ರಾಷ್ಟ್ರೀಯ ರೇಸಿಂಗ್ ಚಾಂಪಿಯನ್‌ಶಿಪ್ ಅಂತ್ಯ; 2ನೇ ದಿನವೂ ಬೆಂಗಳೂರಿನ ಅನಿಶ್ ಶೆಟ್ಟಿಗೆ ಭರ್ಜರಿ ಜಯ!
ಕೊಯಮತ್ತೂರಿನಲ್ಲಿ ಭಾನುವಾರ ಅಂತ್ಯವಾದ 28ನೇ ಜೆಕೆ ಟೈರ್ ರಾಷ್ಟ್ರೀಯ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರಿನ ಧ್ರುವ್ ಗೋಸ್ವಾಮಿ ಹಾಗೂ ಅನಿಶ್ ಶೆಟ್ಟು ವಿವಿಧ ವಿಭಾಗಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಧ್ರುವ್ ಗೋಸ್ವಾಮಿ ಎಲ್‌ಜಿಬಿ ಫಾರ್ಮುಲಾ 4ರ ವರ್ಗದಲ್ಲಿ ಹೊಸ ಚಾಂಪಿಯನ್ ಆದರು. ಅನಿಶ್ ಶೆಟ್ಟಿ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಕಪ್‌ನಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.
ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಕಪ್ ವೃತ್ತಿಪರ ವಿಭಾಗದಲ್ಲಿ ಅನಿಶ್ ಶೆಟ್ಟಿ ಚಾಂಪಿಯನ್ ಆಗಿದ್ದಾರೆ. -
ಕೊಯಮತ್ತೂರು: ಇಲ್ಲಿನ ಕರಿ ಮೋಟಾರ್ ಸ್ಪೀಡ್‌ವೇನಲ್ಲಿ 28ನೇ ಜೆಕೆ ಟೈರ್ (FMSCI) ರಾಷ್ಟ್ರೀಯ ರೇಸಿಂಗ್ ಚಾಂಪಿಯನ್‌ಶಿಪ್ (K Tyre FMSCI National Racing Championship) ಭಾನುವಾರ ಅಂತ್ಯವಾಯಿತು. ಬೆಂಗಳೂರಿನ ಧ್ರುವ್ ಗೋಸ್ವಾಮಿ (MSport) ಶನಿವಾರ ಮತ್ತು ಭಾನುವಾರ ನಡೆದ ಒಟ್ಟು ಮೂರು ರೇಸ್‌ಗಳನ್ನು ಗೆದ್ದು ಎಲ್‌ಜಿಬಿ ಫಾರ್ಮುಲಾ 4ರ ವರ್ಗದಲ್ಲಿ ಹೊಸ ಚಾಂಪಿಯನ್ ಹೊರಹೊಮ್ಮಿದರು. ಇನ್ನು ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಕಪ್ ವೃತ್ತಿಪರ ವಿಭಾಗದಲ್ಲಿ ಶನಿವಾರವೇ ಚಾಂಪಿಯನ್ ಪಟ್ಟವನ್ನು ಖಚಿತಪಡಿಸಿಕೊಂಡಿದ್ದ ಬೆಂಗಳೂರಿನ ಅನಿಶ್ ಶೆಟ್ಟಿ, ಭಾನುವಾರದ ಅಂತಿಮ ರೇಸ್ ಕೂಡ ಗೆದ್ದು ತಮ್ಮ ಎರಡನೇ ಕಿರೀಟವನ್ನು ತನ್ನದಾಗಿಸಿಕೊಂಡರು.
