ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tampa Airport: ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಪತ್ತೆಯಾಯಿತು ಮಾನವ ತಲೆಬುರುಡೆ, ಮೂಳೆ

ಫ್ಲೋರಿಡಾದ ಟ್ಯಾಂಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ವ್ಯಕ್ತಿಯೊಬ್ಬ ಸಿಲ್ವರ್ ಶೀಟ್ ನಲ್ಲಿ ತಲೆಬುರುಡೆ ಮತ್ತು ಇತರ ಮಾನವ ಅವಶೇಷಗಳನ್ನು ಕೊಂಡೊಯ್ಯುತ್ತಿರುವುದು ಪತ್ತೆಯಾಗಿದೆ. ಇದನ್ನು ಯುಎಸ್ ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಏಜೆಂಟ್‌ಗಳು ವಶಕ್ಕೆ ಪಡೆದಿದ್ದು, ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಮಾನವ ತಲೆಬುರುಡೆ, ಮೂಳೆ ಪತ್ತೆ

-

ಫ್ಲೋರಿಡಾ: ಚೀಲವೊಂದರಲ್ಲಿ ಮಾನವ ತಲೆಬುರುಡೆ, ಮೂಳೆಗಳು ಪತ್ತೆಯಾಗಿರುವ (Human skull, bones found) ಘಟನೆ ಫ್ಲೋರಿಡಾದ (Florida) ಟ್ಯಾಂಪಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Tampa International Airport) ನಡೆದಿದೆ. ಸಿಲ್ವರ್ ಶೀಟ್ ನಲ್ಲಿ ಸುತ್ತಿ ಇಡಲಾಗಿದ್ದು ಮಾನವನ ಮೂಳೆ ಮತ್ತು ತಲೆಬುರುಡೆಯನ್ನು ಧಾರ್ಮಿಕ ಬಳಕೆಗೆ ಉದ್ದೇಶಿಸಲಾಗಿತ್ತು ಎಂದು ಅದನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕ ಹೇಳಿದ್ದಾನೆ. ವಿಮಾನ ನಿಲ್ದಾಣದಲ್ಲಿ (Airport) ನಿತ್ಯದ ತಪಾಸಣೆ ವೇಳೆ ವ್ಯಕ್ತಿಯೊಬ್ಬ ಮಾನವನ ಮೂಳೆಗಳು, ತಲೆಬುರುಡೆಯೊಂದಿಗೆ ಸಿಕ್ಕಿಬಿದ್ದಿದ್ದಾನೆ. ಆತನನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಟ್ಯಾಂಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಳಗೆ ಸಿಲ್ವರ್ ಶೀಟ್ ನಲ್ಲಿ ತಲೆಬುರುಡೆ ಮತ್ತು ಇತರ ಮಾನವ ಅವಶೇಷಗಳನ್ನು ಕೊಂಡೊಯ್ಯುತ್ತಿದ್ದ ವ್ಯಕ್ತಿ ಆರಂಭದಲ್ಲಿ ಇದರಲ್ಲಿರುವುದು ಹತ್ತು ಸಿಗಾರ್ ಎಂದು ಹೇಳಿದ್ದ. ಆದರೆ ಯುಎಸ್ ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಏಜೆಂಟ್‌ಗಳು ಇದರ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನು ಧಾರ್ಮಿಕ ಕಾರ್ಯಕ್ಕಾಗಿ ಕೊಂಡೊಯ್ಯುತ್ತಿರುವುದಾಗಿ ಆತ ಹೇಳಿದ್ದಾನೆ.

ಈ ಕುರಿತು ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡ ಯುಎಸ್ ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಕ್ಷೇತ್ರ ಕಾರ್ಯಾಚರಣೆಗಳ ನಿರ್ದೇಶಕ ಕಾರ್ಲೋಸ್ ಮಾರ್ಟೆಲ್, ಡಫಲ್ ಬ್ಯಾಗ್‌ನೊಳಗೆ ಫಾಯಿಲ್‌ನಲ್ಲಿ ಸುತ್ತಿಡಲಾಗಿದ್ದ ತಲೆಬುರುಡೆ ಮತ್ತು ಇತರ ಅವಶೇಷಗಳು ಸಿಕ್ಕಿರುವುದಾಗಿ

ತಿಳಿಸಿದ್ದಾರೆ.



ಇದನ್ನು ವಶಕ್ಕೆ ಪಡೆದು ನಾಶಪಡಿಸಲಾಗಿದೆ. ಅಲ್ಯೂಮಿನಿಯಂ ಫಾಯಿಲ್ ನ ಒಳಗೆ ತಲೆಬುರುಡೆ ಮತ್ತು ಇತರ ಸಣ್ಣ ಮೂಳೆಗಳು ಇದ್ದವು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Sahibzada Farhan: ಉಗ್ರರಂತೆ ಸಂಭ್ರಮಿಸಿದ ಪಾಕ್‌ ಬ್ಯಾಟರ್; ವಿಡಿಯೊ ವೈರಲ್‌

ಇದರೊಂದಿಗೆ ಕೆಲವು ನಿಷೇಧಿತ ಸಸ್ಯಗಳು, ಸಿಗಾರ್‌ಗಳು ಕೂಡ ಸಿಕ್ಕಿವೆ ಎನ್ನಲಾಗಿದ್ದು, ಈ ಬಗ್ಗೆ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಮಾಧಿ ಅಥವಾ ದಹನಕ್ಕಾಗಿ ಉದ್ದೇಶಿಸಲಾದ ಅವಶೇಷಗಳೊಂದಿಗೆ ಪ್ರಯಾಣಿಸುವ ಪ್ರಯಾಣಿಕರು ಮರಣ ಪ್ರಮಾಣಪತ್ರಗಳನ್ನು ತರಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.