ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಐರ್ಲೆಂಡ್ನಲ್ಲಿ ಜನಾಂಗೀಯ ದಾಳಿ; ಭಾರತೀಯ ಮೂಲದ 6 ವರ್ಷದ ಬಾಲಕಿಗೆ ಥಳಿಸಿದ ಗುಂಪು

ಐರ್ಲೆಂಡ್‌ನಲ್ಲಿ ಭಾರತೀಯರ ಮೇಲೆ ಜನಾಂಗೀಯ ದಾಳಿ ನಡೆದಿದೆ. ದಾಳಿಯಲ್ಲಿ ಆರು ವರ್ಷದ ಬಾಲಕಿಯ ಮೇಲೆ ಮಕ್ಕಳ ಗುಂಪೊಂದು ಹಲ್ಲೆ ನಡೆಸಿದೆ. ದಾಳಿಕೋರರು "ಭಾರತಕ್ಕೆ ಹಿಂತಿರುಗಿ" ಎಂದು ಕೇಳಿದಾಗ ಆರು ವರ್ಷದ ಭಾರತೀಯ ಬಾಲಕಿಯ ಮುಖಕ್ಕೆ ಗುದ್ದಲಾಗಿದೆ ಮತ್ತು ಖಾಸಗಿ ಭಾಗಗಳಿಗೆ ಹೊಡಯಲಾಗಿದೆ ಎಂದು ವರದಿಯಾಗಿದೆ.

ಐರ್ಲೆಂಡ್ನಲ್ಲಿ ಜನಾಂಗೀಯ ದಾಳಿ;  6 ವರ್ಷದ ಬಾಲಕಿಗೆ ಥಳಿಸಿದ ಗುಂಪು

Vishakha Bhat Vishakha Bhat Aug 7, 2025 9:47 AM

ಡಬ್ಲಿನ್‌: ಐರ್ಲೆಂಡ್‌ನಲ್ಲಿ ಭಾರತೀಯರ ಮೇಲೆ ಜನಾಂಗೀಯ ದಾಳಿ ನಡೆದಿದೆ. ದಾಳಿಯಲ್ಲಿ ಆರು ವರ್ಷದ ಬಾಲಕಿಯ ಮೇಲೆ ಮಕ್ಕಳ ಗುಂಪೊಂದು ಹಲ್ಲೆ ನಡೆಸಿದೆ. ದಾಳಿಕೋರರು "ಭಾರತಕ್ಕೆ ಹಿಂತಿರುಗಿ" ಎಂದು ಕೇಳಿದಾಗ ಆರು ವರ್ಷದ ಭಾರತೀಯ ಬಾಲಕಿಯ ಮುಖಕ್ಕೆ ಗುದ್ದಲಾಗಿದೆ ಮತ್ತು ಖಾಸಗಿ ಭಾಗಗಳಿಗೆ ಹೊಡಯಲಾಗಿದೆ ಎಂದು ವರದಿಯಾಗಿದೆ. ಐರಿಶ್ ಮಿರರ್‌ ಜೊತೆ ಮಾತನಾಡಿದ ಹುಡುಗಿಯ ತಾಯಿ ಆಗಸ್ಟ್ 4 ರ ಸೋಮವಾರದಂದು 6 ವರ್ಷದ ಮಗು ತನ್ನ ಮನೆಯ ಹೊರಗೆ (Viral News) ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಈ ದಾಳಿ ನಡೆದಿದೆ ಎಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ದಾಳಿ ಮಾಡಿದವರು ಬಾಲಕಿಯ ಮುಖಕ್ಕೆ ಗುದ್ದಿದರು. ಹುಡುಗರಲ್ಲಿ ಒಬ್ಬ ಸೈಕಲ್ ಚಕ್ರವನ್ನು ಅವಳ ಖಾಸಗಿ ಭಾಗಗಳಿಗೆ ತಳ್ಳಿದ್ದಾನೆ. ಅಷ್ಟೇ ಅಲ್ಲದೆ ನೀವು ಕೊಳಕು ಭಾರತೀಯರು, ನಿಮ್ಮ ದೇಶಕ್ಕೆ ನೀವು ತೊಲಗಿ ಎಂದು ಆಕೆಯ ಮೇಲೆ ಹಲ್ಲೆ ನಡೆಸಲಾಗಿದೆ. ಬಾಲಕಿಯ ತಾಯಿ ಇತ್ತೀಚೆಗೆ ಐರಿಶ್ ಪೌರತ್ವವನ್ನು ಪಡೆದುಕೊಂಡಿದ್ದಾರೆ ಮತ್ತು ನರ್ಸ್ ಆಗಿದ್ದು ಸುಮಾರು ಎಂಟು ವರ್ಷಗಳಿಂದ ಐರ್ಲೆಂಡ್‌ನಲ್ಲಿ ವಾಸಿಸುತ್ತಿದ್ದಾರೆ. ತಾಯಿ ತನ್ನ 10 ತಿಂಗಳ ಮಗುವಿಗೆ ಹಾಲುಣಿಸಲು ಒಳಗೆ ಹೋದಾಗ ಈ ದಾಳಿ ನಡೆದಿದೆ. ಘಟನೆ ನಡೆದ ಬಳಿಕ ಬಾಲಕಿ ಸಂಪೂರ್ಣವಾಗಿ ಹೆದರಿದ್ದು, ಆಕೆಗೆ ಸರಿಯಾಗಿ ಮಾತನಾಡಲೂ ಸಾಧ್ಯವಾಗುತ್ತಿರಲಿಲ್ಲ ಎಂದು ಬಾಲಕಿಯ ತಾಯಿ ಹೇಳಿದ್ದಾರೆ.

