ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Sam Pitroda : ಭಾರತಕ್ಕೆ ಚೀನಾ ಶತ್ರುವಲ್ಲ ಅಲ್ವಂತೆ! ಮತ್ತೆ ನಾಲಿಗೆ ಹರಿಬಿಟ್ಟ ಸ್ಯಾಮ್‌ ಪಿತ್ರೊಡಾ

ಸ್ಯಾಮ್ ಪಿತ್ರೋಡಾ ಭಾರತ ಹಾಗೂ ಚೀನಾ ನಡುವಿನ ಗಡಿ ಉದ್ವಿಗ್ನತೆಯ ಬಗ್ಗೆ ಮಾತನಾಡಿದ್ದಾರೆ. ಖಾಸಗಿ ಸಂದರ್ಶನದಲ್ಲಿ ಭಾಗವಹಿಸಿದ ಅವರು ಭಾರತದ ಮನಸ್ಥಿತಿಯನ್ನು ಬದಲಾಯಿಸುವ ಅವಶ್ಯಕತೆಯಿದೆ. ಭಾರತ ಚೀನಾವನ್ನು ಶತ್ರುವೆಂದು ಪರಿಗಣಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.

ಮತ್ತೆ ನಾಲಿಗೆ ಹರಿಬಿಟ್ಟ ಸ್ಯಾಮ್‌ ಪಿತ್ರೋಡಾ! ಏನಿದೆ ಹೊಸ ವಿವಾದ?

ಸ್ಯಾಮ್ ಪಿತ್ರೋಡಾ

Profile Vishakha Bhat Feb 17, 2025 1:44 PM

ವಾಷಿಂಗ್ಟನ್‌: ಸದಾ ವಿವಾದಾತ್ಮಕ ಹೇಳುವ ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಸ್ಯಾಮ್ ಪಿತ್ರೋಡಾ (Sam Pitroda) ಇದೀಗ ಮತ್ತೊಂದು ಹೇಳಿಕೆಯನ್ನು ನೀಡಿದ್ದಾರೆ. ಅವರು ಭಾರತ ಹಾಗೂ ಚೀನಾ ನಡುವಿನ ಗಡಿ ಉದ್ವಿಗ್ನತೆಯ ಬಗ್ಗೆ ಮಾತನಾಡಿದ್ದಾರೆ. ಖಾಸಗಿ ಸಂದರ್ಶನದಲ್ಲಿ ಭಾಗವಹಿಸಿದ ಅವರು ಭಾರತದ ಮನಸ್ಥಿತಿಯನ್ನು ಬದಲಾಯಿಸುವ ಅವಶ್ಯಕತೆಯಿದೆ. ಭಾರತ ಚೀನಾವನ್ನು ಶತ್ರುವೆಂದು ಪರಿಗಣಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಚೀನಾದಿಂದ ಭಾರತಕ್ಕೆ ಯಾವುದೇ ಬೆದರಿಕೆಗಳು ಬರುವ ರೀತಿಯಲ್ಲಿ ಕಾಣಿಸುತ್ತಿಲ್ಲ, ಆದ್ದರಿಂದ ಆ ದೇಶವನ್ನು ಗೌರವಿಸಬೇಕು ಎಂದು ಹೇಳಿದ್ದಾರೆ.

