Pakistan-Taliban: ಪಾಕ್-ಅಫ್ಘನ್ ಗಡಿ ಬಿಕ್ಕಟ್ಟು; ಇಂದು ಉಭಯ ದೇಶಗಳ ನಡುವೆ ನಿರ್ಣಾಯಕ ಮಾತುಕತೆ
Pakistan-Taliban Talks Begin: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಗಡಿ ಸಂಘರ್ಷ ತೀವ್ರಗೊಂಡಿತ್ತು. ಪಾಕಿಸ್ತಾನದ ವಾಯುದಾಳಿಗೆ ಪ್ರತಿಯಾಗಿ ಅಫ್ಘನ್ ಪಡೆಗಳು ಪ್ರತಿದಾಳಿ ನಡೆಸಿದ್ದವು. ಈ ಸಂಘರ್ಷದಲ್ಲಿ ಉಭಯ ದೇಶಗಳ ಹಲವು ಸೈನಿಕರು ಹತರಾಗಿದಲ್ಲದೇ, ಸಾಕಷ್ಟು ಸಾವು-ನೋವುಗಳು ಸಂಭವಿಸಿದ್ದವು. ಇದೀಗ ಪರಿಸ್ಥತಿ ತಿಳಿಗೊಳಿಸುವ ಉದ್ದೇಶದಿಂದ ಉಭಯ ದೇಶಗಳ ನಡುವೆ ಕತಾರ್(Qatar)ನ ದೋಹಾ(Doha)ದಲ್ಲಿ ಶುಕ್ರವಾರ ಮಹತ್ವದ ಮಾತುಕತೆ ನಡೆದಿದೆ.

-

ಇಸ್ಲಮಾಬಾದ್: ಪಾಕಿಸ್ತಾನ(Pakistan) ಮತ್ತು ಅಘ್ಘಾನಿಸ್ತಾನ(Afghanistan)ದ ತಾಲಿಬಾನಿಗಳ ನಡುವೆನ ಗಡಿ ಘರ್ಷಣೆ ಉಲ್ಬಣಗೊಂಡಿದ್ದು, ಪರಿಸ್ಥತಿ ತಿಳಿಗೊಳಿಸುವ ಉದ್ದೇಶದಿಂದ ಉಭಯ ದೇಶಗಳ ನಡುವೆ ಕತಾರ್(Qatar)ನ ದೋಹಾ(Doha)ದಲ್ಲಿ ಶುಕ್ರವಾರ ಮಹತ್ವದ ಮಾತುಕತೆ ಆರಂಭವಾಗಲಿದೆ ಎಂದು ಮೂಲಗಳು ದೃಢಪಡಿಸಿವೆ. ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯಲ್ಲಿ ಈ ಮಾತುಕತೆ ನಡೆಯಲಿದೆ ಎಂದು ಹೇಳಲಾಗಿದೆ. ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಐಎಸ್ಐ ನಿರ್ದೇಶಕ ಜನರಲ್ ಅಸೀಮ್ ಮಾಲಿಕ್(Asim Malik) ಹಾಗೂ ಅಫ್ಗಾನ್ ತಾಲಿಬಾನ್ ರಕ್ಷಣಾ ಸಚಿವ ಮುಲ್ಲಾ ಯಾಕೂಬ್(Mullah Yaqoob) ದೋಹಾದಲ್ಲಿ ಇಂದು ಭೇಟಿಯಾಗುವ ಸಾಧ್ಯತೆ ಇದೆ ಎಂದು ಉನ್ನತ ರಾಜತಾಂತ್ರಿಕ ಮೂಲಗಳು ತಿಳಿಸಿವೆ. ಅಲ್ಲದೇ, ಎರಡೂ ದೇಶಗಳ ಪ್ರಮುಖ ಸಚಿವರು ಹಾಗೂ ಭದ್ರತಾ ಅಧಿಕಾರಿಗಳೂ ಈ ಮಹತ್ವದ ಮಾತುಕತೆಯಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: Viral News: ಅಕ್ರಮ ಗಣಿಗಾರಿಕೆ ವಿರೋಧಿಸಿದ್ದಕ್ಕೆ ದಲಿತ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ; ಗ್ರಾಮದ ಸರಪಂಚ್ ವಿರುದ್ಧ ದೂರು
ರಾಜತಾಂತ್ರಿಕ ಪರಿಹಾರ ಹಾಗೂ ತಾಲಿಬಾನ್‌ನ ಸಾರ್ವಭೌಮತ್ವವನ್ನು ಔಪಚಾರಿಕವಾಗಿ ಗುರುತಿಸುವಂತೆ ಒತ್ತಡ ಹೇರಲು ಅಫ್ಗಾನಿಸ್ತಾನದ ಒಂದು ನಿಯೋಗವು ಕತಾರ್ ರಾಜಧಾನಿಗೆ ತೆರಳಲಿದೆ. ತಾಲಿಬಾನ್ ಈ ಬಿಕ್ಕಟ್ಟನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಬಗೆಹರಿಸುವ ಉದ್ದೇಶ ಹೊಂದಿದೆ ಎಂದು ತಿಳಿದುಬಂದಿದೆ. ತಾಲಿಬಾನ್ ಅನ್ನು ಸಮಾನವಾಗಿ ಬಿಂಬಿಸಲು ಹಾಗೂ ತನ್ನ ವ್ಯವಹಾರಗಳಲ್ಲಿ ಪಾಕ್‌ನಿಂದ ಏನಾದರೂ ಆದೇಶ ಅಥವಾ ಹಸ್ತಕ್ಷೇಪ ಕಂಡುಬಂದರೆ ಅದನ್ನು ತಿರಸ್ಕರಿಸಲು ಈ ವೇದಿಕೆಯನ್ನು ಅಫ್ಘಾನಿಸ್ತಾನ ಉಪಯೋಗಿಸಿಕೊಳ್ಳಲಿದೆ ಎಂದು ಹೇಳಲಾಗಿದೆ.
