ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪಾಕಿಸ್ತಾನವನ್ನು ಭಾರತದ ವಿರುದ್ಧ ಎತ್ತಿ ಕಟ್ಟಿದ್ದೇ ಅಮೆರಿಕ; ಮಾಜಿ IFS ಅಧಿಕಾರಿ ಬಿಚ್ಚಿಟ್ಟರು ರಹಸ್ಯ

ಒಂದೆಡೆ ಭಾರತದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಜ್ಜಾಗುತ್ತಿರುವ ಅಮೆರಿಕ ಮತ್ತೊಂದೆಡೆ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿ ಭಾರತದ ವಿರುದ್ಧವೇ ಎತ್ತಿಕಟ್ಟುತ್ತಿದೆ. ಹೀಗಾಗಿ ಈ ನಿಟ್ಟಿನಲ್ಲಿ ಭಾರತ ವಾಷಿಂಗ್ಟನ್ ಗೆ ಸೂಕ್ತ ಉತ್ತರವನ್ನು ನೀಡಬೇಕಿದೆ ಎಂದು ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿ ಕನ್ವಾಲ್ ಸಿಬಲ್ ಹೇಳಿದ್ದಾರೆ.

ಭಾರತದ ವಿರುದ್ಧ ಪಾಕಿಸ್ತಾನವನ್ನು ಎತ್ತಿಕಟ್ಟುತ್ತಿರುವ ಅಮೆರಿಕ

(ಸಂಗ್ರಹ ಚಿತ್ರ) -

ನವದೆಹಲಿ: ಭಾರತದ ವಿರುದ್ಧ ಪಾಕಿಸ್ತಾನವನ್ನು (Pakistan) ಅಮೆರಿಕ (United States) ಶಸ್ತ್ರಾಸ್ತ್ರಗೊಳಿಸುತ್ತಿದೆ. ಈ ಹಿಂದೆ ಚೀನಾ ಕೂಡ ಇದೇ ರೀತಿ ಮಾಡಿತ್ತು ಎಂದು ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿ ಕನ್ವಾಲ್ ಸಿಬಲ್ (former Indian Foreign Secretary Kanwal Sibal) ಆರೋಪಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಟ್ವಿಟ್ ಮಾಡಿರುವ ಅವರು, ಪಾಕಿಸ್ತಾನಕ್ಕೆ ಅಮೆರಿಕ ನೀಡುತ್ತಿರುವ ಪ್ಯಾಕೇಜ್‌ಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಪಾಕಿಸ್ತಾನದೊಂದಿಗಿನ ರಕ್ಷಣಾ ಸಂಬಂಧಗಳ ಕ್ಷೇತ್ರದಲ್ಲಿ ವಾಷಿಂಗ್ಟನ್ ಗೆ ನವದೆಹಲಿ ಸೂಕ್ತ ಪ್ರತಿಕ್ರಿಯೆಯನ್ನು ನೀಡುವ ಅಗತ್ಯವಿದೆ ಎಂದು ಹೇಳಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸರ್ಕಾರವು ಪಾಕಿಸ್ತಾನದ ಎಫ್-16 ನೌಕಾಪಡೆಗೆ 686 ಮಿಲಿಯನ್ ಡಾಲರ್ ಅಪ್‌ಗ್ರೇಡ್ ಪ್ಯಾಕೇಜ್‌ ಅನ್ನು ಘೋಷಿಸಿದೆ. ಇದನ್ನು ಅನೇಕ ಕಾಂಗ್ರೆಸ್ ಶಾಸಕರು ಟೀಕಿಸಿದ್ದು, ಈ ಬಗ್ಗೆ ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿ ಕನ್ವಾಲ್ ಸಿಬಲ್ ಅವರು ಕೂಡ ಕಳವಳ ವ್ಯಕ್ತಪಡಿಸಿದ್ದಾರೆ.

