BBK 12: ಐ ಲವ್ ಯು: ರಾಶಿಕಾಗೆ ಕೊನೆಗೂ ಪ್ರಪೋಸ್ ಮಾಡಿದ ಸೂರಜ್: ರಿಪ್ಲೇ ಏನು ಬಂತು ಗೊತ್ತೇ?
ನಿನ್ನೆಯ ಎಪಿಸೋಡ್ನಲ್ಲಿ ಸೂರಜ್ ಅವರು ರಾಶಿಕಾಗೆ ಪ್ರಪೋಸ್ ಮಾಡಿದ್ದಾರೆ. ನಿನ್ನೆಯ ಎಪಿಸೋಡ್ನಲ್ಲಿ ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ-ರಕ್ಷಿತಾ ಶೆಟ್ಟಿ ಹಾಗೂ ಕಾವ್ಯಾ ಸೈವ ನಡುವೆ ಜೋರಾಗಿ ಜಗಳ ನಡೆಯುತ್ತಿತ್ತು. ಆದರೆ. ಅತ್ತ ರಾಶಿಕಾ ಹಾಗೂ ಸೂರಜ್ ತಮ್ಮದೇ ಲೋಕದಲ್ಲಿ ಮುಳುಗಿ ಹೋಗಿದ್ದರು.
 
