ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆಗೆ ಜಿಲ್ಲಾಡಳಿತ ಸಜ್ಜು : ಬೆಸ್ಕಾಂ ಮೂಲಕ ೩.೨೦೮೮೨ ಮನೆಗಳಿಗೆ ಜಿಯೋ ಟ್ಯಾಗ್ ಫಿಕ್ಸ್

ಮನೆಮನೆಗೆ ಬರುವ  ಪ್ರತಿಯೊಬ್ಬ ಗಣತಿದಾರರಿಗೆ ೧೨೦ ರಿಂದ ೧೫೦ ಕುಟುಂಬಗಳಂತೆ ಬ್ಲಾಕ್ ವಿಂಗಡಿಸಿ ಸಮೀಕ್ಷೆ ಪೂರ್ಣಗೊಳಿಸುವ ಸಂಬಂಧ ಹಂಚಿಕೆ ಮಾಡಲಾಗುವುದು. ಗಣತಿ ಕಾರ್ಯದಲ್ಲಿ ಗಣತಿದಾರಿಗೆ ಎದುರಾಗುವ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿ ೨೦ ಗಣತಿದಾರರಿಗೆ ಒಬ್ಬ ಮೇಲ್ವಿಚಾರಕ ರು ಮೇಲ್ವಿಚಾರಣೆ ಮಾಡುತ್ತಾರೆ.

ಬೆಸ್ಕಾಂ ಮೂಲಕ ೩.೨೦೮೮೨ ಮನೆಗಳಿಗೆ ಜಿಯೋ ಟ್ಯಾಗ್ ಫಿಕ್ಸ್

-

Ashok Nayak Ashok Nayak Sep 22, 2025 4:19 PM

ಚಿಕ್ಕಬಳ್ಳಾಪುರ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸೆ.೨೨.೦೯. ೨೦೨೫ ರಿಂದ ಅಕ್ಟೋಬರ್ ೨೦೨೫ರ ೭ ವರೆಗೆ ನಡೆಸುವ ಚಿಕ್ಕಬಳ್ಳಾಪುರ ಜಿಲ್ಲೆಯ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ ಎಂದು ಜಿಲ್ಲಾಧಿಕಾರಿ ಪಿಎನ್.ರವೀಂದ್ರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ರಾಜ್ಯ ಸರಕಾರದ ಸಾಮಾಜಿಕ ಶೈಕ್ಷಣಿಕ, ಆರ್ಥಿಕ ಸಮೀಕ್ಷೆ-೨೦೨೫ ಯಶಸ್ವಿಗೊಳಿಸಲು ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದ್ದು ಈ ಸಂಬMAಧ ಈಗಾಗಲೇ ಬೆಸ್ಕಾಂ ಇಲಾಖೆಯಿಂದ ಆರ್.ಆರ್ ಸಂಖ್ಯೆ ಹೊಂದಿರುವ ೩,೬೯,೦೦೦ ಕುಟುಂಬಗಳ ಪೈಕಿ ೩,೨೦,೮೮೨ ಕುಟುಂಬಗಳ ಸಮೀಕ್ಷೆ ಪೂರ್ಣಗೊಳ್ಳುವವರೆಗೆ ಚೀಟಿಯನ್ನು ಕೀಳದಂತೆ ಅರಿವು ಮೂಡಿಸಿ ಮನೆಯ ಬಾಗಿಲಿನ ೇಲೆ ಜಿಯೋ ಟ್ಯಾಗ್ ಅಂಟಿಸಲಾಗಿದೆ.

ಇದನ್ನೂ ಓದಿ: Chikkaballapur News: ದುರ್ಬಲರ ಬದುಕಿನ ಉಳಿವಿಗಾಗಿ ಒಂದು ಜಗತ್ತು ಒಂದು ಕುಟುಂಬದ ಅಭಿಯಾನ: ಸದ್ಗುರು ಶ್ರೀ ಮಧುಸೂದನ ಸಾಯಿ

ಮನೆಮನೆಗೆ ಬರುವ  ಪ್ರತಿಯೊಬ್ಬ ಗಣತಿದಾರರಿಗೆ ೧೨೦ ರಿಂದ ೧೫೦ ಕುಟುಂಬಗಳಂತೆ ಬ್ಲಾಕ್ ವಿಂಗಡಿಸಿ ಸಮೀಕ್ಷೆ ಪೂರ್ಣಗೊಳಿಸುವ ಸಂಬಂಧ ಹಂಚಿಕೆ ಮಾಡಲಾಗುವುದು. ಗಣತಿ ಕಾರ್ಯ ದಲ್ಲಿ ಗಣತಿದಾರಿಗೆ ಎದುರಾಗುವ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿ ೨೦ ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರು ಮೇಲ್ವಿಚಾರಣೆ ಮಾಡುತ್ತಾರೆ. ಎಲ್ಲಾ ಮೇಲ್ವಿಚಾರಕರು ಸಮೀಕ್ಷೆಯ ಪ್ರಗತಿಯ ಪ್ರತಿ ವಿವರವನ್ನು ಸಂಬAಧಪಟ್ಟ ತಾಲ್ಲೂಕಿನ ತಹಶೀಲ್ದಾರರಿಗೆ ಪ್ರತಿ ದಿನ ವರದಿ ಮಾಡಬೇಕಾ ಗಿರುತ್ತದೆ ಎಂದರು.  

