ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Physical abuse: ʻಬೆಸ್ಟ್‌ ಟೀಚರ್‌ ಅವಾರ್ಡ್‌ʼ ಪಡೆದಿದ್ದ ಶಿಕ್ಷಕಿ ಇದೀಗ ಜೈಲುಪಾಲು; ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ 30 ವರ್ಷಗಳ ಸಜೆ

American Teacher: ಇಬ್ಬರು ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಅಮೆರಿಕದ ಶಿಕ್ಷಕಿಯೊಬ್ಬರಿಗೆ ಬರೋಬ್ಬರಿ 30 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಕ್ಯಾಲಿಪೋರ್ನಿಯದ ಜಾಕ್ವೆಲಿನ ಮಾ ಎಂಬಾಕೆಯೇ ಶಿಕ್ಷೆಗೆ ಗುರಿಯಾದ ಶಿಕ್ಷಕಿ. ಈಕೆಗೆ ಈ ಹಿಂದೆ ಉತ್ತಮ ಶಿಕ್ಷಕಿ ಎಂಬ ಪ್ರಶಸ್ತಿ ದೊರೆತಿತ್ತು.

ಬೆಸ್ಟ್‌ ಟೀಚರ್‌ ಅವಾರ್ಡ್‌ ಪಡೆದಿದ್ದ ಶಿಕ್ಷಕಿಗೆ  30 ವರ್ಷಗಳ ಜೈಲು

Profile Rakshita Karkera May 12, 2025 11:50 AM

ವಾಷಿಂಗ್ಟನ್‌: ಈ ಹಿಂದೆ ಅತ್ಯುತ್ತಮ ಶಿಕ್ಷಕಿ ಅವಾರ್ಡ್‌ ಪಡೆದಿದ್ದ ಶಿಕ್ಷಕಿಯೊಬ್ಬಳು ಬಾಲಕರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ(Physical abuse) 30ವರ್ಷಗಳ ಜೈಲುಶಿಕ್ಷೆಗೆ ಗುರಿಯಾಗಿರುವ ಘಟನೆ ಅಮೆರಿಕದಲ್ಲಿ ವರದಿಯಾಗಿದೆ. ಕ್ಯಾಲಿಪೋರ್ನಿಯದ ಜಾಕ್ವೆಲಿನ್‌ ಮಾ(36 ವಯಸ್ಸು) ಎಂಬಾಕೆ 30 ವರ್ಷ ಜೈಲು ಶಿಕ್ಷೆಗೆ ಗುರಿಯಾದ ಶಿಕ್ಷಕಿ. ಈ ಹಿಂದೆ ಲಿಂಕನ್ ಏಕರ್ಸ್(Lincoln Acres)ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಮಾ ಸಾನ್ ಡಿಯಾಗೋ(San Diego) ಕೌಂಟಿಯ ಅತ್ಯುತ್ತಮ ಶಿಕ್ಷಕರಲ್ಲೊಬ್ಬರೆಂದು ಈ ಹಿಂದೆ ಗೌರವಕ್ಕೆ ಪಾತ್ರರಾಗಿದ್ದಳು.

ಮಾ 12 ವರ್ಷದ ಬಾಲಕನಿಗೆ 10 ತಿಂಗಳ ಕಾಲ ಪ್ರೇಮ ಪತ್ರಗಳು ಮತ್ತು ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಆ ಹುಡುಗನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದಳು. ಇದನ್ನು ಅರಿತ ಬಾಲಕನ ತಾಯಿ ಅಧಿಕಾರಿಗಳಿಗೆ ದೂರು ನೀಡಿದರು. ಸಾಲದೆನ್ನುವಂತೆ ಮಾ, ತರಗತಿಯಲ್ಲೇ ಮೂರು ತಿಂಗಳ ಕಾಲ ಆ ಬಾಲಕನನ್ನು ಲೈಂಗಿಕವಾಗಿ ಶೋಷಿಸಿದ್ದಳು. ಆ ಸಮಯದಲ್ಲಿ ಬಾಲಕನ ತಾಯಿ-ತಂದೆ ಅವರು ಬಾಲಕನು ಶಾಲೆಯ ನಂತರ ಬಾಸ್ಕೆಟ್‌ಬಾಲ್ ತರಬೇತಿಗೆ ಹೋಗುತ್ತಿದ್ದಾನೆಂದು ಭಾವಿಸಿದ್ದರು.ಅದಲ್ಲದೆ, ಹಲವು ವರ್ಷಗಳ ಹಿಂದೆ ಮಾ ಅವರು 11 ವರ್ಷದ ಮತ್ತೊಬ್ಬ ಬಾಲಕನನ್ನ ಕೂಡ ಉಡುಗೊರೆಗಳು, ಆಹಾರ ಮೂಲಕ ತನ್ನ ಕಡೆ ಆಕರ್ಷಿಸಿದ್ದಳು ಎಂದು ಆರೋಪಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Physical abuse: ಬಾಲಕಿಯನ್ನು ಲಾಡ್ಜ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ; ಸ್ನೇಹಿತರಿಂದಲೇ ಹೀನ ಕೃತ್ಯ!

ತಪ್ಪೊಪ್ಪಿಕೊಂಡ ಜಾಕ್ವೆಲಿನ್‌ ಮಾ

ವಿಚಾರಣೆ ವೇಳೆ ಜಾಕ್ವೆಲಿನ್‌ ಮಾ ತನ್ನ ಕುಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ಮಕ್ಕಳ ಮೇಲೆ ಇಂತಹ ಹೇಯ ಕೃತ್ಯ ಎಸಗುವ ಮೂಲಕ ಅವರ ಬಾಲ್ಯವನ್ನೇ ಕಿತ್ತುಕೊಂಡೆ. ನಾನು ನನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡೆ. ನಾನು ಮಾಡಿದ ತಪ್ಪಿಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿ ಪಶ್ಚಾತಾಪದ ನುಡಿಗಳನ್ನಾಡಿದ್ದಾಳೆ.

ಮಕ್ಕಳ ಮೇಲೆ ಅತ್ಯಂತ ಭೀಕರ ಮತ್ತು ಹಿಂಸಾತ್ಮಕವಾಗಿ ದೌರ್ಜನ್ಯ ಎಸಗಿದ್ದಾಳೆ. ಈಕೆಯ ಈ ಹೀನ ಕೃತ್ಯಕ್ಕೆ ಬಲಿಯಾದವರು ಜೀವನ ಪೂರ್ತಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಈಕೆಗೆ30ವರ್ಷ ಶಿಕ್ಷೆ ಸೂಕ್ತ ಎಂದು ಜಿಲ್ಲಾಅಟಾರ್ನಿ ಸಮರ್ ಸ್ಟೀಫನ್ ಹೇಳಿದ್ದಾರೆ.