ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Balvinder Singh Sahni: ಭಾರತ ಮೂಲದ ಉದ್ಯಮಿಗೆ ದುಬೈನಲ್ಲಿ ಜೈಲು, ಭಾರೀ ದಂಡ; ಅಷ್ಟಕ್ಕೂ ಯಾರೀತ? ಏನಿದು ಪ್ರಕರಣ?

Money Laundering Case: 53 ವರ್ಷದ ಉದ್ಯಮಿ ಬಲ್ವಿಂದರ್ ಸಿಂಗ್ ಸಾಹ್ನಿ ಯುಎಇ, ಅಮೆರಿಕ, ಭಾರತ ಮತ್ತು ಇತರ ದೇಶಗಳಲ್ಲಿ ಕಾರ್ಯನಿರ್ವಹಿಸುವ ರಾಜ್ ಸಾಹ್ನಿ ಗ್ರೂಪ್ (ಆರ್‌ಎಸ್‌ಜಿ) ಆಸ್ತಿ ಅಭಿವೃದ್ಧಿ ಸಂಸ್ಥೆಯ ಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅಬು ಸಬಾಹ್ ಎಂದೂ ಕರೆಯಲ್ಪಡುವ ಈ ಉದ್ಯಮಿಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 500,000 ದಿರ್ಹಮ್ (ರೂ. 1,14,89,750) ದಂಡ ವಿಧಿಸಲಾಗಿದೆ.

ಭಾರತ ಮೂಲದ ಉದ್ಯಮಿಗೆ ದುಬೈನಲ್ಲಿ ಜೈಲು ಶಿಕ್ಷೆ; ಏನಿದು ಪ್ರಕರಣ?

Profile Rakshita Karkera May 6, 2025 10:18 AM

ದುಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಮೂಲದ ದುಬೈ ಉದ್ಯಮಿ ಬಲ್ವಿಂದರ್ ಸಿಂಗ್ ಸಾಹ್ನಿ(Balvinder Singh Sahni) ಬಂಧನಕ್ಕೊಳಗಾಗಿದ್ದಾರೆ. ಅಷ್ಟೇ ಅಲ್ಲದೇ ಅವರನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗಡೀಪಾರು ಮಾಡಲು ಆದೇಶ ಹೊರಬಿದ್ದಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅಬು ಸಬಾಹ್ ಎಂದೂ ಕರೆಯಲ್ಪಡುವ ಈ ಉದ್ಯಮಿಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 500,000 ದಿರ್ಹಮ್ (ರೂ. 1,14,89,750) ದಂಡ ವಿಧಿಸಲಾಗಿದೆ. ದೇಶದಿಂದ ಗಡೀಪಾರು ಮಾಡುವ ಮೊದಲು ಸಾಹ್ನಿಯಯಿಂದ 150 ಮಿಲಿಯನ್ ದಿರ್ಹಮ್ (345ಕೋಟಿ ರೂ.) ಮುಟ್ಟುಗೋಲು ಹಾಕಿಕೊಳ್ಳುವಂತೆ ದುಬೈ ನ್ಯಾಯಾಲಯ ಆದೇಶಿಸಿದೆ. ಸಾಹ್ನಿ, ಶೆಲ್ ಕಂಪನಿಗಳು ಮತ್ತು ನಕಲಿ ಇನ್‌ವಾಯ್ಸ್‌ಗಳ ಮೂಲಕ 150 ಮಿಲಿಯನ್ ದಿರ್ಹಮ್ ಅಕ್ರಮ ವರ್ಗಾವಣೆ ಮಾಡಿದ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದಾರೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಹ್ನಿ ಪುತ್ರ ಸೇರಿದಂತೆ 33ಜನರಿಗೆ ಶಿಕ್ಷೆ ವಿಧಿಸಲಾಗಿದೆ.

ಬಲ್ವಿಂದರ್ ಸಿಂಗ್ ಸಾಹ್ನಿ ಯಾರು?

