ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪುಟ್ಟಪರ್ತಿ ಸಾಯಿಬಾಬಾ ಭಕ್ತರಾಗಿದ್ದ ವೆನೆಜುವೆಲಾ ಅಧ್ಯಕ್ಷ; ಭಾರತದೊಂದಿಗೆ ಮಡುರೊಗಿರುವ ನಂಟೇನು?

ಅಮೆರಿಕದ ವಶದಲ್ಲಿರುವ ವೆನೆಜುವೆಲಾದ ಅಧ್ಯಕ್ಷ ನಿಕೋಲಾಸ್ ಮಡುರೊ ಅವರ ಕುರಿತು ಸಾಕಷ್ಟು ಆಸಕ್ತಿದಾಯಕ ಅಂಶಗಳು ಈಗ ತೆರೆದುಕೊಳ್ಳುತ್ತಿವೆ. ಮಡುರೊರ ಪುಟ್ಟಪರ್ತಿಯ ದಿವಂಗತ ಭಾರತೀಯ ದೇವಮಾನವ ಶ್ರೀ ಸತ್ಯಬಾಬಾ ಅವರ ಭಕ್ತರಾಗಿದ್ದಾರೆ ಎಂಬುದು ತಿಳಿದು ಬಂದಿದೆ.

ಪುಟ್ಟಪರ್ತಿ ಸಾಯಿಬಾಬಾ ಭಕ್ತರಾಗಿದ್ದ ವೆನೆಜುವೆಲಾ ಅಧ್ಯಕ್ಷ

ಸಾಯಿ ಬಾಬಾ ಜೊತೆ ಮಡುರೊ -

Vishakha Bhat
Vishakha Bhat Jan 5, 2026 10:11 AM

ವಾಷಿಂಗ್ಟನ್‌: ಅಮೆರಿಕದ ವಶದಲ್ಲಿರುವ ವೆನೆಜುವೆಲಾದ ಅಧ್ಯಕ್ಷ ನಿಕೋಲಾಸ್ ಮಡುರೊ ಅವರ (Nicolas Maduro) ಕುರಿತು ಸಾಕಷ್ಟು ಆಸಕ್ತಿದಾಯಕ ಅಂಶಗಳು ಈಗ ತೆರೆದುಕೊಳ್ಳುತ್ತಿವೆ. ಮಡುರೊರ ಪುಟ್ಟಪರ್ತಿಯ ದಿವಂಗತ ಭಾರತೀಯ ದೇವಮಾನವ ಶ್ರೀ ಸತ್ಯಬಾಬಾ (Sai Baba) ಅವರ ಭಕ್ತರಾಗಿದ್ದಾರೆ ಎಂಬುದು ತಿಳಿದು ಬಂದಿದೆ. ಕ್ಯಾಥೊಲಿಕ್‌ ಆಗಿ ಬೆಳೆದ ನಿಕೋಲಾಸ್ ಮಡುರೊರ ವಕೀಲೆ ಮತ್ತು ಶಾಸಕಿಯಾಗಿದ್ದ ಪತ್ನಿ ಸಿಲಿಯಾ ಫ್ಲೋರ್ಸ್ ಮೂಲಕ ಸಾಯಿಬಾಬಾ ಅವರ ಕಟ್ಟಾ ಅನುಯಾಯಿಯಾದರು.

2005 ರಲ್ಲಿ ವೆನೆಜುವೆಲಾದ ವಿದೇಶಾಂಗ ಸಚಿವರಾಗಿದ್ದಾಗ, ಮಡುರೊ ಮತ್ತು ಅವರ ಪತ್ನಿ ಭಾರತಕ್ಕೆ ಆಗಮಿಸಿದ್ದರು. ಪುಟ್ಟಪರ್ತಿಯಲ್ಲಿರುವ ಪ್ರಶಾಂತಿ ನಿಲಯಕ್ಕೆ ಭೇಟಿ ನೀಡಿದ್ದರು. ಅವರಿಗೆ ಸಾಯಿಬಾಬಾ ಅವರೊಂದಿಗೆ ವೈಯಕ್ತಿಕ ಸಂದರ್ಶನ ಸಿಕ್ಕಿತು ಮತ್ತು ಅವರು ಬಾಬಾ ಅವರ ಪಾದಗಳ ಬಳಿ ಕುಳಿತುಕೊಂಡಿರುವ ಫೋಟೋಗಳು ಕಾಣಿಸಿಕೊಂಡಿದ್ದವು. ಮಡುರೊ ಅವರ ಅಧ್ಯಕ್ಷೀಯ ಕಚೇರಿಯಲ್ಲಿ ಸಾಯಿಬಾಬಾ ಅವರ ಭಾವಚಿತ್ರವು ರಾಷ್ಟ್ರೀಯ ನಾಯಕರ ಚಿತ್ರಗಳೊಂದಿಗೆ ಇತ್ತು ಎಂದು ವರದಿಯಾಗಿದ್ದವು.