*
ಸೆ.22 ರಿಂದ ಅ-07ರವರೆಗೆ ಸಮೀಕ್ಷೆ ಸುಗಮವಾಗಿ ನಡೆಸುವ ಸಂಬಂಧ ಗ್ರಾಮ ಪಂಚಾಯತಿ ಮತ್ತು ನಗರ ಪ್ರದೇಶವಾರು ಪ್ರತ್ಯೇಕ ತಂಡ ರಚಿಸಲಾಗಿದ್ದು ಈ ತಂಡವು ಗಣತಿಯ ಮೇಲುಸ್ತುವಾರಿ ಕಾರ್ಯ ನಿರ್ವಹಿಸಲು ಕ್ರಮವಹಿಸಲಾಗಿದೆ. ಗಣತಿ ಸಂಬಂಧ ಗಣತಿದಾರರಿಗೆ ಮತ್ತು ಮೇಲ್ವಿಚಾರಕ ರಿಗೆ ಸೆ೧೬ ಮತ್ತು ಸೆ.೨೦ ರಂದು ಎರಡು ಸುತ್ತಿನ ತರಬೇತಿಯನ್ನು ನೀಡಲಾಗಿದೆ. ಸಮೀಕ್ಷೆ ಪೂರ್ಣ ಗೊಳ್ಳುವವರೆಗೆ ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಿರುವ ಶಿಕ್ಷಕರು, ಅಧಿಕಾರಿಗಳು, ಸಿಬ್ಬಂದಿ ಯಾವುದೇ ರಜೆ ಪಡೆಯದಂತೆ ಸಾರ್ವತ್ರಿಕ ರಜಾ ದಿನಗಳಲ್ಲಿಯೂ ಸಹ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಇವರಿಗೆ ನಿರ್ದೇರ್ಶಿಸಿರುವಂತೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಸಮೀಕ್ಷೆಯ ಬಗ್ಗೆ ಸಾರ್ವ ಜನಿಕರಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ.  

ನಗರ ಪ್ರದೇಶದಲ್ಲಿ ಯೋಜನಾ ನಿರ್ದೇಶಕರು, ನಗರಾಭಿವೃದ್ಧಿ ಕೋಶ ಇವರಿಂದ ಸಮೀಕ್ಷೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ೯೭೪ ಆಶಾ ಕಾರ್ಯಕರ್ತೆಯರಿಂದ ಸಮೀಕ್ಷೆಯ ನಮೂನೆ ಪ್ರತಿ ಮನೆಗೆ ತಲುಪಿಸಲು ನಮೂನೆಗಳನ್ನು ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ನೀಡಲಾಗಿದೆ.  .

*
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಸಮೀಕ್ಷೆಯನ್ನು ಕೈಗೊಳ್ಳುವ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಿಯೋಜಿಸಿರುವ ಒಟ್ಟು ಗಣತಿದಾರರು ಮತ್ತು ಮೇಲ್ವಿಚಾರಕರ ವಿವರ ಇಂತಿದೆ.

ತಾಲೂಕುಗಳು- ಜಿಯೋಟ್ಯಾಗ್ ಮಾಡಿರುವ ಕುಟುಂಬಗಳ ಸಂಖ್ಯೆ.- ನಿಯೋಜಿತ ಗಣತಿದಾರರ ಸಂಖ್ಯೆ, - ನಿಯೋಜಿತ ಮೇಲ್ವಿಚಾರಕರ ಸಂಖ್ಯೆ, - ಒಟ್ಟು

ಬಾಗೇಪಲ್ಲಿ-೪೦೭೭೧, -೩೬೮, -೨೦, -೩೮೮

ಚೇಳೂರು- ೯೪೬೩, -೦೯೨, -೦೫, -೦೯೭

ಚಿಕ್ಕಬಳ್ಳಾಪುರ-೫೬೬೭೪ -೫೧೮,-೦೨೬, -೫೪೪

ಚಿಂತಾಮಣಿ- ೭೭೨೨೪, -೬೮೫, -೦೩೬, -೭೨೧,

ಗೌರಿಬಿದನೂರು- ೫೭೪೧೩, -೫೨೩, -೨೮,-೫೫೧,

ಗುಡಿಬಂಡೆ- ೧೪೦೩೦, -೧೨೯, -೦೫, -೧೩೪,

ಮಂಚೇನಹಳ್ಳಿ- ೯೨೦೧, -೦೮೪, -೦೬, -೯೦,

ಶಿಡ್ಲಘಟ್ಟ- ೫೬೦೯೬, -೫೧೫, -೦೩೩, -೫೪೮

ಒಟ್ಟು ೩೨೦೮೮೨,-೨೯೧೪,-೧೫೯, ೩೦೭೩