India-US Relation: ಪಾಕ್ ಜೊತೆ ಟ್ರಂಪ್ ʻಫ್ಯಾಮಿಲಿ ಬ್ಯುಸಿನೆಸ್ʼ? ಅಮೆರಿಕದ ತೆರಿಗೆ ನೀತಿ ಹಿಂದೆ ಇದ್ಯಾ ಇಷ್ಟು ದೊಡ್ಡ ಸೀಕ್ರೆಟ್
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನದೊಂದಿಗಿನ ವ್ಯಾಪಾರ ಒಪ್ಪಂದಗಳಿಗಾಗಿ ಭಾರತ-ಅಮೆರಿಕ ಸಂಬಂಧವನ್ನು ತ್ಯಜಿಸಲು ಸಿದ್ಧರಾಗಿದ್ದು, ಇದರಿಂದ ಎರಡು ರಾಷ್ಟ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಭಾರತದೊಂದಿಗಿನ ಸಂಬಂಧವನ್ನು ಹಾಳುಮಾಡುವುದು “ಟ್ರಂಪ್‌ರ ವಿದೇಶಾಂಗ ನೀತಿಯ ಅಂಶ” ಎಂದು ಮೇಡಾಸ್‌ಟಚ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸುಲ್ಲಿವನ್ ಟೀಕಿಸಿದ್ದಾರೆ

ಜೇಕ್ ಸುಲ್ಲಿವನ್ - ಟ್ರಂಪ್ -

ವಾಷಿಂಗ್ಟನ್ ಡಿಸಿ: ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ (National Security Advisor) ಜೇಕ್ ಸುಲಿವನ್ (Jake Sullivan ), ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಮ್ಮ ಕುಟುಂಬದ ವ್ಯಾಪಾರ ಹಿತಾಸಕ್ತಿಗೋಸ್ಕರ ಭಾರತದೊಂದಿಗಿನ (India) ಸಂಬಂಧವನ್ನು ಹದಗೆಡುವಂತೆ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಬೈಡನ್ ಆಡಳಿತದ ಅಧಿಕಾರಿಯಾಗಿದ್ದ ಸುಲಿವನ್, ಟ್ರಂಪ್ ಅವರ ಈ ನಡೆಯನ್ನು ತೀವ್ರವಾಗಿ ಟೀಕಿಸಿದ್ದು, ಭಾರತದೊಂದಿಗಿನ ಸಂಬಂಧವನ್ನು ಕಡಿತಗೊಳಿಸುವುದರಿಂದ ಅಮೆರಿಕಕ್ಕೆ ದೊಡ್ಡ ನಷ್ಟವಾಗಲಿದೆ ಎಂದು ಹೇಳಿದ್ದಾರೆ.
ಮೈದಾಸ್‌ಟಚ್ ಯೂಟ್ಯೂಬ್ ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ ಸುಲಿವನ್, "ಹಲವು ದಶಕಗಳಿಂದ, ಎರಡೂ ಪಕ್ಷಗಳ ಸರ್ಕಾರಗಳು ಭಾರತದೊಂದಿಗಿನ ಸಂಬಂಧವನ್ನು ಬಲಪಡಿಸಲು ಶ್ರಮಿಸಿವೆ. ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ತಂತ್ರಜ್ಞಾನ, ಪ್ರತಿಭೆ, ಆರ್ಥಿಕತೆ ಮತ್ತು ಚೀನಾದ ರಣನೀತಿಗತ ಧೋರಣೆಗೆ ಪ್ರತಿರೋಧವಾಗಿ ನಾವು ಜೊತೆಯಾಗಬೇಕಾದ ದೇಶವಾಗಿದೆ" ಎಂದು ಹೇಳಿದರು.
ಈ ಸುದ್ದಿಯನ್ನು ಓದಿ: Viral Video; ಇದು ಪೊಲೀಸ್ ಸಿಬ್ಬಂದಿಗಳ 'ಪೋಲಿ' ಕೆಲಸ; ಸರಸ ಹಾಡುವಾಗಲ್ಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ರು
"ಆದರೆ, ಪಾಕಿಸ್ತಾನವು ಟ್ರಂಪ್ ಕುಟುಂಬದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಿದ್ಧವಾಗಿರುವ ಕಾರಣ, ಟ್ರಂಪ್ ಭಾರತದ ಸಂಬಂಧವನ್ನು ಕಡೆಗಣಿಸಿದ್ದಾರೆ. ಇದು ಪ್ರಮುಖ ರಣನೀತಿಯ ಹಿನ್ನಡೆಯಾಗಿದ್ದು, ಭಾರತ-ಅಮೆರಿಕ ಬಲಿಷ್ಠ ಸಹಭಾಗಿತ್ವವು ನಮ್ಮ ಮೂಲ ಹಿತಾಸಕ್ತಿಗಳಿಗೆ ಸೇವೆ ಸಲ್ಲಿಸುತ್ತದೆ" ಎಂದು ಸುಲಿವನ್ ತಿಳಿಸಿದ್ದಾರೆ. ಈ ಕ್ರಮದಿಂದ ಜರ್ಮನಿ, ಜಪಾನ್, ಕೆನಡಾದಂತಹ ರಾಷ್ಟ್ರಗಳು, "ನಾಳೆ ಭಾರತದ ಸ್ಥಾನದಲ್ಲಿ ನಾವು ಇರಬಹುದು" ಎಂದು ಭಾವಿಸುವಂತೆ ಮಾಡಿದೆ ಎಂದು ಅವರು ಎಚ್ಚರಿಸಿದ್ದಾರೆ.
"ಅಮೆರಿಕವು ತನ್ನ ಮಿತ್ರ ರಾಷ್ಟ್ರಗಳಿಗೆ ವಿಶ್ವಾಸಾರ್ಹವಾಗಿರಬೇಕು. ನಮ್ಮ ಮಾತು ನಂಬಿಕೆಯ ಆಧಾರವಾಗಿರಬೇಕು. ಆದರೆ, ಭಾರತದೊಂದಿಗಿನ ಈ ಬೆಳವಣಿಗೆಯು ನೇರ ಪರಿಣಾಮವನ್ನು ಬೀರಿದೆ. ಇದು ನಮ್ಮ ಜಾಗತಿಕ ಸಂಬಂಧಗಳು ಮತ್ತು ಪಾಲುದಾರಿಕೆಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ" ಎಂದು ಸುಲಿವನ್ ಒತ್ತಿಹೇಳಿದ್ದಾರೆ.
ಟ್ರಂಪ್ ಆಡಳಿತವು ಭಾರತದ ಮೇಲೆ ಶೇ.50ರ ತೆರಿಗೆ ವಿಧಿಸಿದ್ದು, ಇದಕ್ಕೆ ವ್ಯಾಪಾರ ಕೊರತೆ ಮತ್ತು ರಷ್ಯಾದ ತೈಲ ಖರೀದಿಯನ್ನು ಕಾರಣವಾಗಿ ಉಲ್ಲೇಖಿಸಿದೆ. ಆದರೆ, ಏಪ್ರಿಲ್ 22ರ ಪಹಲ್ಗಾಂ ದಾಳಿಯ ನಂತರ ಭಾರತ-ಪಾಕ್ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸಿದ್ದೇನೆ ಎಂಬ ಟ್ರಂಪ್ ಅವರ ಹೇಳಿಕೆಯನ್ನು ಭಾರತ ತಿರಸ್ಕರಿಸಿದ್ದೇ ಈ ಕ್ರಮಕ್ಕೆ ಕಾರಣವಾಗಿದೆ ಎಂದು ವರದಿಗಳು ಹೇಳಿವೆ.