ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಗಿಲ್ಲಿ ಟಾಸ್ಕ್‌ಗಳಲ್ಲಿ ಆಡಿದ್ದೇ ನೋಡಿಲ್ಲ! ಬಿಗ್‌ಬಾಸ್‌ ಯಾರೇ ಗೆದ್ರೂ ನಾನು ಒಪ್ಪಲ್ಲ; ಮಾಳು

Malu Nipanal: ಬಿಗ್‌ ಬಾಸ್‌ ಮನೆಯಿಂದ ಮಾಳು ನಿಪನಾಳ ಅವರು ಔಟ್‌ ಆಗಿದ್ದಾರೆ. ಈ ವಾರ ಡಬಲ್‌ ಎಲಿಮಿನೇಶನ್‌ ಇದ್ದ ಕಾರಣ ಸೂರಜ್‌ ಬಳಿಕ ಮಾಳು ಎಲಿಮಿನೇಟ್‌ ಆದರು. ಇದೀಗ ಸಂದರ್ಶನಗಳಲ್ಲಿ ಮಾಳು ಅವರು ಗಿಲ್ಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಾಧ್ಯಮವೊಂದರ ಸಂದರ್ಶನದಲ್ಲಿ ನಾನು ಹೊರಬಂದಿರುವುದಕ್ಕೆ ಇಡೀ ಉತ್ತರ ಕರ್ನಾಟಕವೇ ಕಣ್ಣೀರಿಡುತ್ತಿದೆ. ಗಿಲ್ಲಿ ಅಲ್ಲ, ಬೇರೆ ಯಾರೇ ಬಿಗ್‌ಬಾಸ್‌ ಗೆದ್ದರೂ ನನಗೆ ಒಪ್ಪಿಗೆ ಇಲ್ಲ ಎಂದಿದ್ದಾರೆ.

ಗಿಲ್ಲಿ ಟಾಸ್ಕ್‌ಗಳಲ್ಲಿ ಆಡಿದ್ದೇ ನೋಡಿಲ್ಲ! ಎಲಿಮಿನೇಷನ್​ ಬಗ್ಗೆ ಮಾಳು ಬೇಸರ

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Dec 29, 2025 6:38 PM

ಬಿಗ್‌ ಬಾಸ್‌ (Bigg Boss Kannada 12) ಮನೆಯಿಂದ ಮಾಳು ನಿಪನಾಳ (Malu) ಅವರು ಔಟ್‌ ಆಗಿದ್ದಾರೆ. ಈ ವಾರ ಡಬಲ್‌ ಎಲಿಮಿನೇಶನ್‌ ಇದ್ದ ಕಾರಣ ಸೂರಜ್‌ ಬಳಿಕ ಮಾಳು ಎಲಿಮಿನೇಟ್‌ ಆದರು. ಇದೀಗ ಸಂದರ್ಶನಗಳಲ್ಲಿ ಮಾಳು ಅವರು ಗಿಲ್ಲಿ (Gilli Nata) ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಾಧ್ಯಮವೊಂದರ ಸಂದರ್ಶನದಲ್ಲಿ ನಾನು ಹೊರಬಂದಿರುವುದಕ್ಕೆ ಇಡೀ ಉತ್ತರ ಕರ್ನಾಟಕವೇ ಕಣ್ಣೀರಿಡುತ್ತಿದೆ. ಗಿಲ್ಲಿ ಅಲ್ಲ, ಬೇರೆ ಯಾರೇ ಬಿಗ್‌ಬಾಸ್‌ ಗೆದ್ದರೂ ನನಗೆ ಒಪ್ಪಿಗೆ ಇಲ್ಲ ಎಂದಿದ್ದಾರೆ.

ಇಡೀ ಉತ್ತರ ಕರ್ನಾಟಕವೇ ಅಳುತ್ತಿದೆ

ನಾನು ಮೊದಲಿಗೆ ಎರಡು ವಾರವಷ್ಟೇ ಇರಬಹುದು ಎಂದು ಭಾವಿಸಿದ್ದೆ. ಆದರೆ ಬರೋಬ್ಬರಿ 13 ವಾರ ನನ್ನ ಉಳಿಸಿದ್ದಾರೆ. ನನಗೆ ತಾಳ್ಮೆ, ಆಡುವ ಛಲ ಎರಡೂ ಇತ್ತು, ದೇವರ ಆಶೀರ್ವಾದ, ಜನರ ಬೆಂಬಲ ಎಲ್ಲವೂ ಇತ್ತು. ಜನ ನನ್ನ ಇಲ್ಲಿವರೆಗೆ ಉಳಿಸಿದ್ದಾರೆ ಅಂದ್ರೆ, ಫೈನಲ್‌ವರೆಗೆ ನನ್ನ ಉಳಿಸಲ್ಲ ಅಂತ ಹೇಗೆ ನಂಬೋದು?' ನಾನು ಬಿಗ್‌ಬಾಸ್‌ನಿಂದ ಹೊರ ಬಂದ ಮೇಲೆ ನಮ್ಮ ಮನೆಯವರು ಮಾತ್ರವಲ್ಲ, ಇಡೀ ಉತ್ತರ ಕರ್ನಾಟಕವೇ ಅಳುತ್ತಿದೆ.

ನನ್ನನ್ನು ಪ್ರೀತಿಸುವ ಹೃದಯಗಳೆಲ್ಲವೂ ಅಳುತ್ತಿದೆ. ತುಂಬಾ ಜನ ನನಗಾಗಿ ಹರಕೆ ಹೊತ್ತಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: Bigg Boss Kannada 12: ಸ್ಪಂದನಾ VS ಮಾಳು; ಬಿಗ್‌ಬಾಸ್ ಮನೆಯಿಂದ ಆಚೆ ಹೋಗೋದು ಯಾರು?

ಟಾಸ್ಕ್‌ಗಳಲ್ಲಿ ಆಡಿದ್ದೇ ನೋಡಿಲ್ಲ

ಗಿಲ್ಲಿ ವಿಚಾರಕ್ಕೆ ಬಂದರೆ, ನನ್ನಂತೆ ಅವರನ್ನು ಪ್ರೀತಿಸುವವರೂ ಇದ್ದಾರೆ. ಮನೆಯಲ್ಲಿ ಎಲ್ಲವೂ ಒಂದೇ ತರ ಇಲ್ಲ. ಬಿಗ್‌ಬಾಸ್‌ ಮನೆಯಲ್ಲಿ ಮಾಳು ಮಾತನಾಡಲ್ಲ ಅಂದ್ರೂ ಒಂದು ಬರುತ್ತೆ. ಕಾಮಿಡಿ ಮಾಡಲ್ಲ ಅಂದ್ರೂ ಒಂದು ಮಾತು ಬರುತ್ತೆ. ಪ್ರತಿ ವಿಷಯಕ್ಕೂ ಏನಾದ್ರೂ ಒಂದೊಂದು ಹುಟ್ಟಿಕೊಳ್ಳುತ್ತೆ.

ಗಿಲ್ಲಿ ಕಾಮಿಡಿ ಮಾಡ್ತಾನೆ, ಎಂಟರ್‌ಟೇನ್‌ ಮಾಡ್ತಾನೆ, ಅದೆಲ್ಲ ಓಕೆ. ಆದ್ರೆ ಒಂದು ಟಾಸ್ಕ್‌ಗಳಲ್ಲಿ ಆಡಿದ್ದೇ ನೋಡಿಲ್ಲ. ನನಗೆ ಈಗ ಬಿಗ್‌ಬಾಸ್‌ನಲ್ಲಿ ಬೇರೆ ಯಾರೇ ಗೆದ್ದರೂ ಒಪ್ಪುವುದಿಲ್ಲ ಹಾಗೆ ನೋಡಿದರೆ ಈಗ ಮನೆಯಲ್ಲಿ ಇರುವ ಯಾರೂ ವಿನ್ನರ್​ ಆಗಲು ಅರ್ಹರಲ್ಲ. ಯಾರು ಬಂದರೂ ನಾನು ಅದನ್ನು ಒಪ್ಪುವುದಿಲ್ಲ ಎಂದು ಅತಿ ಕೋಪದಿಂದ ನುಡಿದಿದ್ದಾರೆ ಮಾಳು.

ನನ್ನಲ್ಲಿ ಎಲ್ಲ ರೀತಿಯ ಅರ್ಹತೆ ಇದ್ದರೂ ಈ ಹಂತದಲ್ಲಿ ಎಲಿಮಿನೇಟ್​ ಮಾಡಿರುವುದು ಸರಿಯಲ್ಲ ಎಂದಿದ್ದಾರೆ.

ಈ ಹಿಂದೆ ಮನೆಯ ಒಳಗೆ ಬಂದ ಎರಡನೇ ವಾರಕ್ಕೆ ಸುಸ್ತಾಗಿದ್ದ ಮಾಳು ನಿಪನಾಳ ನನಗೆ ಇಲ್ಲಿ ಇಷ್ಟವಾಗುತ್ತಿಲ್ಲ, ಸೆಟ್‌ ಆಗ್ತಿಲ್ಲ, ಉತ್ತರ ಕರ್ನಾಟಕದವರು, ನಾನು ಹೊರಗಡೆ ಹೋಗಬೇಕು ಎಂದು ತಮ್ಮ ಅಳಲು ತೋಡಿಕೊಂಡಿದ್ದರು.

ಇದನ್ನೂ ಓದಿ: Bigg Boss Kannada 12: ಅಶ್ವಿನಿಗೆ ಸಖತ್‌ ಕ್ವಾಟ್ಲೆ ಕೊಟ್ಟ ಗಿಲ್ಲಿ; ಕೆಲಸ ಮುಗಿಸದೇ ಹೇಗೆ ಮಲಗ್ತೀರಾ ನೋಡೇ ಬಿಡ್ತಿನಿ ಅಂತ ಸವಾಲ್‌!

ಮಾಳು ಆಡಿದ ಈ ಮಾತುಗಳಿಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಅರ್ಹರಿಗೆ ಮನೆಯೊಳಗೆ ಪ್ರವೇಶ ಕೊಡಿ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು.