ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Sam Pitroda : ಬಾಂಗ್ಲಾದೇಶದ ಅಕ್ರಮ ವಲಸಿಗರು ಭಾರತಕ್ಕೆ ಬರಲಿ; ಮತ್ತೆ ನಾಲಿಗೆ ಹರಿಬಿಟ್ಟ ಸ್ಯಾಮ್‌ ಪಿತ್ರೊಡಾ

ರಾಹುಲ್‌ ಗಾಂಧಿ ಅವರ ಆಪ್ತ ಸ್ಯಾಮ್‌ ಪಿತ್ರೊಡಾ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಕ್ರಮ ವಲಸಿಗರ ಬಗ್ಗೆ ಮಾತನಾಡಿ ಬಾಂಗ್ಲಾದೇಶಿ ವಲಸಿಗರು ಒಂದು ವೇಳೆ ಭಾರತಕ್ಕೆ ಬರಲು ಬಯಸಿದರೆ, ಅದು ಅಕ್ರಮವಾಗಿದ್ದರೂ ಸಹ ಅವರು ಬರಲಿ. ನಾವು ಎಲ್ಲರನ್ನೂ ಸೇರಿಸಿಕೊಳ್ಳಬೇಕು. ನಮಗೆ ಅದರಿಂದ ಸ್ವಲ್ಪ ಕಷ್ಟವಾದರೂ ಪರವಾಗಿಲ್ಲ ಎಂದು ಹೇಳಿದ್ದಾರೆ.

ಬಾಂಗ್ಲಾ ವಲಸಿಗರು ಭಾರತಕ್ಕೆ ಬರಲಿ- ಸ್ಯಾಮ್‌ ಪಿತ್ರೊಡಾ ಮತ್ತೆ ವಿವಾದ

Sam Pitroda

Profile Vishakha Bhat Jan 28, 2025 1:25 PM

ವಾಷಿಂಗ್ಟನ್:‌ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರ (Rahul Gandhi) ಆಪ್ತ ಸ್ಯಾಮ್‌ ಪಿತ್ರೊಡಾ (Sam Pitroda) ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದು, ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ಬಾಂಗ್ಲಾದೇಶಿ ವಲಸಿಗರು ಒಂದು ವೇಳೆ ಭಾರತಕ್ಕೆ ಬರಲು ಬಯಸಿದರೆ, ಅದು ಅಕ್ರಮವಾಗಿದ್ದರೂ ಸಹ ಅವರು ಬರಲಿ. ನಾವು ಎಲ್ಲರನ್ನೂ ಸೇರಿಸಿಕೊಳ್ಳಬೇಕು. ನಮಗೆ ಅದರಿಂದ ಸ್ವಲ್ಪ ಕಷ್ಟವಾದರೂ ಪರವಾಗಿಲ್ಲ ಎಂದು ಅವರು ವಿವಾವದ ಕಿಡಿಯನ್ನು ಹತ್ತಿಸಿದ್ದಾರೆ.

ಬಾಂಗ್ಲಾದೇಶಿಯರ ಪರವಾಗಿ ಮಾತನಾಡಿದ ಪಿತ್ರೊಡಾ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ. ಬಾಂಗ್ಲಾದೇಶದ ವಲಸಿಗರು ಇಲ್ಲಿಗೆ ಬರಲು ಬಯಸಿದರೆ ಅಕ್ರಮವಾಗಿಯಾದರೂ ಅವರು ಬರಲಿ. ನಾವು ಎಲ್ಲರನ್ನೂ ಸೇರಿಸಿಕೊಳ್ಳಬೇಕು. ಅದರಿಂದ ನಾವು ಸ್ವಲ್ಪ ಅನುಭವಿಸಬೇಕಾದರೂ ಪರವಾಗಿಲ್ಲ ಎಂದು ಅವರು ಹೇಳಿದ್ದಾರೆ.



ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು ಸರ್ಕಾರವು ಅಕ್ರಮ ವಲಸೆಯನ್ನು ನಿಭಾಯಿಸುವ ಬದಲು ಜಾಗತಿಕ ತಾಪಮಾನದ ಏರಿಕೆಯಂತಹ ವಿಷಯದ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ಅವರು ದೇಶದ ವಿವಿಧ ಪ್ರದೇಶಗಳಲ್ಲಿ ನೆಲೆಸಿರುವ ಭಾರತೀಯರ ಬಗ್ಗೆ ಜನಾಂಗೀಯ ಟೀಕೆಯನ್ನು ಮಾಡಿದ್ದರು.

ಈ ಸುದ್ದಿಯನ್ನೂ ಓದಿ : Rahul Gandhi: ರಾಹುಲ್‌ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆಗೆ ಸುಪ್ರೀಂ ತಡೆಯಾಜ್ಞೆ!

ದೆಹಲಿ ಚುನಾವಣೆ ಎದುರಲ್ಲೇ ಈ ಹೇಳಿಕೆ ವಿಪಕ್ಷಗಳಿಗೆ ದೊಡ್ಡ ಅಸ್ತ್ರವಾಗಿ ಪರಿಣಮಿಸಿದೆ. ಪಿತ್ರೊಡಾ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.