ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

G20 Summit: ಮತ್ತೊಮ್ಮೆ ಮೆಲೋಡಿ ಮೋಡಿ; ಜಿ20 ಶೃಂಗಸಭೆಯಲ್ಲಿ ಗಮನ ಸೆಳೆದ ಮೋದಿ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಜಿ20 ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಆತ್ಮೀಯವಾಗಿ ಮಾತನಾಡಿದರು. ಇಬ್ಬರು ನಾಯಕರು ಕೈಕುಲುಕಿ, ನಗುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ಜಿ20 ಶೃಂಗಸಭೆಯಲ್ಲಿ ನಗು ವಿನಿಮಯ ಮಾಡಿಕೊಂಡ ಮೋದಿ, ಮೆಲೊನಿ

ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ -

Ramesh B
Ramesh B Nov 22, 2025 6:12 PM

ಜೋಹಾನ್ಸ್‌ಬರ್ಗ್‌, ನ. 22: ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಜಿ20 ನಾಯಕರ ಶೃಂಗಸಭೆಯಲ್ಲಿ (G20 Summit) ಪ್ರಧಾನಿ ನರೇಂದ್ರ ಮೋದಿ (Narendra Modi) ಭಾಗವಹಿಸಿದ್ದು, ಈ ವೇಳೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ (Giorgia Meloni) ಜತೆ ಆತ್ಮೀಯವಾಗಿ ಮಾತನಾಡಿದರು. ಇಬ್ಬರು ನಾಯಕರು ಕೈಕುಲುಕಿ, ನಗುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೊ ವೈರಲ್‌ ಆಗಿದೆ. ಇಬ್ಬರು ನಾಯಕರು ಮೊದಲಿನಿಂದಲೂ ಉತ್ತಮ ಸ್ನೇಹಿತರು. ಇದೇ ಕಾರಣಕ್ಕೆ ಇವರನ್ನು ಮೆಲೋಡಿ ಎಂದೇ ಕರೆಯಲಾಗುತ್ತದೆ.

ಪರಸ್ಪರ ಕೈಕುಲುಕಿ ಇಬ್ಬರು ನಾಯಕರು ಅಭಿನಂದನೆ ಸಲ್ಲಿಸಿದರು. ಮೋದಿ ಮತ್ತು ಮೆಲೊನಿ ಕೊನೆಯ ಬಾರಿ ಜೂನ್‌ನಲ್ಲಿ ಕೆನಡಾದಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಭೇಟಿಯಾಗಿದ್ದರು. ಅಲ್ಲದೆ ನರೇಂದ್ರ ಮೋದಿ ಇತ್ತೀಚೆಗೆ ಜಾರ್ಜಿಯಾ ಮೆಲೊನಿ ಅವರ ಆತ್ಮಚರಿತ್ರೆ ʼಐ ಆ್ಯಮ್ ಜಾರ್ಜಿಯಾ - ಮೈ ರೂಟ್ಸ್, ಮೈ ಪ್ರಿನ್ಸಿಪಲ್ಸ್ʼನ ಭಾರತೀಯ ಆವೃತ್ತಿಗೆ ಮುನ್ನುಡಿ ಬರೆದಿದ್ದರು. ಮೋದಿ ಈ ಪುಸ್ತಕದ ಕುರಿತು ʼಮನ್‌ ಕಿ ಬಾತ್‌ʼನ 128ನೇ ಆವೃತ್ತಿಯಲ್ಲಿ ಮಾತನಾಡಿದ್ದರು. ಮೆಲೊನಿ ಅವರ ಪುಸಕ್ತದ ಮುನ್ನುಡಿ ಬರೆದಿರುವುದು ಮಹಾನ್ ಗೌರವ ಎಂದು ಮೋದಿ ಬಣ್ಣಿಸಿದ್ದರು. ಮೆಲೊನಿ ಬಗ್ಗೆ ತಮ್ಮ ಗೌರವ, ಮೆಚ್ಚುಗೆ ಮತ್ತು ಸ್ನೇಹವನ್ನು ವ್ಯಕ್ತಪಡಿಸಿದ್ದರು.

ವೈರಲ್‌ ಆದ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ವಿಡಿಯೊ:



ಜಿ20 ನಾಯಕರ ಶೃಂಗಸಭೆ ಮುಖ್ಯ ಅಜೆಂಡ

ಆರ್ಥಿಕ ಬೆಳವಣಿಗೆ, ವ್ಯಾಪಾರ, ಅಭಿವೃದ್ಧಿ, ಹಣಕಾಸು ಮತ್ತು ಜಾಗತಿಕ ಸಾಲದ ಒತ್ತಡದ ಬಗ್ಗೆ ಈ ಸಲದ ಜಿ20 ಶೃಂಗಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ. ಜತೆಗೆ ವಿಪತ್ತು ಅಪಾಯ, ಹವಾಮಾನ ಬದಲಾವಣೆ, ಇಂಧನ ಪರಿವರ್ತನೆ ಮತ್ತು ಆಹಾರ ಭದ್ರತೆಯ ಬಗ್ಗೆ ದೀರ್ಘ ಸಮಾಲೋಚನೆ ನಡೆಯಲಿದೆ. ಅಲ್ಲದೆ ಖನಿಜ ಸಂಪತ್ತು, ಉದ್ಯೋಗಾವಕಾಶ ಮತ್ತು ಕೃತಕ ಬುದ್ಧಿಮತ್ತೆಯ ಬಗ್ಗೆ ನಾಯಕರು ಚರ್ಚೆ ನಡೆಸಲಿದ್ದಾರೆ.

ಜಿ7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಭೇಟಿ

4 ಯೋಜನೆ ಪ್ರಸ್ತಾವಿಸಿದ ಮೋದಿ

ಜಾಗತಿಕ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ 4 ಹೊಸ ಯೋಜನೆಗಳನ್ನು ಪ್ರಸ್ತಾಪಿಸಿದರು. ಇದರಲ್ಲಿ ಜಾಗತಿಕ ಸಾಂಪ್ರದಾಯಿಕ ಜ್ಞಾನ ಭಂಡಾರ, ಆಫ್ರಿಕಾದ ಕೌಶಲ್ಯ, ಜಾಗತಿಕ ಆರೋಗ್ಯ ರಕ್ಷಣಾ ಪ್ರತಿಕ್ರಿಯೆ ತಂಡ ಮತ್ತು ಮಾದಕವಸ್ತು-ಭಯೋತ್ಪಾದನೆಯನ್ನು ಎದುರಿಸುವ ಯೋಜನೆ ಒಳಗೊಂಡಿದೆ. ಈ ಯೋಜನೆಗಳು ಸರ್ವತೋಮುಖ ಬೆಳವಣಿಗೆಯನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದರು. ಭಾರತದ ನಾಗರಿಕತೆಯ ಮೌಲ್ಯಗಳು ಇದಕ್ಕೆ ದಾರಿ ತೋರುತ್ತದೆ ಎಂದೂ ಅವರು ಹೇಳಿದರು. "ಈ ವಿಚಾರದಲ್ಲಿ ಭಾರತವು ಶ್ರೀಮಂತ ಇತಿಹಾಸವನ್ನು ಹೊಂದಿದೆʼʼ ಎಂದರು. 3 ದಿನಗಳ ಭೇಟಿಗಾಗಿ ದಕ್ಷಿಣ ಆಫ್ರಿಕಾಕ್ಕೆ ಭೇಟಿ ನೀಡಿರುವ ಮೋದಿ ಎರಡೂ ದೇಶಗಳ ಸಂಬಂಧವನ್ನು ವೃದ್ಧಿಸುವ ಉದ್ದೇಶ ಹೊಂದಿದ್ದಾರೆ.

ಜಿ20 ಸದಸ್ಯ ರಾಷ್ಟ್ರಗಳು

ಭಾರತ, ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರಜಿಲ್‌, ಕೆನಡಾ, ಚೀನಾ, ಫ್ರಾನ್ಸ್‌, ಜರ್ಮನಿ, ಇಂಡೋನೇಷ್ಯಾ, ಇಟಲಿ, ದಕ್ಷಿನ ಕೊರಿಯಾ, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಇಂಗ್ಲೆಂಡ್‌, ಅಮೆರಿಕ ಮತ್ತು ಆಫ್ರಿಕನ್‌ ಯೂನಿಯನ್‌.