ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Earthquake: ಪಾಕಿಸ್ತಾನದಲ್ಲಿ 5.3 ತೀವ್ರತೆಯ ಭೂಕಂಪ; ಕಾಶ್ಮೀರ ಸೇರಿದಂತೆ ಹಲವು ಕಡೆ ಕಂಪನದ ಅನುಭವ

ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಪಾಕಿಸ್ತಾನದಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಭೂಕಂಪದ ಆಳ 10 ಕಿ.ಮೀ ಆಗಿದ್ದು, ಕಾಶ್ಮೀರದ ಕೆಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ.

ಪಾಕಿಸ್ತಾನದಲ್ಲಿ 5.3 ತೀವ್ರತೆಯ ಭೂಕಂಪ

Profile Vishakha Bhat Apr 12, 2025 4:31 PM

ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಪಾಕಿಸ್ತಾನದಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಭೂಕಂಪದ ಆಳ 10 ಕಿ.ಮೀ ಆಗಿದ್ದು, ಕಾಶ್ಮೀರದ ಕೆಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ. ಶ್ರೀನಗರ, ಜಮ್ಮು, ಶೋಪಿಯಾನ್ ಮತ್ತು ಕಾಶ್ಮೀರ ಪ್ರದೇಶದ ಹಲವಾರು ಇತರ ಭಾಗಗಳಲ್ಲಿ ಜನರು ಕಂಪನದ ಅನುಭವವನ್ನು ಅನುಭವಿಸಿದ್ದಾರೆ. ಆದಾಗ್ಯೂ, ಕಣಿವೆಯಲ್ಲಿ ಯಾವುದೇ ಸಾವುನೋವು ಅಥವಾ ಆಸ್ತಿಪಾಸ್ತಿಗೆ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಭೂಕಂಪದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಪಾಕಿಸ್ತಾನದ ಕೆಲವು ಭಾಗಗಳಲ್ಲಿ ಸಂಭವಿಸಿದ ಭೂಕಂಪದ ಭಯಾನಕ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿವೆ. ಒಂದು ವೀಡಿಯೊದಲ್ಲಿ ದಿನಸಿ ಅಂಗಡಿಯೊಳಗೆ ಒಬ್ಬ ವ್ಯಕ್ತಿ ಮಗುವಿನೊಂದಿಗೆ ಇರುವುದನ್ನು ತೋರಿಸಲಾಗಿದೆ, ಆಗ ಇದ್ದಕ್ಕಿದ್ದಂತೆ ಕ್ಯಾಮೆರಾ ಮತ್ತು ಅಂಗಡಿ ಅಲುಗಾಡಲು ಪ್ರಾರಂಭಿಸಿದವು. ಆ ವ್ಯಕ್ತಿ ಮಗುವಿನೊಂದಿಗೆ ಅಂಗಡಿಯಿಂದ ಹೊರಗೆ ಧಾವಿಸಿದ್ದಾನೆ.



ವೆದರ್ ಮಾನಿಟರ್ ಎಂಬ ಖಾತೆಯು ಹಂಚಿಕೊಂಡಿರುವ ಮತ್ತೊಂದು ವೀಡಿಯೊದಲ್ಲಿ, ಕಂಪನದ ಅನುಭವವಾದ ನಂತರ ಜನರು ರಸ್ತೆಗಳಲ್ಲಿ ಜಮಾಯಿಸುತ್ತಿರುವುದನ್ನು ತೋರಿಸಲಾಗಿದೆ. ಜನರು ಕಟ್ಟಗಳನ್ನು ತೊರೆದು ರಸ್ತೆಗೆ ಓಡಿ ಬಂದಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಇಸ್ಲಾಮಾಬಾದ್‌ನಲ್ಲಿ ಭೂಕಂಪ ಸಂಭಿಸಿರುವುದು ಕಾಣಿಸುತ್ತದೆ.



ಮಾರ್ಚ್ 28ರ ಶುಕ್ರವಾರ ಭೀಕರ ಭೂಕಂಪನ ಸಂಭವಿಸಿ, ಈಗಾಗಲೇ 3,600ಕ್ಕೂ ಹೆಚ್ಚು ಜನರು ಮ್ಯಾನ್ಮಾರ್ ದೇಶದಲ್ಲಿ ಬಲಿಯಾಗಿದ್ದಾರೆ. ಪ್ರಬಲವಾದ ಭೂಕಂಪಕ್ಕೆ ಮ್ಯಾನ್ಮಾರ್‌ ನಡುಗಿ ಹೋಗಿದೆ. ಭೂಕಂಪ ಪೀಡಿತ ರಾಷ್ಟ್ರಕ್ಕೆ ಹಲವು ದೇಶಗಳು ಸಹಾಯ ಮಾಡುತ್ತಿವೆ. ಭಾರತ ಈಗಾಗಲೇ ಎನ್‌ಡಿಆರ್‌ಎಫ್‌ ತಂಡವನ್ನು ಕಳುಹಿಸಿದೆ. ಅಷ್ಟೇ ಅಲ್ಲದೆ ವೈದ್ಯಕೀಯ ಸಾಮಗ್ರಿ ಹಾಗೂ ಆಹಾರ ಸಾಮಗ್ರಿಗಳನ್ನು ಪೂರೈಕೆ ಮಾಡಿದೆ.