ಕಾಂಗೋ: ಆಫ್ರಿಕಾದ ಕಾಂಗೋದಲ್ಲಿ (Republic of Congo) ಭೀಕರ ಅಪಘಾತ ಸಂಭವಿಸಿದೆ. ತಾಮ್ರದ ಗಣಿಯಲ್ಲಿ ಸೇತುವೆ ಕುಸಿದು ಕನಿಷ್ಠ 32 ಜನರು (Death) ಸಾವನ್ನಪ್ಪಿದ್ದಾರೆ. ನೂರಾರು ಜನರು ಗಾಯಗಳಿಂದ ಬಳಲುತ್ತಿದ್ದಾರೆ. ಸಾವಿನ ಸಂಖ್ಯೆ 70ಕ್ಕೆ ಏರಬಹುದು ಎಂದು ಹೇಳಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗಣಿ ಕುಸಿದ (Mine collapse) ದೃಶ್ಯಗಳು ವೈರಲ್ (viral video) ಆಗಿದ್ದು, ಭಯಾನಕವಾಗಿವೆ.
ಲುವಾಲಾಬಾ ಪ್ರಾಂತ್ಯದ ಕಲಾಂಡೋ ಸ್ಥಳದಲ್ಲಿ ಅಪಘಾತ ಸಂಭವಿಸಿದೆ. ಪ್ರತಿದಿನ ನೂರಾರು ಕಾರ್ಮಿಕರು ಈ ಗಣಿಗಾರಿಕೆ ಸ್ಥಳದಲ್ಲಿ ಕೆಲಸ ಮಾಡುತ್ತಾರೆ. ಗಣಿಯಲ್ಲಿ ಗುಂಡಿನ ಸದ್ದು ಕೇಳಿದ ನಂತರ ಕಾರ್ಮಿಕರು ಕಿರಿದಾದ ಸೇತುವೆಯ ಮೇಲೆ ಓಡಿಹೋದರು, ಇದರಿಂದಾಗಿ ಅದು ಕುಸಿದು ಬಿತ್ತು, ಜೊತೆಗೆ ಗಣಿಯ ಒಂದು ಭಾಗವೂ ಕುಸಿಯತು ಎಂದು ಗಣಿ ಸಂಸ್ಥೆ ತಿಳಿಸಿದೆ.
ತಾಮ್ರ ಗಣಿಗಾರಿಕೆ ಕಾಂಗೋದಲ್ಲಿ ಅನೇಕ ಜನರಿಗೆ ಜೀವನೋಪಾಯದ ಪ್ರಮುಖ ಮೂಲವಾಗಿದೆ. ಕನಿಷ್ಠ 2 ಮಿಲಿಯನ್ ಜನರು ಈ ಗಣಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಲಕ್ಷಾಂತರ ಜನರು ಪರೋಕ್ಷವಾಗಿ ಇದನ್ನು ಅವಲಂಬಿಸಿದ್ದಾರೆ. ಆದಾಗ್ಯೂ, ಹಲವಾರು ಜನರಿಗೆ ಕೆಲಸ ನೀಡುವ ಈ ಗಣಿಯಲ್ಲಿ ಕನಿಷ್ಠ ಸುರಕ್ಷತಾ ಕ್ರಮಗಳ ಕೊರತೆಯಿಂದಾಗಿ, ಹಿಂದೆ ಅಪಘಾತಗಳು ಸಂಭವಿಸಿವೆ ಮತ್ತು ಅನೇಕ ಜನರು ಸಾವನ್ನಪ್ಪಿದ್ದಾರೆ. ಆದಾಗ್ಯೂ, ಇದರ ಬಗ್ಗೆ ಸಂಪೂರ್ಣ ಮಾಹಿತಿ ಇನ್ನೂ ತಿಳಿದುಬಂದಿಲ್ಲ.
