ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sunita Williams: ಬಾಹ್ಯಾಕಾಶ ತಲುಪಿದ ಸ್ಪೇಸ್X Crew-10; ಸುನಿತಾ ವಿಲಿಯಮ್ಸ್‌ ಭೂಮಿಗೆ ಬರಲು ಕ್ಷಣಗಣನೆ

ನಾಸಾದ ಸ್ಪೇಸ್‌ಎಕ್ಸ್ ಕ್ರೂ-10 ಮಿಷನ್‌ನಲ್ಲಿರುವ ನಾಲ್ವರು ಸಿಬ್ಬಂದಿ ಮಾರ್ಚ್ 16 ರ ಭಾನುವಾರ ಬೆಳಿಗ್ಗೆ 1:35 ET ಕ್ಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಅನ್ನು ಯಶಸ್ವಿಯಾಗಿ ತಲುಪಿದ್ದಾರೆ. ಬಾಹ್ಯಾಕಾಶದಲ್ಲಿ ಸಿಲುಕಿರುವ ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಸ್ವಾಗತಿಸಿದ್ದಾರೆ.

ಸುನಿತಾ ವಿಲಿಯಮ್ಸ್‌ ಭೂಮಿಗೆ ಬರಲು ಕ್ಷಣಗಣನೆ ; ಕಾರ್ಯಾಚರಣೆ ಶುರು

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ

Profile Vishakha Bhat Mar 16, 2025 1:10 PM

ವಾಷಿಂಗ್ಟನ್:‌ ನಾಸಾದ ಸ್ಪೇಸ್‌ಎಕ್ಸ್ ಕ್ರೂ-10 ಮಿಷನ್‌ನಲ್ಲಿರುವ ನಾಲ್ವರು ಸಿಬ್ಬಂದಿ ಮಾರ್ಚ್ 16 ರ ಭಾನುವಾರ ಬೆಳಿಗ್ಗೆ 1:35 ET ಕ್ಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಅನ್ನು ಯಶಸ್ವಿಯಾಗಿ ತಲುಪಿದ್ದಾರೆ. ಅವರು ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಹ್ಯಾಚ್ ಅನ್ನು ಪ್ರವೇಶಿಸಿದಾಗ ಬಾಹ್ಯಾಕಾಶದಲ್ಲಿ ಸಿಲುಕಿರುವ ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ( Sunita Williams) ಮತ್ತು ಬುಚ್ ವಿಲ್ಮೋರ್ ಅವರನ್ನು ಸ್ವಾಗತಿಸಿದ್ದಾರೆ. ಐಎಸ್‌ಎಸ್‌ನೊಂದಿಗೆ ಡಾಕ್ ಮಾಡಲಾದ ಗಗನಯಾತ್ರಿಗಳಾದ ಆನ್ ಮೆಕ್‌ಕ್ಲೇನ್ ಮತ್ತು ನಿಕೋಲ್ ಅಯರ್ಸ್, ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿಯ ಗಗನಯಾತ್ರಿ ಟಕುಯಾ ಒನಿಶಿ ಮತ್ತು ರೋಸ್ಕೋಸ್ಮೋಸ್ ಗಗನಯಾತ್ರಿ ಕಿರಿಲ್ ಪೆಸ್ಕೋವ್ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದಾರೆ.



ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಮರಳಿ ಭೂಮಿಗೆ ಕರೆತರುವ ಪ್ರಯತ್ನವಾಗಿ ಕ್ರೂ ಡ್ರಾಗನ್‌ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಗಿದೆ. ಡಾಕಿಂಗ್‌ ಪ್ರಕ್ರಿಯೆ ಇಂದು ಯಶಸ್ವಿಯಾಗಿದೆ. ವರದಿಗಳ ಪ್ರಕಾರ ಬಾಹ್ಯಾಕಾಶ ನೌಕೆ ಅಟ್ಲಾಂಟಿಕ್‌ ಸಾಗರದಲ್ಲಿ ಇಳಿಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಕೇವಲ 8 ದಿನಗಳ ಮಿಷನ್‌ ಒಂದರ ಭಾಗವಾಗಿ ಬಾಹ್ಯಾಕಾಶಕ್ಕೆ ಹಾರಿದ್ದ 59ರ ಹರೆಯದ ಸುನಿತಾ ವಿಲಿಯಮ್ಸ್‌ಗೆ 9 ತಿಂಗಳ ಬಳಿಕ ಭೂಮಿಗೆ ಮರಳುತ್ತಿದ್ದಾರೆ. ಹಲವು ತೊಡಕುಗಳ ಬಳಿಕ ಗಗನಯಾತ್ರಿ ಸುನಿತಾ ಹಾಗೂ ಬುಚ್‌ ವಿಲ್ಮೋರ್‌ ಅವರನ್ನು ಹೊತ್ತ ಸ್ಟಾರ್‌ಲಿಂಕ್‌ ಬಾಹ್ಯಾಕಾಶ ನೌಕೆ ನಭಕ್ಕೆ ಹಾರಿ ಐಎಸ್‌ಎಸ್‌ ತಲುಪಿದರೂ, ತಾಂತ್ರಿಕ ಕಾರಣಗಳಿಂದ ಅವರನ್ನು ಅಲ್ಲೇ ಬಿಟ್ಟು ಮರಳಬೇಕಾಗಿ ಬಂದಿತ್ತು. ಅದಾದ ನಂತರ ಅವರಿಬ್ಬರನ್ನು ಕರೆತರುವ ಯತ್ನಗಳು ನಾನಾಕಾರಣಗಳಿಂದ ವಿಫಲವಾದರೂ, ಇದೀಗ ನಾಸಾ ಹಾಗೂ ಎಲಾನ್‌ ಮಸ್ಕ್‌ರ ಜಂಟಿ ಪರಿಶ್ರಮ ಫಲ ಕೊಡುವ ನಿರೀಕ್ಷೆಯಿದೆ.



ಕ್ರೂ-10 ಸದಸ್ಯರು ತಮ್ಮ 28 ಗಂಟೆಗಳ ಪ್ರಯಾಣವನ್ನು ಮುಗಿಸಿ ISS ಪ್ರವೇಶಿಸಿದಾಗ, ಸುನೀತಾ ವಿಲಿಯಮ್ಸ್ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸುತ್ತಾ ನಮ್ಮ ಸ್ನೇಹಿತರು ಆಗಮಿಸುವುದನ್ನು ನೋಡಲು ಸಂತೋಷವಾಯಿತು" ಎಂದು ಹೇಳಿದರು. ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯು ಶುಕ್ರವಾರ ಸಂಜೆ 7.03 ET ಕ್ಕೆ ಫ್ಲೋರಿಡಾದ ನಾಸಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಫಾಲ್ಕನ್ 9 ರಾಕೆಟ್‌ನಲ್ಲಿ ಬಾಹ್ಯಾಕಾಶಕ್ಕೆ ತೆರಳಿದೆ.

ಈ ಸುದ್ದಿಯನ್ನೂ ಓದಿ: Sunita William: ಸುನಿತಾ ವಿಲಿಯಮ್ಸ್‌ ಭೂಮಿಗೆ ಮರಳುವುದು ಮತ್ತಷ್ಟು ವಿಳಂಬ-ಕಾರಣ ಏನ್‌ ಗೊತ್ತಾ?

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ ನಾಸಾ ಗಗನಯಾತ್ರಿ ಆನ್ ಸಿ ಮೆಕ್‌ಕ್ಲೇನ್ , "ನಾವು ಕಿಟಕಿಯಿಂದ ಹೊರಗೆ ನೋಡಿದಾಗ ಮತ್ತು ಮೊದಲ ಬಾರಿಗೆ ಬಾಹ್ಯಾಕಾಶ ನಿಲ್ದಾಣವನ್ನು ನೋಡಿದಾಗ ನಮ್ಮ ಸಿಬ್ಬಂದಿಗೆ ಆದ ಅಪಾರ ಸಂತೋಷವನ್ನು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.