ಬೆಂಗಳೂರು ಮೂಲದ 18 ವಯಸ್ಸಿನ ಸೇಂಟ್ ಜೋಸೆಫ್ಸ್‌ನ 12ನೇ ತರಗತಿ ವಿದ್ಯಾರ್ಥಿಯಾದ ಗೋಸ್ವಾಮಿ, ಭಾರತದ ಅತಿ ದೀರ್ಘಕಾಲದ ಸಿಂಗಲ್-ಸೀಟರ್ ಚಾಂಪಿಯನ್‌ಶಿಪ್‌ನಲ್ಲಿ ವಾರಾಂತ್ಯದ ನಾಲ್ಕು ರೇಸ್‌ಗಳಲ್ಲಿ ಮೂರನ್ನು ಗೆದ್ದು ತಮ್ಮ ಅಭಿಯಾನವನ್ನು ಮುಗಿಸಿದರು. ವಿಶೇಷವಾಗಿ ಭಾನುವಾರದ 20-ಲ್ಯಾಪ್ ಅಂತಿಮ ರೇಸ್‌ನಲ್ಲಿ ಅವರು ರಿವರ್ಸ್ ಗ್ರಿಡ್‌ನ ಏಳನೇ ಸ್ಥಾನದಿಂದ ಪ್ರಾರಂಭಿಸಿ, 4 ಪಾಯಿಂಟ್ ಹಿಂದುಳಿದಿದ್ದ ದಿಲ್ಜಿತ್‌ಗಿಂತ ಮೂರು ಸ್ಥಾನ ಹಿಂದೆ ಇದ್ದರು.
ಜೆ.ಕೆ ಟೈರ್ ರೇಸಿಂಗ್ ಚಾಂಪಿಯನ್‌ಶಿಪ್: ಬೆಂಗಳೂರಿನ ಅನಿಶ್ ಶೆಟ್ಟಿ, ಧ್ರುವ್ ಗೋಸ್ವಾಮಿ ಜಯಭೇರಿ!
ಫಾರ್ಮುಲಾ 4 ಇಂಡಿಯನ್ ಚಾಂಪಿಯನ್‌ಶಿಪ್
ಭಾರತೀಯ ರೇಸಿಂಗ್ ಫೆಸ್ಟಿವಲ್‌ನ ಭಾಗವಾಗಿರುವ FIA ಪ್ರಾಮಾಣಿತ ಫಾರ್ಮುಲಾ 4 ಇಂಡಿಯನ್ ಚಾಂಪಿಯನ್‌ಶಿಪ್‌ನ ನಾಲ್ಕನೇ ರೌಂಡ್ ಕೂಡ ಇದೇ ವೇಳೆ ನಡೆಯಿತು. ದಕ್ಷಿಣ ಆಫ್ರಿಕಾದ ಲುವಿವೆ ಸಾಂಬುಡ್ಲಾ ದಿನದ ಮೊದಲ ರೇಸ್‌ನಲ್ಲಿ ಸೀಸನ್‌ನ ಮೊದಲ ಗೆಲುವು ದಾಖಲಿಸಿದರು. ಎರಡನೇ ರೇಸ್ ಅನ್ನು ಕೀನ್ಯಾದ ಶೇನ್ ಚಂದಾರಿಯ ಜಯಿಸಿದರು.
ಮೊದಲ ರೇಸ್‌ನಲ್ಲಿ ಸಾಂಬುಡ್ಲಾ ಪೋಲ್‌ನಿಂದ ಪ್ರಾರಂಭಿಸಿ ಚೆಕ್ಕರ್ಡ್ ಫ್ಲ್ಯಾಗ್ ವರೆಗೂ ಮುನ್ನಡೆ ಉಳಿಸಿಕೊಂಡರು. ಕೊನೆಯ ಹಂತದಲ್ಲಿ ಬೆಂಗಳೂರಿನ ಇಶಾನ್ ಮಾದೇಶ್ ದೇಶ (ಕೋಲ್ಕತಾ ರಾಯಲ್ ಟೈಗರ್ಸ್) ಅವರು ಸೈಶಿವ ಶಂಕರ್ (ಸ್ಪೀಡ್ ಡೆಮನ್‌ಸ್ ದೆಹಲಿ) ಅವರನ್ನು ಹಿಂದಿಕ್ಕಿ ಮೋಜಾಂಬಿಕ್‌ನ ಘಾಜಿ ಮೊಟ್ಲೇಕರ್ ಹಿಂದೆ ಮೂರನೇ ಸ್ಥಾನ ಪಡೆದರು. ಎರಡನೇ ರೇಸ್‌ನಲ್ಲಿ ಚಂದಾರಿಯ ಪೋಲ್‌ನಿಂದ ಗೆಲುವು ಸಾಧಿಸಿದರು. ಮೊಟ್ಲೇಕರ್ ನಾಲ್ಕನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಏರಿದರು. ಶನಿವಾರದ ವಿಜೇತ ಫ್ರಾನ್ಸ್‌ನ ಸಾಚೆಲ್ ರಾಟ್‌ಜೆ ಮೂರನೇ ಸ್ಥಾನ ಪಡೆದರು.
