್ದ. ಆಕೆ ಪೊಲೀಸರಿಗೆ ದೂರು ನೀಡಿದ್ದಳು. ಪೊಲೀಸರು ಆತನನ್ನು ಹುಡುಕಲು ಶುರು ಮಾಡಿದ್ದರು. ಇದು ಗೊತ್ತಾಗಿ ಮನೆಯಿಂದ ಎಸ್ಕೇಪ್ ಆಗಿದ್ದ ಯುವತಿಯ ತಂದೆ, ತಾನು ಪ್ರೀತಿಸುತ್ತಿದ್ದ ಮಹಿಳೆಯ ಗಂಡನನ್ನು ಸಿಲುಕಿಸಲು ಸಂಚು ಮಾಡಿದ್ದಾನೆ.

ಈ ಸುದ್ದಿಯನ್ನೂ ಓದಿ: Acid Attack: ವ್ಯಾಲೆಂಟೈನ್ಸ್‌ ಡೇ ದಿನವೇ ಯುವತಿ ಮೇಲೆ ಆಸಿಡ್‌ ದಾಳಿ ಮಾಡಿದ ಸೈಕೋ ಪ್ರೇಮಿ!

ಅದಕ್ಕೆ ತನ್ನ ಮಗಳು- ಮಗನ ಸಹಾಯ ಪಡೆದುಕೊಂಡಿದ್ದ ಎಂದು ತಿಳಿದು ಬಂದಿದೆ. ಸತ್ಯ ಬೆಳಕಿಗೆ ಬಂದ ನಂತರ ಯುವತಿಯ ತಂದೆ ತಲೆ ಮರಿಸಿಕೊಂಡಿದ್ದ. ಪೊಲೀಸರು ನಿನ್ನೆ (ಸೋಮವಾರ) ಆತನನ್ನು ಬಂಧಿಸಿದ್ದಾರೆ. ಆಸಿಡ್‌ ದಾಳಿ ನಡೆದಿದೆ ಎಂದು ಸುಳ್ಳು ದೂರು ನೀಡಿದ್ದ ಯುವತಿಯ ಮೇಲೆಯೂ ಪ್ರಕರಣ ದಾಖಲಾಗಿದೆ.

ಪ್ರತ್ಯೇಕ ಘಟನೆಯಲ್ಲಿ ಮದುವೆಗೆ ನಿರಾಕರಿಸಿದ ಹಿನ್ನೆಲೆ ಯುವತಿಗೆ ಟಾಯ್ಲೆಟ್ ಕ್ಲೀನರ್ ಆ್ಯಸಿಡ್ ಎರಚಿ (Acid Attack) ಸೋದರ ಮಾವ ತಾನೂ ಬೆಂಕಿ ಹಚ್ಚಿಕೊಂಡ ಘಟನೆ ಚಿಕ್ಕಬಳ್ಳಾಪುರ ನಡೆದಿತ್ತು. ಯುವತಿಗೆ ಆ್ಯಸಿಡ್ ಎರಚಿದ ಬಳಿಕ ಆನಂದ್ ಆಕೆಯ ಮನೆ ಮುಂದೆಯೇ ಬೆಂಕಿ ಹಚ್ಚಿಕೊಂಡಿದ್ದಾನೆ. ಘಟನೆಯಲ್ಲಿ ಮಾವ ಆನಂದ್ ಕುಮಾರ್‌ಗೆ ತೀವ್ರ ಸುಟ್ಟ ಗಾಯಗಳಾಗಿವೆ.