Astro Tips: ಸೂರ್ಯ ತೇಜಸ್ಸು ಸಿಗಬೇಕಾದರೆ ಭಾನುವಾರ ಹೀಗೆ ಪೂಜಿಸಿ
ಭಾನುವಾರ ಸೂರ್ಯ ದೇವರನ್ನು ಪೂಜಿಸುವುದರಿಂದ ಬುದ್ಧಿವಂತಿಕೆ ಮತ್ತು ಶಕ್ತಿ ವೃದ್ಧಿಯಾಗುತ್ತದೆ. ದೇಹದಲ್ಲಿ ಯಾವುದೇ ಕಾಯಿಲೆ ಇದ್ದರೆ ಸೂರ್ಯ ನಮಸ್ಕಾರ ಮಾಡುವುದರಿಂದ ಗುಣವಾಗುತ್ತದೆ ಮತ್ತು ಇದರಿಂದ ಓರ್ವ ವ್ಯಕ್ತಿಯು ಮಾನಸಿಕ ನೆಮ್ಮದಿ ಪಡೆಯುತ್ತಾನೆ. ಈ ದಿನ ಸೂರ್ಯ ದೇವರಿಗೂ ಅರ್ಘ್ಯ ಅರ್ಪಿಸುವುದು ಮುಖ್ಯ.
ಸೂರ್ಯ ದೇವ -
ಬೆಂಗಳೂರು: ಭಾನು ಎಂದರೆ ಸೂರ್ಯ ಎಂದರ್ಥ. ಹಾಗಾಗಿ ಭಾನುವಾರ (Sunday) ಸೂರ್ಯನಿಗೆ ಸಂಬಂಧಿಸಿದ ದಿನ. ಸೂರ್ಯ ದೇವನ (Surya Deva) ಅನುಗ್ರಹಕ್ಕೆ ಪಾತ್ರರಾಗಲು ಇದಕ್ಕಿಂತ ಉತ್ತಮ ದಿನ ಇನ್ನೊಂದಿಲ್ಲ. ಭಾನುವಾರ ಸೂರ್ಯ ದೇವನ ಕೃಪೆಗೆ ಪಾತ್ರಾಗಲು ಅರ್ಘ್ಯವನ್ನು ಅರ್ಪಿಸುವುದು ಸೂಕ್ತ. ಸೂರ್ಯನನ್ನು ಭಗವಾನ್ ಹನುಮಂತನ ಗುರು ಎಂದು ಪರಿಗಣಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರ (Astro Tips)ದ ಪ್ರಕಾರ ಭಾನುವಾರ ಸೂರ್ಯ ದೇವರನ್ನು ಪೂಜಿಸುವುದರಿಂದ ಬುದ್ಧಿವಂತಿಕೆ ಮತ್ತು ಶಕ್ತಿ ವೃದ್ಧಿಯಾಗುತ್ತದೆ. ದೇಹದಲ್ಲಿ ಯಾವುದೇ ಕಾಯಿಲೆ ಇದ್ದರೆ ಸೂರ್ಯ ನಮಸ್ಕಾರ ಮಾಡುವುದರಿಂದ ಗುಣವಾಗುತ್ತದೆ ಮತ್ತು ಇದರಿಂದ ಓರ್ವ ವ್ಯಕ್ತಿಯು ಮಾನಸಿಕ ನೆಮ್ಮದಿ ಪಡೆಯುತ್ತಾನೆ.