                                Suraj Rashika -
 Vishwavani News
                            
                                Oct 31, 2025 12:01 PM
                                
                                Vishwavani News
                            
                                Oct 31, 2025 12:01 PM
                            ಬಿಗ್ ಬಾಸ್ ಮನೆಯಲ್ಲಿ (Bigg Boss) ಲವ್ ಹುಟ್ಟೋದು ಕಾಮನ್.. ಆದ್ರೆ ಅದು ಆಟಕ್ಕೆ ಯಾವುದೇ ರೀತಿಯ ತೊಂದರೆ ಆಗಬಾರದು. ಬಿಗ್ ಬಾಸ್ ಮನೆಯೊಳಗಿನ ಪ್ರೀತಿ-ಪ್ರೇಮ ನಿಮ್ಮ ಪರ್ಸನ್ ವಿಚಾರ.. ಆದರೆ ಅದು ಟಾಸ್ಕ್ಗೆ ಎಫೆಕ್ಟ್ ಆದಾಗ ಅಥವಾ ಮನೆಯಲ್ಲಿ ಅವರ ಉಳಿವಿಗೆ ಕುತ್ತು ಬರಬಾರದಷ್ಟೆ. ಸದ್ಯ ಬಿಗ್ ಬಾಸ್ ಕನ್ನಡ 12ನೇ ಸೀಸನ್ ಶುರುವಾಗಿ ಐದು ವಾರ ಆಗುತ್ತಿದೆ. ಅದಾಗಲೇ ದೊಡ್ಮನೆಯಲ್ಲಿ ಪ್ರೀತಿ ಹುಟ್ಟಿದೆ ಎಂಬ ಅನುಮಾನ ಅನೇಕರಿಗೆ ಮೂಡಿದೆ. ರಾಶಿಕಾ ಅವರು ವೈಲ್ಡ್ ಕಾರ್ಡ್ ಸ್ಪರ್ಧಿ ಸೂರಜ್ ಸಿಂಗ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ, ನಿನ್ನೆಯ ಎಪಿಸೋಡ್ನಲ್ಲಿ ಶಾಕಿಂಗ್ ಘಟನೆಯೊಂದು ನಡೆದಿದೆ.
ಹ್ಯಾಂಡ್ಸಮ್ ಹಂಕ್ ಸೂರಜ್ ಸಿಂಗ್ ನಾಲ್ಕನೇ ವಾರ ದೊಡ್ಮನೆಗೆ ವೈಲ್ಡ್-ಕಾರ್ಡ್ ಮೂಲಕ ಎಂಟ್ರಿ ಕೊಟ್ಟರು. ಆಗ ಬಿಗ್ ಬಾಸ್ ಇವರಿಗೆ, ಈ ಮನೆಯ ಸುಂದರ ಸದಸ್ಯೆ ಯಾರು ಅವರಿಗೆ ಒಂದು ರೆಡ್ ರೋಸ್ ಕೊಡಿ ಎಂದು ಹೇಳಿದರು. ಸೂರಜ್ ತಕ್ಷಣವೇ ಕೆಂಪು ಗುಲಾಬಿಯನ್ನು ರಾಶಿಕಾಗೆ ನೀಡಿದ್ದಾರೆ. ಇಲ್ಲಿಂದ ರಾಶಿಕಾ ತಮ್ಮ ಆಟವನ್ನೇ ಮರೆತು ದಿನಪೂರ್ತಿ ಸೂರಜ್ ಜೊತೆಗೇ ಸಮಯ ಕಳೆಯುತ್ತಿದ್ದಾರೆ.
ಸೂರಜ್ ಬಂದ ಎರಡನೇ ದಿನವೇ ರಾಶಿಕಾ ಕೈ ಕೈ ಹಿಡಿದುಕೊಂಡು ಮಾತನಾಡಲು ಆರಂಭಿಸಿದ್ದರು. ಪ್ರೀತಿ ವಿಚಾರವನ್ನು ದಾಳವಾಗಿ ಬಳಕೆ ಮಾಡಿಕೊಂಡು ಗೆಲ್ಲಲು ಅವರು ಪ್ಲ್ಯಾನ್ ರೂಪಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಲಾಯಿತು. ಅಲ್ಲದೆ ರಾಶಿಕಾ ಶೆಟ್ಟಿ ಅವರೇ ಸೂರಜ್ ಬಳಿ ಬಂದು, ಯಾರಾದರೂ ಏನಾದರೂ ಹೇಳ್ತಾರಾ ಅಂತ ತಲೆ ಕೆಡಿಸಿಕೊಳ್ಳಬೇಡ, ನೀನು ನನ್ನ ಜೊತೆ ಮಾತಾಡು, ನಾನು ಏನೂ ಅಂದುಕೊಳ್ಳಲ್ಲ ಎಂದು ಹೇಳಿದ್ದರು. ರಾಶಿಕಾ ಆ ವಾರ ಪೂರ್ತಿ ಸೂರಜ್ ಜೊತೆಗೇ ಇದ್ದರು.
ಬಳಿಕ ಸುದೀಪ್ ಅವರು ವೀಕೆಂಡ್ ನೇರವಾಗಿ ರಾಶಿಕಾ-ಸೂರಜ್ಗೆ ಎಚ್ಚರಿಕೆ ನೀಡಿದರು. ನೀವು (ಸೂರಜ್) ಬಂದು ಶರ್ಟ್ ತೆಗೆದಿದ್ದು ನೋಡಿ ಕೆಲವರು ಆಟ ಆಡುವುದನ್ನೇ ನಿಲ್ಲಿಸಿದ್ದಾರೆ. ಅಲ್ಲಿ ಚೇಂಜ್ ಆದವರು ಆಟವನ್ನೇ ಆಡುತ್ತಿಲ್ಲ. ಹೀಗೆ ಮುಂದುವರಿದರೆ ನೀವು ಅಲ್ಲೇ ಇರ್ತೀರಿ, ನೀವು ಔಟ್ ಆಗ್ತೀರಾ ಎಂದು ಸುದೀಪ್ ಅವರು ರಾಶಿಕಾಗೆ ಎಚ್ಚರಿಕೆ ನೀಡಿದರು. ಸುದೀಪ್ ಎಚ್ಚರಿಕೆಯನ್ನು ಗಂಭೀರಾಗಿ ತೆಗೆದುಕೊಂಡ ರಾಶಿಕಾ ಈ ವಾರ ಜಬರ್ದಸ್ತ್ ಪರ್ಫಾಮೆನ್ಸ್ ನೀಡಿದ್ದಾರೆ. ಆದರೆ, ಅತ್ತ ಸೂರಜ್ ಸಂಪೂರ್ಣ ಡಲ್ ಆಗಿದ್ದಾರೆ.
BBK 12: ಯಾರಾಗುತ್ತಾರೆ ಸ್ಟೂಡೆಂಟ್ ಆಫ್ ದಿ ವೀಕ್?: ಕಠಿಣ ಟಾಸ್ಕ್ ನೀಡಿದ ಬಿಗ್ ಬಾಸ್
ಇದರ ಮಧ್ಯೆ ನಿನ್ನೆಯ ಎಪಿಸೋಡ್ನಲ್ಲಿ ಸೂರಜ್ ಅವರು ರಾಶಿಕಾಗೆ ಪ್ರಪೋಸ್ ಮಾಡಿದ್ದಾರೆ. ನಿನ್ನೆಯ ಎಪಿಸೋಡ್ನಲ್ಲಿ ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ-ರಕ್ಷಿತಾ ಶೆಟ್ಟಿ ಹಾಗೂ ಕಾವ್ಯಾ ಸೈವ ನಡುವೆ ಜೋರಾಗಿ ಜಗಳ ನಡೆಯುತ್ತಿತ್ತು. ಆದರೆ. ಅತ್ತ ರಾಶಿಕಾ ಹಾಗೂ ಸೂರಜ್ ತಮ್ಮದೇ ಲೋಕದಲ್ಲಿ ಮುಳುಗಿ ಹೋಗಿದ್ದರು. ಈ ರೀತಿ ಮುಳುಗಿ ಹೋಗುವಾಗಲೇ ಸೂರಜ್ ಪ್ರಪೋಸ್ ಮಾಡಿಯೇ ಬಿಟ್ಟಿದ್ದಾರೆ. ಸೂರಜ್ ಅವರು ನೇರವಾಗಿ ‘ಐ ಲವ್ ಯೂ’ ಎಂದು ಹೇಳಿದ್ದಾರೆ. ದಿಢೀರ್ ಈ ವರ್ಡ್ ಕೇಳಿ ರಾಶಿಕಾ ಶಾಕ್ ಆದರು. ಎಲ್ಲರೂ ರಾಶಿಕಾ ಇದಕ್ಕೆ ಲವ್ ಯೂ ಟೂ ಎನ್ನುತ್ತಾರೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ರಾಶಿಕಾ ಅವರು, ‘ನನಗೆ ಅದರಲ್ಲಿ ಆಸಕ್ತಿ ಇಲ್ಲ’ ಎಂದು ರಿಜೆಕ್ಟ್ ಮಾಡಿದ್ದಾರೆ.
