ಪೆರು: ಸಣ್ಣ ಪ್ರವಾಸಿ ವಿಮಾನವೊಂದು ಅಪಘಾತಕ್ಕೀಡಾಗಿ (Plane crash) 13 ಮಂದಿ ಸಾವನ್ನಪ್ಪಿರುವ ಘಟನೆ ಪೆರುವಿನ ಪುರಾತತ್ವ ಸ್ಥಳದ ಬಳಿ ಶನಿವಾರ ನಡೆದಿದೆ. ಪೆರುವಿನ ನಾಜ್ಕಾ ಲೈನ್ಸ್ ( Nazca Lines) ಪುರಾತತ್ವ ಸ್ಥಳವನ್ನು (Archaeological Site) ವೀಕ್ಷಿಸಲು ಬಂದಿದ್ದ 11 ವಿದೇಶಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಏರೋಡಯಾನದ (Aerodiana) ಪ್ರವಾಸಿ ವಿಮಾನವು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಅಪಘಾತಕ್ಕೀಡಾಗಿದೆ. ಇಬ್ಬರು ಸಿಬ್ಬಂದಿ ಸೇರಿದಂತೆ ಎಲ್ಲಾ ವಿದೇಶಿ ಪ್ರವಾಸಿಗರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೆರುವಿನ ವ್ಯಾಪಾರ ಮತ್ತು ಪ್ರವಾಸೋದ್ಯಮ ಸಚಿವಾಲಯ ತಿಳಿಸಿದೆ.
ಪೆರುವಿನ ರಾಜಧಾನಿ ಲಿಮಾದಿಂದ ದಕ್ಷಿಣಕ್ಕೆ ಸುಮಾರು 240 ಕಿಲೋಮೀಟರ್ ದೂರದಲ್ಲಿರುವ ಪಿಸ್ಕೋದ ವಿಮಾನ ನಿಲ್ದಾಣದಿಂದ ವಿಮಾನ ಹಾರಿದ ಸ್ವಲ್ಪ ಸಮಯದ ನಂತರ ಆ ದುರಂತ ಸಂಭವಿಸಿದೆ.
ಪಾಕಿಸ್ತಾನದಲ್ಲಿ ಖ್ಯಾತ ಪರ್ವತಾರೋಹಿ ನಿರ್ಮಲ್ ಪುರ್ಜಾ ದುರ್ಮರಣ; ಸಾವಿಗೆ ಕಾರಣವಾಗಿದ್ದೇನು?
ಘಟನೆಯ ಕುರಿತು ಮಾಹಿತಿ ನೀಡಿರುವ ಪೊಲೀಸ್ ಮೇಜರ್ ಜಾರ್ಜ್ ಆಂಡ್ರೇಡ್, ಅಪಘಾತದ ತೀವ್ರತೆಯನ್ನು ಗಮನಿಸಿದರೆ ಯಾರೂ ಬದುಕಿ ಉಳಿಯುವ ಸಾಧ್ಯತೆ ಇಲ್ಲ. ಈಗಾಗಲೇ ನಾಲ್ವರ ಶವಗಳನ್ನು ವಶಕ್ಕೆ ಪಡೆದಿದ್ದೇವೆ. ಅಪಘಾತಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ. ಈ ಕುರಿತು ಪೆರುವಿನ ನಾಗರಿಕ ವಿಮಾನಯಾನ ಪ್ರಾಧಿಕಾರವು ತನಿಖೆ ನಡೆಸಲಿದೆ. ಏಜೆಂಟರು ಸ್ಥಳದಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಹೇಳಿದರು.
ಮೃತಪಟ್ಟ ವಿದೇಶಿ ಪ್ರವಾಸಿಗರಲ್ಲಿ ಏಳು ಮಂದಿ ಇಟಾಲಿಯನ್ನರು, ಇಬ್ಬರು ಜರ್ಮನ್ನರು ಮತ್ತು ಇಬ್ಬರು ಸ್ಪೇನ್ ದೇಶದವರು. ಈ ಕುರಿತು ರಾಯಭಾರ ಕಚೇರಿಗಳಿಗೆ ಸಂಪೂರ್ಣ ನೆರವು ನೀಡುವುದಾಗಿ ವಿದೇಶಿ ವ್ಯಾಪಾರ ಸಚಿವಾಲಯ ತಿಳಿಸಿದೆ.
ನೂರಾರು ವರ್ಷಗಳ ಹಿಂದೆ ನಾಜ್ಕಾ ರೇಖೆ ನಡುವಿನ ಮರುಭೂಮಿ ಮರಳಿನಲ್ಲಿ ಕೆತ್ತಲಾಗಿರುವ ಜಿಯೋಗ್ಲಿಫ್‌ಗಳ ವೀಕ್ಷಣೆಗೆ ಪ್ರವಾಸಿಗರು ಆಗಮಿಸುತ್ತಾರೆ. ಇದು ನಾಜ್ಕಾ ರೇಖೆಗಳು 500ಬಿಸಿ ಮತ್ತು 500 ಎಡಿ ನಡುವೆ ಇದೆ. ಇದರಲ್ಲಿ ಜ್ಯಾಮಿತಿ, ಪ್ರಾಣಿಗಳ ಆಕಾರಗಳ ಅರ್ಥವು ನಿಗೂಢವಾಗಿಯೇ ಉಳಿದಿದೆ. ಇದನ್ನು 1994ರಲ್ಲಿ ಯುನೆಸ್ಕೊ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಗಿದೆ.
ಪ್ರವಾಸಿಗರನ್ನು ನಾಜ್ಕಾ ಲೈನ್ಸ್‌ನ ದೃಶ್ಯವೀಕ್ಷಣೆಗೆಂದು ಪ್ರವಾಸಿ ವಿಮಾನದಲ್ಲಿ ಕರೆದೊಯ್ಯುತ್ತಿದ್ದಾಗ ವಿಮಾನ ಆಘಾತಕ್ಕೀಡಾಗಿದೆ ಎಂದು ನಾಜ್ಕಾ ಪುರಸಭೆ ಸರ್ಕಾರ ತಿಳಿಸಿದೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದೆ.
ವಿಮಾನಯಾನ ಸಂಸ್ಥೆಯು ಕಳೆದ 14 ವರ್ಷಗಳಿಂದ ನಾಜ್ಕಾ ಲೈನ್‌ಗಳ ಮೇಲೆ ಪ್ರವಾಸಿಗರಿಗೆ ದೃಶ್ಯವೀಕ್ಷಣೆಗೆ ಅವಕಾಶಗಳನ್ನು ಮಾಡಿಕೊಡುತ್ತಿದೆ. ಇದಕ್ಕಾಗಿ ಸೆಸ್ನಾ ಗ್ರ್ಯಾಂಡ್ ಕ್ಯಾರವಾನ್ ವಿಮಾನಗಳನ್ನು ಬಳಸಲಾಗುತ್ತದೆ. ಅಪಘಾತದ ಬಗ್ಗೆ ಶೀಘ್ರದಲ್ಲೇ ಹೆಚ್ಚಿನ ಮಾಹಿತಿಯನ್ನು ಬಿಡುಗಡೆ ಮಾಡುವುದಾಗಿ ಏರೋಡಿಯಾನಾ ತಿಳಿಸಿದೆ.
ಮತ್ತೆ ಬಾಲ ಬಿಚ್ಚಿದ ಚೀನಾ; ಲಡಾಖ್-ಅರುಣಾಚಲ ಪ್ರದೇಶ ಗಡಿ ಬಳಿ ಭಾರತದತ್ತ ಮುಖ ಮಾಡಿ ಜೆ-20 ಯುದ್ಧ ವಿಮಾನಗಳ ನಿಯೋಜನೆ
ವಿಸ್ತಾ ಅಲೆಗ್ರೆ ನಿವಾಸಿಯೊಬ್ಬರು ವಿಮಾನ ಆಘಾತಗೊಂಡು ಸ್ಫೋಟವಾಗಿದೆ ಎಂದು ಹೇಳಿದ್ದಾರೆ. ಪಿಸ್ಕೋ ವಿಮಾನ ನಿಲ್ದಾಣದಿಂದ 12ಕ್ಕೂ ಹೆಚ್ಚಿನ ವಿಮಾನಗಳು ನಾಜ್ಕಾ ಲೈನ್ಸ್‌ಗೆ ವಿದೇಶಿ ಪ್ರವಾಸಿಗರನ್ನು ಕರೆದೊಯ್ಯುತ್ತದೆ.
ಈ ಹಿಂದೆಯೂ ಇಲ್ಲಿ ಅಪಘಾತಗಳು ಸಂಭವಿಸಿವೆ. 2022ರಲ್ಲಿ ಇಬ್ಬರು ಚಿಲಿಯವರು ಮತ್ತು ಮೂವರು ಡಚ್ ಪ್ರಜೆಗಳು ಸೇರಿದಂತೆ ಏಳು ಮಂದಿ ಇಲ್ಲಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದರು. 2010ರಲ್ಲಿ ನಡೆದ ಇನ್ನೊಂದು ಅಪಘಾತದಲ್ಲಿ ಏರ್‌ನಾಸ್ಕಾ ವಿಮಾನದಲ್ಲಿ ಸಾಗುತ್ತಿದ್ದ ನಾಲ್ವರು ಬ್ರಿಟಿಷ್ ಪ್ರವಾಸಿಗರು ಮತ್ತು ಇಬ್ಬರು ಪೆರುವಿಯನ್ ಸಿಬ್ಬಂದಿ ಮೃತಪಟ್ಟಿದ್ದರು.