ಭಾನುವಾರ ಪಠಿಸಬೇಕಾದ ಸೂರ್ಯ ಮಂತ್ರ ಹೀಗಿದೆ:
ಓಂ ಹ್ರೀಂ ಹ್ರೀಂ ಸೂರ್ಯಾಯ ಸಹಸ್ರಕಿರಣರಾಯ ಮನೋವಾಂಛಿತ ಫಲಂ ದೇಹಿ ದೇಹಿ ಸ್ವಾಹಾ|
ಓಂ ಹ್ರೀಂ ಹ್ರೀಂ ಸೂರ್ಯಾಯ ನಮಃ||
ಓಂ ಘೃಣಿಂ ಸೂರ್ಯಃ ಆದಿತ್ಯಃ|
ಓಂ ಏಹಿ ಸೂರ್ಯ ಸಹಸ್ತ್ರಾಂಶೋಂ ತೇಜೋ ಜಗತ್ಪತೇ
ಅನುಕಂಪಯೇಮಾಂ ಭಕ್ತ್ಯಾ, ಗೃಹಣಾರ್ಘ್ಯ ದಿವಾಕರಃ||
ಓಂ ಹ್ರೀಂ ಘೃಣಿಃ ಸೂರ್ಯ ಆದಿತ್ಯಃ ಕ್ಲೀಂ ಓಂ|
ಹಣ ಬರುತ್ತಿಲ್ಲ, ಬಂದ ಹಣ ಉಳಿಯುತ್ತಿಲ್ಲವೆಂಬ ಚಿಂತೆಯೇ? ಹಾಗಾದ್ರೆ ಚಿಂತೆ ಬಿಡಿ ಈ ಸಿಂಪಲ್ ಪರಿಹಾರಗಳನ್ನು ಮಾಡಿ
ಸೂರ್ಯ ಮಂತ್ರಗಳನ್ನು ಪಠಿಸುವುದರಿಂದ ಈ ಎಲ್ಲಾ ಪ್ರಯೋಜನಗಳನ್ನು ನಾವು ಪಡೆದುಕೊಳ್ಳಬಹುದಾಗಿದೆ. ಇದರಿಂದ ಸೂರ್ಯ ದೇವರ ಆಶೀರ್ವಾದವು ನಿಮ್ಮ ಮೇಲೆ ಸದಾಕಾಲ ಇರುತ್ತದೆ. ಭಾನುವಾರ ತಾಮ್ರದ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಕೆಂಪು ಹೂವುಗಳನ್ನು ಹಾಕಿ, ಅದನ್ನು ಬಳಿಕ ಉದಯ ಸೂರ್ಯನಿಗೆ ಸಮರ್ಪಿಸಿದರೆ ಎಲ್ಲ ಬಾಧೆಗಳು ದೂರವಾಗಿ ಸೂರ್ಯದೇವನ ವಿಶೇಷ ಅನುಗ್ರಹಕ್ಕೆ ನೀವು ಪಾತ್ರರಾಗುತ್ತೀರಿ. ಪೌರಾಣಿಕ ಧಾರ್ಮಿಕ ಗ್ರಂಥಗಳಲ್ಲಿ ಸೂರ್ಯ ದೇವನಿಗೆ ಅರ್ಪಿಸಲಾಗುವ ಅರ್ಘ್ಯಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ.
ಪ್ರತಿದಿನ ಬೆಳಗ್ಗೆ ತಾಮ್ರದ ಬಿಂದಿಗೆಯಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಕೆಂಪು ಹೂವುಗಳನ್ನು ಮತ್ತು ಅಕ್ಕಿಯನ್ನು ಹಾಕಿ ಸೂರ್ಯ ಮಂತ್ರವನ್ನು ಶುದ್ಧ ಮನಸ್ಸಿನಿಂದ ಪಠಿಸುವ ಮೂಲಕ ಸೂರ್ಯ ದೇವನಿಗೆ ಅರ್ಘ್ಯವನ್ನು ನೀಡಬೇಕು. ಇದರಿಂದ ಸೂರ್ಯದೇವನು ಸಂತೋಷಗೊಂಡು ನಮಗೆ ಆಯಸ್ಸು, ಆರೋಗ್ಯ, ಸಂಪತ್ತು, ಧಾನ್ಯ, ಸಂತಾನ, ಶತ್ರು ನಾಶ, ಕೀರ್ತಿ, ಜ್ಞಾನ ಮುಂತಾದುವುಗಳನ್ನು ಕರುಣಿಸುವನು ಎನ್ನುತ್ತದೆ ಶಾಸ್ತ್ರ.
ಭಾನುವಾರದ ನೀವು ಈ ಮೇಲಿನ ಸೂರ್ಯ ಮಂತ್ರಗಳನ್ನು ಪಠಿಸುವುದರಿಂದ ಹಾಗೂ ಸೂರ್ಯ ಪೂಜೆಯನ್ನು ಮಾಡುವುದರಿಂದ ಉತ್ತಮ ಆರೋಗ್ಯ, ಸಂತೋಷ ಮತ್ತು ಸಮೃದ್ಧಿ ಪ್ರಾಪ್ತವಾಗುತ್ತದೆ ಎನ್ನುವ ನಂಬಿಕೆಯಿದೆ.