ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮೋದಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದ ಓಮನ್‌

PM Modi: ಪ್ರಧಾನಿ ನರೇಂದ್ರ ಮೋದಿ ಓಮನ್‌ ಪ್ರವಾಸದಲ್ಲಿದ್ದಾರೆ. ನಿನ್ನೆ ರಾತ್ರಿ ಒಮಾನ್‌ನ ರಕ್ಷಣಾ ವ್ಯವಹಾರಗಳ ಉಪ ಪ್ರಧಾನ ಮಂತ್ರಿ ಸಯ್ಯದ್ ಶಿಹಾಬ್ ಬಿನ್ ತಾರಿಕ್ ಅಲ್ ಸೈದ್ ಅವರು ಮಸ್ಕತ್‌ನ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

ಮೋದಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದ  ಓಮನ್‌

ನರೇಂದ್ರ ಮೋದಿಗೆ ಓಮನ್‌ ಗೌರವ -

Vishakha Bhat
Vishakha Bhat Dec 18, 2025 6:32 PM

ಮಸ್ಕತ್‌: ಪ್ರಧಾನಿ ನರೇಂದ್ರ ಮೋದಿ (Narendra Modi) ಓಮನ್‌ ಪ್ರವಾಸದಲ್ಲಿದ್ದಾರೆ. ನಿನ್ನೆ ರಾತ್ರಿ ಒಮಾನ್‌ನ ರಕ್ಷಣಾ ವ್ಯವಹಾರಗಳ ಉಪ ಪ್ರಧಾನ ಮಂತ್ರಿ ಸಯ್ಯದ್ ಶಿಹಾಬ್ ಬಿನ್ ತಾರಿಕ್ ಅಲ್ ಸೈದ್ ಅವರು ಮಸ್ಕತ್‌ನ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಇಂದು ಪ್ರಧಾನಿಗೆ ಭಾರತ-ಓಮನ್ ಸಂಬಂಧಗಳನ್ನು ಬಲಪಡಿಸುವಲ್ಲಿ ಮೋದಿ ಅವರ ಪಾತ್ರವನ್ನು ಗುರುತಿಸಿ, ಸುಲ್ತಾನ ಹೈತಮ್ ಬಿನ್ ತಾರಿಕ್ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುಲ್ತಾನರ ವಿಶಿಷ್ಟ ನಾಗರಿಕ ಗೌರವವಾದ ಆರ್ಡರ್ ಆಫ್ ಓಮನ್ ಅನ್ನು ಪ್ರದಾನ ಮಾಡಲಾಗಿದೆ.

ಈ ಪ್ರಶಸ್ತಿಯು ಅವರನ್ನು ರಾಣಿ ಎಲಿಜಬೆತ್ II, ನೆದರ್ಲ್ಯಾಂಡ್ಸ್‌ನ ರಾಣಿ ಮ್ಯಾಕ್ಸಿಮಾ, ಜಪಾನ್‌ನ ಚಕ್ರವರ್ತಿ ಅಕಿಹಿಟೊ, ನೆಲ್ಸನ್ ಮಂಡೇಲಾ ಮತ್ತು ಜೋರ್ಡಾನ್‌ನ ರಾಜ ಅಬ್ದುಲ್ಲಾ ಸೇರಿದಂತೆ ಹಲವು ಗಣ್ಯರಿಗೆ ಈ ಪ್ರಶ್ತಸ್ತಿಯನ್ನು ನೀಡಿ ಗೌರವಿಸಲಾಗಿದೆ. ಇದೀಗ ಪ್ರಧಾನಿ ಮೋದಿಗೆ ಒಟ್ಟು 29 ಅಂತಾರಾಷ್ಟ್ರೀಯ ಗೌರವಗಳು ದೊರಕಿದಂತಾಗಿವೆ. ಇಥಿಯೋಪಿಯಾ ತನ್ನ ಅತ್ಯುನ್ನತ ನಾಗರಿಕ ಗೌರವವಾದ ಇಥಿಯೋಪಿಯಾದ ಗ್ರೇಟ್ ಆನರ್ ನಿಶಾನ್ ಅನ್ನು ಅಡಿಸ್ ಅಬಾಬಾದಲ್ಲಿ ಅವರಿಗೆ ನೀಡಿದ ಒಂದು ದಿನದ ನಂತರ ಒಮಾನ್‌ನಲ್ಲಿ ಪ್ರಧಾನಿ ಮೋದಿಯ ಗೌರವ ಬಂದಿದೆ.

ಗ್ರೇಟ್ ಆರ್ಡರ್ ಆಫ್ ಓಮನ್ ಎಂಬುದು ಒಮಾನ್ ದೇಶದ ಅತ್ಯುನ್ನತ ನಾಗರಿಕ ಗೌರವವಾಗಿದ್ದು, ವಿದೇಶಿ ರಾಷ್ಟ್ರಗಳ ಮುಖ್ಯಸ್ಥರು, ರಾಜಮನೆತನದ ಉನ್ನತ ಸದಸ್ಯರು ಮತ್ತು ಒಮಾನ್ ದೇಶದ ಸಂಬಂಧಗಳನ್ನು ಬಲಪಡಿಸುವ ಗಣ್ಯರಿಗೆ ಸುಲ್ತಾನ್ ನೀಡುವ ಶ್ರೇಷ್ಠ ಪ್ರಶಸ್ತಿಯಾಗಿದೆ. ಇದನ್ನು ಸುಲ್ತಾನ್ ಕಬೂಸ್ ಬಿನ್ ಸೈದ್ ಅವರು 1970ರಲ್ಲಿ ಸ್ಥಾಪಿಸಿದರು ಮತ್ತು ಇದು ಪ್ರಸ್ತುತ ಒಮಾನ್‌ನ ಅತ್ಯುನ್ನತ ಗೌರವವಾಗಿದೆ. ಭಾರತ ಮತ್ತು ಒಮಾನ್ ನಡುವಿನ ರಾಜತಾಂತ್ರಿಕ ಸಂಬಂಧಗಳ 70 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅವರ ಭೇಟಿ ನಡೆಯಲಿದ್ದು, ಎರಡೂ ದೇಶಗಳು ವ್ಯಾಪಾರ, ಹೂಡಿಕೆ, ಇಂಧನ, ರಕ್ಷಣೆ ಮತ್ತು ಸಾಂಸ್ಕೃತಿಕ ವಿನಿಮಯ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವತ್ತ ಗಮನಹರಿಸಿವೆ.

ಇದಕ್ಕೂ ಮುನ್ನ ಇಥಿಯೋಪಿಯಾಗೆ ಮೋದಿ ಭೇಟಿ ನೀಡಿದ್ದರು. ಅವರಿಗೆ ಇಥಿಯೋಪಿಯಾ ರಾಷ್ಟ್ರದ ಅತ್ಯನ್ನತ ಪ್ರಶಸ್ತಿಯನ್ನು (Great Honor Nishan of Ethiopia award) ನೀಡಿ ಗೌರವಿಸಲಾಗಿದೆ. ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅಲಿ ಅವರು ಮಂಗಳವಾರ ಪ್ರದಾನ ಮಾಡಿದರು.