ಇನ್ಮುಂದೆ 90 ಲಕ್ಷ ಕೊಟ್ರೆ ಮಾತ್ರ ಅಮೆರಿಕ ವೀಸಾ; ಗೋಲ್ಡ್ ಕಾರ್ಡ್ ಬಿಡುಗಡೆ ಮಾಡಿದ ಟ್ರಂಪ್
ಯುನೈಟೆಡ್ ಸ್ಟೇಟ್ಸ್ ನಲ್ಲಿ ಶಾಶ್ವತ ನಿವಾಸವನ್ನು ಬಯಸುವವರು ಇನ್ನು ಮುಂದೆ ಗೋಲ್ಡ್ ಕಾರ್ಡ್ ವೀಸಾವನ್ನು ಪಡೆಯಬಹುದು. ಇದನ್ನು ಗುರುವಾರ ಅನಾವರಗೊಳಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದು ಹಲವಾರು ರೀತಿಯ ವಿಶೇಷ ಪ್ರಯೋಜನಗಳನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ಯುಎಸ್ ನ ಗೋಲ್ಡ್ ಕಾರ್ಡ್ ವೀಸಾಕ್ಕೆ ಯಾರೆಲ್ಲ ಅರ್ಹರು ಎಂಬುದರ ಮಾಹಿತಿ ಇಲ್ಲಿದೆ.
(ಸಂಗ್ರಹ ಚಿತ್ರ) -
ವಾಷಿಂಗ್ಟನ್: ಯುನೈಟೆಡ್ ಸ್ಟೇಟ್ಸ್ (United States) ನಲ್ಲಿ ಶಾಶ್ವತ ನಿವಾಸ ಪಡೆಯಲು ಇಚ್ಛಿಸುವವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರು ಗುರುವಾರ ಒಂದು ಮಿಲಿಯನ್ ಅಂದರೆ ಡಾಲರ್ 90 ಲಕ್ಷ ರೂ. ನ ಗೋಲ್ಡ್ ಕಾರ್ಡ್ ವೀಸಾವನ್ನು (Gold Card Visa) ಅನಾವರಣಗೊಳಿಸಿದರು. ಇದು ಗ್ರೀನ್ ಕಾರ್ಡ್ (Green card) ನಂತೆಯೇ ಕಾರ್ಯನಿರ್ವಹಿಸುತ್ತದೆಯಾದರೂ ಅದಕ್ಕಿಂತ ಹೆಚ್ಚಿನ ಸೌಲಭ್ಯವನ್ನು ಒದಗಿಸುತ್ತದೆ. ಇದು ಹೆಚ್ಚಿನ ಕೌಶಲವಿರುವ ವಿದೇಶಿ ಕಾರ್ಮಿಕರನ್ನು ಉಳಿಸಿಕೊಳ್ಳಲು ಅಮೆರಿಕದ ಕಂಪೆನಿಗಳಿಗೆ ಸಿಗುವ ಪ್ರಮುಖ ಸಾಧನವಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗುರುವಾರ ಹೊಸ ಗೋಲ್ಡ್ ಕಾರ್ಡ್ ಅನ್ನು ಅನಾವರಣಗೊಳಿಸಿದ್ದಾರೆ. ಇದನ್ನು ಪಡೆಯಲು ವಿದೇಶಿ ಪ್ರಜೆಗಳು ಯುಎಸ್ ಖಜಾನೆಗೆ ಒಂದು ಮಿಲಿಯನ್ ಡಾಲರ್ ದೇಣಿಗೆ ನೀಡಬೇಕಾಗುತ್ತದೆ. ಹೀಗೆ ದೇಣಿಗೆ ನೀಡಿದವರಿಗೆ ಯುಎಸ್ ನ ಶಾಶ್ವತ ನಿವಾಸಿ ಸ್ಥಾನವನ್ನು ಪಡೆಯಲು ಅವಕಾಶ ನೀಡಲಾಗುತ್ತದೆ.
ಪಾಕಿಸ್ತಾನವನ್ನು ಭಾರತದ ವಿರುದ್ಧ ಎತ್ತಿ ಕಟ್ಟಿದ್ದೇ ಅಮೆರಿಕ; ಮಾಜಿ IFS ಅಧಿಕಾರಿ ಬಿಚ್ಚಿಟ್ಟರು ರಹಸ್ಯ
ಈ ಕುರಿತು ಮಾಹಿತಿ ನೀಡಿದ ಡೊನಾಲ್ಡ್ ಟ್ರಂಪ್, ಯುಎಸ್ ನ ಹೊಸ ಗೋಲ್ಡ್ ಕಾರ್ಡ್ ಪಡೆಯಲು ಇಚ್ಛಿಸುವವರಿಗಾಗಿ ಶ್ವೇತಭವನವು ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ. ವಿದೇಶಿ ಪ್ರಜೆಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಅವರು ಹೇಳಿದರು.
ಹೊಸ ಗೋಲ್ಡ್ ಕಾರ್ಡ್ ವೀಸಾ ಪಡೆಯಲು ವಿದೇಶಿ ಪ್ರಜೆಗಳು ಯುಎಸ್ ಖಜಾನೆಗೆ 1 ಮಿಲಿಯನ್ ಡಾಲರ್ ದೇಣಿಗೆ ನೀಡಬೇಕು. ಇದರಿಂದ ಇಲ್ಲಿನ ಶಾಶ್ವತ ನಿವಾಸಿ ಸ್ಥಾನಮಾನವನ್ನು ಪಡೆಯಬಹುದು. ಇದು ಹೆಚ್ಚಿನ ಕೌಶಲ ಹೊಂದಿರುವ ಕಾರ್ಮಿಕರನ್ನು ತ್ವರಿತವಾಗಿ ಉಳಿಸಿಕೊಳ್ಳಲು ಕಂಪೆನಿಗಳಿಗೆ ಸಹಾಯ ಮಾಡುತ್ತದೆ ಎಂದರು.
