ವಾಷಿಂಗ್ಟನ್: ರಷ್ಯಾದೊಂದಿಗೆ (Russia) ತೈಲ ವ್ಯವಹಾರವು (oil purchase) ಉಕ್ರೇನ್ ಯುದ್ಧಕ್ಕೆ (Ukraine war) ನೇರವಾಗಿ ಹಣಕಾಸು ಒದಗಿಸಿದೆ. ಹೀಗಾಗಿ ಅಮೆರಿಕವು ಭಾರತ ಸೇರಿದಂತೆ ರಷ್ಯಾದಿಂದ ತೈಲ ಖರೀದಿ ಮಾಡುವ ರಾಷ್ಟ್ರಗಳಿಗೆ ಸುಂಕ ವಿಧಿಸಿದೆ. ರಷ್ಯಾದ ತೈಲ ಖರೀದಿಗೆ ಸಂಬಂಧಿಸಿ ಭಾರತದ ಮೇಲೆ ಅಮೆರಿಕ ವಿಧಿಸಿರುವ ಸುಂಕಕ್ಕೆ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (President Donald Trump) ಅವರೊಂದಿಗೆ ಕೂಡಿ ಮಾತುಕತೆ ನಡೆಸಿ ಪರಿಹಾರ ಹುಡುಕುತ್ತಾರೆ ಎಂದು ಶ್ವೇತಭವನದ ಹಿರಿಯ ವ್ಯಾಪಾರ ಸಲಹೆಗಾರ ಪೀಟರ್ ನವರೊ ಅವರು ಮಂಗಳವಾರ ಹೇಳಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಷ್ಯಾದಿಂದ ತೈಲ ಖರೀದಿಗೆ ವಿಧಿಸಿರುವ ಸುಂಕವನ್ನು ಭಾರತ ಬೆದರಿಕೆ ಎಂದು ಪರಿಗಣಿಸಿದೆ. ಆದರೆ ಇದು ರಷ್ಯಾಕ್ಕೆ ಹೊಡೆತ ನೀಡುವ ಒಂದು ಯೋಜನೆಯಾಗಿದೆ. ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಮಾಡಿರುವ ತಂತ್ರವಾಗಿದೆ. ಭಾರತಕಿರುವ ಅಮೆರಿಕದ ಸುಂಕದ ಬೆದರಿಕೆಯಿಂದ ಉಂಟಾಗುವ ಸಮಸ್ಯೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಸೇರಿ ಪರಿಹರಿಸುತ್ತಾರೆ ಎಂದು ಹೇಳಿದರು.
ಇತ್ತೀಚೆಗೆ ಅಮೆರಿಕದ ಸೆನೆಟ್ ನಲ್ಲಿ ರಷ್ಯಾದಿಂದ ಇಂಧನ ಖರೀದಿ ಮಾಡುವ ಅಗ್ರ ಐದು ರಾಷ್ಟ್ರಗಳ ಮೇಲೆ ಶೇಕಡಾ 100 ರಷ್ಟು ಸುಂಕಗಳನ್ನು ವಿಧಿಸಲು ಅಮೆರಿಕ ಅಧ್ಯಕ್ಷರಿಗೆ ಅಧಿಕಾರ ನೀಡುವ ಮಸೂದೆಯನ್ನು ಅಂಗೀಕರಿಸಲಾಯಿತು. ಇದರ ಬಳಿಕ ಪೀಟರ್ ನವರೊ ಅವರು ಈ ಹೇಳಿಕೆ ನೀಡಿದ್ದಾರೆ.
ಬಾಂಗ್ಲಾದೇಶಕ್ಕೆ ಶೇಖ್ ಹಸೀನಾ ಹಸ್ತಾಂತರಿಸುತ್ತ ಭಾರತ? ವಿದೇಶಾಂಗ ಸಚಿವಾಲಯ ಹೇಳಿದ್ದೇನು?
ಭಾರತವು ಮೊದಲು ರಷ್ಯಾದಿಂದ ತೈಲ ಖರೀದಿ ಮಾಡುತ್ತಿರಲಿಲ್ಲ. 2022ರಲ್ಲಿ ಉಕ್ರೇನ್ ಯುದ್ಧ ಪ್ರಾರಂಭವಾದ ಮೇಲೆ ಅದು ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ತೈಲ ಖರೀದಿ ಮಾಡುವ ರಾಷ್ಟ್ರವಾಗಿ ಹೊರಹೊಮ್ಮಿದೆ. ಈ ಮೂಲಕ ಅದು ಕೂಡ ಯುದ್ಧದಲ್ಲಿ ಭಾಗಿಯಾದಂತಾಗಿದೆ. ಭಾರತವು ರಷ್ಯಾದ ಪರವಾಗಿ ಬಹಳಷ್ಟು ಸಂಸ್ಕರಿಸಿದ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಇದು ಯುದ್ಧವನ್ನು ಹೆಚ್ಚಿಸಲು ಪರೋಕ್ಷವಾಗಿ ರಷ್ಯಾಕ್ಕೆ ಸಹಾಯ ಮಾಡಿದೆ ಎಂದು ತಿಳಿಸಿದರು.