ಫಿಲಿಪ್ಪೀನ್ಸ್‌ನ 100 ವರ್ಷ ಹಳೆಯ ಗುರುದ್ವಾರಕ್ಕೆ ಪ್ರಧಾನಿ ಮೋದಿ ಭೇಟಿ: ಸಿಖ್ ಸಮುದಾಯದೊಂದಿಗೆ ವಿಶೇಷ ಪ್ರಾರ್ಥನೆ
PM Modi Visits Gurudwara Khalsa Diwan: ಫಿಲಿಪ್ಪೀನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮನಿಲಾದಲ್ಲಿರುವ ಐತಿಹಾಸಿಕ 'ಗುರುದ್ವಾರ ಖಾಲ್ಸಾ ದಿವಾನ್'ಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯ ಸಿಖ್ ಸಮುದಾಯದವರೊಂದಿಗೆ ಬೆರೆತು ಸೌಹಾರ್ದಯುತವಾಗಿ ಸಂವಾದ ನಡೆಸಿದರು.
PM Narendra Modi at the Gurudwara Khalsa Diwan in Manila -
ಮನಿಲಾ, ನ.17: ಆಸಿಯಾನ್ ಸೇರಿದಂತೆ ಪ್ರಮುಖ ಪ್ರಾದೇಶಿಕ ಶೃಂಗಗಳಲ್ಲಿ ಭಾಗವಹಿಸುವ ಸಲುವಾಗಿ ಫಿಲಿಪ್ಪೀನ್ಸ್‌ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಫಿಲಿಪ್ಪೀನ್ಸ್‌ನಲ್ಲಿರುವ ಅತ್ಯಂತ ಹಳೆಯ ಗುರುದ್ವಾರಕ್ಕೆ ಭೇಟಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಅಲ್ಲದೆ ಮನಿಲಾದಲ್ಲಿರುವ, 100 ವರ್ಷ ಹಳೆಯ ಇತಿಹಾಸ ಹೊಂದಿರುವ 'ಗುರುದ್ವಾರ ಖಲ್ಸಾ ದಿವಾನ್'ನ ಪುನರಾಭಿವೃದ್ಧಿಗಾಗಿ ಅಡಿಪಾಯ ಹಾಕುವ ಸಮಾರಂಭದ ನೇತೃತ್ವ ವಹಿಸಿದರು.
ಗುರುದ್ವಾರಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಸ್ಥಳೀಯ ಸಿಖ್ ಸಮುದಾಯದ ಮುಖಂಡರು ಹಾಗೂ ಆಡಳಿತ ಮಂಡಳಿಯವರು ಅತ್ಯಂತ ಆದರದಿಂದ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪ್ರಧಾನಿಯವರು ಗುರುದ್ವಾರದ ಒಳಗೆ ತೆರಳಿ ಪವಿತ್ರ ಗ್ರಂಥಕ್ಕೆ ನಮನ ಸಲ್ಲಿಸಿ, ದೇಶದ ಒಳಿತಿಗಾಗಿ ಹಾಗೂ ವಿಶ್ವ ಶಾಂತಿಗಾಗಿ ಪ್ರಾರ್ಥನೆ ಮಾಡಿದರು. ಇದೇ ವೇಳೆ ನೂರು ವರ್ಷಗಳ ಹಳೆಯ ಈ ಗುರುದ್ವಾರದಲ್ಲಿ ಐದು ಅಂತಸ್ತಿನ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಗುರುದ್ವಾರಕ್ಕೆ ಭೇಟಿ ನೀಡಿದ ಬಳಿಕ ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ. “ಮನಿಲಾದಲ್ಲಿರುವ ಗುರುದ್ವಾರ ಖಲ್ಸಾ ದಿವಾನ್‌ಗೆ ಭೇಟಿ ನೀಡಲು ಸಾಧ್ಯವಾಗಿರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.
