Land Slide: ಸುಡಾನ್‌ನಲ್ಲಿ ಭೀಕರ ಭೂ ಕುಸಿತ; ಸಾವಿರಕ್ಕೂ ಹೆಚ್ಚು ಜನರು ಸಾವು
ಸುಡಾನ್‌ನ ಪಶ್ಚಿಮ ಡಾರ್ಫರ್ ಪ್ರದೇಶದಲ್ಲಿ ಭಾರೀ ಭೂ ಕುಸಿತ ಸಂಭವಿಸಿದೆ. ಭೂ ಕುಸಿತದಿಂದ ಇಡೀ ಗ್ರಾಮವೇ ಸರ್ವನಾಶವಾಗಿದ್ದು, 1,000 ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಮಾರಾ ಪರ್ವತಗಳ ತಾರಾಸಿನ್ ಗ್ರಾಮದಲ್ಲಿ ಭಾನುವಾರ ಬೃಹತ್ ಮತ್ತು ವಿನಾಶಕಾರಿ ಭೂಕುಸಿತ ಸಂಭವಿಸಿದೆ.

-

ಸುಡಾನ್‌ನ ಪಶ್ಚಿಮ ಡಾರ್ಫರ್ ಪ್ರದೇಶದಲ್ಲಿ ಭಾರೀ ಭೂ ಕುಸಿತ (Land Slide) ಸಂಭವಿಸಿದೆ. ಭೂ ಕುಸಿತದಿಂದ ಇಡೀ ಗ್ರಾಮವೇ ಸರ್ವನಾಶವಾಗಿದ್ದು, 1,000 ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಮಾರಾ ಪರ್ವತಗಳ ತಾರಾಸಿನ್ ಗ್ರಾಮದಲ್ಲಿ ಭಾನುವಾರ ಬೃಹತ್ ಮತ್ತು ವಿನಾಶಕಾರಿ ಭೂಕುಸಿತ ಸಂಭವಿಸಿದೆ ಎಂದು ಸುಡಾನ್ ಲಿಬರೇಶನ್ ಆರ್ಮಿ ಹೇಳಿಕೆಯಲ್ಲಿ ತಿಳಿಸಿದೆ. ಈ ಘಟನೆಯಲ್ಲಿ ಕೇವಲ ಒಬ್ಬ ಬದುಕುಳಿದಿದ್ದಾನೆ ಎಂದು ಬಂಡಾಯ ಗುಂಪು ಸೋಮವಾರ ತಡರಾತ್ರಿ ತಿಳಿಸಿದೆ.
ಆರಂಭಿಕ ಮಾಹಿತಿಯ ಪ್ರಕಾರ ಎಲ್ಲಾ ಹಳ್ಳಿ ನಿವಾಸಿಗಳು ಸಾವನ್ನಪ್ಪಿದ್ದಾರೆ, ಅಂದಾಜು ಒಂದು ಸಾವಿರಕ್ಕೂ ಹೆಚ್ಚು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ, ಕೇವಲ ಒಬ್ಬ ವ್ಯಕ್ತಿ ಮಾತ್ರ ಬದುಕುಳಿದಿದ್ದಾರೆ" ಎಂದು ಗುಂಪು ಹೇಳಿದೆ. ಆಗಸ್ಟ್ 31ರಿಂದ ಸುರಿದ ನಿರಂತರ ಹಾಗೂ ಭಾರೀ ಮಳೆಯ ಬೆನ್ನಲ್ಲೇ ಈ ಭೂಕುಸಿತ ಸಂಭವಿಸಿದೆ ಎಂದು ಅಬೈಲ್ಯಾಹಿದ್ ಮೊಹಮ್ಮದ್ ನೂರ್ ನೇತೃತ್ವದ ಗುಂಪೊಂದು ಹೇಳಿಕೆಯಲ್ಲಿ ತಿಳಿಸಿದೆ. ಪರ್ವತದ ತಪ್ಪಲಿನಲ್ಲಿ ಭೂಕುಸಿತ ಉಂಟಾಗಿದ್ದು, ಇಡೀ ಗ್ರಾಮವನ್ನೇ ನೆಲಸಮ ಮಾಡಿದೆ. ಇದೊಂದು ಹಳ್ಳಿಯಲ್ಲಿ 1000 ಜನರು ವಾಸವಿದ್ದರು ಎನ್ನಲಾಗಿದ್ದು, ಒಬ್ಬನನ್ನು ಬಿಟ್ಟು ಉಳಿದೆಲ್ಲರೂ ದುರಂತ ಅಂತ್ಯ ಕಂಡಿದ್ದಾರೆ ಎಂದು ವರದಿಯಾಗಿದೆ.
ಸುಡಾನ್ ಸೇನೆ ಮತ್ತು ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳ (RSF) ನಡುವೆ ಭೀಕರ ಅಂತರ್ಯುದ ನಡೆಯುತ್ತಿದೆ. ಈ ಸಂದರ್ಭದಲ್ಲಿ, ಸ್ಥಳೀಯ ಜನರು ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ನಿರಾಶ್ರಿತರಾಗಿ ಮರ್ರಾ ಪರ್ವತ ಪ್ರದೇಶಗಳಿಗೆ ವಲಸೆ ಬಂದಿದ್ದರು. ಆಹಾರ ಮತ್ತು ಔಷಧದ ಕೊರತೆಯಿಂದ ಬಳಲುತ್ತಿದ್ದರು. ಈಗ ಅವರೂ ಸಹ ಈ ಭೂಕುಸಿತದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Cloudburst: ಜಮ್ಮು ಕಾಶ್ಮೀರದಲ್ಲಿ ಭೂಕುಸಿತ; ರಿಯಾಸಿಯಲ್ಲಿ 7, ರಾಂಬನ್‌ನಲ್ಲಿ 4 ಮಂದಿ ಸಾವು
ಹಸಿವಿನ ಬಿಕ್ಕಟ್ಟು
ಏಪ್ರಿಲ್ 2023 ರಿಂದ, ಸುಡಾನ್ ಸೇನಾ ಮುಖ್ಯಸ್ಥ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ಮತ್ತು ಅವರ ಮಾಜಿ ಉಪ, ಆರ್‌ಎಸ್‌ಎಫ್ ಕಮಾಂಡರ್ ಮೊಹಮ್ಮದ್ ಹಮ್ದಾನ್ ದಗ್ಲೊ ನಡುವಿನ ಅಧಿಕಾರಕ್ಕಾಗಿ ಹೋರಾಟ ನಡೆಯುತ್ತಿದೆ. ಈ ವರ್ಷ ಸರಣಿ ದಾಳಿಗಳಲ್ಲಿ, ಬುರ್ಹಾನ್ ಪಡೆಗಳು ಮಧ್ಯ ಸುಡಾನ್ ಅನ್ನು ಮರಳಿ ಪಡೆದುಕೊಂಡಿದೆ.