ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʼʼಒಂದಲ್ಲ, ಸಾವಿರ ಅಲ್ಲ, ಅದಕ್ಕೂ ಹೆಚ್ಚುʼʼ: ತನ್ನ ಬಳಿ ಇರುವ ಆತ್ಮಹತ್ಯಾ ಬಾಂಬರ್‌ಗಳ ಲೆಕ್ಕ ಹೇಳಿದ ಎಂದ ಉಗ್ರ ಮಸೂದ್ ಅಜರ್

JEM terrorist Masood Azhar: ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಮಸೂದ್ ಅಜರ್ ಆತ್ಮಹತ್ಯೆ ಬಾಂಬರ್‌ಗಳ ಸಂಖ್ಯೆಯು ಸಾವಿರಕ್ಕೂ ಹೆಚ್ಚಿದೆ ಎಂದು ಹೇಳಿ ಗಂಭೀರ ಬೆದರಿಕೆ ಒಡ್ಡಿದ್ದಾನೆ. ವೈರಲ್‌ ಆಗಿರುವ ಆಡಿಯೋ ರೆಕಾರ್ಡಿಂಗ್‌ನಲ್ಲಿ ಸಾವಿರಕ್ಕೂ ಹೆಚ್ಚು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧರಾಗಿದ್ದಾರೆ ಮತ್ತು ಅವರು ಭಾರತಕ್ಕೆ ನುಸುಳಲು ಅವಕಾಶ ನೀಡುವಂತೆ ಅಜರ್ ಒತ್ತಾಯಿಸುತ್ತಿರುವುದು ಕೇಳಿಸುತ್ತದೆ.

ಆತ್ಮಹತ್ಯಾ ಬಾಂಬರ್‌ಗಳು ಸಹಸ್ರದಷ್ಟಿದ್ದಾರೆ ಎಂದ ಮಸೂದ್ ಅಜರ್

ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ (ಸಂಗ್ರಹ ಚಿತ್ರ) -

Priyanka P
Priyanka P Jan 11, 2026 9:38 PM

ಇಸ್ಲಾಮಾಬಾದ್, ಜ. 11: ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (JEM) ಮುಖ್ಯಸ್ಥ ಮಸೂದ್ ಅಜರ್ (Masood Azhar) ಯಾವುದೇ ಕ್ಷಣದಲ್ಲಿ ದಾಳಿ ಮಾಡಲು ಹೆಚ್ಚಿನ ಸಂಖ್ಯೆಯ ಆತ್ಮಹತ್ಯಾ ದಾಳಿಕೋರರು ಸಿದ್ಧರಾಗಿದ್ದಾರೆ ಎಂದು ಹೇಳುತ್ತಿರುವ ಆಡಿಯೋ ರೆಕಾರ್ಡಿಂಗ್ ಬಹಿರಂಗವಾಗಿದೆ. ಮಸೂದ್ ಅಜರ್ ವಿಶ್ವಸಂಸ್ಥೆಯಿಂದ ಭಯೋತ್ಪಾದಕನಾಗಿ ಘೋಷಿಸಲ್ಪಟ್ಟ ವ್ಯಕ್ತಿಯಾಗಿದ್ದು, ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತ ಭಾರತದ ವಿರುದ್ಧ ದಾಳಿಗಳನ್ನು ರೂಪಿಸುತ್ತಿದ್ದಾನೆ.

ಆಡಿಯೋ ರೆಕಾರ್ಡಿಂಗ್‌ನಲ್ಲಿ, ಸಾವಿರಕ್ಕೂ ಹೆಚ್ಚು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧರಾಗಿದ್ದಾರೆ ಮತ್ತು ಅವರು ಭಾರತಕ್ಕೆ ನುಸುಳಲು ಅವಕಾಶ ನೀಡುವಂತೆ ಅಜರ್ ಒತ್ತಾಯಿಸುತ್ತಿರುವುದು ಕೇಳಿಸುತ್ತದೆ. ತನ್ನ ಗುಂಪಿನ ಹೋರಾಟಗಾರರ ಸಂಖ್ಯೆಯನ್ನು ಬಹಿರಂಗಪಡಿಸಿದರೆ ಜಗತ್ತೇ ಬೆಚ್ಚಿಬೀಳುತ್ತದೆ ಎಂದು ಅವನು ಹೇಳಿದ್ದಾನೆ.