ಛತ್ತೀಸ್‌ಗಢದಲ್ಲಿ ಮೂವರು ನಕ್ಸಲರು ಭದ್ರತಾ ಪಡೆಗಳ ಗುಂಡಿಗೆ ಬಲಿ
ಛತ್ತೀಸ್‌ಗಢ: ಇಬ್ಬರು ಮಹಿಳಾ ಮಾವೋವಾದಿಗಳು (Naxals) ಸೇರಿ ಮೂವರನ್ನು ಛತ್ತೀಸ್‌ಗಢದ (Chhattisgarh) ಸುಕ್ಮಾದ (Sukma) ತುಮಲ್‌ಪಾಡ್ ಗ್ರಾಮದ ಬಳಿ ಭದ್ರತಾ ಪಡೆಗಳು (security forces) ಹೊಡೆದು ಉರುಳಿಸಿವೆ. ಈ ಮೂವರಿಗೆ ತಲಾ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು ಎಂದು ಭಾನುವಾರ ಐಜಿ ಬಸ್ತಾರ್ ಪಿ. ಸುಂದರರಾಜ್ ತಿಳಿಸಿದ್ದಾರೆ. ಸುಕ್ಮಾ ಪೊಲೀಸರು ಕೂಡ ಈ ಮಾಹಿತಿಯನ್ನು ದೃಢಪಡಿಸಿದ್ದಾರೆ.ಮೃತರಲ್ಲಿ ಮಿಲಿಟಿಯಾ ಕಮಾಂಡರ್ ಮತ್ತು ಸ್ನೈಪರ್ ತಜ್ಞ ಮದ್ವಿ ದೇವಾ ಸೇರಿದ್ದಾರೆ ಎಂದು ಅವರು ತಿಳಿಸಿದ್ದಾರೆ. ತುಮಲ್‌ಪಾಡ್ ಗ್ರಾಮದ ಬಳಿ ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ನಲ್ಲಿ ಇಬ್ಬರು ಮಹಿಳಾ ಮಾವೋವಾದಿಗಳಾದ ಪೊಡ್ಯಂ ಗಂಗಿ ಮತ್ತು ಸೋಡಿ ಗಂಗಿ ಕೂಡ ಸೇರಿದ್ದಾರೆ.
ಇದನ್ನೂ ಓದಿ: ರಾಷ್ಟ್ರೀಯ ರೇಸಿಂಗ್ ಚಾಂಪಿಯನ್‌ಶಿಪ್ ಅಂತ್ಯ; 2ನೇ ದಿನವೂ ಬೆಂಗಳೂರಿನ ಅನಿಶ್ ಶೆಟ್ಟಿಗೆ ಭರ್ಜರಿ ಜಯ!
ಮಾವೋವಾದಿಗಳ ಎನ್ ಕೌಂಟರ್ ಬಳಿಕ ಜಿಲ್ಲಾ ಮೀಸಲು ಗಾರ್ಡ್‌ನ ತಂಡಗಳು 303 ರೈಫಲ್, ಬಿಜಿಎಲ್ ಲಾಂಚರ್ ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆದಿವೆ. ಘಟನೆ ಬಳಿಕ ಈ ಭಾಗದಲ್ಲಿ ತೀವ್ರ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ನವೆಂಬರ್ 11ರಂದು ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಆರು ನಕ್ಸಲರು ಸಾವನ್ನಪ್ಪಿದ್ದರು. ಇವರಲ್ಲಿ ಮಾವೋವಾದಿ ನಾಯಕಿ ಉರ್ಮಿಳಾ, ಹಿರಿಯ ಕಾರ್ಯಕರ್ತ ಪಾಪಾ ರಾವ್ ಅವರ ಪತ್ನಿ ಬುಚಣ್ಣ ಕುಡಿಯಮ್ ಸೇರಿದ್ದರು.
ಈ ಆರು ಮಂದಿಯನ್ನು ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಪ್ರದೇಶದ ದೂರದ ಪ್ರದೇಶಗಳಲ್ಲಿರುವ ಕಂದುಲ್ನಾರ್ ಮತ್ತು ಕಚ್ಲಾರಾಮ್ ಗ್ರಾಮಗಳ ಕಾಡುಗಳಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಇವರಿಗೆ ಒಟ್ಟು 27 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು ಎಂದು ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಯಾದವ್ ತಿಳಿಸಿದ್ದಾರೆ.
ಇದನ್ನೂ ಓದಿ: Ramgarh Coal Mine: ಅಕ್ರಮ ಗಣಿಗಾರಿಕೆ; ಸುರಂಗ ಕುಸಿದು ನಾಲ್ವರು ಸಾವು: ಹಲವರು ಟ್ರ್ಯಾಪ್