ಭಾರತದ ಬಗ್ಗೆ ವಾಗ್ದಾಳಿ ಮುಂದುವರಿಸಿದ ಪಿತ್ರೋಡಾ ಭಾರತ ಮೊದಲಿನಿಂದಲೂ ಆಕ್ರಮಣಕಾರಿ ಮನೋಭಾವನೆಯನ್ನು ಹೊಂದಿದೆ. ಆ ಮನೋಭಾವವು ಶತ್ರುಗಳನ್ನು ಸೃಷ್ಟಿಸುತ್ತದೆ. ಮೊದಲಿನಿಂದಲೂ ಭಾರತ ಚೀನಾವನ್ನು ತನ್ನ ಶತ್ರು ಎಂದು ಪರಿಗಣಿಸಿದೆ. ಈ ಧೋರಣೆ ಬದಲಾಗಬೇಕು ಎಂದು ಅವರು ಹೇಳಿದ್ದಾರೆ. ಎಲ್ಲಾ ರಾಷ್ಟ್ರಗಳು ಒಗ್ಗೂಡುವ ಸಮಯ ಬಂದಿದೆ ನಾವು ವಿಶಾಲ ಮನೋಭಾವನೆ ಬೆಳೆಸಿಕೊಳ್ಳಬೇಕು. ನಾವೆಲ್ಲರೂ ಕಲಿಯಲು, ಸಂವಹನವನ್ನು ಹೆಚ್ಚಿಸಲು, ಸಹಕರಿಸಲು, ಕಾರ್ಯನಿರ್ವಹಿಸಲು ಸರಿಯಾದ ಸಮಯ ಬಂದಿದೆ ಎಂದು ನನಗೆ ಅನ್ನಿಸುತ್ತದೆ. ಈ ಆಜ್ಞೆ ಮತ್ತು ನಿಯಂತ್ರಣ ಮನಸ್ಥಿತಿಯನ್ನು ನಾವು ಬಿಡಬೇಕು ಎಂದು ಅವರು ಹೇಳಿದ್ದಾರೆ.



ಚೀನಾದ ಬಗ್ಗೆ ಮಾತನಾಡಿ ಚೀನಾ ಬೆಳೆಯುತ್ತಿದೆ. ನೀವು ಅದನ್ನು ಗುರುತಿಸಬೇಕು ಮತ್ತು ಗೌರವಿಸಬೇಕು. ಪ್ರತಿಯೊಂದು ದೇಶವೂ ಬೆಳೆಯಲಿದೆ, ಕೆಲವು ವೇಗವಾಗಿ ಬೆಳೆಯುತ್ತವೆ, ಕೆಲವು ನಿಧಾನವಾಗಿ ಬೆಳೆಯುತ್ತವೆ. ತುಂಬಾ ಬಡವರು ವೇಗವಾಗಿ ಬೆಳೆಯಬೇಕು, ಉತ್ತಮವಾಗಿ ಸಾಧನೆ ಮಾಡಿದವರು ಮತ್ತು ಅಭಿವೃದ್ಧಿ ಹೊಂದಿದವರು ನಿಧಾನಗತಿಯ ಬೆಳವಣಿಗೆಯನ್ನು ಹೊಂದಿರುತ್ತಾರೆ. ಅಭಿವೃದ್ಧಿ ಹೊಂದಿದವರು ವಯಸ್ಸಾದ ಜನಸಂಖ್ಯೆಯನ್ನು ಹೊಂದಿರುತ್ತಾರೆ, ಆದರೆ ಅಭಿವೃದ್ಧಿ ಹೊಂದುತ್ತಿರುವವರು ಯುವ ಜನಸಂಖ್ಯೆಯನ್ನು ಹೊಂದಿರುತ್ತಾರೆ. ನಾವು ಈ ಎಲ್ಲ ವಿಷಯಗಳನ್ನು ನಾವು ಗಮನಿಸಬೇಕು ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Sam Pitroda : ಬಾಂಗ್ಲಾದೇಶದ ಅಕ್ರಮ ವಲಸಿಗರು ಭಾರತಕ್ಕೆ ಬರಲಿ; ಮತ್ತೆ ನಾಲಿಗೆ ಹರಿಬಿಟ್ಟ ಸ್ಯಾಮ್‌ ಪಿತ್ರೊಡಾ

ಅಮೆರಿಕದ ಬಗ್ಗೆಯೂ ಕಿಡಿ ಕಾರಿದ ಪಿತ್ರೋಡಾ ಅಮೆರಿಕ ಕೂಡ ಆಕ್ರಮಣಕಾರಿ ಧೋರಣೆ ಹೊಂದಿರುವುದರಿಂದ ಅಮೆರಿಕ ಕೂಡ ಭಾರತ ಪರ ಇದೆ ಎಂದು ಅವರು ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಇತ್ತೀಚೆಗೆ ನಡೆದ ಭಾರತ-ಚೀನಾ ಗಡಿ ಉದ್ವಿಗ್ನತೆಯ ಕುರಿತಾದ ಚರ್ಚೆಗಳ ನಂತರ ಸ್ಯಾಮ್‌ ಪಿತ್ರೋಡಾರಿಂದ ಈ ಹೇಳಿಕೆಗಳು ಬಂದಿವೆ.