ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆಪರೇಷನ್ ಸಿಂದೂರ್ ಭಾರತದ ದೊಡ್ಡ ಯಶಸ್ಸು ಎಂದ ಇಮ್ರಾನ್ ಖಾನ್ ಸಹೋದರಿಗೆ ಸಮನ್ಸ್ ಜಾರಿ

ಆಪರೇಷನ್ ಸಿಂದೂರ್ ಭಾರತದ ಬಹುದೊಡ್ಡ ಯಶಸ್ಸು. ಇದರಲ್ಲಿ ಪಾಕಿಸ್ತಾನ ಸೇನೆ ತನ್ನ ವೈಫಲ್ಯವನ್ನು ಮರೆ ಮಾಡಲು ಪ್ರಯತ್ನಿಸಿದೆ ಎಂದು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸಹೋದರಿ ನೊರೀನ್ ನಿಯಾಜಿ ಹೇಳಿದ್ದಾರೆ. ಅವರ ಈ ಹೇಳಿಕೆಯ ಬಳಿಕ ಪಾಕಿಸ್ತಾನದ ರಾಷ್ಟ್ರೀಯ ಸೈಬರ್ ಅಪರಾಧ ತನಿಖಾ ಸಂಸ್ಥೆ ಅವರಿಗೆ ಸಮನ್ಸ್ ಜಾರಿಗೊಳಿಸಿದೆ.

ಸಂಗ್ರಹ ಚಿತ್ರ

ನವದೆಹಲಿ: ಆಪರೇಷನ್ ಸಿಂದೂರ್ (Operation Sindoor) ಭಾರತದ ಬಹುದೊಡ್ಡ ಯಶಸ್ಸು. ಇದರಲ್ಲಿ ಪಾಕಿಸ್ತಾನ ಸೇನೆ ಸಂಪೂರ್ಣ ವೈಫಲ್ಯವಾಗಿದೆ. ಯುದ್ಧ ಭೂಮಿಯಲ್ಲಿನ ವೈಫಲ್ಯಗಳನ್ನು ಮರೆ ಮಾಡಲು ಪಾಕಿಸ್ತಾನ ಪ್ರಯತ್ನಿಸಿತ್ತು. ಅಲ್ಲದೇ ಪಾಕಿಸ್ತಾನಿ ಸೇನೆಯು (Pakistan army) ಭಾರತದ ಆಪರೇಷನ್ ಸಿಂದೂರ್ ನಲ್ಲಿ ವಿಜಯಿಯಾಗಿರುವುದಾಗಿ ನಿರೂಪಿಸಲು ಪ್ರಯತ್ನಿಸುತ್ತಲೇ ಇದೆ ಎಂದು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸಹೋದರಿ (Imran Khans sister) ನೊರೀನ್ ನಿಯಾಜಿ ( Noreen Niazi) ಹೇಳಿದ್ದಾರೆ. ಇದಕ್ಕಾಗಿ ಅವರಿಗೆ ಪಾಕಿಸ್ತಾನದ ರಾಷ್ಟ್ರೀಯ ಸೈಬರ್ ಅಪರಾಧ ತನಿಖಾ ಸಂಸ್ಥೆ (Pakistan's National Cyber Crime Investigation Agency) ಸಮನ್ಸ್ ಜಾರಿಗೊಳಿಸಿದೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದಿರುವ ನಾಲ್ಕು ದಿನಗಳ ಸಂಘರ್ಷಗಳ ಕುರಿತು ಪಾಕಿಸ್ತಾನದ ಜನರಲ್‌ಗಳು ಮತ್ತು ನಾಯಕರು ಸಾರ್ವಜನಿಕರಿಗೆ ಹೇಳಿರುವ ಮಾಹಿತಿಯೇ ಬೇರೆಯಾಗಿದೆ. ಅವರು ಹೇಳಿದಂತೆ ಯುದ್ಧ ಭೂಮಿಯಲ್ಲಿ ನಡೆದಿಲ್ಲ. ಭಾರತದ ಆಪರೇಷನ್ ಸಿಂದೂರ್ ಭಾರಿ ಯಶಸ್ಸು ಮತ್ತು ಪಾಕಿಸ್ತಾನ ಸೇನೆಯು ತನ್ನ ಸೋಲನ್ನು ಮರೆಮಾಡಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ.

ಸಂಸತ್ ಮುತ್ತಿಗೆಗೆ ಸಿಜೆಪಿ ಯತ್ನ: ಲಾಠಿಚಾರ್ಜ್, ಆಶ್ರುವಾಯು ಪ್ರಯೋಗ; ಇಂದು ದೆಹಲಿಯಲ್ಲಿ ಏನೆಲ್ಲಾಯ್ತು?