53 ವರ್ಷದ ಉದ್ಯಮಿ ಬಲ್ವಿಂದರ್ ಸಿಂಗ್ ಸಾಹ್ನಿ ಯುಎಇ, ಅಮೆರಿಕ, ಭಾರತ ಮತ್ತು ಇತರ ದೇಶಗಳಲ್ಲಿ ಕಾರ್ಯನಿರ್ವಹಿಸುವ ರಾಜ್ ಸಾಹ್ನಿ ಗ್ರೂಪ್ (ಆರ್‌ಎಸ್‌ಜಿ) ಆಸ್ತಿ ಅಭಿವೃದ್ಧಿ ಸಂಸ್ಥೆಯ ಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅವರ ಕಂಪನಿಯ ದುಬೈ ಶಾಖೆಯ ಆಸ್ತಿಯಲ್ಲಿ ದುಬೈ ಸ್ಪೋರ್ಟ್ಸ್ ಸಿಟಿಯಲ್ಲಿರುವ ಕಸರ್ ಸಾಹ್‌ನ ವಸತಿ ಕಟ್ಟಡಗಳು, ಜುಮೇರಾ ವಿಲೇಜ್ ಸರ್ಕಲ್‌ನಲ್ಲಿರುವ 24 ಅಂತಸ್ತಿನ ಬುರ್ಜ್ ಸಾಹ್ ಅಪಾರ್ಟ್‌ಮೆಂಟ್ ಸಂಕೀರ್ಣ, ಬೇ ಸ್ಕ್ವೇರ್‌ನಲ್ಲಿರುವ ವಾಣಿಜ್ಯ ಆಸ್ತಿ, ಬಿಸಿನೆಸ್ ಬೇ ಮತ್ತು ಸಬಾ ದುಬೈ ಎಂಬ ಪಂಚತಾರಾ ಹೋಟೆಲ್ ಸೇರಿವೆ. ಅತ್ಯಂತ ಹೆಚ್ಚು ಕಾರುಗಳ ಕ್ರೇಜ್‌ ಹೊಂದಿರುವ ಸಾಹ್ನಿ, ತಮ್ಮ ದುಬಾರಿ ವಾಹನಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಅವರು 2016 ರಲ್ಲಿ ತಮ್ಮ ರೋಲ್ಸ್ ರಾಯ್ಸ್ ಕಾರುಗಳಲ್ಲಿ ಒಂದಕ್ಕೆ Dh33 ಮಿಲಿಯನ್‌ಗೆ (75ಕೋಟಿ ರೂ.) ಕಾರು ನಂಬರ್ ಪ್ಲೇಟ್ D5 ಅನ್ನು ಖರೀದಿಸಿ ಭಾರೀ ಸುದ್ದಿಯಾಗಿದ್ದರು. ತಮ್ಮ ವಿಶಿಷ್ಟವಾದ ರಾಯಲ್ ನೀಲಿ ಕಂದುರ, ಬೇಸ್‌ಬಾಲ್ ಕ್ಯಾಪ್ ಮತ್ತು ಮ್ಯಾಚಿಂಗ್ ಟ್ರೈನರ್‌ಗಳನ್ನು ಧರಿಸಿ ಕಾಣಿಸಿಕೊಳ್ಳುವ ಸಾಹ್ನಿ, Instagram ನಲ್ಲಿ ಸುಮಾರು 3.3 ಮಿಲಿಯನ್ ಫಾಲೋವರ್ಸ್‌ ಹೊಂದಿದ್ದಾರೆ.

ಈ ಸುದ್ದಿಯನ್ನೂಓದಿ: KT Rama Rao: ಅಕ್ರಮ ಹಣ ವರ್ಗಾವಣೆ ಕೇಸ್‌- BRS ಮುಖಂಡ ಕೆಟಿಆರ್‌ ಸೇರಿ ಇಬ್ಬರಿಗೆ ED ಸಮನ್ಸ್

ಸಾಹ್ನಿ ವಿರುದ್ಧ ಪ್ರಕರಣ

2024ರ ಆರಂಭದಲ್ಲಿ ಬರ್ ದುಬೈ ಪೊಲೀಸ್ ಠಾಣೆಯಲ್ಲಿ ಸಾಹ್ನಿ ಮತ್ತು ಇತರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ನಂತರ ಅದನ್ನು ಪಬ್ಲಿಕ್ ಪ್ರಾಸಿಕ್ಯೂಷನ್‌ಗೆ ವರ್ಗಾಯಿಸಲಾಯಿತು. ಅವರ ವಿರುದ್ಧದ ತನಿಖೆಯಲ್ಲಿ ಯುಎಇ ಮತ್ತು ವಿದೇಶಗಳಲ್ಲಿ ವ್ಯಾಪಕವಾದ ಹಣಕಾಸು ಡೇಟಾ ಮತ್ತು ವ್ಯವಹಾರ ಸಂಪರ್ಕಗಳು ಕಂಡುಬಂದಿವೆ. ಕಳೆದ ಶುಕ್ರವಾರ ತನ್ನ ತೀರ್ಪಿನಲ್ಲಿ, ದುಬೈನ ನಾಲ್ಕನೇ ಕ್ರಿಮಿನಲ್ ನ್ಯಾಯಾಲಯ ನಡೆಸಿದ ವಿಚಾರಣೆ ವೇಳೆ ಸಾಹ್ನಿ ಮತ್ತು ಇತರ ಆರೋಪಿಗಳು ಶೆಲ್ ಕಂಪನಿಗಳು ಮತ್ತು ಅನುಮಾನಾಸ್ಪದ ಹಣಕಾಸು ವಹಿವಾಟುಗಳನ್ನು ಬಳಸಿಕೊಂಡು ಅತ್ಯಾಧುನಿಕ ಹಣ ವರ್ಗಾವಣೆ ಜಾಲವನ್ನು ನಡೆಸುತ್ತಿರುವುದು ಸಾಬೀತಾಗಿತ್ತು. ಹೀಗಾಗಿ ದೋಷಿಗಳಿಗೆ ನ್ಯಾಯಾಲಯವು ಸಾಹ್ನಿಗೆ 500,000 ದಿರ್ಹಮ್ ದಂಡವನ್ನು ಪಾವತಿಸಲು ಮತ್ತು ಅಕ್ರಮ ಚಟುವಟಿಕೆಯ ಆದಾಯ ಎಂದು ನಂಬಲಾದ 150 ಮಿಲಿಯನ್ ದಿರ್ಹಮ್ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿದೆ.

ಶಿಕ್ಷೆಯನ್ನು ಪೂರ್ಣಗೊಳಿಸಿದ ನಂತರ ನ್ಯಾಯಾಲಯವು ಅವರನ್ನು ಗಡೀಪಾರು ಮಾಡಲು ಆದೇಶಿಸಿದೆ. ಕೆಲವು ಆರೋಪಿಗಳನ್ನು ಗೈರುಹಾಜರಿಯಲ್ಲಿ ವಿಚಾರಣೆ ನಡೆಸಲಾಯಿತು ಎಂದು ವರದಿಗಳು ತಿಳಿಸಿವೆ. ಹಲವರಿಗೆ ಒಂದು ವರ್ಷದ ಜೈಲು ಶಿಕ್ಷೆ ಮತ್ತು 200,000 ದಿರ್ಹಮ್ ದಂಡ ವಿಧಿಸಲಾಯಿತು.