ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕೌನ್ ಬನೇಗಾ ಕರೋಡ್‍ಪತಿಯಲ್ಲಿ ಅಮಿತಾಬ್ ಬಚ್ಚನ್‍ಗೆ ತನ್ನ ಗೆಳತಿಯನ್ನು ಪರಿಚಯಿಸಿದ ಸ್ಪರ್ಧಿ; ಇಲ್ಲಿದೆ ವೈರಲ್ ವಿಡಿಯೊ

KBC Contestant Introduces Girlfriend: ಕೌನ್ ಬನೇಗಾ ಕರೋಡ್‌ಪತಿ-14ರ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಹಾಟ್ ಸೀಟ್‍ನಲ್ಲಿ ಕುಳಿತಿದ್ದ ಯುವಕನಿಗೆ, ಜತೆಯಲ್ಲಿ ಯಾರನ್ನು ಕರೆದುಕೊಂಡು ಬಂದಿದ್ದೀರಿ ಎಂದು ಬಿಗ್ ಬಿ ಪ್ರಶ್ನಿಸಿದಾಗ, ತನ್ನ ಗೆಳತಿಯನ್ನು ಪರಿಚಯಿಸಿದ್ದಾನೆ.

ಕೆಬಿಸಿಯಲ್ಲಿ ಬಿಗ್‌ ಬಿಗೆ ಗೆಳತಿಯನ್ನು ಪರಿಚಯಿಸಿದ ಸ್ಪರ್ಧಿ

-

Priyanka P Priyanka P Sep 2, 2025 7:07 PM

ಮುಂಬೈ: ʼಪ್ರೀತಿ ಮಾಡಬಾರದು, ಮಾಡಿದರೆ ಜಗಕ್ಕೆ ಹೆದರಬಾರದುʼ ಎಂಬ ಹಾಡನ್ನು ನೀವು ಕೇಳಿರಬಹುದು. ಇತ್ತೀಚೆಗಿನ ಪೀಳಿಗೆಯು ಬಹಿರಂಗವಾಗಿ ತಮ್ಮ ಪ್ರೀತಿಯನ್ನು ಹೇಳುತ್ತಾರೆ. ಪ್ರೀತಿ ಮಾಡಿ ಹೆದರಿದರೆ ತಾವು ಪ್ರೇಮಿಸಿದವರನ್ನು ಮದುವೆಯಾಗುವುದು ಅಷ್ಟು ಸುಲಭವಲ್ಲ. ಧೈರ್ಯ, ಆತ್ಮವಿಶ್ವಾಸದಿಂದ ಇದ್ದರೆ ತಾವು ಪ್ರೀತಿ ಮಾಡಿದವರನ್ನೇ ಕೈ ಹಿಡಿಯಬಹುದು. ಇದಕ್ಕುತ್ತರ ಎಂಬಂತೆ ಇದೀಗ ಕೌನ್ ಬನೇಗಾ ಕರೋಡ್‌ಪತಿ-14 (Kaun Banega Crorepati)ರ ವಿಡಿಯೊವೊಂದು ವೈರಲ್ ಆಗಿದೆ. ಸ್ಪರ್ಧಿಯ ಉತ್ತರವು ಬಿಗ್ ಬಿ ಅಮಿತಾಬ್ ಬಚ್ಚನ್ (Amitabh Bachchan) ಅವರನ್ನು ಅಚ್ಚರಿಗೊಳಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊ (Viral Video)ದಲ್ಲಿ, ಸ್ಪರ್ಧಿ ಆಯುಷ್ ಗರ್ಗ್ ಎಂಬಾತ ಹಾಟ್ ಸೀಟ್‍ನಲ್ಲಿ ಕುಳಿತಿದ್ದಾರೆ. ಬಿಗ್ ಬಿ ಕಾರ್ಯಕ್ರಮದಲ್ಲಿ ತಮ್ಮ ಜತೆಗಾರರನ್ನಾಗಿ ಯಾರನ್ನು ಕರೆತಂದಿದ್ದೀರಿ ಎಂದು ಕೇಳಿದಾಗ, ಆತ ತನ್ನ ವಿಶೇಷ ವ್ಯಕ್ತಿಯನ್ನು ಪರಿಚಯಿಸಿದರು. ಅಂದರೆ, ಆತನ ಪೋಷಕರು ಅಥವಾ ಸ್ನೇಹಿತರು ಅಥವಾ ಒಡಹುಟ್ಟಿದವರು ಬಂದಿರಲಿಲ್ಲ. ಆತನ ಗೆಳತಿ ಬಂದಿದ್ದಳು. ಆಯುಷ್ ಆತ್ಮವಿಶ್ವಾಸದಿಂದ ತನ್ನ ಗೆಳತಿ ಆರುಷಿ ಶರ್ಮಾಳನ್ನು ಪರಿಚಯಿಸಿದರು. ಇದಕ್ಕೆ ಪ್ರೇಕ್ಷಕರು ಸಂತೋಷದಿಂದ ಚಪ್ಪಾಳೆ ತಟ್ಟಿದ್ದಾರೆ. ಬಿಗ್ ಬಿ ಕೂಡ ಜೋರಾಗಿ ನಕ್ಕಿದ್ದಾರೆ. ಅಲ್ಲದೆ ಅವರು ಹೊಸ ಜಮಾನ ಎಂದು ಕರೆದಿದ್ದಾರೆ.