Viral Video: ಅಸೆಂಬ್ಲಿಯಲ್ಲೇ ಬಿಟ್ಟಿ ಹಣಕ್ಕಾಗಿ ಮುಗಿಬಿದ್ದ ಪಾಕ್‌ ಸಂಸದರು; ವಿಡಿಯೋ ನೋಡಿ

ಅಮೆರಿಕವು ಭಾರತದ ವಿರುದ್ಧ ಪಾಕಿಸ್ತಾನವನ್ನು ಶಸ್ತ್ರಾಸ್ತ್ರಗೊಳಿಸುತ್ತಿದೆ. ಕಳೆದ ಫೆಬ್ರವರಿಯಲ್ಲಿ ಪಾಕಿಸ್ತಾನದ ಎಫ್16 ನೌಕಾಪಡೆ ಅಭಿವೃದ್ಧಿಗೆ ಸುಮಾರು 400 ಮಿಲಿಯನ್ ಡಾಲರ್ ಅನ್ನು ಅಮೆರಿಕ ಘೋಷಿಸಿತು. ಅಕ್ಟೋಬರ್ ನಲ್ಲಿ ಅಮೆರಿಕ ಪಾಕಿಸ್ತಾನಕ್ಕೆ ಎಎಂ ಆರ್ ಎಎಎಂ ಕ್ಷಿಪಣಿಗಳನ್ನು ಪೂರೈಸುವುದಾಗಿ ಘೋಷಿಸಿದ್ದು, ಇದೀಗ ಡಿಸೆಂಬರ್ ನಲ್ಲಿ ಅಮೆರಿಕವು ಪಾಕಿಸ್ತಾನಕ್ಕೆ 686 ಮಿಲಿಯನ್ ಎಫ್ 16 ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಅನ್ನು ಘೋಷಿಸಿದೆ ಎಂದರು.



ಈ ಹಿಂದೆ ಚೀನಾ ಕೂಡ ಭಾರತದ ವಿರುದ್ಧ ಪಾಕಿಸ್ತಾನವನ್ನು ಶಸ್ತ್ರಸಜ್ಜಿತಗೊಳಿಸಿತ್ತು. ಈಗ ಅಮೆರಿಕ ಕೂಡ ಇದನ್ನು ಪ್ರಾರಂಭಿಸಿದೆ. ಟ್ರಂಪ್ ಈಗ ಪಾಕಿಸ್ತಾನವನ್ನು ಹೆಚ್ಚಾಗಿ ಮೆಚ್ಚಿಕೊಳ್ಳುತ್ತಿದ್ದಾರೆ. ಹೀಗಾಗಿ ಭಾರತವು ಅಮೆರಿಕ ಜೊತೆಗಿನ ರಕ್ಷಣಾ ಸಂಬಂಧಗಳ ಪ್ರತಿಕ್ರಿಯಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಹೊಸ ಸಾಮಾಜಿಕ ಮಾಧ್ಯಮ ನಿಯಮ: ಹೆಚ್-1ಬಿ ವೀಸಾ ಸಂದರ್ಶನ ಮುಂದೂಡಿಕೆ, ಅನೇಕ ಭಾರತೀಯರಿಗೆ ನಿರಾಸೆ

ಅಬ್ಸರ್ವರ್ ರಿಸರ್ಚ್ ಫೌಂಡೇಶನ್ ಅಮೆರಿಕದ ಕಾರ್ಯನಿರ್ವಾಹಕ ನಿರ್ದೇಶಕ ಧ್ರುವ ಜೈಶಂಕರ್ ಅವರು ಪ್ರತಿಕ್ರಿಯಿಸಿ, ಪಾಕಿಸ್ತಾನದೊಂದಿಗಿನ ಅಮೆರಿಕ ಸಂಬಂಧ ಗಾಢವಾಗುತ್ತಿರುವುದು ಭಾರತಕ್ಕೆ ಇರುವ ಪ್ರಮುಖ ಸವಾಲು. ಭಾರತದ ವಿರುದ್ಧ ಭಯೋತ್ಪಾದಕರನ್ನು ಬಳಸುವ ಪಾಕಿಸ್ತಾನ ಇದರ ಸುಧೀರ್ಘ ಇತಿಹಾಸವನ್ನು ಹೊಂದಿದೆ. ಹೀಗಾಗಿ ಈ ಬಗ್ಗೆ ಭಾರತ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಹೇಳಿದ್ದಾರೆ.