ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ವಿದೇಶಿ ಮಹಿಳೆಯನ್ನು ನೋಡಿ ಭಯಗೊಂಡು ಓಡಿದ ಮಕ್ಕಳು! ಇಲ್ಲಿದೆ ನೋಡಿ ವೈರಲ್ ವಿಡಿಯೊ

Scared Kids Run Away: ವಿದೇಶಿ ಮಹಿಳೆಯೊಬ್ಬಳನ್ನು ನೋಡಿ ಭೀತಿಗೊಂಡ ಮಕ್ಕಳು ಓಡಿಹೋಗಿದ್ದಾರೆ. ಒಂದು ಮಗು ಆಕೆಯನ್ನು ನೋಡಿ ಜೋರಾಗಿ ಅತ್ತಿದೆ. ಇದರ ವಿಡಿಯೊ ವೈರಲ್ ಆಗಿದೆ. ಮಕ್ಕಳ ಪ್ರತಿಕ್ರಿಯೆಯಿಂದ ಮಹಿಳೆ ಆರಂಭದಲ್ಲಿ ಗೊಂದಲಕ್ಕೊಳಗಾಗಿದ್ದಳು.

ಬಿಳಿ ಮಹಿಳೆಯನ್ನು ನೋಡಿ ಭೀತಿಗೊಂಡು ಓಡಿದ ಮಕ್ಕಳು

-

Priyanka P Priyanka P Sep 21, 2025 4:12 PM

ಲಾವೋಸ್‌: ಸಣ್ಣ ದೇಶಗಳಿಗೆ ಭೇಟಿ ನೀಡಿದಾಗ ವಿದೇಶಿ ಪ್ರವಾಸಿಗರು ಅಲ್ಲಿನ ಜನರ ಗಮನವನ್ನು ಸೆಳೆಯುತ್ತಾರೆ. ಆದರೆ, ಇತ್ತೀಚೆಗೆ ಲಾವೋಸ್‌ನಲ್ಲಿ (Laos) ನಡೆದ ಘಟನೆಯು ವಿಭಿನ್ನ ಮುಖವನ್ನು ತೋರಿಸಿದೆ. ವಿದೇಇ ಮಹಿಳೆಯೊಬ್ಬಳನ್ನು ನೋಡಿ ಸ್ಥಳೀಯ ಮಕ್ಕಳು (kids) ಆಕೆಯನ್ನು ನೋಡಿ ಹೆದರಿದ್ದಲ್ಲದೆ, ಜೋರಾಗಿ ಅತ್ತಿದ್ದಾರೆ. ಹಾಗೆಯೇ ಭೀತಿಗೊಂಡ ಅವರು ಆಕೆಯಿಂದ ದೂರ ಓಡಿದ್ದಾರೆ. ಮಕ್ಕಳ ಪ್ರತಿಕ್ರಿಯೆಯಿಂದ ಮಹಿಳೆ ಆರಂಭದಲ್ಲಿ ಗೊಂದಲಕ್ಕೊಳಗಾಗಿದ್ದಳು. ಆದರೆ ಅವಳ ಬಿಳಿ ಚರ್ಮದ ಕಾರಣದಿಂದಾಗಿ ಮಕ್ಕಳು ಅವಳ ಬಳಿಗೆ ಬರಲು ಹೆದರಿದ್ದಾರೆ ಎಂದು ಅವಳು ಶೀಘ್ರದಲ್ಲೇ ಅರ್ಥಮಾಡಿಕೊಂಡಿದ್ದಾಳೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.

ವಿಡಿಯೊದಲ್ಲಿ, ಮಹಿಳೆಯು ಲಾವೋಸ್‌ನಲ್ಲಿರುವ ಶಾಲೆಗೆ ಭೇಟಿ ನೀಡಿದ್ದು, ಆ ಹಳ್ಳಿಗೆ ಭೇಟಿ ನೀಡುವ ಪ್ರವಾಸಿಗರು ಬಹಳ ಕಡಿಮೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ತಿಳಿಸಿದಳು. ಮಕ್ಕಳು ತನ್ನನ್ನು ನೋಡಿ ಭಯಭೀತರಾಗಿರುವುದನ್ನು ಗಮನಿಸಿದ ಅವಳು, ವಿದೇಶಿಯರು, ವಿಶೇಷವಾಗಿ ಬಿಳಿಯರು ಹೇಗೆ ವರ್ತಿಸುತ್ತಾರೆ ಎಂಬುದನ್ನು ಅವರು ಈಗಾಗಲೇ ತಿಳಿದಿರಬಹುದು ಎಂದು ಹೇಳಿದಳು. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕ ಜನರು ಈ ಘಟನೆಯ ಬಗ್ಗೆ ತಮಾಷೆ ಮಾಡಿದರು. ಕೆಲವು ಸಂಸ್ಕೃತಿಗಳಲ್ಲಿ, ಬಿಳಿ ಬಣ್ಣ ಇರುವ ಜನರು ಕೆಲವೊಮ್ಮೆ ದೆವ್ವ ಅಥವಾ ದುಷ್ಟಶಕ್ತಿಗಳಾಗಿರುತ್ತಾರೆ ಎಂಬ ನಂಬಿಕೆಯಿದೆ. ಹೀಗಾಗಿ ಮಕ್ಕಳು ಭಯಭೀತರಾಗಿರಬಹುದೆಂದು ಒಬ್ಬ ವ್ಯಕ್ತಿ ಹೇಳಿದ್ದಾರೆ.