ಏಪ್ರಿಲ್ 2011 ರಲ್ಲಿ ಸಾಯಿಬಾಬಾ ನಿಧನರಾದಾಗ, ಚಾವೆಜ್ ಸರ್ಕಾರದಲ್ಲಿ ಆಗಿನ ವಿದೇಶಾಂಗ ಸಚಿವರಾಗಿದ್ದ ಮಡುರೊ, ವೆನೆಜುವೆಲಾದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅಧಿಕೃತ ಸಂತಾಪ ಸೂಚಿಸಲಾಗಿತ್ತು. ಗುರುವಿನ "ಮಾನವೀಯತೆಗೆ ಅವರ ಆಧ್ಯಾತ್ಮಿಕ ಕೊಡುಗೆ"ಯನ್ನು ಗೌರವಿಸಲು ವೆನೆಜುವೆಲಾ ರಾಷ್ಟ್ರೀಯ ಶೋಕಾಚರಣೆಯ ದಿನವನ್ನು ಘೋಷಿಸಿತು. ನವೆಂಬರ್ 23, 2025 ರಂದು, ಅವರು ಸಾಯಿಬಾಬಾ ಅವರ ಜನ್ಮ 100 ನೇ ವಾರ್ಷಿಕೋತ್ಸವವನ್ನು ಆಚರಿಸುವ ಅಧಿಕೃತ ಹೇಳಿಕೆಯನ್ನು ಅಧ್ಯಕ್ಷ ಬಿಡುಗಡೆ ಮಾಡಿದ್ದರು.

ನಿಕೋಲಾಸ್ ಮಡುರೊ ಬಂಧನ

ಡ್ರಗ್ಸ್​ ಮಾಫಿಯಾಕ್ಕೆ ಉತ್ತೇಜನ ನೀಡಿದ ಆರೋಪ ಮತ್ತು ನಿರಂಕುಶ ಆಡಳಿತದ ಪ್ರತಿಪಾದಕ ವೆನಿಜುವೆಲಾ ದೇಶದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕ ಶನಿವಾರ ಬಂಧಿಸಿದೆ. ಈ ಬಗ್ಗೆ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದು, "ಮಡುರೊ ಬಂಧನಕ್ಕೂ ಮೊದಲು ಹಲವು ಬಾರಿ ಎಚ್ಚರಿಕೆ ನೀಡಲಾಗಿತ್ತು. ಆತ ಡ್ರಗ್ಸ್​ ಮಾಫಿಯಾವನ್ನು ಬೆಳೆಸುತ್ತಿದ್ದ. ಇದು ಅಮೆರಿಕಕ್ಕೆ ಕಂಟಕವಾಗಿತ್ತು. ಕ್ಯಾರಕಸ್‌ನಲ್ಲಿನ ಅಧ್ಯಕ್ಷರ ನಿವಾಸದಲ್ಲಿ ಮಡುರೊ ಬಿಗಿಭದ್ರತೆಯಲ್ಲಿ ಅಡಗಿ ಕುಳಿತಿದ್ದ. ಆತ ಅಲ್ಲಿನ ಸುರಕ್ಷಿತ ಕೋಣೆಯನ್ನು ತಲುಪುವ ಮೊದಲು ನಮ್ಮ ಸೇನೆ ನುಗ್ಗಿ ಬಂಧಿಸಿದೆ" ಎಂದು ತಿಳಿಸಿದ್ದಾರೆ.

ಆಪರೇಷನ್​ ಆಬ್​ಸುಲ್ಯೂಟ್​ ರಿಸಾಲ್ವ್​ (Absolute Resolve) ಹೆಸರಿನಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಎಫ್-18, ಎಫ್-22 ಮತ್ತು ಎಫ್-35 ಫೈಟರ್ ಜೆಟ್‌ಗಳು, ಬಿ-1 ಬಾಂಬರ್‌ಗಳು ಮತ್ತು ಡ್ರೋನ್‌ಗಳು ಸೇರಿದಂತೆ 150ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಬಳಸಲಾಗಿದೆ.