ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gubbi News: ಅದ್ದೂರಿ ಜರುಗಿದ ಸ್ಟೆಲ್ಲಾ ಮೇರಿಸ್ ಶಾಲೆಯ ಆರಂಭ-2ಕೆ26 ವಾರ್ಷಿಕೋತ್ಸವ

ಸಂಸ್ಕಾರವಿಲ್ಲದ ಶಿಕ್ಷಣ ದೇಶಕ್ಕೆ ಮಾರಕ. ದೇಶದ್ರೋಹ ಕೆಲಸ, ಮೋಸ, ಭ್ರಷ್ಟಾಚಾರ ಎಲ್ಲವೂ ವಿದ್ಯಾ ವಂತರಿಂದ ನಡೆದಿದೆ ಎಂಬುದು ವಿಷಾದನೀಯ. ಅದರಲ್ಲೂ ಸಂಸ್ಕಾರರಹಿತ ಶಿಕ್ಷಣ ಪಡೆದವರಲ್ಲಿ ಸಮಾಜಘಾತುಕ ಶಕ್ತಿಗಳು ಕಾಣುತ್ತಿವೆ ಎಂದ ವಿಷಾದಿಸಿದ ಅವರು ವೃದ್ಧಾ ಶ್ರಮ, ಅನಾಥಾಶ್ರಮ ಹೆಚ್ಚಾ ಗಲು ಈ ಸಂಸ್ಕಾರವಿಲ್ಲದ ವಿದ್ಯೆ ಕಾರಣ.

ಅದ್ದೂರಿ ಜರುಗಿದ ಸ್ಟೆಲ್ಲಾ ಮೇರಿಸ್ ಶಾಲೆಯ ಆರಂಭ-2ಕೆ26 ವಾರ್ಷಿಕೋತ್ಸವ

-

Ashok Nayak
Ashok Nayak Feb 6, 2026 10:57 PM

ಗುಬ್ಬಿ: ಶೈಕ್ಷಣಿಕ ಸೇವೆಯಲ್ಲಿ ರಜತ ಮಹೋತ್ಸವ ಆಚರಿಸಿಕೊಂಡು ತಾಲ್ಲೂಕಿನಲ್ಲಿ ಪ್ರತಿಷ್ಠಿತ ಶಾಲೆಗಳ ಪೈಕಿ ಉತ್ತಮ ಶಾಲೆಯಾಗಿರುವ ಸ್ಟೆಲ್ಲಾ ಮೇರಿಸ್ ವಾರ್ಷಿಕೋತ್ಸವ ಸಮಾರಂಭವನ್ನು ಆರಂಭ-2ಕೆ26 ಹೆಸರಿನಲ್ಲಿ ಅದ್ದೂರಿಯಾಗಿ ನಡೆಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಗೊಲ್ಲಹಳ್ಳಿ ಮಠದ ಶ್ರೀ ವಿಭವ ವಿದ್ಯಾಶಂಕರ ಸ್ವಾಮೀಜಿ ಮಾತನಾಡಿ, ಸಂಸ್ಕಾರವಿಲ್ಲದ ಶಿಕ್ಷಣ ದೇಶಕ್ಕೆ ಮಾರಕ. ದೇಶದ್ರೋಹ ಕೆಲಸ, ಮೋಸ, ಭ್ರಷ್ಟಾಚಾರ ಎಲ್ಲವೂ ವಿದ್ಯಾವಂತರಿಂದ ನಡೆದಿದೆ ಎಂಬುದು ವಿಷಾದನೀಯ. ಅದರಲ್ಲೂ ಸಂಸ್ಕಾರ ರಹಿತ ಶಿಕ್ಷಣ ಪಡೆದವರಲ್ಲಿ ಸಮಾಜಘಾತುಕ ಶಕ್ತಿಗಳು ಕಾಣುತ್ತಿವೆ ಎಂದ ವಿಷಾದಿಸಿದ ಅವರು ವೃದ್ಧಾ ಶ್ರಮ, ಅನಾಥಾಶ್ರಮ ಹೆಚ್ಚಾಗಲು ಈ ಸಂಸ್ಕಾರವಿಲ್ಲದ ವಿದ್ಯೆ ಕಾರಣ. ಈ ನಿಟ್ಟಿನಲ್ಲಿ ಸಂಸ್ಕಾರ ಕೊರತೆ ನೀಗಿಸಲು ಶಾಲೆಯಲ್ಲಿ ಎಲ್ಲಾ ರಂಗದ ಚಟುವಟಿಕೆ ರೂಢಿಸಿ ಮಕ್ಕಳಿಗೆ ನೈತಿಕ, ಸಾಮಾಜಿಕ ಮೌಲ್ಯ ತಿಳಿಸಬೇಕಿದೆ ಎಂದರು.