The grand finale comes to a close with champions carved, legacies written and two unforgettable days of celebrating the best of Indian motorsport.
— JK Tyre Motorsport (@JKTyreRacing) November 16, 2025
Relive every high-speed moment from the 28th JK Tyre FMSCI National Racing Championship grand finale on our official channels. pic.twitter.com/t0hAd9SidS
ರಾಯಲ್ ಎನ್‌ಫೀಲ್ಡ್ ಕಂಟಿನೆಂಟಲ್ GT ಕಪ್
ವೃತ್ತಿಪರ ವಿಭಾಗದಲ್ಲಿ ಶನಿವಾರವೇ ಚಾಂಪಿಯನ್ ಪಟ್ಟವನ್ನು ಖಚಿತಪಡಿಸಿಕೊಂಡಿದ್ದ ಬೆಂಗಳೂರಿನ ಅನಿಶ್ ಶೆಟ್ಟಿ, ಭಾನುವಾರದ ಅಂತಿಮ ರೇಸ್ ಕೂಡ ಗೆದ್ದು ತಮ್ಮ ಎರಡನೇ ಕಿರೀಟವನ್ನು ಪಡೆದುಕೊಂಡರು. ಅಮೆಚೂರ್ ವಿಭಾಗದಲ್ಲಿ ಪಾಂಡಿಚೇರಿಯ ಬ್ರಯನ್ ನಿಕೋಲಸ್ ಚಾಂಪಿಯನ್ ಪಟ್ಟವನ್ನು ದಕ್ಕಿಸಿಕೊಂಡರು.
ಜೆಕೆ ಟೈರ್ ಲೆವಿಟಾಸ್ ಕಪ್
ಈ ಸೀಸನ್ ಹೊಸದಾಗಿ ಆರಂಭಿಸಲಾದ ಲೆವಿಟಾಸ್ ಕಪ್‌ನ ರೂಕ್ಕಿ ಕಿರೀಟವನ್ನು ಬಾಲಾಜಿ ರಾಜು ದಿನದ ಎರಡೂ ರೇಸ್‌ಗಳನ್ನು ಗೆದ್ದು ತಮ್ಮದಾಗಿಸಿಕೊಂಡರು. ಜೆಂಟ್ಲೆಮೆನ್ ವಿಭಾಗದಲ್ಲಿ ಕೊಯಮತ್ತೂರಿನ ಜೈ ಪ್ರಶಾಂತ್ ವೆಂಕಟ್ ಕಿರೀಟ ಗೆದ್ದರು.
The lean angles are getting sharper. The straights are louder. The stakes are riding sky-high. The Royal Enfield Continental GT Cup hits the grand finale of the 28th JK Tyre FMSCI National Racing Championship with the throttle wide open. Catch all the chaos live on our webcast. pic.twitter.com/NjNtcaZgrI
— JK Tyre Motorsport (@JKTyreRacing) November 16, 2025
ಜೆಕೆ ಟೈರ್ ನೋವಿಸ್ ಕಪ್
ಸಿಂಗಲ್-ಸೀಟರ್ ಸರಣಿಯಾದ ನೋವಿಸ್ ಕಪ್‌ನಲ್ಲಿ ನಾಲ್ವರು ಚಾಲಕರು ಕಿರೀಟದ ಪೈಪೋಟಿಯಲ್ಲಿದ್ದರು. ಕೊನೆಗೂ ಪೊಲ್ಲಾಚಿಯ ಲೋಕಿತ್‌ಲಿಂಗೇಶ್ ರವಿ (ಡಿಟಿಎಸ್ ರೇಸಿಂಗ್) ಅಂತಿಮ ರೇಸ್ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದರು.
ಪ್ರೊವಿಷನಲ್ ಫಲಿತಾಂಶಗಳು
ಎಲ್‌ಜಿಬಿ ಫಾರ್ಮುಲಾ–4 (LGB F4)
ರೇಸ್ 1
1.ಧ್ರುವ್ ಗೋಸ್ವಾಮಿ (ಎಂ-ಸ್ಪೋರ್ಟ್) – 19:58.578
2.ರುಹಾನ್ ಅಲ್ವಾ (ಎಂ-ಸ್ಪೋರ್ಟ್) – 19:59.261
3.ದಿಲ್ಜಿತ್ ಟಿ ಎಸ್ (ಡಾರ್ಕ್ ಡಾನ್ ರೇಸಿಂಗ್) – 20:00.012
ರೇಸ್ 2
1.ಮೆಹುಲ್ ಅಗರವಾಲ್ (ಡಾರ್ಕ್ ಡಾನ್ ರೇಸಿಂಗ್) – 24:20.393
2.ಧ್ರುವ್ ಗೋಸ್ವಾಮಿ (ಎಂ-ಸ್ಪೋರ್ಟ್) – 24:20.551
3.ರುಹಾನ್ ಅಲ್ವಾ (ಎಂ-ಸ್ಪೋರ್ಟ್) – 24:20.812
ರೇಸ್ 3
1.ಧ್ರುವ್ ಗೋಸ್ವಾಮಿ (ಎಂ-ಸ್ಪೋರ್ಟ್) – 21:38.531
2.ರುಹಾನ್ ಅಲ್ವಾ (ಎಂ-ಸ್ಪೋರ್ಟ್) – 21:39.513
3.ದಿಲ್ಜಿತ್ ಟಿ ಎಸ್ (ಡಾರ್ಕ್ ಡಾನ್ ರೇಸಿಂಗ್) – 21:40.459
ರೇಸ್ 4
1.ಧ್ರುವ್ ಗೋಸ್ವಾಮಿ (ಎಂ-ಸ್ಪೋರ್ಟ್) – 26:08.444
2.ಮೊನೀತ್ ಕುಮಾರನ್ ಶ್ರೀನಿವಾಸನ್ (ಅಹುರಾ ರೇಸಿಂಗ್) – 26:26.401
3.ರುಹಾನ್ ಅಲ್ವಾ (ಎಂ-ಸ್ಪೋರ್ಟ್) – 26:26.422
ಲೆವಿಟಾಸ್ ಕಪ್ (Levitas Cup)
ರೇಸ್ 1
ಜೆಂಟ್ಲೆಮೆನ್
