ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬರಾಕ್‌ ಒಬಾಮಾ ದಂಪತಿಯನ್ನು ಕೋತಿಗೆ ಹೋಲಿಸಿದ ಟ್ರಂಪ್‌; ವಿರೋಧ ವ್ಯಕ್ತವಾಗುತ್ತಿದ್ದಂತೆ ಪೋಸ್ಟ್‌ ಡಿಲೀಟ್‌

Donald Trump: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಅಮೆರಿಕದ ಮಾಜಿ ಅ‍ಧ್ಯಕ್ಷ ಬರಾಕ್‌ ಒಬಾಮಾ ಮತ್ತು ಅವರ ಪತ್ನಿ ಮಿಶೆಲ್‌ ಒಮಾಬಾ ಅವರ ವಿರುದ್ಧ ಜನಾಂಗೀಯ ನಿಂದನೆಯ ಪೋಸ್ಟ್‌ ಹಂಚಿಕೊಂಡಿದ್ದಾರೆ. ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಪೋಸ್ಟ್‌ ಡಿಲೀಟ್‌ ಮಾಡಿದ್ದಾರೆ.

ಬರಾಕ್‌ ಒಬಾಮಾ ದಂಪತಿಯನ್ನು ಕೋತಿಗೆ ಹೋಲಿಸಿದ ಟ್ರಂಪ್‌

ಡೊನಾಲ್ಡ್‌ ಟ್ರಂಪ್‌ ಮತ್ತು ಬರಾಕ್‌ ಒಬಾಮಾ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Feb 6, 2026 11:52 PM

ವಾಷಿಂಗ್ಟನ್‌, ಫೆ. 6: ದಿನಕ್ಕೊಂದು ಹೇಳಿಕೆ, ವಿಚಿತ್ರ ನಡೆಯ ಮೂಲಕ ಒಂದಲ್ಲ ಒಂದು ರೀತಿಯಲ್ಲಿ ಸದ್ದು ಮಾಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಅಮೆರಿಕದ ಮಾಜಿ ಅ‍ಧ್ಯಕ್ಷ ಬರಾಕ್‌ ಒಬಾಮಾ (Barack Obama) ಮತ್ತು ಅವರ ಪತ್ನಿ ಮಿಶೆಲ್‌ ಒಮಾಬಾ (Michelle Robinson) ಅವರ ವಿರುದ್ಧ ಜನಾಂಗೀಯ ನಿಂದನೆಯ ಪೋಸ್ಟ್‌ ಹಂಚಿಕೊಂಡಿದ್ದಾರೆ. ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಪೋಸ್ಟ್‌ ಡಿಲೀಟ್‌ ಮಾಡಿ ಸಿಬ್ಬಂದಿಯನ್ನು ದೂರಿದ್ದಾರೆ. ಸದ್ಯ ಟ್ರಂಪ್‌ ಅವರ ನಡೆಗೆ ಸಾರ್ವತ್ರಿಕ ವಿರೋಧ ವ್ಯಕ್ತವಾಗುತ್ತಿದೆ.

ಡೊನಾಲ್ಡ್ ಟ್ರಂಪ್ ಅವರ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಬರಾಕ್ ಒಬಾಮಾ ಮತ್ತು ಅವರ ಪತ್ನಿ ಮಿಶೆಲ್ ಅವರನ್ನು ಕೋತಿಗಳಂತೆ ಚಿತ್ರಿಸುವ ಜನಾಂಗೀಯ ನಿಂದನೆಯ ವಿಡಿಯೊವನ್ನು ಸಿಬ್ಬಂದಿಯೊಬ್ಬರು ತಪ್ಪಾಗಿ ಪೋಸ್ಟ್‌ ಮಾಡಿದ್ದಾರೆ ಮತ್ತು ಅದನ್ನು ಡಿಲೀಟ್‌ ಎಂದು ಶ್ವೇತಭವನ ಶುಕ್ರವಾರ ತಿಳಿಸಿದೆ.

ವಿಡಿಯೊದಲ್ಲಿ ಏನಿದೆ?

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಯಲ್ಲಿ ಒಬಾಮಾ ದಂಪತಿಯನ್ನು ಮಂಗಗಳಂತೆ ಚಿತ್ರಿಸಿರುವ ಎಐ ಆಧಾರಿತ ವಿಡಿಯೊವನ್ನು ಪೋಸ್ಟ್ ಮಾಡಲಾಗಿತ್ತು. ಇದು ತೀವ್ರ ಟೀಕೆಗಳನ್ನು ಎದುರಿಸಿದ ನಂತರ, ಟ್ರಂಪ್‌ ಅವರ ಮಿತ್ರ ಟಿಮ್ ಸ್ಕಾಟ್ ಸೇರಿದಂತೆ, ಶ್ವೇತಭವನವು ಸ್ಪಷ್ಟೀಕರಣವನ್ನು ನೀಡಿದೆ. ಒಬಾಮಾ ದಂಪತಿಯನ್ನು ಮಂಗಗಳಂತೆ ಚಿತ್ರಿಸಿರುವ ವಿಡಿಯೊವನ್ನು ಸಿಬ್ಬಂದಿಯೊಬ್ಬರು ಬಿಡುಗಡೆ ಮಾಡಿದ್ದಾರೆ ಎಂದು ನುಣುಚಿಕೊಳ್ಳಲು ಯತ್ನಿಸಿದ್ದಾರೆ.