ಇದನ್ನೂ ಓದಿ: Gubbi News: ಒಳ್ಳೆ ಕೆಲಸಕ್ಕೆ ಕಲ್ಲು ಹಾಕುವವರೇ ಹೆಚ್ಚು : ಭಾರತಿ ಶ್ರೀನಿವಾಸ್

ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್ ಮಾತನಾಡಿ, ಶೈಕ್ಷಣಿಕ ಪ್ರಗತಿ ಹೆಚ್ಚಿಸಿಕೊಳ್ಳಲು ಸರ್ಕಾರ ಜೊತೆ ಕೈ ಜೋಡಿಸಿದ ಖಾಸಗಿ ಶಾಲೆಗಳು ಉತ್ತಮ ಫಲಿತಾಂಶ ಸಹ ನೀಡುತ್ತಿವೆ. ಕೇವಲ ಬೌದ್ಧಿಕವಾಗಿ ಗಮನಹರಿಸಿದೇ ಸರ್ವತೋಮುಖ ಬೆಳವಣಿಗೆಗೆ ಎಲ್ಲಾ ಚಟುವಟಿಕೆ ಮಾಡಬೇಕು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತಂದ ಶಾಲೆಗಳ ಪೈಕಿ ಸ್ಟೆಲ್ಲಾ ಮೇರಿಸ್ ಕೂಡಾ ಒಂದು. ಸಾರ್ವ ಜನಿಕ ಶಿಕ್ಷಣ ಇಲಾಖೆಯ ಸೌಲಭ್ಯ ಎಲ್ಲಾ ಶಾಲೆಗೆ ತಲುಪುವ ಮುನ್ನ ಖಾಸಗಿ ಶಾಲೆಗಳು ಅಂಕ ಗಳಿಕೆಗೆ ಮಾನ್ಯತೆ ನೀಡುತ್ತಿವೆ. ಎಲ್ಲಾ ಶಾಲೆಗಳು ಅಂಕ ಹೊರತಾದ ದೈಹಿಕ, ನೈತಿಕವಾಗಿ ಶಿಕ್ಷಣ ನೀಡಿ ಎಂದು ಕರೆ ನೀಡಿದರು.

ಸಂಪನ್ಮೂಲ ವ್ಯಕ್ತಿ ರೇವಣಸಿದ್ದಪ್ಪ ಮಾತನಾಡಿ ಪೋಷಕರು ತಮ್ಮ ಮಕ್ಕಳನ್ನು ಸೇರಿಸುವ ಶಾಲೆಯ ಹಿನ್ನಲೆ ತಿಳಿದುಕೊಳ್ಳುತ್ತಾರೆ. ಅಂತಹ ಶಾಲೆಗಳು ಶಿಕ್ಷಕ ವೃತ್ತಿ ಹಿನ್ನಲೆಯಲ್ಲಿ ನಡೆದಿದ್ದರೆ ಉತ್ತಮ ಫಲಿತಾಂಶದ ಶಾಲೆ ಎನಿಸುತ್ತದೆ. ಈ ಮಾದರಿಯಲ್ಲಿ ಸ್ಟೆಲ್ಲಾ ಮೇರಿಸ್ ಶಾಲೆ ನಡೆದಿದೆ. ಉಪನ್ಯಾಸಕ ಅಶ್ವಕ್ ಅಹ್ಮದ್ ಮಾರ್ಗದರ್ಶನದ ಈ ಶಾಲೆ ಮತ್ತಷ್ಟು ಹೆಸರುಗಳಿಸಲಿ ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ಹೆಚ್ಚು ಅಂಕ ಗಳಿಸಿದ ಶಾಲಾ ಮಕ್ಕಳಿಗೆ ಹಾಗೂ ವಿವಿಧ ಚಟುವಟಿಕೆಯಲ್ಲಿ ಗೆಲುವು ಸಾಧಿಸಿದ ಮಕ್ಕಳಿಗೆ ಹಾಗೂ ಪೋಷಕರನ್ನು ಸನ್ಮಾನಿಸಲಾಯಿತು. 

ವೇದಿಕೆಯಲ್ಲಿ ಪಪಂ ಮಾಜಿ ಸದಸ್ಯರಾದ ಸಿ.ಮೋಹನ್, ಕುಮಾರ್, ಸ್ಟೆಲ್ಲಾ ಮೇರಿಸ್ ಸಂಸ್ಥೆಯ ಮುಖ್ಯಸ್ಥ ಮುಷ್ತಾಕ್ ಅಹಮ್ಮದ್, ಉಪನ್ಯಾಸಕ ಆಶ್ವಕ್ ಅಹಮದ್, ಮರಿಯಾಂಬಿ ಸೇರಿದಂತೆ ಶಾಲೆಯ ಎಲ್ಲಾ ಸಿಬ್ಬಂದಿ ಇದ್ದರು.