ಉತ್ತರ ಕೆರೊಲಿನಾದಲ್ಲಿ ವಿಮಾನ ಅಪಘಾತ; 7 ಮಂದಿ ಸಾವು
North Carolina plane crash: ಘಟನೆ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾದ ಬಳಿಕ ಹಂಚಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಸೆಸ್ನಾ ಸಿ550 ಬ್ಯುಸಿನೆಸ್ ಜೆಟ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
flight accident carolina -
ಕರೋಲಿನಾ, ಡಿ.19: ಉತ್ತರ ಕರೋಲಿನಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಪ್ರಯತ್ನದಲ್ಲಿದ್ದ ಖಾಸಗಿ ವಿಮಾನ ಗುರುವಾರ ತಡ ರಾತ್ರಿ ಅಪಘಾತಕ್ಕೀಡಾಗಿ ದುರಂತದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಮಾಜಿ ಎನ್‍ಎಎಸ್‍ಸಿಎಆರ್ ಚಾಲಕ ಗ್ರೆಗ್ ಬಿಫೆಲ್ ಹಾಗೂ ಅವರ ಕುಟುಂಬ ಸದಸ್ಯರು ಮೃತಪಟ್ಟವರಲ್ಲಿ ಸೇರಿದ್ದಾರೆ ಎಂದು ತಿಳಿದು ಬಂದಿದೆ.
ಚಾರ್ಲೊಟ್‍ನಿಂದ 45 ಮೈಲಿ ದೂರದ ಸ್ಟೇಟಸ್‍ವಿಲ್ ಪ್ರಾದೇಶಿಕ ವಿಮಾನ ನಿಲ್ದಾಣದಲ್ಲಿ ಭೂಮಿಗೆ ಅಪ್ಪಳಿಸಿದ ವಿಮಾನ ಸ್ಫೋಟಗೊಂಡು ಭಸ್ಮಗೊಂಡಿತು ಎಂದು ಹೇಳಲಾಗಿದೆ. ಬಿಫಲ್ ಕಂಪನಿ ಈ ವಿಮಾನವನ್ನು ನಿರ್ವಹಿಸುತ್ತಿತ್ತು ಎಂದು ದಾಖಲೆಗಳಿಂದ ತಿಳಿದು ಬಂದಿದೆ.
ಅಪಘಾತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಫೆಡರಲ್ ಏವಿಯೇಶನ್ ಅಡ್ಮಿನಿಸ್ಟ್ರಷನ್ ಘಟನೆ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ವಿಮಾನ ನಿಲ್ದಾಣದ ಫೇಸ್‍ಬುಕ್ ಪೇಜ್‍ನಲ್ಲಿ ವಿವರಿಸಲಾಗಿದೆ. ಗ್ರೆಗ್ ಬಿಫಲ್ ಅವರ ಪತ್ನಿ ಕ್ರಿಸ್ಟಿನಾ, ಐದು ವರ್ಷದ ಮಗ ರೈಡರ್ ಮತ್ತು 14 ವರ್ಷದ ಮಗಳು ಎಮ್ಮಾ ಅವರೊಂದಿಗೆ ವಿಮಾನದಲ್ಲಿದ್ದರು.ಡೆನ್ನಿಸ್ ಡಟ್ಟನ್, ಅವರ ಮಗ ಜ್ಯಾಕ್ ಮತ್ತು ಕ್ರೇಗ್ ವ್ಯಾಡ್ಸ್‌ವರ್ತ್ ಕೂಡ ವಿಮಾನದಲ್ಲಿದ್ದರು.
ಇದನ್ನೂ ಓದಿ ಬಾಂಗ್ಲಾದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ; ಅವಾಮಿ ಲೀಗ್‌ನ ಕಚೇರಿಗೆ ಬೆಂಕಿ
ಘಟನೆ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾದ ಬಳಿಕ ಹಂಚಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಸೆಸ್ನಾ ಸಿ550 ಬ್ಯುಸಿನೆಸ್ ಜೆಟ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.ವಿಮಾನ ಸ್ಫೋಟದಿಂದ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ಅವಶೇಷಗಳತ್ತ ಪರಿಹಾರ ತಂಡ ಧಾವಿಸುತ್ತಿರುವ ವಿಡಿಯೊಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಪಾಕಿಸ್ತಾನ ವಾಯುಪ್ರದೇಶ ನಿಷೇಧ ಜನವರಿ 23ರವರೆಗೆ ವಿಸ್ತರಣೆ
ಪ್ರತ್ಯೇಕ ಘಟನೆಯಲ್ಲಿ ಪಾಕಿಸ್ತಾನವು ತನ್ನ ವಾಯುಪ್ರದೇಶದೊಳಗೆ ಭಾರತೀಯ ವಿಮಾನ ಪ್ರವೇಶವನ್ನು ಜನವರಿ 23ರವರೆಗೆ ನಿಷೇಧಿಸಿದೆ. ಭಾರತವೂ ಕೂಡ ಪಾಕಿಸ್ತಾನ ವಿಮಾನಗಳಿಗೆ ತನ್ನ ವಾಯುಪ್ರದೇಶ ನಿಷೇಧ (Airspace Ban) ಅವಧಿಯನ್ನು ವಿಸ್ತರಿಸಿದೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಡೆಸಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದೊಳಗಿನ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಇದರಿಂದ ಪಾಕಿಸ್ತಾನವು ತನ್ನ ವಾಯುಪ್ರದೇಶದೊಳಗೆ ಭಾರತೀಯ ವಿಮಾನ ಪ್ರವೇಶವನ್ನು ನಿಷೇಧಿಸಿತ್ತು.