ವಿಡಿಯೊ ವೀಕ್ಷಿಸಿ:



ರೆಡ್ಡಿಟ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಆ ಮಹಿಳೆ, ಅವರು ನಮಗೆ ಹೆದರುತ್ತಾರೆಯೇ? ಇಲ್ಲಿಗೆ ಹೆಚ್ಚು ಪ್ರವಾಸಿಗರು ಬರುವುದಿಲ್ಲ. ಮಕ್ಕಳು ಓಡಿಹೋಗುತ್ತಿದ್ದಾರೆ, ಒಂದು ಮಗು ಅಳುತ್ತಿದೆ. ಈ ಮಕ್ಕಳು ಬುದ್ಧಿವಂತರು. ಬಿಳಿ ಜನರು ಏನು ಮಾಡುತ್ತಾರೆಂದು ಅವರಿಗೆ ತಿಳಿದಿದೆ ಎಂದು ಹೇಳಿದ್ದಾಳೆ. ಪೋಸ್ಟ್‌ಗೆ ಪ್ರತಿಕ್ರಿಯಿಸುತ್ತಾ, ಒಬ್ಬ ಬಳಕೆದಾರರು, ನನಗೂ ಪ್ರಭಾವಿಗಳ ಬಗ್ಗೆ ಭಯವಿದೆ. ಬುದ್ಧಿವಂತ ಮಕ್ಕಳು ಎಂದು ಬರೆದಿದ್ದಾರೆ.

ಬಿಳಿ ಬಣ್ಣ ಹೊಂದಿರುವವರು ಸಾಮಾನ್ಯವಾಗಿ ಸತ್ತವರು ಅಥವಾ ದುಷ್ಟಶಕ್ತಿಗಳೊಂದಿಗೆ ಸಂಬಂಧ ಹೊಂದಿರುತ್ತವೆ ಎಂದು ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಅವಳು ಪೋಷಕರ ಅನುಮತಿಯಿಲ್ಲದೆ ಮಕ್ಕಳ ವಿಡಿಯೊಗಳನ್ನು ರೆಕಾರ್ಡ್ ಮಾಡುತ್ತಿರುವುದು ಭಯಾನಕವಾಗಿದೆ. ಮಕ್ಕಳು ತನ್ನನ್ನು ಹೇಗೆ ಹೆದರಿಸುತ್ತಾರೆ ಎಂಬುದರ ಕುರಿತು ಅವಳು ಮಾತನಾಡುವ ವಿಡಿಯೊವನ್ನು ಮಗುವನ್ನು ಚಿತ್ರೀಕರಿಸದೆ ಪೋಸ್ಟ್ ಮಾಡಬಹುದಿತ್ತು ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಅವಳು ಇಲ್ಲಿ ಪ್ರವಾಸಿಯಾಗಿ ಬಂದಿರುವುದಕ್ಕೆ ಕಾರಣವೇನು? ಎಂದು ಒಬ್ಬ ವ್ಯಕ್ತಿ ಪ್ರಶ್ನಿಸಿದ್ದಾರೆ. ಈ ಮಕ್ಕಳು ಬಿಳಿ ಜನರ ಚಲನಚಿತ್ರ ನೋಡಿರಬಹುದು ಅಥವಾ ನಿಯತಕಾಲಿಕೆ ನೋಡಿರಬಹುದು. ಪಾಶ್ಚಿಮಾತ್ಯ ಸಂಸ್ಕೃತಿ ತುಂಬಾ ವ್ಯಾಪಕವಾಗಿದೆ ಎಂದು ಮತ್ತೊಬ್ಬರು ಹೇಳಿದರು. ಮತ್ತೊಬ್ಬರು ಮಹಿಳೆಯ ವರ್ತನೆಯನ್ನು ಟೀಕಿಸಿದರು. ಮಕ್ಕಳು ನಿಜವಾಗಿಯೂ ಭಯಭೀತರಾಗಿ ಅಳುತ್ತಿದ್ದರೆ, ಅವರು ತುಂಬಾ ಮುಜುಗರ ಮತ್ತು ಅಸಮಾಧಾನವನ್ನು ಅನುಭವಿಸಬೇಕು. ನಗುವುದು ಅಥವಾ ಮಗುವನ್ನು ಹಿಂಬಾಲಿಸುವುದನ್ನು ಮುಂದುವರಿಸಬಾರದು ಎಂದು ಹೇಳಿದರು.

ಇದನ್ನೂ ಓದಿ: Viral News: 13,000 ಅಡಿ ಎತ್ತರದಿಂದ ಸ್ಕೈಡೈವ್ ಮಾಡಿದ 71 ವರ್ಷದ ಮಹಿಳೆ- ವಿಡಿಯೊ ಫುಲ್‌ ವೈರಲ್