ಎಕ್ಸ್‌ ಪೋಸ್ಟ್‌:



ವಿಡಿಯೊ ಡಿಲೀಟ್‌

ಚುನಾವಣಾ ಪಿತೂರಿ ಸಿದ್ಧಾಂತಗಳ ಕುರಿತಾದ ವಿಡಿಯೊವನ್ನು ಟ್ರಂಪ್ ಹಂಚಿಕೊಂಡಿದ್ದರು. ಅದರಲ್ಲಿ ಒಬಾಮಾ ದಂಪತಿಯನ್ನು ಕಾಡಿನಲ್ಲಿ ಪ್ರೈಮೇಟ್‌ಗಳಂತೆ ತೋರಿಸುವ ಜನಾಂಗೀಯ ಚಿತ್ರಣವೂ ಇತ್ತು. ಈ ಪೋಸ್ಟ್ ಸದ್ಯ ಡಿಲೀಟ್‌ ಆಗಿದೆ. 62 ಸೆಕೆಂಡ್‌ಗಳ ಕ್ಲಿಪ್ 2020ರಲ್ಲಿ ಮತದಾನ ಯಂತ್ರಗಳನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸದ್ಯ ಟ್ರಂಪ್‌ ಅವರ ಜನಾಂಗೀಯ ನಿಂದನೆ ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಯಾವುದೇ ದೇಶದಿಂದ ತೈಲ ಖರೀದಿಸುವ ಸ್ವಾತಂತ್ರ್ಯ ಭಾರತಕ್ಕಿದೆ; ಡೊನಾಲ್ಡ್‌ ಟ್ರಂಪ್‌ಗೆ ತಿರುಗೇಟು ಕೊಟ್ಟ ರಷ್ಯಾ?

ಬರಾಕ್‌ ಒಬಾಮಾ ಹಿನ್ನೆಲೆ

ಬರಾಕ್ ಹುಸೇನ್ ಒಬಾಮಾ 2009ರಿಂದ 2017ರವರೆಗೆ ಅಮೆರಿಕದ 44ನೇ ಅಧ್ಯಕ್ಷರಾಗಿದ್ದರು. 1961ರ ಆಗಸ್ಟ್ 4ರಂದು ಹವಾಯಿಯ ಹೊನೊಲುಲುವಿನಲ್ಲಿ ಜನಿಸಿದ ಅವರು ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಆಫ್ರೋ-ಅಮೆರಿಕನ್ ಎನಿಸಿಕೊಂಡಿದ್ದಾರೆ. ಒಬಾಮಾ ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ಹಾರ್ವರ್ಡ್ ಲಾ ಸ್ಕೂಲ್‌ನಲ್ಲಿ ಪದವಿ ಪಡೆದರು. ಹಾರ್ವರ್ಡ್‌ನಲ್ಲಿ ಅವರು 'ಹಾರ್ವರ್ಡ್ ಲಾ, ರಿವ್ಯೂನ ಮೊದಲ ಆಫ್ರಿಕನ್-ಅಮೆರಿಕನ್ ಅಧ್ಯಕ್ಷರಾಗಿದ್ದರು. ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಸಮುದಾಯ ಸಂಘಟಕ, ನಾಗರಿಕ ಹಕ್ಕುಗಳ ವಕೀಲ ಮತ್ತು ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದರು. ಇವರಿಗೆ 2009ರಲ್ಲಿ ಪ್ರತಿಷ್ಠಿತ ನೊಬೆಲ್‌ ಪ್ರಶಸ್ತಿ ಲಭಿಸಿತು. 1992ರಲ್ಲಿ ಇವರು ಮಿಶೆಲ್‌ ಅವರನ್ನು ವರಿಸಿದರು. ಈ ದಂಪತಿಗೆ ಇಬ್ಬರು ಮಕ್ಕಳು. ಒಬಾಮಾ ಅಧ್ಯಕ್ಷರಾಗಿದ್ದಾಗ ಭಾರತದೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಂಡಿದ್ದರು. ಅಲ್ಲದೆ ಅವರು ಮತ್ತು ಪತ್ನಿ ಭಾರತಕ್ಕೂ ಭೇಟಿ ನೀಡಿದ್ದರು.