ನೊರೀನ್ ನಿಯಾಜಿ ಅವರು ಸಂದರ್ಶನದಲ್ಲಿ ನೀಡಿದ ಹೇಳಿಕೆಯು ದೇಶ ವಿರೋಧಿಯಾಗಿದೆ ಎಂದು ಆರೋಪಿಸಿ ಕೆಲವೇ ಗಂಟೆಗಳಲ್ಲಿ ಅವರಿಗೆ ಸಮನ್ಸ್ ಜಾರಿಗೊಳಿಸಲಾಗಿದೆ. ಮಿಲಿಟರಿ ಮತ್ತು ದೇಶದ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಸುಳ್ಳು, ಆಕ್ರಮಣಕಾರಿ ಮತ್ತು ಪ್ರಚೋದನಕಾರಿ ಸಾಮಾಜಿಕ ಮಾಧ್ಯಮ ವಿಷಯವನ್ನು ಪ್ರಸಾರ ಮಾಡಿದ್ದಕ್ಕಾಗಿ ದೇಶದ ರಾಷ್ಟ್ರೀಯ ಸೈಬರ್ ಅಪರಾಧ ತನಿಖಾ ಸಂಸ್ಥೆ ಅವರಿಗೆ ಸಮನ್ಸ್ ನೀಡಿದೆ.



ನೊರೀನ್ ನಿಯಾಜಿ ಅವರು ತಮ್ಮ ಹೇಳಿಕೆಗೆ ಸಂಬಂಧಿಸಿ ಎರಡು ಸ್ಫೋಟಕ ಕುರಿತು ಹೇಳಿಕೆ ನೀಡಿದ್ದರು. ಭಾರತದ ದಾಳಿಗೆ ತೀವ್ರವಾಗಿ ಹೆದರಿದ್ದ ಪಾಕಿಸ್ತಾನ ಆರ್ಮಿ ಚೀಫ್ ಜನರಲ್ ಅಸಿಮ್ ಮುನೀರ್ ಅವರು ತಕ್ಷಣವೇ ಅಮೆರಿಕದ ಮೊರೆ ಹೋದರು. ಹೀಗಾಗಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೈಯಕ್ತಿಕವಾಗಿ ಮಧ್ಯಪ್ರವೇಶಿಸಿದರು. ಆದರೆ ಅಮೆರಿಕದ ರಕ್ಷಣೆ ಸುಮ್ಮನೆ ಸಿಗಲಿಲ್ಲ; ಅದಕ್ಕೆ ಪಾಕಿಸ್ತಾನ ಭಾರಿ ಬೆಲೆ ತೆರಬೇಕಾಗಿ ಬಂದಿದೆ ಎಂದು ಹೇಳಿದರು.

ಅಮೆರಿಕದ ರಾಜತಾಂತ್ರಿಕ ರಕ್ಷಣೆಗೆ ಪ್ರತಿಯಾಗಿ ಪಾಕಿಸ್ತಾನವು ಅಬ್ರಹಾಂ ಒಪ್ಪಂದಕ್ಕೆ ಔಪಚಾರಿಕವಾಗಿ ಸೇರ್ಪಡೆಯಾಗಲು ಮತ್ತು ಇಸ್ರೇಲ್ ದೇಶವನ್ನು ಅಧಿಕೃತವಾಗಿ ಗುರುತಿಸಲು ಪಾಕಿಸ್ತಾನ ಒಪ್ಪಿಕೊಂಡಿದೆ. ಅಬ್ರಹಾಂ ಒಪ್ಪಂದಗಳು 2020 ರಲ್ಲಿ ಯುಎಸ್ ಮಧ್ಯಸ್ಥಿಕೆ ವಹಿಸಿದ ಒಪ್ಪಂದಗಳ ಸರಣಿಯಾಗಿದ್ದು ಇದು ಇಸ್ರೇಲ್ , ಯುಎಇ, ಬಹ್ರೇನ್, ಸುಡಾನ್ ಮತ್ತು ಮೊರಾಕೊ ಸೇರಿದಂತೆ ಹಲವಾರು ಅರಬ್ ರಾಷ್ಟ್ರಗಳ ನಡುವೆ ರಾಜತಾಂತ್ರಿಕ, ಆರ್ಥಿಕ ಮತ್ತು ಭದ್ರತಾ ಸಂಬಂಧಗಳನ್ನು ಸ್ಥಾಪಿಸಿತ್ತು ಎಂದು ಅವರು ಹೇಳಿದರು.

ಉಪವಾಸ ಮುಂದುವರಿಸಿದ ಸೋನಮ್ ವಾಂಗ್ಚುಕ್: ಸರ್ಕಾರದ ಸಂಧಾನಕ್ಕೂ ಮಣಿಯದೆ ಹೋರಾಟ

ನಿಯಾಜಿ ಅವರ ಈ ಹೇಳಿಕೆಗಳು ಆಡಳಿತಾರೂಢ ಪಿಎಂಎಲ್-ಎನ್ ಸರ್ಕಾರದ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author