1.ಸಿಧಾರ್ಥ ಬಾಲಸುಂದರಂ – 14:32.727
2.ಜೈ ಪ್ರಶಾಂತ್ ವೆಂಕಟ್ – 14:53.680
3.ವಿನೋದ್ ಎಸ್ – 14:59.745
ರೂಕ್ಕೀಸ್
1.ಬಾಲಾಜಿ ರಾಜು – 14:47.508
2.ತೇಜಸ್ ಜಿ ಎಸ್ – 14:52.727
3.ಅಶ್ವಿನ್ ಪುಲಾಗಿರಿ – 14:53.510
ರೇಸ್ 2
ಜೆಂಟ್ಲೆಮೆನ್
1.ಜೈ ಪ್ರಶಾಂತ್ ವೆಂಕಟ್ – 14:30.848
2.ಸಿಧಾರ್ಥ ಬಾಲಸುಂದರಂ – 14:31.491
3.ನಿತಿನ್ ಎ. ಆರ್ – 14:46.828
ರೂಕ್ಕೀಸ್
1.ಅಕ್ಷಯ ಮೂಲಿಧರನ್ – 14:32.046
2.ಬಾಲಾಜಿ ರಾಜು – 14:34.511
3.ತೇಜಸ್ ಜಿ ಎಸ್ – 14:46.225
ರೇಸ್ 3
ಜೆಂಟ್ಲೆಮೆನ್
1.ಜೈ ಪ್ರಶಾಂತ್ ವೆಂಕಟ್ – 3:08.893
2.ಸಿಧಾರ್ಥ ಬಾಲಸುಂದರಂ – 3:11.721
3.ವಿನೋದ್ ಎಸ್ – 3:29.655
ರೂಕ್ಕೀಸ್
1.ಬಾಲಾಜಿ ರಾಜು – 3:23.529
2.ಅಕ್ಷಯ ಮೂಲಿಧರನ್ – 3:26.933
3.ನಿಧಾಲ್ ಸಿಂಗ್ – 3:30.042
ರೇಸ್ 4
ಜೆಂಟ್ಲೆಮೆನ್
1.ಜೈ ಪ್ರಶಾಂತ್ ವೆಂಕಟ್ – 15:27.372
2.ಸಿಧಾರ್ಥ ಬಾಲಸುಂದರಂ – 15:31.656
3.ನಿತಿನ್ ಎ. ಆರ್ – 15:36.961
ರೂಕ್ಕೀಸ್
1.ಬಾಲಾಜಿ ರಾಜು – 15:29.851
2.ಅಕ್ಷಯ ಮೂಲಿಧರನ್ – 15:34.907
3.ತೇಜಸ್ ಜಿ ಎಸ್ – 15:37.739
The LGB F4 Cup brought out the best in its champions at the Kari Motor Speedway. Brace yourself for chrome, courage, and carbureted fury for the remainder of the 28th JK Tyre FMSCI National Racing Championship. Watch the action unfold live on our webcast. pic.twitter.com/LMtLY4BbxN
— JK Tyre Motorsport (@JKTyreRacing) November 15, 2025
ರಾಯಲ್ ಎನ್‌ಫೀಲ್ಡ್ ಕಂಟಿನೆಂಟಲ್ GT ಕಪ್
ರೇಸ್ 1
ಅಮೆಚೂರ್
1.ಜೋಹ್ರಿಂಗ್ ವರಿಸಾ – 14:23.996
2.ಬ್ರಯನ್ ನಿಕಲಸ್ – 14:28.317
3.ಸರಣ್ ಕುಮಾರ್ – 14:38.833
ವೃತ್ತಿಪರರು