ಸುಮಾರು ಎಂಟು ವರ್ಷಗಳಿಂದ ಐರ್ಲೆಂಡ್‌ನಲ್ಲಿ ವಾಸಿಸುತ್ತಿರುವ ಬಾಲಕಿಯ ತಾಯಿ, , ಹಲ್ಲೆಯಲ್ಲಿ ಭಾಗಿಯಾಗಿರುವ ಹುಡುಗರ ಗುಂಪನ್ನು ತಾನು ನೋಡಿದೆ ಎಂದು ಹೇಳಿದ್ದಾರೆ. ನಾನು ಆ ಗ್ಯಾಂಗ್ ಅನ್ನು ನೋಡಿದೆ. ಅವರು ನನ್ನನ್ನು ದಿಟ್ಟಿಸಿ ನೋಡುತ್ತಿದ್ದರು, ನಗುತ್ತಿದ್ದರು. ನಾನು ಅವಳ ತಾಯಿ ಎಂದು ಅವರಿಗೆ ತಿಳಿದಿದೆ. ಹುಡುಗರು ಬಹುಶಃ 12 ಅಥವಾ 14 ವರ್ಷ ವಯಸ್ಸಿನವರಾಗಿರಬಹುದು ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Sidhu Moosewala: ಸಿದ್ದು ಮೂಸೆವಾಲಾ ಪ್ರತಿಮೆ ಮೇಲೆ ಗುಂಡಿನ ದಾಳಿ: ತಾಯಿಯಿಂದ ಭಾವುಕ ಸಂದೇಶ

ಐರ್ಲೆಂಡ್‌ನಲ್ಲಿ ಭಾರತೀಯರ ವಿರುದ್ಧ ಜನಾಂಗೀಯ ಪದೇ ಪದೇ ನಡೆಯುತ್ತಲೇ ಇದೆ. ಜುಲೈನಲ್ಲಿ, ಐರ್ಲೆಂಡ್‌ನಲ್ಲಿ ಭಾರತೀಯರ ವಿರುದ್ಧ ಕನಿಷ್ಠ ಮೂರು ದಾಳಿಗಳು ವರದಿಯಾಗಿವೆ. ಟಾಲಘಾಟ್‌ನಲ್ಲಿ, 10 ಹದಿಹರೆಯದವರ ಗುಂಪೊಂದು ಭಾರತೀಯ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದೆ. ಸ್ಥಳೀಯ ದೇವಸ್ಥಾನಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಆ ಗುಂಪು ಆ ವ್ಯಕ್ತಿಯ ಮುಖಕ್ಕೆ ಹಲವು ಬಾರಿ ಇರಿದಿದೆ. ಡಬ್ಲಿನ್‌ನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ಹಿರಿಯ ದತ್ತಾಂಶ ವಿಜ್ಞಾನಿ ಡಾ. ಸಂತೋಷ್ ಯಾದವ್ ತಮ್ಮ ಅಪಾರ್ಟ್‌ಮೆಂಟ್‌ಗೆ ಹಿಂತಿರುಗುತ್ತಿದ್ದಾಗ ಆರು ಹದಿಹರೆಯದವರು ಹಿಂದಿನಿಂದ ಅವರ ಮೇಲೆ ದಾಳಿ ಮಾಡಿದ್ದಾರೆ.