#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Bangladesh Unrest: ಬಾಂಗ್ಲಾದಲ್ಲಿ ಮತ್ತೆ ಕಿಡಿ ಹೊತ್ತಿಸಿದ ಶೇಖ್‌ ಹಸೀನಾ ಭಾಷಣ; ಉದ್ರಿಕ್ತರಿಂದ ಮುಜಿಬುರ್ ರೆಹಮಾನ್ ನಿವಾಸ ಧ್ವಂಸ

ತಣ್ಣಗಾಗಿದ್ದ ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್‌ ಹಸೀನಾ ಭಾಷಣದಿಂದ ಆಕ್ರೋಶಗೊಂಡ ಉದ್ವಿಕ್ತರ ಗುಂಪೊಂದು ಢಾಕಾದಲ್ಲಿರುವ ಅವರ ತಂದೆ ಹಾಗೂ ಬಾಂಗ್ಲಾದೇಶ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ಸ್ಮಾರಕ ಮತ್ತು ಅವರ ನಿವಾಸವನ್ನು ಧ್ವಂಸಗೊಳಿಸಿದೆ

ಬಾಂಗ್ಲಾದಲ್ಲಿ ಮತ್ತೆ ಹಿಂಸಾಚಾರ, ಶೇಖ್‌ ಹಸೀನಾ ತಂದೆಯ ನಿವಾಸಕ್ಕೆ ಬೆಂಕಿ

bangladesh unrest

Profile Vishakha Bhat Feb 6, 2025 9:55 AM

ಬಾಂಗ್ಲಾದೇಶ: ಕೆಲ ದಿನಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಬಾಂಗ್ಲಾದೇಶದಲ್ಲಿ ಮತ್ತೆ ಕಿಡಿ ಹತ್ತಿಕೊಂಡಿದೆ. ಬಾಂಗ್ಲಾದೇಶBangladesh) ತೊರೆದು ಭಾರತಕ್ಕೆ ಪಲಾಯನ ಮಾಡಿರುವ ಮಾಜಿ ಪ್ರಧಾನಿ ಶೇಖ್‌ ಹಸೀನಾ (Sheikh Hasina) ಭಾಷಣದಿಂದ ಆಕ್ರೋಶಗೊಂಡ ಉದ್ವಿಕ್ತರ ಗುಂಪೊಂದು ಢಾಕಾದಲ್ಲಿರುವ ಅವರ ತಂದೆಯ ನಿವಾಸವನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದೆ. ಶೇಖ್ ಹಸೀನಾ ತಂದೆ, ಬಾಂಗ್ಲಾದೇಶ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ (Sheikh Mujibur Rahma) ಅವರ ಸ್ಮಾರಕ ಮತ್ತು ಅವರ ನಿವಾಸವನ್ನು ಧ್ವಂಸಗೊಳಿಸಲಾಗಿದೆ. ಮನೆಗೆ ಬೆಂಕಿ ಹಚ್ಚಿ, ಜೆಸಿಬಿ, ಮೂಲಕ ಮನೆ ನಾಶಮಾಡಲು ಯತ್ನಿಸಿದ್ದಾರೆ.

ಭಾಷಣದಲ್ಲಿ ಶೇಖ್‌ ಹಸೀನಾ ನಾವು ಗಳಿಸಿದ ಸ್ವಾತಂತ್ರ‍್ಯ, ರಾಷ್ಟ್ರಧ್ವಜ, ಹಾಗೂ ಸಂವಿಧಾನ ಮತ್ತು ಲಕ್ಷಾಂತರ ಹುತಾತ್ಮರ ಪ್ರಾಣವನ್ನು ಬುಲ್ಡೋಜರ್ ಮೂಲಕ ನಾಶಮಾಡುವ ಶಕ್ತಿ ಅವರಿಗೆ ಇನ್ನೂ ಬಂದಿಲ್ಲ ಎಂದು ಹೇಳಿದ್ದರು. ಬಾಂಗ್ಲಾದ ಮಧ್ಯಂತರ ಸರ್ಕಾರ ಹಾಗೂ ಮುಹಮ್ಮದ್ ಯೂನಸ್ ಅವರ ಆಡಳಿತ ಬಗ್ಗೆ ಅವರು ಆಕ್ರೋಶ ವ್ಯಕ್ತ ಪಡಿಸಿದ್ದರು. ಇದರಿಂದ ಕೆರಳಿದ ಪ್ರತಿಭಟನಾಕಾರರು ಅವಾಮಿ ಲೀಗ್ ಪಕ್ಷ ನಿಷೇಧಕ್ಕೆ ಆಗ್ರಹಿಸಿ ದಂಗೆ ಎಬ್ಬಿಸಿದ್ದಾರೆ. ಹಸೀನಾ ಅವರ ಬಾಂಗ್ಲಾದೇಶದಲ್ಲಿರುವ ಮನೆ ಮೇಲೆ ದಾಳಿ ನಡೆಸಿದ್ದಾರೆ.



ಈ ಸುದ್ದಿಯನ್ನೂ ಓದಿ: AMU Row: ಬಾಂಗ್ಲಾದೇಶ ವಿದ್ಯಾರ್ಥಿಗಳಿಂದ ಹಿಂದೂ ವಿರೋಧಿ ಪೋಸ್ಟ್- AMUನಲ್ಲಿ ಭುಗಿಲೆದ್ದ ಆಕ್ರೋಶ

ಹಸೀನಾ ಹೇಳಿದ್ದೇನು?

ಶೇಖ್‌ ಹಸೀನಾ ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಆನ್‌ಲೈನ್‌ ಮೂಲಕ ಭಾಷಣ ಮಾಡಿದ್ದರು. ಪ್ರಸ್ತುತ ಸರ್ಕಾರವನ್ನು ಅವರು ಅಪ್ರಯೋಜಕ ಎಂಬಂತೆ ಮಾತುಗಳನ್ನಾಡಿದ್ದಾರೆ. ಸರ್ಕಾರದ ವಿರುದ್ಧ ಪ್ರತಿಭಟಿಸುವಂತೆ ಜನರಿಗೆ ಕರೆ ಕೊಟ್ಟಿದ್ದರು. ನಾವು ಗಳಿಸಿದ ಸ್ವಾತಂತ್ರ‍್ಯವನ್ನು, ಲಕ್ಷಾಂತರ ಹುತಾತ್ಮರ ಪ್ರಾಣವನ್ನು ಬುಲ್ಡೋಜರ್ ಮೂಲಕ ನಾಶಗಳಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೊಹಮ್ಮದ್‌ ಯೂನಸ್‌ ನೇತೃತ್ವದ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ನನ್ನ ತಂದೆಯ ಸ್ಮಾರಕವನ್ನು ಕೆಡವಬಹುದು, ಆದರೆ ಅವರ ಸಾಧನೆಗಳನ್ನಲ್ಲ. ಇತಿಹಾಸವನ್ನು ಕೆಡವಲು ಸಾಧ್ಯವಿಲ್ಲ. ಇಂದಲ್ಲ ನಾಳೆ ಅದು ತನ್ನ ಸೇಡು ತೀರಿಸಿಕೊಳ್ಳುತ್ತೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಎಚ್ಚರಿಸಿದ್ದರು.