The Roman Empire also sold foreigners citizenship right before it collapsed https://t.co/2WM6vRw8sj
— BowTiedRanger (@BowTiedRanger) December 11, 2025
ಇದು ಗ್ರೀನ್ ಕಾರ್ಡ್‌ನಂತೆ ಆಗಿದ್ದರೂ ಹಲವು ವಿಶೇಷ ಪ್ರಯೋಜನಗಳನ್ನು ಒದಗಿಸುತ್ತದೆ. ಉನ್ನತ ಸಂಸ್ಥೆಗಳು ಪ್ರತಿಭಾನ್ವಿತರನ್ನು ಗುರುತಿಸಿ ಅವರು ಪದವಿ ಪಡೆಯುವುದನ್ನು ಮುಂದುವರಿಸಲು ಸಹಾಯ ಮಾಡುತ್ತದೆ. ಯಾವುದೇ ಕಂಪೆನಿಗಳು ಈ ಕಾರ್ಡ್ ಖರೀದಿಸಿ ಆ ವ್ಯಕ್ತಿಯನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಇರಿಸಿಕೊಳ್ಳಬಹುದು. ಆಪಲ್‌ನಂತಹ ಸಂಸ್ಥೆಗಳು ಇದರ ಪ್ರಯೋಜನ ಪಡೆಯಬಹುದು ಎಂದು ಅವರು ಹೇಳಿದರು.
ಭಾರತ, ಚೀನಾ ಮತ್ತು ಫ್ರಾನ್ಸ್ ಸೇರಿದಂತೆ ಉನ್ನತ ತರಬೇತಿ ಪಡೆದ ಪದವೀಧರರು ತಮ್ಮ ಅಧ್ಯಯನ ಪೂರ್ಣಗೊಳಿಸಿದ ಬಳಿಕ ದೇಶ ತೊರೆಯುವಂತೆ ಒತ್ತಾಯಿಸುವುದನ್ನು ತಡೆಯಲು ಇದು ಸಹಾಯ ಮಾಡುತ್ತದೆ. ನಮ್ಮ ದೇಶಕ್ಕೆ ಶ್ರೇಷ್ಠ ವ್ಯಕ್ತಿಯೊಬ್ಬರು ಬರುವುದು ಒಂದು ಉಡುಗೊರೆ. ಯಾಕೆಂದರೆ ಇಲ್ಲಿ ಉಳಿಯಲು ಅನರ್ಹವಾದವರೂ ಇದ್ದಾರೆ ಎಂದು ಟ್ರಂಪ್ ತಿಳಿಸಿದ್ದಾರೆ.
ನಾಪತ್ತೆಯಾದ ನಾಯಿ ಬರೋಬ್ಬರಿ 5 ವರ್ಷದ ಬಳಿಕ ಪತ್ತೆ: ಮಹಿಳೆಯ ಭಾವನಾತ್ಮಕ ವಿಡಿಯೊ ವೈರಲ್
ಹೊಸ ಗೋಲ್ಡ್ ಕಾರ್ಡ್ ಪಡೆಯಲು ಅರ್ಜಿದಾರರು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆಗೆ ಮರುಪಾವತಿಸಲಾಗದ 15,000 ಡಾಲರ್ ಶುಲ್ಕವನ್ನು ಪಾವತಿಸಬೇಕು. ಈ ಅರ್ಜಿಗಳನ್ನು ತ್ವರಿತವಾಗಿ ಪರಿಶೀಲನೆ ನಡೆಸಲಾಗುತ್ತದೆ. ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅರ್ಜಿದಾರರು ಯುಎಸ್ ಸರ್ಕಾರಕ್ಕೆ 1 ಮಿಲಿಯನ್ ಡಾಲರ್ ದೇಣಿಗೆಯನ್ನು ನೀಡಬೇಕು. ಅರ್ಜಿದಾರರ ಪರಿಸ್ಥಿತಿಗೆ ಅನುಗುಣವಾಗಿ ಹೆಚ್ಚುವರಿ ಶುಲ್ಕಗಳನ್ನು ಅನ್ವಯಿಸಲಾಗುತ್ತದೆ. ದೇಣಿಗೆಯು ಅರ್ಜಿದಾರರಿಂದ ಯುನೈಟೆಡ್ ಸ್ಟೇಟ್ಸ್‌ಗೆ ಹೆಚ್ಚಿನ ಪ್ರಯೋಜನವಿದೆ ಎಂಬುದಕ್ಕೆ ಆಧಾರವಾಗಿ ಪರಿಗಣಿಸಲಾಗುತ್ತದೆ. ವೈಯಕ್ತಿಕ ಮತ್ತು ಕಾರ್ಪೊರೇಟ್ ಗೋಲ್ಡ್ ಕಾರ್ಡ್ ವೀಸಾಗಳ ಅರ್ಜಿಗಳು ಈಗ ಸರ್ಕಾರಿ ಪೋರ್ಟಲ್‌ನಲ್ಲಿ ಲಭ್ಯವಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.