1.ಅನಿಶ್ ಶೆಟ್ಟಿ – 14:02.338
2.ನವನೀತ್ ಕುಮಾರ್ – 14:02.667
3.ಕಯಾನ್ ಪಟೇಲ್ – 14:05.996
ರೇಸ್ 2
ಅಮೆಚೂರ್‌ಗಳು
1.ಜೋಹ್ರಿಂಗ್ ವರಿಸಾ – 13:40.611
2.ಬ್ರಯನ್ ನಿಕಲಸ್ – 14:03.312
3.ಬ್ರಾಂಡನ್ ಡಿಸೋಜಾ – 14:09.319
ವೃತ್ತಿಪರರು
1.ಅನಿಶ್ ಶೆಟ್ಟಿ – 13:32.718
2.ನವನೀತ್ ಕುಮಾರ್ – 13:33.765
3.ಕಯಾನ್ ಪಟೇಲ್ – 13:34.783
ನೋವಿಸ್ ಕಪ್ (Novice Cup)
ರೇಸ್ 1
1.ಭುವನ್ ಬೋನು (ಎಂ-ಸ್ಪೋರ್ಟ್) – 13:57.813
2.ಲೋಕಿತ್‌ಲಿಂಗೇಶ್ ರವಿ (ಡಿಟಿಎಸ್ ರೇಸಿಂಗ್) – 13:59.863
3.ಅಭಿಜಿತ್ ವಾದವಳ್ಳಿ (ಮೊಮೆಂಟಮ್ ಮೋಟಾರ್‌ಸ್ಪೋರ್ಟ್) – 14:00.429
ರೇಸ್ 2
1.ಭುವನ್ ಬೋನು (ಎಂ-ಸ್ಪೋರ್ಟ್) – 14:07.700
2.ಅವಿ ಮಲವಳ್ಳಿ (ಎಂ-ಸ್ಪೋರ್ಟ್) – 14:09.755
3.ಓಜಸ್ ಸರ್ವೇ (ಮೊಮೆಂಟಮ್ ಮೋಟಾರ್‌ಸ್ಪೋರ್ಟ್) – 14:12.130
ರೇಸ್ 3
1.ಲೋಕಿತ್‌ಲಿಂಗೇಶ್ ರವಿ (ಡಿಟಿಎಸ್ ರೇಸಿಂಗ್) – 13:42.976
2.ಅವಿ ಮಲವಳ್ಳಿ (ಎಂ-ಸ್ಪೋರ್ಟ್) – 13:49.742
3.ಪೃತಿಕ್ ಅಶೋಕ್ (ಡಿಟಿಎಸ್ ರೇಸಿಂಗ್) – 13:50.406
ಫಾರ್ಮುಲಾ 4 ಇಂಡಿಯನ್ ಚಾಂಪಿಯನ್‌ಶಿಪ್
ರೇಸ್ 1
1.ಸಾಚೆಲ್ ರೋಟ್ಜೆ (ಕಿಚ್ಚಾ’ಸ್ ಕಿಂಗ್ಸ್ ಬೆಂಗಳೂರು) – 26:50.931
2.ಘಾಜಿ ಮೊಟ್ಲೇಕರ್ (ಕೋಲ್ಕತಾ ರಾಯಲ್ ಟೈಗರ್ಸ್) – 26:56.598
3.ಶಾನ್ ಚಂದಾರಿಯಾ (ಚೆನ್ನೈ ಟರ್ಬೋ ರೈಡರ್ಸ್) – 26:57.794
ರೇಸ್ 2
1.ಲುವಿವೆ ಸಾಂಬುಡಿಯಾ (ಗೋವಾ ಏಸಸ್ ಜೆಎ ರೇಸಿಂಗ್) – 26:12.050
2.ಘಾಜಿ ಮೊಟ್ಲೇಕರ್ (ಕೋಲ್ಕತಾ ರಾಯಲ್ ಟೈಗರ್ಸ್) – 26:13.294
3.ಇಶಾನ್ ಮದೇಶ (ಕೋಲ್ಕತಾ ರಾಯಲ್ ಟೈಗರ್ಸ್) – 26:16.321
ರೇಸ್ 3
1.ಶೇನ್ ಚಂದಾರಿಯಾ (ಚೆನ್ನೈ ಟರ್ಬೋ ರೈಡರ್ಸ್) – 26:53.930
2.ಘಾಜಿ ಮೊಟ್ಲೇಕರ್ (ಕೋಲ್ಕತಾ ರಾಯಲ್ ಟೈಗರ್ಸ್) – 27:08.657
3.ಸಾಚೆಲ್ ರೋಟ್ಜೆ (ಕಿಚ್ಚಾ’ಸ್ ಕಿಂಗ್ಸ್ ಬೆಂಗಳೂರು) – 27:21.549