PM Modi America Visit: ಇಂದಿನಿಂದ ಪ್ರಧಾನಿ ಮೋದಿ ಅಮೆರಿಕ ಪ್ರವಾಸ; ಇಲ್ಲಿದೆ ಕಾರ್ಯಕ್ರಮಗಳ ವಿವರ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ನಾಳೆ ಅಮೆರಿಕಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ. ಪ್ರಧಾನಿ ಮೋದಿಯವರ ಪ್ರವಾಸದ ಯೋಜನೆ ಪ್ರಕಾರ, ಎರಡು ದಿನಗಳ ಪ್ಯಾರಿಸ್ ಭೇಟಿಯನ್ನು ಮುಗಿಸಿದ ನಂತರ ವಾಷಿಂಗ್ಟನ್ ಡಿಸಿಗೆ ಪ್ರಯಾಣ ಬೆಳೆಸಲಿದ್ದಾರೆ.
ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಆಹ್ವಾನದ ಮೇರೆಗೆ ಪ್ರಧಾನಿ ಮೋದಿ (Narendra Modi) ಇಂದಿನಿಂದ ಮೂರು ದಿನಗಳ ಕಾಲ ಅಮೆರಿಕ ಪ್ರವಾಸ ಕೈಗೊಂಡಿದ್ದು, ಟ್ರಂಪ್ ಅವರೊಂದಿಗೆ ವ್ಯಾಪಾರ ಮತ್ತು ರಕ್ಷಣೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ಈಗಾಗಲೇ ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಫೆ.12 ರಂದು ಅಂದರೆ ಇಂದು ಸಂಜೆ ತಲುಪಲಿದ್ದು, ರಾಜತಾಂತ್ರಿಕ ಪ್ರವಾಸ ಇದಾಗಿದೆ ಎನ್ನಲಾಗಿದೆ. ಅಮೆರಿಕದ 47ನೇ ಅಧ್ಯಕ್ಷರಾಗಿ ಟ್ರಂಪ್ 2ನೇ ಅವಧಿಗೆ ಅಧಿಕಾರ ಸ್ವೀಕರಿಸಿದ ಬಳಿಕ ಇದು ಅವರ ಮೊದಲ ಭೇಟಿಯಾಗಿದೆ. ಪ್ರವಾಸ ಮುಗಿಸಿ ಫೆ.14ರಂದು ಮೋದಿ ಭಾರತಕ್ಕೆ ಮರಳಲಿದ್ದಾರೆ.
ಫ್ರಾನ್ಸ್‌ನಲ್ಲಿ ತಮ್ಮ ಕಾರ್ಯಕ್ರಮಗಳನ್ನು ಮುಗಿಸಿದ ನಂತರ, ಫೆಬ್ರವರಿ 12 ರಿಂದ 13 ರವರೆಗೆ ಅಧಿಕೃತ ಭೇಟಿಗಾಗಿ ಪ್ರಧಾನಿ ಮೋದಿ ಅಮೆರಿಕ ರಾಜಧಾನಿ ವಾಷಿಂಗ್ಟನ್‌ಗೆ ಪ್ರಯಾಣಿಸಲಿದ್ದಾರೆ. ಅವರು ವ್ಯಾಪಾರ ಮತ್ತು ರಕ್ಷಣೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ವಲಸೆ ಮತ್ತು ಸುಂಕಗಳ ಮೇಲಿನ ಯುಸ್ ಆಡಳಿತದ ನೀತಿಗಳ ಬಗ್ಗೆ ನಡೆಯುತ್ತಿರುವ ಕಳವಳಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ.
ಇನ್ನು ವೈಟ್ಹೌಸ್ನಿಂದ ಬಿಡುಗಡೆಗೊಂಡಿರುವ ಹೇಳಿಕೆಯ ಪ್ರಕಾರ ಟ್ರಂಪ್ ಮೋದಿಯವರೊಂದಿಗೆ ಈಗಾಗಲೇ ಉಭಯ ದೇಶಗಳ ನಡುವಿನ ಸಹಕಾರ ಹಾಗೂ ಬಾಂಧ್ಯವನ್ನು ಮತ್ತಷ್ಟು ವಿಸ್ತಾರ ಮಾಡುವ ನಿಟ್ಟಿನಲ್ಲಿ ಮಾತನಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವೈಟ್ಹೌಸ್ಗೆ ಭೇಟಿ ನೀಡಿದಾಗ ಪ್ರಾದೇಶಿಕ ಸಮಸ್ಯೆಗಳು ಸೇರಿದಂತೆ ಇಂಡೊ ಫೆಸಿಫಿಕ್ ನಡುವಿನ ರಕ್ಷಣಾ ವ್ಯವಸ್ಥೆ, ಮಧ್ಯಪ್ರಾಚ್ಯ ಹಾಗೂ ಯುರೋಪನಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಿದೆ.
ಈ ಸುದ್ದಿಯನ್ನು ಓದಿ: Modi in Paris: ಮರ್ಸೆಲ್ಲೆ ಯುದ್ಧ ಸ್ಮಾರಕಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ; ವೀರ್ ಸಾವರ್ಕರ್‌ಗೆ ಸ್ಮರಣೆ
ಇಬ್ಬರು ನಾಯಕರು ಅಮೆರಿಕ ಹಾಗೂ ಭಾರತದ ನಡುವಿನ ಬಾಂಧವ್ಯ ಹಾಗೂ ಶಕ್ತಿಯನ್ನು ಮತ್ತಷ್ಟು ವೃದ್ಧಿಸುವ ನಿಟ್ಟಿನಲ್ಲಿ ಈ ಭೇಟಿ ನಡೆಯಲಿದೆ. ಟ್ರಂಪ್ ಕೂಡ ಉಭಯ ದೇಶಗಳ ನಡುವಿನ ಬಾಂಧವ್ಯ ಸ್ನೇಹ ಹಾಗೂ ಗಟ್ಟಿಯಾದ ಒಪ್ಪಂದಗಳು ನಡೆಸುವ ನಿಟ್ಟಿನಲ್ಲಿ, ಇಂಡೋ ಫೆಸಿಫಿಕ್ ಕ್ವಾಡ್ ಪಾಲುದಾರಿಕೆಯಲ್ಲಿ ಸ್ನೇಹವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಬದ್ಧರಾಗಿದ್ದಾರೆ ಎಂದು ವೈಟ್ಹೌಸ್ ಮೂಲಗಳು ಹೇಳಿವೆ.
ಇನ್ನು ಪ್ರಧಾನಿ ಹಾಗೂ ಟ್ರಂಪ್ ಮಾತುಕತೆಯ ನೇರ ಪ್ರಸಾರವನ್ನು ಪಿಎಂ ಅವರ ಅಧಿಕೃತ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಯುಟೂಬ್ ಹಾಗೂ ಎಕ್ಸ್ ಅಲ್ಲಿ ವೀಕ್ಷಿಸಬಹುದಾಗಿದ್ದು, ಇದರ ಹೊರತಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹಾಗೂ ಶ್ವೇತ ಭವನದ ಸಾಮಾಜಿಕ ಜಾಲತಾಣ ಪೇಜ್‌ಗಳಲ್ಲಿ ನೇರಪ್ರಸಾರವಾಗಲಿದೆ.