Feeling very blessed to be at the Gurudwara Khalsa Diwan in Manila. ਗੁਰਦੁਆਰਾ ਖ਼ਾਲਸਾ ਦੀਵਾਨ, ਮਨੀਲਾ ਵਿਖੇ ਆ ਕੇ ਬਹੁਤ ਵਡਭਾਗਾ ਮਹਿਸੂਸ ਕਰ ਰਿਹਾ ਹਾਂ। https://t.co/JNuNFMq6Ja
— Narendra Modi (@narendramodi) November 17, 2026
ಸ್ಥಳೀಯ ಸಮುದಾಯದೊಂದಿಗೆ ಭಾವನಾತ್ಮಕ ಮಾತುಕತೆ
ಪ್ರಾರ್ಥನೆಯ ಬಳಿಕ ಪ್ರಧಾನಿ ಮೋದಿ ಅವರು ಮನಿಲಾದಲ್ಲಿ ನೆಲೆಸಿರುವ ಭಾರತೀಯ ಸಿಖ್ ಸಮುದಾಯದವರೊಂದಿಗೆ ಸೌಹಾರ್ದಯುತವಾಗಿ ಬೆರೆತು ಮಾತುಕತೆ ನಡೆಸಿದರು. ವಿದೇಶದಲ್ಲಿ ಭಾರತೀಯರ ಯೋಗಕ್ಷೇಮ ಹೇಗಿದೆ ಎಂಬುದನ್ನು ವಿಚಾರಿಸಿದ ಪ್ರಧಾನಿ, ಭಾರತದ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸುತ್ತಿರುವ ಅವರ ಶ್ರಮವನ್ನು ಶ್ಲಾಘಿಸಿದರು. ಪ್ರಧಾನಿಯವರ ಸರಳತೆ ಮತ್ತು ಅನಿವಾಸಿ ಭಾರತೀಯರ ಜತೆಗೆ ಬೆರೆಯುವ ಗುಣವನ್ನು ಕಂಡು ಸ್ಥಳೀಯ ಸಿಖ್ ಸಮುದಾಯದವರು ಹರ್ಷ ವ್ಯಕ್ತಪಡಿಸಿದರು.
ವಿಡಿಯೋ ನೋಡಿ
VIDEO | During his visit to Manila, Philippines, PM Modi participates in a groundbreaking ceremony at the Khalsa Diwan Gurdwara. #Manila #PMModi (Source: PM Modi YT) (Full video available on PTI Videos - https://t.co/d8jp61yd2p) https://t.co/TGe64c199a
— Press Trust of India (@PTI_News) November 17, 2026
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋ
ಪ್ರಧಾನಿ ಮೋದಿ ಅವರು ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಮತ್ತು ಸಿಖ್ ಸಮುದಾಯದವರೊಂದಿಗೆ ಸಂವಾದ ನಡೆಸುತ್ತಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ. ನೆಟ್ಟಿಗರು ಮತ್ತು ಅಭಿಮಾನಿಗಳು ಈ ವಿಡಿಯೋವನ್ನು ಹಂಚಿಕೊಳ್ಳುವುದರ ಜೊತೆಗೆ ಪ್ರಧಾನಿಯವರ ಈ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
5 ತಿಂಗಳ ಬಳಿಕ ಪ್ರಧಾನಿ ಮೋದಿ, ಟ್ರಂಪ್ ಭೇಟಿ; ಇಂದು ಕ್ವಾಡ್ ಸಭೆಯಲ್ಲಿ ಮಹತ್ವದ ಚರ್ಚೆ
ಕ್ವಾಡ್ ಶೃಂಗಸಭೆಯಲ್ಲಿ ಮೋದಿ-ಟ್ರಂಪ್ ಭೇಟಿ ಸಾಧ್ಯತೆ
ಇದೇ ಪ್ರವಾಸದ ಸಂದರ್ಭದಲ್ಲಿ ಮನಿಲಾದಲ್ಲಿ ನಡೆಯಲಿರುವ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭೇಟಿಯಾಗಿ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆಯಿದೆ. ಜಾಗತಿಕ ರಾಜಕೀಯ ಹಾಗೂ ಇಂಡೋ-ಪೆಸಿಫಿಕ್ ಪ್ರದೇಶದ ಭದ್ರತಾ ದೃಷ್ಟಿಯಿಂದ ಈ ಉಭಯ ನಾಯಕರ ಭೇಟಿ ಇಡೀ ವಿಶ್ವದ ಗಮನ ಸೆಳೆದಿದೆ.