ವಿಡಿಯೊ ವೀಕ್ಷಿಸಿ:

“ಗೆಳತಿಯನ್ನು ಪರಿಚಯಿಸುವ ರೀತಿಯನ್ನು ಇದೇ ಮೊದಲ ಬಾರಿಗೆ ಕೇಳುತ್ತಿದ್ದೇನೆ. ನೀವು ನಿಮ್ಮ ಗೆಳತಿಯನ್ನು ನಿಮ್ಮೊಂದಿಗೆ ಕರೆದುಕೊಂಡು ಬಂದಿದ್ದೀರಿ ಎಂದು ಕೇಳಲು ನನಗೆ ಹೆಮ್ಮೆಯಾಗುತ್ತಿದೆ” ಎಂದು ಸಂತೋಷದಿಂದ ಅಮಿತಾಬ್ ಬಚ್ಚನ್ ಚಪ್ಪಾಳೆ ತಟ್ಟಿದ್ದಾರೆ. ಈ ವೇಳೆ ಕ್ಯಾಮರಾವು ಆರುಷಿಯನ್ನು ತೋರಿಸುತ್ತದೆ. ಆಕೆ ಕೂಡ ನಗಾಡಿದ್ದಾರೆ.

ಈ ಸಂವಾದವು ಕೌನ್ ಬನೇಗಾ ಕರೋಡ್‍ಪತಿ ಸ್ಟುಡಿಯೋದಲ್ಲಿ ನಗುವಿನ ಅಲೆಯನ್ನು ಎಬ್ಬಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೊ ವೈರಲ್ ಆಗಿದೆ. ಆಯುಷ್ ಅವರ ಪ್ರಾಮಾಣಿಕತೆಯನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಶ್ಲಾಘಿಸಿದ್ದಾರೆ. ಒಬ್ಬ ಬಳಕೆದಾರ ಆಕೆ ಜೀವನದಲ್ಲಿ ಗೆದ್ದಳು ಎಂದು ಹೇಳಿದರೆ, ಮತ್ತೊಬ್ಬ ಬಳಕೆದಾರನು ಹುಡುಗಿಯನ್ನು ಅದೃಷ್ಟಶಾಲಿ ಎಂದು ಕರೆದರು. ಪೋಷಕರ ಉತ್ತಮ ಪಾಲನೆ ಎಂದರೆ ಹೀಗಿರುತ್ತದೆ ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ಸ್ಪರ್ಧಿ ಒಬ್ಬ ನಿಷ್ಠಾವಂತ ವ್ಯಕ್ತಿಯಾಗಿದ್ದಾನೆ ಎಂದು ಮತ್ತೊಬ್ಬರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಈ ರೀತಿಯ ಕ್ಷಣಗಳಿಂದ ಕೂಡಿರುವ ಕಾರ್ಯಕ್ರಮವು ವೀಕ್ಷಕರಿಗೆ ಕೇವಲ ಜ್ಞಾನವನ್ನು ನೀಡುವುದು ಮಾತ್ರವಲ್ಲದೆ, ಸುಂದರ ಹಾಗೂ ಹೃದಯಸ್ಪರ್ಶಿ ಕಥೆಗಳಿಂದ ಕೂಡಿರುತ್ತವೆ ಎಂಬುದಕ್ಕೆ ನಿದರ್ಶನ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿದ್ದಾರೆ.

ಇದನ್ನೂ ಓದಿ: Viral Video: ಮಲಯಾಳಂ ಮಾತನಾಡಿ ಗಮನ ಸೆಳೆದ ಪೋಲೆಂಡ್‌ ಮಹಿಳೆ