ಈ ಆತ್ಮಹತ್ಯೆ ಬಾಂಬ್ ದಾಳಿ ನಡೆಸುವವರ ಸಂಖ್ಯೆ ಒಬ್ಬರಲ್ಲ, ಇಬ್ಬರಲ್ಲ, ನೂರು ಕೂಡ ಅಲ್ಲ, ಸಹಸ್ರಕ್ಕೂ ಕಡಿಮೆ ಇಲ್ಲ. ನಾನು ನಿಮಗೆ ಸಂಪೂರ್ಣ ಸಂಖ್ಯೆಯನ್ನು ತಿಳಿಸಿದರೆ, ನಾಳೆ ಜಾಗತಿಕ ಮಾಧ್ಯಮದಲ್ಲಿ ಭಾರಿ ಅಲೆಯುಂಟಾಗುತ್ತದೆ ಎಂದು ಹೇಳಿದ್ದಾನೆ. ಈ ವ್ಯಕ್ತಿಗಳು ದಾಳಿಗಳನ್ನು ನಡೆಸಲು ಮತ್ತು ಹುತಾತ್ಮರಾಗಲು ಹೆಚ್ಚು ಪ್ರೇರೇಪಿತರಾಗಿದ್ದಾರೆ ಎಂದಿದ್ದಾನೆ. ಆದರೆ ಆಡಿಯೋ ರೆಕಾರ್ಡಿಂಗ್‌ನ ದಿನಾಂಕ ಮತ್ತು ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ. ಇದು ನಿಜವೇ, ಸುಳ್ಳೇ ಎಂಬುದು ತಿಳಿದುಬಂದಿಲ್ಲ.

ಗಣರಾಜ್ಯೋತ್ಸವ ದಿನಕ್ಕೂ ಮುನ್ನ ಉಗ್ರರ ಕರಿನೆರಳು; ಕಡಿಮೆ ಬೆಲೆಯ ಸ್ಫೋಟಕ, ಡ್ರೋನ್ ತಯಾರಿಸಿದ ಭಯೋತ್ಪಾದಕರು

ಅಜರ್ ಹಲವು ವರ್ಷಗಳಿಂದ ಭಾರತದ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾನೆ. ಈತ 2001ರ ಸಂಸತ್ತಿನ ದಾಳಿ ಮತ್ತು 2008ರ ಮುಂಬೈ ದಾಳಿ ಸೇರಿದಂತೆ ಹಲವು ಪ್ರಮುಖ ದಾಳಿಗಳ ಮಾಸ್ಟರ್ ಮೈಂಡ್ ಎನ್ನಲಾಗಿದೆ.

ಭಾರತೀಯ ಪಡೆಗಳು ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ಗುಂಪಿನ ಪ್ರಧಾನ ಕಚೇರಿ ಸೇರಿದಂತೆ ಪಾಕಿಸ್ತಾನದೊಳಗಿನ ಉಗ್ರದ ತಾಣಗಳನ್ನು ಗುರಿಯಾಗಿಸಿ ನಡೆಸಿದ ದಾಳಿಯ ಹಲವು ತಿಂಗಳ ನಂತರ ಈ ಸಂದೇಶ ಬಂದಿದೆ. ಆ ದಾಳಿಯಲ್ಲಿ ಅಜರ್‌ನ ಹಲವು ನಿಕಟ ಸಂಬಂಧಿಗಳನ್ನು ಕೊಲ್ಲಲಾಗಿದೆ. ಇದು ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ 26 ಜನರನ್ನು ಬಲಿ ತೆಗೆದುಕೊಂಡ ದಾಳಿಗೆ ಭಾರತದ ಪ್ರತಿಕಾರವಾಗಿತ್ತು.

ಪಾಕಿಸ್ತಾನದಲ್ಲಿ ಬೃಹತ್‌ ಸೇನಾ ಕಾರ್ಯಾಚರಣೆ; 11 ಸೈನಿಕರು, 19 ಭಯೋತ್ಪಾದಕರು ಬಲಿ

ನಂತರ ದೆಹಲಿಯಲ್ಲಿ ನಡೆದ ಸ್ಫೋಟದಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿ, ಸುಮಾರು 20 ಜನರು ಗಾಯಗೊಂಡಿದ್ದರು. ಈ ದಾಳಿ ನಡೆಸಿದ್ದ ಉಮರ್ ಮೊಹಮ್ಮದ್, ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದವನೆಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.

2019ರಿಂದ ಮಸೂದ್ ಅಜರ್ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಆ ವರ್ಷ ಬಹಾವಲ್ಪುರದಲ್ಲಿರುವ ಅವನ ಅಡಗುತಾಣವು ಅಪರಿಚಿತ ದಾಳಿಕೋರರಿಂದ ಪ್ರಬಲವಾದ ಸ್ಫೋಟಕ್ಕೆ ಒಳಗಾಯಿತು. ಅದರಲ್ಲಿ ಅವನು ಬದುಕುಳಿದನು. ಅಂದಿನಿಂದ, ಅವನು ಹೆಚ್ಚಾಗಿ ಸಾರ್ವಜನಿಕವಾಗಿ ದೂರವಿದ್ದಾನೆ.