ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮಲಯಾಳಂ ಮಾತನಾಡಿ ಗಮನ ಸೆಳೆದ ಪೋಲೆಂಡ್‌ ಮಹಿಳೆ

ಕೇರಳದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಪೋಲೆಂಡ್‌ನ ಮಹಿಳೆಯೊಬ್ಬರು ಬಾಲಕಿಯರೊಂದಿಗೆ ಮಲಯಾಳಂನಲ್ಲಿ ನಿರರ್ಗಳವಾಗಿ ಮಾತನಾಡಿ ಅಚ್ಚರಿ ಮೂಡಿಸಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಮಂದಿಯ ಗಮನ ಸೆಳೆದಿದೆ. ವಿಡಿಯೊ ನೀವೂ ನೋಡಿ.

ಮಕ್ಕಳೊಂದಿಗೆ ಮಲಯಾಳಂನಲ್ಲಿ ಮಾತನಾಡಿದ ಪೋಲೆಂಡ್‌ ಮಹಿಳೆ

-

ತಿರುವನಂತಪುರಂ: ಮದುವೆಯೊಂದರಲ್ಲಿ ಪಾಲ್ಗೊಂಡಿದ್ದ ಪೋಲೆಂಡ್‌ನ ಮಹಿಳೆಯೊಬ್ಬರು (Polish Woman) ಮಕ್ಕಳೊಂದಿಗೆ ಮಲಯಾಳಂನಲ್ಲಿ(Malayalam) ಮಾತನಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಇದರ ವಿಡಿಯೊ (Viral Video) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಮಂದಿಯ ಕುತೂಹಲವನ್ನು ಕೆರಳಿಸಿದೆ. ಕೇರಳದ (Kerala) ಮದುವೆ ಸಮಾರಂಭವೊಂದರಲ್ಲಿ ಮಲಯಾಳಂ ಭಾಷೆಯಲ್ಲಿ ಮಾತನಾಡುವ ಮೂಲಕ ಪೋಲೆಂಡ್‌ನ ಮಹಿಳೆ ಮಕ್ಕಳನ್ನು ಸಂತೋಷಪಡಿಸಿದ್ದಾರೆ. ಅವರು ಇತ್ತೀಚೆಗೆ ರಾಜ್ಯದಲ್ಲಿ ನಡೆದ ತಮ್ಮ ಸ್ನೇಹಿತನ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಕೇರಳದಲ್ಲಿ ನಡೆದ ಮದುವೆಯ ಈ ಒಂದು ಹೃದಯಸ್ಪರ್ಶಿ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಅನೇಕರ ಗಮನವನ್ನು ಸೆಳೆದಿದೆ.

ಪೋಲೆಂಡ್‌ನ ಮಹಿಳೆಯೊಬ್ಬರು ಕೇರಳದ ಬಾಲಕಿಯರೊಂದಿಗೆ ರಾಜ್ಯದ ಸ್ಥಳೀಯ ಭಾಷೆಯಾದ ಮಲಯಾಳಂನಲ್ಲಿ ನಿರರ್ಗಳವಾಗಿ ಮಾತನಾಡಿದರು. ಇದು ಸಾಕಷ್ಟು ಮಂದಿಯ ಅಚ್ಚರಿಗೆ ಕಾರಣವಾಯಿತು ಮಾತ್ರವಲ್ಲದೆ ಎಲ್ಲರೂ ನಗು ಮತ್ತು ಸಂತೋಷವನ್ನು ವ್ಯಕ್ತಪಡಿಸುವಂತೆ ಮಾಡಿತು.

ಎಮಿಲಿಯಾ ಪೀಟರ್ಜಿಕ್ ಎನ್ನುವ ಪೋಲೆಂಡ್ ಪ್ರಜೆ ಸದ್ಯ ಕೇರಳದಲ್ಲಿ ವಾಸವಾಗಿದ್ದಾರೆ. ಅವರು ಇತ್ತೀಚೆಗೆ ರಾಜ್ಯದಲ್ಲಿ ಸ್ನೇಹಿತನ ಮದುವೆಯಲ್ಲಿ ಭಾಗವಹಿಸಿದ್ದರು ಮತ್ತು ಮಕ್ಕಳೊಂದಿಗೆ ಸಂವಹನ ನಡೆಸಲು ಮಲಯಾಳಂ ಭಾಷೆಯನ್ನು ಬಳಸಿದರು.

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವಿಡಿಯೊದಲ್ಲಿ ಪೀಟರ್ಜಿಕ್, ಮಕ್ಕಳೊಂದಿಗೆ ಮಲಯಾಳಂ ಭಾಷೆಯಲ್ಲಿ ಸಂವಹನ ನಡೆಸಿದ್ದಾರೆ. ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು. ಮಕ್ಕಳು ಇದನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದರು.

ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿರುವ ಎಮಿಲಿಯಾ ಪೀಟರ್ಜಿಕ್, ʼʼಕೇರಳದಲ್ಲಿ ನಮ್ಮ ಸ್ನೇಹಿತನ ಮದುವೆಯಲ್ಲಿ ನಾನು ಚಿಕ್ಕ ಮಕ್ಕಳೊಂದಿಗೆ ಮಲಯಾಳಂನಲ್ಲಿ ಮಾತನಾಡಿದೆ. ಈ ಮೂಲಕ ಅವರನ್ನು ಅಚ್ಚರಿಗೊಳಿಸಲು ನಿರ್ಧರಿಸಿದೆ. ಅವರ ನೋಟ ಅಮೂಲ್ಯವಾಗಿತ್ತು. ಮೊದಲು ಆಶ್ಚರ್ಯ ವ್ಯಕ್ತಪಡಿಸಿದರು. ಬಳಿಕ ನಗುತ್ತ ಮಾತನಾಡಿದರು. ವಿದೇಶಿಯಾಗಿ ಇಂತಹ ಕ್ಷಣಗಳು ಅಮೂಲ್ಯವಾದದ್ದು. ಭಾಷೆಯನ್ನು ಕಲಿಯುವುದು ಮಾತ್ರವಲ್ಲ ಮುಂದಿನ ಪೀಳಿಗೆಯೊಂದಿಗೆ ಅವರ ಸ್ವಂತ ಮಾತೃಭಾಷೆಯಲ್ಲಿ ಸಂಪರ್ಕ ಸಾಧಿಸುವುದು ಇದರಿಂದ ಸಾಧ್ಯವಾಗುತ್ತದೆ. ಈ ಸಣ್ಣ ಸಂಭಾಷಣೆಗಳು ನನ್ನನ್ನು ನಿಜವಾಗಿಯೂ ಇಲ್ಲಿನ ಸಂಸ್ಕೃತಿಯ ಭಾಗವೆಂದು ಪರಿಗಣಿಸುವಂತೆ ಮಾಡಿದೆʼʼ ಎಂದು ಹೇಳಿದ್ದಾರೆ.

ʼʼಪ್ರಾಮಾಣಿಕವಾಗಿ ಹೇಳಬೇಕೆಂದರೆ ಮಕ್ಕಳು ಯಾವುದೇ ತರಗತಿಗಿಂತ ನನಗೆ ಹೆಚ್ಚು ಆತ್ಮವಿಶ್ವಾಸವನ್ನು ನೀಡಿದರು. ಅವರ ಸಂತೋಷವು ಪ್ರತಿದಿನ ಮಲಯಾಳಂ ಕಲಿಯುವುದನ್ನು ಮುಂದುವರಿಸಲು ಅತ್ಯುತ್ತಮ ಪ್ರೇರಣೆಯಾಗಿತ್ತುʼʼ ಎಂದು ಅವರು ವಿವರಿಸಿದ್ದಾರೆ.

ಈ ವಿಡಿಯೊಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಅನೇಕ ಬಳಕೆದಾರರು ಇದನ್ನು ಅಮೂಲ್ಯ ಎಂದು ಕರೆದಿದ್ದಾರೆ ಮತ್ತು ಭಾಷೆ ಎಲ್ಲ ಅಡೆತಡೆಗಳನ್ನು ಮುರಿಯತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral Video: ಓಣಂ ಸಂಭ್ರಮಾಚರಣೆ ವೇಳೆ ಕುಸಿದು ಬಿದ್ದು ವ್ಯಕ್ತಿ ಸಾವು; ಈ ವಿಡಿಯೊ ನೋಡಿ

ಒಬ್ಬರು ಕಾಮೆಂಟ್‌ನಲ್ಲಿ ಅವರ ಪ್ರಯತ್ನವು ಕೇರಳದ ಸಂಸ್ಕೃತಿಯ ಬಗ್ಗೆ ಹೊಂದಿರುವ ಗೌರವವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಇದು ತುಂಬಾ ಮುದ್ದಾಗಿದೆ ಎಂದು ತಿಳಿಸಿದ್ದಾರೆ. ಮತ್ತೊಬ್ಬರು ಕೆಲವು ಮಲಯಾಳಂ ಪದಗಳು ಇಷ್ಟು ದೊಡ್ಡ ಬಂಧವನ್ನು ಸೃಷ್ಟಿಸಬಲ್ಲವು ಎಂದು ಯಾರಿಗೆ ತಿಳಿದಿತ್ತು ಎಂದು ತಿಳಿಸಿದ್ದಾರೆ.