ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shehbaz Sharif: ವಾಯುನೆಲೆಗಳನ್ನು ಭಾರತ ಧ್ವಂಸ ಮಾಡಿದ್ದು ನಿಜ; ಬಹಿರಂಗವಾಗಿಯೇ ಒಪ್ಪಿಕೊಂಡ ಪಾಕ್‌ ಪ್ರಧಾನಿ

Operation Sindoor:ಮೇ 10 ರ ಮುಂಜಾನೆ, ನೂರ್ ಖಾನ್ ವಾಯುನೆಲೆ ಸೇರಿದಂತೆ ಪಾಕಿಸ್ತಾನದ ಭೂಪ್ರದೇಶದ ಮೇಲೆ ಭಾರತೀಯ ಕ್ಷಿಪಣಿ ದಾಳಿಗಳ ಕುರಿತು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರಿಂದ ತುರ್ತು ಅಧಿಸೂಚನೆ ಬಂದಿರುವ ಬಗ್ಗೆ ಶಹಬಾಜ್‌ ಷರೀಫ್‌ ಮಾಹಿತಿ ಹಂಚಿಕೊಂಡಿದ್ದಾರೆ. ಆ ಮೂಲಕ ಪಾಕಿಸ್ತಾನ ಸುಳ್ಳು ಬಟಾಬಯಲಾಗಿದೆ.

ವಾಯುನೆಲೆಗಳನ್ನು ಭಾರತ ಧ್ವಂಸ ಮಾಡಿದ್ದು ನಿಜ-ಪಾಕ್‌ ಪ್ರಧಾನಿ

Profile Rakshita Karkera May 17, 2025 9:55 AM

ಇಸ್ಲಮಾಬಾದ್‌: ಆಪರೇಷನ್‌ ಸಿಂದೂರ್‌(Operation sindoor) ನಡೆಸಿ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ನೆಲೆವೂರಿದ್ದ ಉಗ್ರರನ್ನು ಸದೆ ಬಡಿದ ನಂತರ ಪಾಕ್‌ ಉಪಟಳ ಮತ್ತಷ್ಟು ಹೆಚ್ಚಾಗಿತ್ತು. ಇದರ ಬೆನ್ನಲ್ಲೇ ತಕ್ಕ ಪಾಠ ಕಳಿಸಲು ಪಾಕ್‌ ವಾಯುನೆಲೆಗಳನ್ನು ಗುರಿಯಾಗಿಸಿ ಭಾರತ ಡ್ರೋನ್‌, ಕ್ಷಿಪಣಿ ದಾಳಿ ನಡೆಸಿತ್ತು. ಇದರಲ್ಲಿ ಪಾಕ್‌ನ ಅನೇಕ ವಾಯುನೆಲೆಗಳು ಉಡೀಸ್‌ ಆಗಿದ್ದವು. ಅದಾಗ್ಯೂ ಪಾಕ್‌ ಇದನ್ನು ಒಪ್ಪಿಕೊಂಡಿರಲಿಲ್ಲ. ತಾನೇ ಭಾರತದ ಹಲವು ಪ್ರದೇಶಗಳನ್ನು ಧ್ವಂಸಗೊಳಿಸಿರುವುದಾಗಿ ಸುಳ್ಳು ಹೇಳುತ್ತಾ ಬಂದಿತ್ತು. ಆದರೆ ಇದೀಗ ಸ್ವತಃ ಪಾಕ್‌ ಪ್ರಧಾನಿ ಶಹಬಾಜ್‌ ಷರೀಫ್‌(Shehbaz Sharif) ಈ ದಾಳಿ ನಡೆದಿರುವುದು ನಿಜ ಎಂಬುದನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ.

