Virat Kohli: ಆಸ್ಟ್ರೇಲಿಯಾ ವಿರುದ್ಧ ಜೆಮಿಮಾ ಅಸಾಧಾರಣ ಪ್ರದರ್ಶನಕ್ಕೆ ಕೊಹ್ಲಿ ಶ್ಲಾಘನೆ
Women’s World Cup semi-final: ನವೆಂಬರ್ 2 ರಂದು ನಡೆಯಲಿರುವ ಫೈನಲ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. ಗುಂಪು ಹಂತದಲ್ಲಿ ದಕ್ಷಿಣ ಆಫ್ರಿಕಾ ತಂಡವು ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡವನ್ನು ಸೋಲಿಸಿತ್ತು. ಆದರೆ ಆಸ್ಟ್ರೇಲಿಯಾ ವಿರುದ್ಧದ ಐತಿಹಾಸಿಕ ಗೆಲುವಿನ ನಂತರ ಆತಿಥೇಯರನ್ನು ಸೋಲಿಸುವುದು ಅದು ಅಷ್ಟು ಸುಲಭವಲ್ಲ.
 
                                ಜೆಮಿಮಾ ರಾಡ್ರಿಗಸ್ -
 Abhilash BC
                            
                                Oct 31, 2025 11:50 AM
                                
                                Abhilash BC
                            
                                Oct 31, 2025 11:50 AM
                            ನವಿ ಮುಂಬೈ: ಇಲ್ಲಿನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ರೋಮಾಂಚಕ ಮಹಿಳಾ ವಿಶ್ವಕಪ್ ಸೆಮಿಫೈನಲ್(Women’s World Cup semi-final)ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಭಾರತ ಮಹಿಳಾ ತಂಡ ಫೈನಲ್ ಪ್ರವೇಶಿಸಿತು. ತಂಡದ ಈ ಸಾಧನೆಗೆ ಭಾರತ ಪುರುಷರ ತಂಡದ ಮಾಜಿ ನಾಯಕರಾದ ವಿರಾಟ್ ಕೊಹ್ಲಿ(Virat Kohli), ರೋಹಿತ್ ಶರ್ಮ, ಸಚಿನ್ ತೆಂಡೂಲ್ಕರ್, ಕೋಚ್ ಗೌತಮ್ ಗಂಭಿರ್ ಸೇರಿ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಜತೆಗೆ ಚೊಚ್ಚಲ ವಿಶ್ವಕಪ್ ಗೆಲುವಿಗೆ ಹಾರೈಸಿದ್ದಾರೆ.
"ಆಸ್ಟ್ರೇಲಿಯಾದಂತಹ ಬಲಿಷ್ಠ ಎದುರಾಳಿಯ ವಿರುದ್ಧ ನಮ್ಮ ತಂಡಕ್ಕೆ ಸಿಕ್ಕ ಗೆಲುವು ಅದೆಷ್ಟು ಅದ್ಭುತ!. ಆಟಗಾರ್ತಿಯರ ಅದ್ಭುತ ಚೇಸಿಂಗ್ ಮತ್ತು ದೊಡ್ಡ ಪಂದ್ಯದಲ್ಲಿ ಜೆಮಿಮಾ ಅವರ ಅಸಾಧಾರಣ ಪ್ರದರ್ಶನ. ನಿಜವಾದ ಸ್ಥಿತಿಸ್ಥಾಪಕತ್ವ, ನಂಬಿಕೆ ಮತ್ತು ಉತ್ಸಾಹದ ಪ್ರದರ್ಶನ. ಟೀಮ್ ಇಂಡಿಯಾ, ಚೆನ್ನಾಗಿ ಆಡಿದೆ" ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.
What a victory by our team over a mighty opponent like Australia. A great chase by the girls and a standout performance by Jemimah in a big game. A true display of resilience, belief, and passion. Well done, Team India! 🇮🇳
— Virat Kohli (@imVkohli) October 31, 2025
"ಅದ್ಭುತ! ಜೆಮಿ ರೋಡ್ರಿಗಸ್ ಮತ್ತು ಹರ್ಮನ್‌ಪ್ರೀತ್ ಕೌರ್ ಜತೆಯಾಟ. ಮಹಿಳಾ ತಂಡಕ್ಕೆ ಅಭಿನಂದನೆಗಳು. ಚೆಂಡಿನೊಂದಿಗೆ ಆಟವನ್ನು ಜೀವಂತವಾಗಿರಿಸಿಕೊಂಡಿದ್ದೀರಿ" ಎಂದು ದಿಗ್ಗಜ ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.
Fabulous victory! 🇮🇳
— Sachin Tendulkar (@sachin_rt) October 30, 2025
Well done @JemiRodrigues and @ImHarmanpreet for leading from the front. Shree Charani and @Deepti_Sharma06, you kept the game alive with the ball.
Keep the tricolour flying high. 💙 🇮🇳 pic.twitter.com/cUfEPwcQXn
ಚೊಚ್ಚಲ ಟ್ರೋಫಿ ಮೆಲೆ ಕಣ್ಣಿಟ್ಟ ಭಾರತ
ನವೆಂಬರ್ 2 ರಂದು ನಡೆಯಲಿರುವ ಫೈನಲ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. ಗುಂಪು ಹಂತದಲ್ಲಿ ದಕ್ಷಿಣ ಆಫ್ರಿಕಾ ತಂಡವು ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡವನ್ನು ಸೋಲಿಸಿತ್ತು. ಆದರೆ ಆಸ್ಟ್ರೇಲಿಯಾ ವಿರುದ್ಧದ ಐತಿಹಾಸಿಕ ಗೆಲುವಿನ ನಂತರ ಆತಿಥೇಯರನ್ನು ಸೋಲಿಸುವುದು ಅದು ಅಷ್ಟು ಸುಲಭವಲ್ಲ.
Made the world stop and take notice ❤️🔥😍 pic.twitter.com/9VAvz0Vf9d
— Delhi Capitals (@DelhiCapitals) October 31, 2025
ಇದನ್ನೂ ಓದಿ Sunil Gavaskar: ಭಾರತ ವಿಶ್ವಕಪ್ ಗೆದ್ದರೆ ಜೆಮಿಮಾ ಜತೆ ಹಾಡೊಂದು ಹಾಡುವೆ ಎಂದ ಸುನಿಲ್ ಗವಾಸ್ಕರ್
ಏತನ್ಮಧ್ಯೆ, ದಕ್ಷಿಣ ಆಫ್ರಿಕಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು. ನವಿ ಮುಂಬೈನಲ್ಲಿ ನಡೆಯುವ ಫೈನಲ್ ಪಂದ್ಯ ರೋಮಾಂಚಕ ಪಂದ್ಯವಾಗುವುದರಿಂದ ಅವರಿಗೂ ಪ್ರೇರಣೆಯ ಕೊರತೆ ಇರುವುದಿಲ್ಲ. ಪಂದ್ಯದಲ್ಲಿ ಟಾಸ್ ಮತ್ತೊಮ್ಮೆ ಪ್ರಮುಖ ಅಂಶವಾಗಬಹುದು.
 
            