ನವದೆಹಲಿ: ಏಷ್ಯಾದಲ್ಲೇ ಅತೀ ಹೆಚ್ಚು ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಹೊಂದಿರುವ ಭಾರತವು (India) ಎರಡು ವರ್ಷಗಳ ಬಳಿಕ ವಿಶ್ವವಿದ್ಯಾಲಯಗಳ 2026ರ ಶ್ರೇಯಾಂಕದಲ್ಲಿ (QS Asia University Rankings 2026) ತನ್ನ ಮೊದಲ ಸ್ಥಾನವನ್ನು ಚೀನಾಕ್ಕೆ (China) ಬಿಟ್ಟುಕೊಟ್ಟಿದೆ. ಭಾರತದ ಹತ್ತು ಉನ್ನತ ಶ್ರೇಯಾಂಕಿತ ಶಿಕ್ಷಣ ಸಂಸ್ಥೆಗಳ ಪೈಕಿ ಒಂಬತ್ತು ಶಿಕ್ಷಣ ಸಂಸ್ಥೆಗಳ ಶ್ರೇಯಾಂಕ ಕಳೆದ ವರ್ಷಕ್ಕಿಂತ ಕುಸಿದಿರುವುದರಿಂದ ಈ ಬಾರಿ ಭಾರತ ಏಷ್ಯಾದಲ್ಲೇ ಎರಡನೇ ಸ್ಥಾನವನ್ನು ಪಡೆದಿದೆ. ಶ್ರೇಯಾಂಕದಲ್ಲಿ ಭಾರತ ಎರಡನೇ ಸ್ಥಾನಕ್ಕೆ ಕುಸಿದರೂ ಕೂಡ ಅದು ಸಂಶೋಧನಾ ಉತ್ಪಾದಕತೆ ಮತ್ತು ಅಧ್ಯಾಪಕರ ಬಲದಲ್ಲಿ ತನ್ನ ಉನ್ನತ ಸ್ಥಾನವನ್ನು ಕಾಯ್ದುಕೊಂಡಿದೆ.
ಭಾರತದ ಟಾಪ್ 10 ಸಂಸ್ಥೆಗಳಲ್ಲಿ ಏಳು ಐಐಟಿಗಳು ಸೇರಿವೆ. ಅವುಗಳೆಂದರೆ ದೆಹಲಿ, ಮದ್ರಾಸ್, ಬಾಂಬೆ, ಕಾನ್ಪುರ, ಖರಗ್ಪುರ, ರೂರ್ಕಿ ಮತ್ತು ಗುವಾಹಟಿ. ಇವುಗಳೊಂದಿಗೆ ಭಾರತೀಯ ವಿಜ್ಞಾನ ಸಂಸ್ಥೆ (IISc) ಬೆಂಗಳೂರು, ದೆಹಲಿ ವಿಶ್ವವಿದ್ಯಾಲಯ ಮತ್ತು ಚಂಡೀಗಢ ವಿಶ್ವವಿದ್ಯಾಲಯವು ಸೇರಿವೆ.
ಇದನ್ನೂ ಓದಿ: Kannada Book Festival: ಕಲಾಗಂಗೋತ್ರಿ ತಂಡದಿಂದ ಮೈಸೂರು ಮಲ್ಲಿಗೆ ನಾಟಕ; ಉಚಿತ ಪ್ರವೇಶ
ಈ ವರ್ಷದ ಶ್ರೇಯಾಂಕದಲ್ಲಿ ಈ ಬಾರಿ 137 ಭಾರತೀಯ ವಿಶ್ವವಿದ್ಯಾಲಯಗಳು ಪಟ್ಟಿಗೆ ಸೇರಿದೆ. ಈ ಮೂಲಕ ದೇಶದ ಒಟ್ಟು ವಿಶ್ವವಿದ್ಯಾಲಯಗಳ ಸಂಖ್ಯೆ 294ಕ್ಕೆ ತಲುಪಿದೆ. ಚೀನಾದ 261 ಸಂಸ್ಥೆಗಳು ಈ ಬಾರಿ ಸೇರ್ಪಡೆಗೊಂಡಿದ್ದು, ಈ ಮೂಲಕ ವಿಶ್ವವಿದ್ಯಾನಿಲಯ ಒಟ್ಟು ಸಂಖ್ಯೆ 395 ಸಂಸ್ಥೆಗಳನ್ನು ತಲುಪಿದೆ. ಈ ವರ್ಷದ ಶ್ರೇಯಾಂಕದಲ್ಲಿ ಒಟ್ಟು 1,529 ವಿಶ್ವವಿದ್ಯಾಲಯಗಳು ಸ್ಥಾನ ಪಡೆದಿವೆ.
ಹಾಂಗ್ ಕಾಂಗ್, ಚೀನಾ ಮತ್ತು ಸಿಂಗಾಪುರದ ಸಂಸ್ಥೆಗಳು ಅಗ್ರ 10ರಲ್ಲಿ ಸ್ಥಾನಗಳಿಸಿದ್ದು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ದೆಹಲಿ ಭಾರತದ ಅತ್ಯುತ್ತಮ ವಿಶ್ವವಿದ್ಯಾಲಯ ಎಂದು ಗುರುತಿಸಲ್ಪಟ್ಟಿದೆ. ಇದು 59 ನೇ ಸ್ಥಾನದಲ್ಲಿದೆ. ಕಳೆದ ವರ್ಷ 44 ನೇ ಸ್ಥಾನದಲ್ಲಿದ್ದ ದೆಹಲಿ ಐಐಟಿ 15 ಸ್ಥಾನಗಳ ಕುಸಿತ ಕಂಡಿದೆ. ಬಾಂಬೆ ಐಐಟಿ ಈ ವರ್ಷ 48 ರಿಂದ 71ನೇ ಸ್ಥಾನಕ್ಕೆ ಕುಸಿದಿದೆ.
ಶ್ರೇಯಾಂಕದಲ್ಲಿ ಸ್ಥಾನ ಪಡೆದ ಭಾರತೀಯ ಸಂಸ್ಥೆಗಳು
ಭಾರತದ ಟಾಪ್ 10 ಸಂಸ್ಥೆಗಳಲ್ಲಿ ಏಳು ಐಐಟಿಗಳು ಸೇರಿವೆ. ಅವುಗಳೆಂದರೆ ದೆಹಲಿ, ಮದ್ರಾಸ್, ಬಾಂಬೆ, ಕಾನ್ಪುರ, ಖರಗ್ಪುರ, ರೂರ್ಕಿ ಮತ್ತು ಗುವಾಹಟಿ. ಇವುಗಳೊಂದಿಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಬೆಂಗಳೂರು, ದೆಹಲಿ ವಿಶ್ವವಿದ್ಯಾಲಯ ಮತ್ತು ಚಂಡೀಗಢ ವಿಶ್ವವಿದ್ಯಾಲಯವು ಸ್ಥಾನ ಪಡೆದಿದೆ. ಇವುಗಳಲ್ಲಿ ಚಂಡೀಗಢ ವಿಶ್ವವಿದ್ಯಾಲಯ ಮಾತ್ರ ತನ್ನ ಶ್ರೇಯಾಂಕ 120 ರಿಂದ 109ನೇ ಸ್ಥಾನಕ್ಕೆ ಏರಿದೆ. ಒಟ್ಟಾರೆಯಾಗಿ ಏಳು ಭಾರತೀಯ ವಿಶ್ವವಿದ್ಯಾಲಯಗಳು 100ರಲ್ಲಿ ಸ್ಥಾನ ಪಡೆದಿದ್ದು, 200ರಲ್ಲಿ 20 ಮತ್ತು 500ರಲ್ಲಿ 66 ವಿಶ್ವವಿದ್ಯಾಲಯಗಳು ಸ್ಥಾನ ಪಡೆದಿವೆ.
ಭಾರತದ ಹಿನ್ನಡೆಗೆ ಕಾರಣ
ಈ ಬಾರಿ ಭಾರತವನ್ನು ಚೀನಾ ಹಿಂದಿಕ್ಕಿದರೂ ದೇಶದ ಪ್ರಾತಿನಿಧ್ಯ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಳವಾಗಿದೆ. 2016ರಲ್ಲಿ ಕೇವಲ 24 ಸಂಸ್ಥೆಗಳು ಶ್ರೇಯಾಂಕದಲ್ಲಿ ಸ್ಥಾನ ಪಡೆದಿತ್ತು. 2026ರಲ್ಲಿ ಅದು 249ಕ್ಕೆ ಏರಿದೆ. ಚೀನಾದ 273ರಿಂದ 1,125ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: WhatsApp RTO challan scam: ವಾಟ್ಸ್ಯಾಪ್‌ನಲ್ಲಿ ಹೊಸ ವಂಚನೆ, ಆರ್‌ಟಿಒ ಚಲನ್ ಹೆಸರಿನಲ್ಲಿ ಧೋಖಾ
ಶ್ರೇಯಾಂಕದ ಕುರಿತು ಪ್ರತಿಕ್ರಿಯಿಸಿರುವ ಕ್ವಾಕ್ವೆರೆಲ್ಲಿ ಸೈಮಂಡ್ಸ್ (QS) ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೆಸ್ಸಿಕಾ ಟರ್ನರ್, ರಾಷ್ಟ್ರೀಯ ಶಿಕ್ಷಣ ನೀತಿ (NEP) ಬಿಡುಗಡೆಯಾದ ಐದು ವರ್ಷಗಳ ಅನಂತರ ಭಾರತವು ಜಾಗತಿಕವಾಗಿ ಸಬಲೀಕರಣಗೊಳಿಸುವ ವ್ಯವಸ್ಥೆಯ ಮಟ್ಟದ ಸಾಮರ್ಥ್ಯವನ್ನು ನಿರ್ಮಿಸಿಕೊಂಡಿದೆ ಎಂದು ಹೇಳಿದರು.
ಭಾರತೀಯ ವಿವಿಗಳ ಸಾಧನೆ
ಪ್ರತಿ ಅಧ್ಯಾಪಕರ ಪತ್ರಿಕೆ ಸೂಚಕದಲ್ಲಿ ಭಾರತ ಪ್ರಾಬಲ್ಯ ಸಾಧಿಸಿದ್ದು, ಐದು ವಿಶ್ವವಿದ್ಯಾಲಯಗಳು ಏಷ್ಯಾದ ಟಾಪ್ 10 ರಲ್ಲಿ ಸ್ಥಾನ ಪಡೆದಿವೆ. ಟಾಪ್ 50ರಲ್ಲಿ 28 ವಿಶ್ವವಿದ್ಯಾಲಯಗಳು ಸ್ಥಾನ ಪಡೆದಿವೆ. ಇದೇ ಸೂಚಕದಲ್ಲಿ ಚೀನಾ ಟಾಪ್ 10 ರಲ್ಲಿ ಎರಡು ಮತ್ತು ಟಾಪ್ 50 ರಲ್ಲಿ 14 ಸ್ಥಾನ ಪಡೆದಿದೆ. ಇದರಲ್ಲಿ ಚೀನಾದ ಸಂಖ್ಯೆಗಿಂತ ಭಾರತದ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ. ಇನ್ನು ಡಾಕ್ಟರೇಟ್ ಹೊಂದಿರುವ ಸಿಬ್ಬಂದಿ ಪತ್ರಿಕೆ ಸೂಚಕದಲ್ಲಿ ಏಷ್ಯಾದ ಟಾಪ್ 100ರಲ್ಲಿ ಭಾರತವು 45 ಸಂಸ್ಥೆಗಳನ್ನು ಹೊಂದಿದೆ.