ಮೇ 10 ರ ಮುಂಜಾನೆ, ನೂರ್ ಖಾನ್ ವಾಯುನೆಲೆ ಸೇರಿದಂತೆ ಪಾಕಿಸ್ತಾನದ ಭೂಪ್ರದೇಶದ ಮೇಲೆ ಭಾರತೀಯ ಕ್ಷಿಪಣಿ ದಾಳಿಗಳ ಕುರಿತು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರಿಂದ ತುರ್ತು ಅಧಿಸೂಚನೆ ಬಂದಿರುವ ಬಗ್ಗೆ ಶಹಬಾಜ್‌ ಷರೀಫ್‌ ಮಾಹಿತಿ ಹಂಚಿಕೊಂಡಿದ್ದಾರೆ. ಆ ಮೂಲಕ ಪಾಕಿಸ್ತಾನ ಸುಳ್ಳು ಬಟಾಬಯಲಾಗಿದೆ.

ಶಹಬಾಜ್‌ ಷರೀಫ್‌ ವಿಡಿಯೊ ಇಲ್ಲಿದೆ



ಈ ಸುದ್ದಿಯನ್ನೂ ಓದಿ: Baloch Liberation Army: ಪಾಕಿಸ್ತಾನದ 14 ಸೈನಿಕರ ಹತ್ಯೆ ಮಾಡಿದ ಬಲೂಚ್‌ ಲಿಬರೇಷನ್‌ ಆರ್ಮಿ; ವಿಡಿಯೊ ರಿಲೀಸ್‌

ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಷರೀಫ್‌, ಮೇ 9 ಮತ್ತು 10 ರ ಮಧ್ಯರಾತ್ರಿ ಸುಮಾರು 2:30 ಕ್ಕೆ ಜನರಲ್ ಅಸಿಮ್ ಮುನೀರ್ ಅವರನ್ನು ಸಂಪರ್ಕಿಸಿ, ದಾಳಿಗಳ ಬಗ್ಗೆ ಮಾಹಿತಿ ನೀಡಿದರು ಎಂದು ಶಹಬಾಜ್ ಷರೀಫ್ ಹೇಳಿದ್ದಾರೆ. ಜನರಲ್ ಮುನೀರ್ ಅವರ ಅಧಿಸೂಚನೆಯಲ್ಲಿ ಭಾರತವು ಮಹತ್ವದ ಮಿಲಿಟರಿ ನೆಲೆಯಾದ ನೂರ್ ಖಾನ್ ವಾಯುನೆಲೆಯ ಮೇಲೆ ದಾಳಿ ಮಾಡಿದೆ ಎಂದು ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿತ್ತು. ಇಸ್ಲಾಮಾಬಾದ್ ಬಳಿಯ ರಾವಲ್ಪಿಂಡಿಯ ಚಕ್ಲಾಲಾದಲ್ಲಿರುವ ನೂರ್ ಖಾನ್ ವಾಯುನೆಲೆಯು ಪಾಕಿಸ್ತಾನ ವಾಯುಪಡೆಗೆ (PAF) ಕಾರ್ಯತಂತ್ರದ ಪ್ರಮುಖ ಕೇಂದ್ರವಾಗಿದೆ.

ಇದಾದ ಒಂದು ದಿನದ ನಂತರ ಕದನ ವಿರಾಮಕ್ಕೆ ಭಾರತ ಮುಂದಾಗಿದೆ ಎಂದು ಹೇಳಿ ಜನರಲ್‌ ಆಸಿಮ್‌ ಮುನೀರ್‌ ನನಗೆ ಕರೆ ಮಾಡಿದ್ದರು. ಭಾರತದ ದಾಳಿಗೆ ನಾವು ತಕ್ಕ ಪ್ರತ್ಯುತ್ತರ ನೀಡಿದ್ದೇವೆ. ಹೀಗಾಗಿ ಭಾರತ ಕದನ ವಿರಾಮ ಬಯಸುತ್ತಿದೆ ಎಂದು ಅವರು ಫೋನ್‌ ಕರೆಯಲ್ಲಿ ತಿಳಿಸಿದ್ದರು ಎಂದು ಷರೀಫ್‌ ಹೇಳಿದ್ದಾರೆ.