Tejas Crash: ಏಕಾಏಕಿ ತೇಜಸ್ ಯುದ್ಧ ವಿಮಾನ ಪತನಗೊಳ್ಳಲು ಕಾರಣವೇನು? ಅದೊಂದು ತಪ್ಪು ನಿರ್ಧಾರವೇ ಕಾರಣವಾಯಿತಾ?
Dubai Air Show 2025: ದುಬೈನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಏರ್ ಶೋನಲ್ಲಿ ಭಾಗವಹಿಸಿದ್ದ ಭಾರತದ ತೇಜಸ್ ಲಘು ಯುದ್ಧ ವಿಮಾನ 21ರಂದು ಏರ್ ಶೋ ಪ್ರದರ್ಶನದ ಮಧ್ಯೆಯೇ ಪೈಲಟ್ ನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ. ವೇಗವಾಗಿ ಬಂದ ವಿಮಾನ ನೆಲಕ್ಕಪ್ಪಳಿಸಿದೆ. ವಿಮಾನದಲ್ಲಿದ್ದ ಪೈಲೆಟ್ ಮೃತಟ್ಟಿದ್ದಾರೆ.
ತೇಜಸ್ ಯುದ್ಧ ವಿಮಾನ ಪತನ -
ದುಬೈನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಏರ್ ಶೋನಲ್ಲಿ ಭಾಗವಹಿಸಿದ್ದ ಭಾರತದ ತೇಜಸ್ ಲಘು ಯುದ್ಧ ವಿಮಾನ 21ರಂದು ಏರ್ ಶೋ ಪ್ರದರ್ಶನದ ಮಧ್ಯೆಯೇ ಪೈಲಟ್ ನ ನಿಯಂತ್ರಣ ತಪ್ಪಿ (Tejas fighter jet crashed) ಅಪಘಾತಕ್ಕೀಡಾಗಿದೆ. ವೇಗವಾಗಿ ಬಂದ ವಿಮಾನ ನೆಲಕ್ಕಪ್ಪಳಿಸಿದೆ. ವಿಮಾನದಲ್ಲಿದ್ದ ಪೈಲೆಟ್ ಮೃತಟ್ಟಿದ್ದಾರೆ. ವಿಮಾನ ಪತನದ ಬಗ್ಗೆ ತನಿಖೆ ಆರಂಭವಾಗಿದ್ದು ಅಪಘಾತಕ್ಕೆ ಕಾರಣಗಳನ್ನು ಸದ್ಯ ಪತ್ತೆ ಹಚ್ಚಲಾಗುತ್ತಿದೆ. ದುಬೈ ವಾಯು ಪ್ರದರ್ಶನದಲ್ಲಿ ತೇಜಸ್ Mk1 ಯುದ್ಧ ವಿಮಾನವು ತೈಲ ಸೋರಿಕೆಯನ್ನು ಅನುಭವಿಸಿದೆ ಎಂಬ ವೈರಲ್ ಹೇಳಿಕೆಗಳನ್ನು ಸರ್ಕಾರ ತಳ್ಳಿಹಾಕಿದ ಒಂದು ದಿನದ ನಂತರ ಈ ಅಪಘಾತ ಸಂಭವಿಸಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಜೆಟ್ ನೆಲಕ್ಕೆ ತುಂಬಾ ಹತ್ತಿರದಲ್ಲಿದ್ದು, ಮತ್ತೆ ಮೇಲಕ್ಕೆತ್ತಿ ಕುಶಲತೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಇದಲ್ಲದೆ, ಜೆಟ್ ಮತ್ತೆ ಮೇಲೇರಲು ವೇಗವನ್ನು ಹೊಂದಿಲ್ಲದಿರಬಹುದು ಮತ್ತು ಅಂತಿಮವಾಗಿ ಅಪ್ಪಳಿಸಿತು ಎಂದು ತಜ್ಞರು ಹೇಳಿದ್ದಾರೆ. ಬ್ಯಾರೆಲ್ ರೋಲ್ ಅನ್ನು ಹೆಚ್ಚು ಸಂಕೀರ್ಣವೆಂದು ಪರಿಗಣಿಸದಿದ್ದರೂ, ಫೈಟರ್ ಜೆಟ್‌ನಲ್ಲಿ ಹೆಚ್ಚಿನ ವೇಗದಲ್ಲಿ ಅಂತಹ ಕುಶಲತೆಯನ್ನು ಕಾರ್ಯಗತಗೊಳಿಸುವುದು ಕಷ್ಟಕರವಾಗಿರುತ್ತದೆ. ಸಣ್ಣ ತಪ್ಪು ಲೆಕ್ಕಾಚಾರ ಕೂಡ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಅಪಘಾತಕ್ಕೆ ಕಾರಣವೇನೆಂದು IAF ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ತಜ್ಞರು ಕೂಡ ದುರಂತದ ಹಿಂದೆ ಎಂಜಿನ್ ಜ್ವಾಲೆಯಾಗಿರಬಹುದು ಊಹಿಸಲಾಗಿದೆ. ಬೆಂಗಳೂರು ಮೂಲದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ತಯಾರಿಸಿದ ತೇಜಸ್ ಭಾರತದ ಮೊದಲ ಸ್ವದೇಶಿ ನಿರ್ಮಿತ ಫೈಟರ್ ಜೆಟ್ ಆಗಿದ್ದು, ಸುಮಾರು 24 ವರ್ಷಗಳಿಂದ ಸೇವೆಯಲ್ಲಿದೆ. ತೇಜಸ್ 4.5 ಪೀಳಿಗೆಯ ಬಹುಪಯೋಗಿ ಯುದ್ಧ ವಿಮಾನವಾಗಿದ್ದು, ವಾಯು-ರಕ್ಷಣಾ ಕಾರ್ಯಾಚರಣೆ, ಆಕ್ರಮಣಕಾರಿ ವಾಯು ಬೆಂಬಲ ಮತ್ತು ಯುದ್ಧ ಕಾರ್ಯಾಚರಣೆಗಳನ್ನು ನಿರ್ವಹಿಸಲು ನಿರ್ಮಿಸಲಾಗಿದೆ. ಇದು ಹಗುರವಾದ ಮತ್ತು ಚಿಕ್ಕ ಯುದ್ಧವಿಮಾನಗಳಲ್ಲಿ ಒಂದಾಗಿದೆ.
ಇದು ಎರಡು ವರ್ಷಗಳ ಅವಧಿಯಲ್ಲಿ ಸಂಭವಿಸಿದ ಎರಡನೇ ಘಟನೆಯಾಗಿದೆ. ಮಾರ್ಚ್ 2024ರಲ್ಲಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ತೇಜಸ್ ಯುದ್ಧ ವಿಮಾನ ಪತನಗೊಂಡವಾದ ಬಗ್ಗೆ ವರದಿಯಾಗಿತ್ತು. 2001ರ ಮೊದಲ ಪರೀಕ್ಷಾರ್ಥ ಹಾರಾಟದ ನಂತರ ನಡೆದ ಮೊದಲ ಪತನ ಇದಾಗಿತ್ತು. ಆದರೆ ಆ ಘಟನೆಯಲ್ಲಿ ಪೈಲಟ್ ಸುರಕ್ಷಿತವಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು.
ತೇಜಸ್ ವಿಶೇಷತೆಯೇನು?
ತೇಜಸ್ ಯುದ್ಧ ವಿಮಾನ ಸೂಪರ್‌ಸಾನಿಕ್ ಸಾಮರ್ಥ್ಯದ ಒಂದೇ ಎಂಜಿನ್ ಹೊಂದಿರುವ, ಲಘು ತೂಕದ ವಿಮಾನವಾಗಿದೆ. ನಾಲ್ಕು ಸಾವಿರ ಕೆ.ಜಿ.ವರೆಗೆ ಶಸ್ತಾ್ರಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಇದು ಹೊಂದಿದೆ. ಹಾರಾಟದ ಮಧ್ಯದಲ್ಲೇ ಇಂಧನವನ್ನು ತುಂಬಿಸಿಕೊಳ್ಳುವ ಸಾಮರ್ಥ್ಯವನ್ನು ತೇಜಸ್ ಹೊಂದಿದೆ.