Private Plane Crashes: ಛತ್ತೀಸ್‌ಗಢದಲ್ಲಿ ಬೆಟ್ಟದ ಮೇಲೆ ವಿಮಾನ ಪತನ; ಪೈಲಟ್ ಸಾವು
Private jet crashes: ಛತ್ತೀಸ್‌ಗಢದ ಜಶ್‌ಪುರ ಜಿಲ್ಲೆಯಲ್ಲಿ ಖಾಸಗಿ ವಿಮಾನವೊಂದು ಬೆಟ್ಟಕ್ಕೆ ಅಪ್ಪಳಿಸಿದ್ದು, ಸಾವುನೋವು ಸಂಭವಿಸಿರುವ ಸಾಧ್ಯತೆ ಇದೆ. ಸ್ಥಳೀಯರ ಪ್ರಕಾರ, ಅರಣ್ಯ ಪ್ರದೇಶದಲ್ಲಿ ಮರಕ್ಕೆ ಅಪ್ಪಳಿಸಿ ನಂತರ ಜೆಟ್ ಪತನಗೊಂಡಿದೆ. ಜಶ್ಪುರ್-ನಾರಾಯಣಪುರ್ ಪ್ರದೇಶದ ಬೆಟ್ಟದ ಇಳಿಜಾರಿನಲ್ಲಿ ಪತನಗೊಂಡ ಜೆಟ್‌ನಿಂದ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ.
ಖಾಸಗಿ ವಿಮಾನ ಪತನ -
ರಾಯ್‌ಪುರ, ಏ. 20: ಬೆಟ್ಟದ ಮೇಲೆ ಖಾಸಗಿ ಜೆಟ್ ಪತನವಾದ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ. ಜಶ್‌ಪುರ ಜಿಲ್ಲೆಯಲ್ಲಿ ಖಾಸಗಿ ವಿಮಾನವೊಂದು ಬೆಟ್ಟಕ್ಕೆ ಅಪ್ಪಳಿಸಿದ್ದು, ಸಾವುನೋವು ಸಂಭವಿಸಿರುವ ಸಾಧ್ಯತೆ ಇದೆ. ಸ್ಥಳೀಯರ ಪ್ರಕಾರ, ಅರಣ್ಯ ಪ್ರದೇಶದಲ್ಲಿ ಮರಕ್ಕೆ ಅಪ್ಪಳಿಸಿ ನಂತರ ಜೆಟ್ ಪತನಗೊಂಡಿದೆ. ಜಶ್ಪುರ್-ನಾರಾಯಣಪುರ್ ಪ್ರದೇಶದ ಬೆಟ್ಟದ ಇಳಿಜಾರಿನಲ್ಲಿ ಪತನಗೊಂಡ ಜೆಟ್‌ನಿಂದ ದಟ್ಟವಾದ ಹೊಗೆ ಮತ್ತು ಜ್ವಾಲೆಗಳು ಹೊರಬರುತ್ತಿರುವ ದೃಶ್ಯಗಳು ಸ್ಥಳದಲ್ಲಿ ಕಂಡುಬಂದಿದೆ. ವಿಮಾನದಲ್ಲಿ ಎಷ್ಟು ಜನ ಇದ್ದರು ಎಂಬುದು ತಿಳಿದುಬಂದಿಲ್ಲ. ಘಟನೆಯಲ್ಲಿ ಪೈಲಟ್ ಸಾವನ್ನಪ್ಪಿರುವ ಶಂಕೆ ವ್ಯಕ್ಷವಾಗಿದೆ.
ಅಪಘಾತದ ಸಮಯದಲ್ಲಿ ವಿಮಾನದಲ್ಲಿ ಎಷ್ಟು ಜನರಿದ್ದರು ಎಂಬುದನ್ನು ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ. ವಿಮಾನದಲ್ಲಿದ್ದವರ ಸ್ಥಿತಿಯೂ ಸ್ಪಷ್ಟವಾಗಿಲ್ಲ. ಘಟನೆಯ ಬಗ್ಗೆ ಮಾಹಿತಿ ಪಡೆದ ಸ್ವಲ್ಪ ಸಮಯದ ನಂತರ ಪೊಲೀಸರು ಮತ್ತು ಆಡಳಿತ ತಂಡಗಳು ಅಪಘಾತದ ಸ್ಥಳಕ್ಕೆ ತಲುಪಿದವು. ಪ್ರಸ್ತುತ ರಕ್ಷಣಾ ತಂಡಗಳಿಂದ ಕಾರ್ಯಾಚರಣೆಗಳು ನಡೆಯುತ್ತಿವೆ. ಅಧಿಕಾರಿಗಳು ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳುವ ನಿರೀಕ್ಷೆಯಿದೆ.
ದಟ್ಟ ಹೊಗೆ ಆವರಿಸಿರುವ ವಿಡಿಯೊ ಇಲ್ಲಿದೆ:
जशपुर
— Anshuman Sharma (@anshuman_sunona) April 20, 2026
प्राइवेट प्लेन हुआ क्रैश
नारायणपुर के आरा पहाड़ से टकराया प्लेन
वीडियो में आरा पहाड़ से धुआँ उठता दिखाई रे रहा है
पुलिस प्रशासन मौके के लिए रवाना हो चुका है #jashpur #Chhattisgarh #planecrash pic.twitter.com/2FBmg2vzBl
ರಾಂಚಿಯಲ್ಲಿ ಪತನಗೊಂಡಿದ್ದ ಏರ್ ಆಂಬ್ಯುಲೆನ್ಸ್
ಫೆಬ್ರವರಿ 23ರ ರಾತ್ರಿ ಜಾರ್ಖಂಡ್‌ನಿಂದ ದೆಹಲಿಗೆ 7 ಜನರನ್ನು ಹೊತ್ತೊಯ್ಯುತ್ತಿದ್ದ ಏರ್ ಆಂಬ್ಯುಲೆನ್ಸ್ ರಾಂಚಿ ಬಳಿ ಅಪಘಾತಕ್ಕೀಡಾಗಿತ್ತು. ಏರ್ ಆಂಬ್ಯುಲೆನ್ಸ್‌ನಲ್ಲಿದ್ದ ರೋಗಿ ಸಂಜಯ್ ಕುಮಾರ್ (41) ಎಂಬುವವರನ್ನು ಚಿಕಿತ್ಸೆಗಾಗಿ ಹೊತ್ತೊಯ್ಯುತ್ತಿದ್ದ ವೇಳೆ ಈ ದುರಂತ ಸಂಭವಿಸುತ್ತು. ಟೇಕ್ ಆಫ್ ಆದ ಸುಮಾರು 23 ನಿಮಿಷದ ಬಳಿಕ ವಿಮಾನದ ರಾಡಾರ್ ಸಂಪರ್ಕ ಕಡಿತಗೊಂಡಿತ್ತು. ದುರ್ಘಟನೆಯಲ್ಲಿ ವಿಮಾನದಲ್ಲಿದ್ದವರೆಲ್ಲರೂ ದುರ್ಮರಣಕ್ಕೀಡಾದರು.
ಕೊಲಂಬಿಯಾದಲ್ಲಿ ಮಿಲಿಟರಿ ವಿಮಾನ ಪತನ, 66 ಮಂದಿ ಸಾವು: ಭಯಾನಕ ವಿಡಿಯೊ ವೈರಲ್
ಬಾರಾಮತಿಯಲ್ಲಿ ವಿಮಾನ ಪತನಗೊಂಡು ದುರ್ಮರಣಕ್ಕೀಡಾಗಿದ್ದ ಮಹಾರಾಷ್ಟ್ರ ಡಿಸಿಎಂ
ಈ ವರ್ಷದ ಆರಂಭದಲ್ಲಿ ಮಹಾರಾಷ್ಟ್ರದ ಬಾರಾಮತಿ ಬಳಿ ಸಂಭವಿಸಿದ್ದ ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಐದು ಮಂದಿ ಮೃತಪಟ್ಟಿದ್ದರು. ದೆಹಲಿಯಿಂದ ಬಾರಾಮತಿಗೆ ಬರುತ್ತಿದ್ದ ವೇಳೆ ಅವಘಡ ಸಂಭವಿಸಿತ್ತು.
ವಿಮಾನವು ಬಾರಾಮತಿಯಲ್ಲಿ ಇಳಿಯಲು ಪ್ರಯತ್ನಿಸಿದಾಗ ಈ ಘಟನೆ ಸಂಭವಿಸಿದ್ದು, ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದರು. ಈ ವಿಮಾನವು ದೆಹಲಿ ಮೂಲದ ಚಾರ್ಟರ್ ಕಂಪನಿ ವಿಎಸ್ಆರ್‌ಗೆ ಸೇರಿದ ಲಿಯರ್‌ಜೆಟ್ 45 ಆಗಿದೆ ಎಂದು ವಾಯುಯಾನ ನಿಯಂತ್ರಣ ಸಂಸ್ಥೆ ತಿಳಿಸಿತ್ತು. ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯುವ ಸಮಯದಲ್ಲಿ ವಿಮಾನವು ನಿಯಂತ್ರಣ ಕಳೆದುಕೊಂಡಿತ್ತು. ಇಳಿಯುವ ಸಮಯದಲ್ಲಿ ವಿಮಾನ ಅಪಘಾತಕ್ಕೀಡಾಯಿತು. ಜಿಲ್ಲಾ ಪಂಚಾಯತ್ ಚುನಾವಣೆ ನಿಮಿತ್ತ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲು ತೆರಳುತ್ತಿದ್ದರು. ವಿಮಾನವು ರನ್‌ವೇ ಮೇಲೆ ಅಪ್ಪಳಿಸಿದ ತಕ್ಷಣ ಬೆಂಕಿ ಹೊತ್ತಿಕೊಂಡಿತ್ತು.