ಇನ್ನು ಇಸ್ಲಾಮಾಬಾದ್‌ನ ದೃಷ್ಟಿಕೋನದಿಂದ ನೋಡಿದರೆ, ಈ ಮಾತುಕತೆ ಪಶ್ಚಿಮ ಗಡಿಭಾಗವನ್ನು ಸ್ಥಿರಗೊಳಿಸಲು ಹಾಗೂ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (Tehreek-e-Taliban Pakistan) ದಾಳಿಗಳಿಂದ ಉಂಟಾಗುತ್ತಿರುವ ಆಂತರಿಕ ಅಶಾಂತಿಯ ನಿಯಂತ್ರಣಕ್ಕಾಗಿ ತೀವ್ರ ಅಗತ್ಯವಾಗಿದೆ. ಪಾಕಿಸ್ಥಾನವೂ ಸಹ ಖೈಬರ್ ಮತ್ತು ವಜಿರಿಸ್ತಾನಗಳಲ್ಲಿ ಹೆಚ್ಚುತ್ತಿರುವ ಟಿಟಿಪಿ ದಾಳಿಗಳು, ಕುಗ್ಗುತ್ತಿರು ತನ್ನ ಯುದ್ಧಶಕ್ತಿಯ ಬಗ್ಗೆ ತನ್ನ ವಾದ ಮಂಡಿಸಲು ಈ ವೇದಿಕೆಯನ್ನು ಬಳಸಿಕೊಳ್ಳಲಿದೆ ಎನ್ನಲಾಗಿದೆ.
ಸಂಭಾವ್ಯ ಕದನ ವಿರಾಮ ವಿಸ್ತರಣೆಯೇ ಈ ಮಾತುಕತೆಯ ಮುಖ್ಯ ಉದ್ದೇಶ ಎನ್ನಲಾಗುತ್ತಿದ್ದು, ಇದು ಪಾಕ್‌ನ ಸದ್ಯದ ಭದ್ರತಾ ದುರ್ಬಲತೆಯನ್ನು ಎತ್ತಿ ತೋರಿಸುತ್ತದೆ. ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಈ ಮಾತುಕತೆಯು ಪಾಕಿಸ್ತಾನ-ತಾಲಿಬಾನ್ ನಡುವಿನ ನೈಜ ಸಂಬಂಧಗಳು ಎಷ್ಟರ ಮಟ್ಟಿಗೆ ಹದಗೆಟ್ಟಿವೆ ಎಂಬುದನ್ನು ತೋರಿಸುತ್ತದೆ. ಪಾಕಿಸ್ತಾನ ಭದ್ರತೆ ಮತ್ತು ಭಯೋತ್ಪಾದನಾ ನಿಗ್ರಹದ ಬಗ್ಗೆ ಕೇಂದ್ರಿಕೃತವಾಗಿದ್ದರೆ, ತಾಲಿಬಾನ್ ಈ ವೇದಿಕೆಯನ್ನು ಜಾಗತಿಕ ಮಟ್ಟದಲ್ಲಿ ತನ್ನ ರಾಜಕೀಯ ಉದ್ದೇಶಗಳ ಈಡೇರಿಕೆಗಾಗಿ ಬಳಸಿಕೊಳ್ಳುವ ಸಾಧತೆ ಇದೆ ಎನ್ನಲಾಗುತ್ತಿದೆ.